• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಿಮಗೆ ಭಾರತ ದರ್ಶನ ಮಾಡಬೇಕೇ?? ಹಾಗಿದ್ದರೆ ಆದಿತ್ಯವಾರ ಮಂಗಳೂರು ನಗರಕ್ಕೆ ಬನ್ನಿ.

TNN Correspondent Posted On July 11, 2017


  • Share On Facebook
  • Tweet It

ನಿಮಗೆ ಭಾರತ ದರ್ಶನ ಮಾಡಬೇಕೇ, ಆದಿತ್ಯವಾರ ಮಂಗಳೂರು ನಗರಕ್ಕೆ ಬನ್ನಿ. ನಗರದ ಕೇಂದ್ರ ಭಾಗದಲ್ಲಿರುವ ಕೇಂದ್ರ ಮಾರುಕಟ್ಟೆಯ ಈ ಆಕರ್ಷನೀಯ ಸ್ಥಳಕ್ಕೆ ಬಂದು ನೋಡಿ. 1965ರ ದಶಕದಲ್ಲಿ ಆರಂಭವಾದ ಈ ಕೇಂದ್ರ ಮಾರುಕಟ್ಟೆಯ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಅಂದಾಜು ಸುಮಾರು 10 ಲಕ್ಷ ವೆಚ್ಚವಾಗಿತ್ತು. ದಿನಾಂಕ 15-08-1965ರಲ್ಲಿ ಇದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಯಿತು. ಮೂಲಾ ಕಟ್ಟಡ ಹಾಗೆಯೇ ಇದ್ದು ಅಲ್ಪಸ್ವಲ್ಪ ರಿಪೇರಿ ಮಾಡಲಾಗಿದೆ. ಪಕ್ಕದಲ್ಲಿಯೇ ಮಂಗಳೂರು ನಗರದ ಹೆಮ್ಮೆಯ ಪುರಭವನ ಹಾಗೂ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಕೂಡಾ ಇದೆ. ರಸಋಷಿ, ರಾಷ್ಟ್ರ ಕವಿ ಕುವೆಂಪುರವರು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಎಂಬ ನುಡಿಗೆ ಅನ್ವರ್ಥವಾಗಿ ಮಂಗಳೂರಿನ ಕೇಂದ್ರ ಮಾರುಕಟ್ಟೆ, ಆದಿತ್ಯವಾರ ನಿಮಗೆ ಕಂಡುಬರುತ್ತದೆ.

ಪ್ರತಿ ಆದಿತ್ಯವಾರ ಮಂಗಳೂರು ನಗರದ ಕೇಂದ್ರ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಡೀ ಭಾರತವೇ ತುಂಬಿರುತ್ತದೆ. ಉತ್ತರ ಕರ್ನಾಟಕದ ಕನ್ನಡ ಹಾಗೂ ಉತ್ತರ ಭಾರತದ ಹಿಂದಿ ನಡುವೆ ಕೇರಳದ ಮಲಯಾಳಂ ಅದಕ್ಕೆ ತಕ್ಕಂತೆ ತಮಿಳು