ರಾಷ್ಟ್ರವಾದ ಪಸರಿಸಲಿರುವ ಭಾರತ ಮಾತೆ ಮಂದಿರ ಉದ್ಘಾಟನೆ ಜನವರಿ 4ರಂದು
ಭೋಪಾಲ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಭೂಪಾಲ್ ನಲ್ಲಿ ಭಾರತ್ ಮಾತಾ ಮಂದಿರ ನಿರ್ಮಿಸಿದ್ದು ಜನವರಿ 4ರಂದು ಉದ್ಘಾಟನೆಯಾಗಲಿದೆ. ಜತೆ ಮೂರು ದಿನಗಳ ಶೈವ ಉತ್ಸವಕ್ಕೂ ಚಾಲನೆ ದೊರೆಯಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಚತ್ತಿಸಗಡ್ ಮುಖ್ಯಮಂತ್ರಿ ರಮಣ್ ಸಿಂಗ್, ಕೇಂದ್ರ ಸಚಿವೆ ಉಮಾಭಾರತಿ, ಸಾದ್ವಿ ರಿತಂಬರ ಸೇರಿ ಹಿಂದೂ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯಕಾರ್ಯಕ್ರಮಗಳು ಜನವರಿ 5 ರಿಂದ 7ರವರೆಗೆ ನಡೆಯಲಿದ್ದು, ಹಲವು ಸಚಿವರು, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಮೂರು ದಿನದ ಸಮಾವೇಶದಲ್ಲಿ ಉಪನ್ಯಾಸ, ಸಂವಾದ, ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುವುದು ಎಂದು ತಿಳಿದು ಬಂದಿದೆ. ಅಲ್ಲದೇ ಭವ್ಯ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.
ಭಾರತ ಮಾತಾ ಮಂದಿರದ ಮೂಲಕ ದೇಶದಲ್ಲಿ ರಾಷ್ಟ್ರೀಯ ವಾದದ ತತ್ವಗಳನ್ನು ಬಲಿಷ್ಠಗೊಳಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿರ್ಧರಿಸಿದೆ. ರಾಷ್ಟ್ರ ವಾದಿಗಳ ಬೆಂಬಲ ದೇವಸ್ಥಾನ ನಿರ್ಮಾಣಕ್ಕೆ ದೊರೆತ್ತಿದ್ದು, ಲಕ್ಷಾಂತರ ದೇಶವಾಸಿಗಳು ಭಾಗವಹಿಸಲಿದ್ದಾರೆ. ಕುಂಬಮೇಳದಂತೆ ವೈಭದಿಂದ ಈ ಶೈವ ಉತ್ಸವ ಮತ್ತು ಭಾರತ್ ಮಾತಾ ಮಂದಿರ ಉದ್ಘಾಟನೆ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಕ್ಕೆ ಸಕಲ ಸೌಲಭ್ಯಗಳನ್ನು ಮಧ್ಯ ಪ್ರದೇಶ ಸರ್ಕಾರ ಒದಗಿಸಿದೆ.
Leave A Reply