ಕೂಡಾ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಬಹುದು. ಒಟ್ಟಾರೆ ಇಡಿ ಭಾರತವೇ ಅಲ್ಲಿ ನೆರೆದಿರುತ್ತದೆ. ಇದನ್ನೆಲ್ಲ ನೋಡಿದಾಗ ಕುವೆಂಪುರವರ ಮಾತು ಅಕ್ಷರಷಃ ಸತ್ಯ ಅಂತ ಅನಿಸದೇ ಇರದು. ಉತ್ತರ ಭಾರತದಲ್ಲಿ ಕಡಿಮೆ ಸಂಬಳ ಹಾಗೂ ಸರಿಯಾದ ಕೆಲಸ ಇಲ್ಲದವರು ಮಂಗಳೂರಿಗೆ ಕೆಲಸ ಅರಸಿಕೊಂಡು ಬಂದು ಇಲ್ಲಿ ಸೆಕ್ಯುರಿಟಿ ಗಾರ್ಡ್ ಇನ್ನಿತರ ಕೆಲಸ ಮಾಡುತ್ತಿರುತ್ತಾರೆ. ಈಶಾನ್ಯ ಭಾರತದವರು ಅಷ್ಟೇ ಕೆಲಸ ಅರಸಿ ಬಂದವರು ಅಲ್ಲದೇ ಉನ್ನತ ಶಿಕ್ಷಣ ಪಡೆಯಲು, ಮಂಗಳೂರು ಪ್ರಶಸ್ತ ಸ್ಥಳ,ಎಂದು ಬಂದಿರುತ್ತಾರೆ. ದಕ್ಷಿಣದ ಕೇರಳದ ಜನರು ಶಿಕ್ಷಣ ಮತ್ತು ವ್ಯಾಪಾರಕ್ಕೆ ಇಲ್ಲಿಗೆ ಬಂದಿರುತ್ತಾರೆ. ಹಾಗೆಯೇ ತಮಿಳುನಾಡಿನ ಜನರು ಇಲ್ಲಿ ಮುಖ್ಯವಾಗಿ ಬಟ್ಟೆ ವ್ಯಾಪಾರಿಗಳಾಗಿ ಮಂಗಳೂರಿನಲ್ಲಿ ಪ್ರಸಿದ್ದಿ ಪಡೆದಿರುತ್ತಾರೆ. ಹೀಗೆ ದೇಶದ ನಾಲ್ಕು ದಿಕ್ಕಿನಿಂದ ಬಂದವರಿಗೆ ಮಂಗಳೂರು ಆಶ್ರಮತಾಣ ಆಗಿರುವುದಲ್ಲದೇ ಕೇಂದ್ರ ಮಾರುಕಟ್ಟೆ ಅವರಿಗೆ ವಾರಾಂತ್ಯದ ಸ್ಥಳವೂ ಆಗಿದೆ. ಅಲ್ಲದೆ ಉತ್ತರ  ಕರ್ನಾಟಕದಲ್ಲಿ ಬರ ಬಂದರೆ ಅಲ್ಲಿರುವ ತಮ್ಮ ಆಸ್ತಿಯನ್ನು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ವಹಿಸಿಕೊಟ್ಟು ಇಲ್ಲಿ ಗಾರೆ ಕೆಲಸ, ಕಟ್ಟಡ ಕಾರ್ಮಿಕರಾಗಿ ವಸತಿ ಸಮುಚ್ಚಯದಲ್ಲಿ ಕಾವಲುಗಾರರಾಗಿ ದುಡಿಯಲು ಬಂದಿರುತ್ತಾರೆ. ಇವರೆಲ್ಲರೂ ವಾರದ ಆರು ದಿವಸ ಕಷ್ಟಪಟ್ಟು ದುಡಿಯುತ್ತಾರೆ. ಆದಿತ್ಯವಾರ ಬಂದರೆ ಅವರಿಗೆ ತುಂಬಾ ಖುಷಿ. ಆವತ್ತು  ಅವರಿಗೆ ಅಕ್ಷರಷಃ ಹಬ್ಬದೂಟ ಅಂತಲೇ ಹೇಳಬಹುದು.  ಗುಂಪು ಗುಂಪಾಗಿ ಬಂದು ಅಕ್ಕಿ ಬೇಳೆ ಎಲ್ಲಾ ಒಂದು ವಾರಕ್ಕೆ ಬೇಕಾದಷ್ಟು ಖರೀದಿ ಮಾಡುತ್ತಾರೆ.

ಬಟ್ಟೆ ಖರೀದಿಗೆ ಅವರು ಅವಲಂಬಿಸಿರುವುದು ಬಟ್ಟೆಗಳ ಶೋರೂಮು ಅಲ್ಲ ಬದಲಿಗೆ ಆದಿತ್ಯವಾರ ಮಾತ್ರ ತೆರೆಯಲ್ಪಡುವ ಸೆಕೆಂಡ್ ಹ್ಯಾಂಡ್ ಬಟ್ಟೆಗಳ ಅಂಗಡಿಯಲ್ಲಿ ಖರೀದಿ ಮಾಡುತ್ತಾರೆ. ನಗರದ ಪುರಭವನದ ಸುತ್ತಮುತ್ತ  ಅದರದೇ ಅಂಗಡಿಗಳು ಉದ್ದಕ್ಕೆ ಚಾಚಿರುತ್ತದೆ. ಈ ಅಂಗಡಿಯ ಮಾಲಿಕರು ಬೇರೆ ಯಾರು ಅಲ್ಲ ಮೊದಲು ಇಲ್ಲಿ ಕೂಲಿ ಕೆಲಸಕ್ಕೆ ಬಂದ ಉತ್ತರ ಕರ್ನಾಟಕದವರೇ ಆಗಿರುವುದು ವಿಶೇಷ. ಇಂತಹ ತಾತ್ಕಾಲಿಕ  ಅಂಗಡಿ ತೆರೆಯಲು ಅವರು ಶನಿವಾರ ಸಂಜೆಯೇ ಗುರುತು ಹಾಕಿಕೊಂಡು ರಾತ್ರಿ ಅಲ್ಲೇ ಉಳಿದುಕೊಳ್ಳುತ್ತಾರೆ. ಬರೀ ಗುರುತು ಹಾಕಿ  ಹೋದರೇ  ಇನ್ನೊಬ್ಬರು ಆಕ್ರಮಿಸಿಕೊಳ್ಳುತ್ತಾರೆ. ಅದಕ್ಕೆ ಅಲ್ಲಿಯೇ ಸಂಸಾರ ಸಮೇತ ಉಳಿದುಕೊಳ್ಳುತ್ತಾರೆ. ಬೇರೆಯವರು ಬಳಸಿದ ಬಟ್ಟೆಗಳಾದರೂ ಕೆಲವೊಂದು ಒಗೆದು ಚೆನ್ನಾಗಿ ಇಟ್ಟಿರುತ್ತಾರೆ. ಕಡಿಮೆ ದರದಲ್ಲಿ ಸಿಗುವುದರಿಂದ ಇಂತಹ ಅಂಗಡಿಯಲ್ಲಿ ಜನ ಖರೀದಿಗೆ ಮುಗಿಬಿಳುತ್ತಾರೆ. ಮೊದಲೇ ಹೇಳಿದ ಹಾಗೆ ಗುಂಪು ಗುಂಪಾಗಿ ಬೆಳಿಗ್ಗೆ ಮನೆಯಿಂದ ಹೊರಟವರು ಹತ್ತು ಗಂಟೆ ತನಕ ತಿರುಗಾಡಿ ಯಾವ ಪಕ್ಕದಲ್ಲಿರುವ ರೂಪಾವಾಣಿ ಅಥವಾ ರಾಮಾಕಾಂತಿ  ಥಿಯೇಟರಲ್ಲಿ  ಸಿನಿಮಾ ನೋಡಿ  ಆನಂತರ ಮಾರ್ಕೆಟ್ ಸುತ್ತಿ ತಮಗೆ ಬೇಕಾದ ಸಾಮಾನು ಸರಂಜಾಮು ಖರೀದಿ ಮಾಡಿ ತಮ್ಮ ಮನೆಗೆ ಹೊರಡುತ್ತಾರೆ.  ಒಟ್ಟಿನಲ್ಲಿ ಇಡೀ ವಾರ ದುಡಿದ ದಣಿವು ಈ ಒಂದು ದಿನ ಇಲ್ಲಿ ಕಳೆದು ಖುಷಿ ಪಡುತ್ತಾರೆ. ಹಾಗಂತ ಇಲ್ಲಿ ಎಲ್ಲವೂ ಸರಿ ಇದೆ ಅಂತ ಹೇಳಲಿಕ್ಕೆ ಆಗುವುದಿಲ್ಲ. ಕಳ್ಳರಿಗೆ ಸುಳ್ಳರಿಗೆ ಇಂತಹ ಜನಜಂಗುಳಿಯಂದರೆ ತುಂಬಾ ಇಷ್ಟ. ಕಳ್ಳರ ಕೈಚಳಕಕ್ಕೆ ಕೆಲವರು ದುಡ್ಡು ಕಳೆದು ಕೊಂಡಿದ್ದಾರೆ. ಮೊಬೈಲ್ ಕೂಡಾ ಕಳೆದುಕೊಂಡು ಪೊಲೀಸ್ ಸ್ಟೇಷನ್ ಗೆ ಬಂದು ದೂರು ಕೊಟ್ಟವರು ಎಷ್ಟೋ ಜನ. ಆದರೆ ಅದು ಅಷ್ಟು ಸುಲಭದಲ್ಲಿ ಪತ್ತೆ ಆಗುವುದಿಲ್ಲ. ಯಾಕೆಂದರೆ ಅದು ಗುಂಪಲ್ಲಿ ಕೈ ಬದಲಾವಣೆಯಾಗಿ ಎಲ್ಲೋ ಮುಟ್ಟಿರುತ್ತದೆ. ಅದಕ್ಕೆ ಆದಷ್ಟು ಜಾಗೃತೆ ಮಾಡಬೇಕು.

ಈಚೆಗೆ ಆದಿತ್ಯವಾರ ಬಂತು ಅಂದರೆ ನಗರದ ಕೇಂದ್ರ ಮಾರುಕಟ್ಟೆ ಬೆಂಗಳೂರಿನ ಗಾಂಧಿ ನಗರದ ಜನಜಂಗುಳಿಯನ್ನು ಮೀರುತ್ತದೆ. ಒಂದು ಕಡೆ ಬಟ್ಟೆ ಚಪ್ಪಲಿ ಮಾರುವ ಅಂಗಡಿ ಇದ್ಥರೆ ಇನ್ನೊಂದು ಕಡೆ ತರಕಾರಿ ಬೇಕರಿ ತಿಂಡಿ ತಿನಿಸುಗಳ ಮಾರಾಟದ ಅಂಗಡಿ ಇಟ್ಟಿರುತ್ತಾರೆ. ಸ್ಥಳೀಯ ಹೆಂಗಸರು ತಾವು ಬೆಳೆಸಿದ ತರಕಾರಿ, ತಮ್ಮ ಮನೆಯಲ್ಲಿ ಸಾಕುವ ಊರಿನ ದನದ ಹಾಲು ಕೂಡ ಮಾರುತ್ತಾರೆ. ಇವು ಎಲ್ಲವೂ ತಾತ್ಕಾಲಿಕ ಅಷ್ಟೇ. ಮರುದಿವಸ ನೋಡಿದರೆ ನಿಮಗೆ ಆಶ್ಚರ್ಯ ಆಗಬಹುದು. ಇನ್ನು ಹಳೆ ಕಾಲದ ಟೇಪ್ ರೆಕಾರ್ಡರ್, ಹಳೆಯ ಚಿತ್ರ ಗೀತೆಗಳ ಕ್ಯಾಸೆಟ್ ಗಳು ಕೂಡ ಇಲ್ಲಿ ಆದಿತ್ಯವಾರ ದಿನ ಲಭ್ಯವಿರುತ್ತದೆ. ಹಾಗಾಗಿ ಆದಿತ್ಯವಾರ ಅಂದರೆ ಮಾರುಕಟ್ಟೆ ಮಾಯಾ ಲೋಕವನ್ನು ಸೃಷ್ಟಿ ಮಾಡಿರುತ್ತದೆ. ಅನುಭವಿಸುವ ಮನಸ್ಸು, ಕಾಯುವ ತಾಳ್ಮೆ ಬೇಕು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search