ಆಸಿಯಾನ್ ಮುಖಂಡರ ಭೇಟಿ ಕುರಿತು ಮೋದಿ ಬರೆದ ಆ ಜನಪ್ರಿಯ ಲೇಖನದಲ್ಲಿ ಏನಿದೆ ಗೊತ್ತಾ?
ದೆಹಲಿ: ಗಣರಾಜ್ಯೋತ್ಸವಕ್ಕೆ ಆಸಿಯಾನ್ ರಾಷ್ಟ್ರಗಳ ಮುಖಂಡರು ಆಗಮಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬರೆದ ಅಗ್ರ ಲೇಖನ ದೇಶದ 27 ಪತ್ರಿಕೆಗಳಲ್ಲಿ 10 ಭಾಷೆಗಳಲ್ಲಿ ಪ್ರಕಟವಾಗಿದ್ದು, ಅಪಾರ ಜನಪ್ರಿಯತೆ ಗಳಿಸಿದೆ.
ಆಸಿಯಾನ್ ರಾಷ್ಟ್ರಗಳಾದ ಥೈಲ್ಯಾಂಡ್, ವಿಯೇಂಟ್ನಾಂ, ಇಂಡೋನೇಷ್ಯಾ, ಫಿಲಿಪ್ಪೈನ್ಸ್, ಸಿಂಗಾಪುರ, ಮ್ಯಾನ್ಮಾರ್, ಕೊಲಂಬಿಯಾ, ಲಾವೋಸ್ ಮತ್ತು ಬ್ರುನೈ ರಾಷ್ಟ್ರಗಳ ಮುಖಂಡರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು ಭಾರತದ ಪಾಲಿಗೆ “ಐತಿಹಾಸಿಕ ಕ್ಷಣ” ಎಂದು ಪ್ರಧಾನಿ ಮೋದಿ ತಮ್ಮ ಲೇಖನದಲ್ಲಿ ಬಣ್ಣಿಸಿದ್ದಾರೆ.
ಭಾರತ ಆಸಿಯಾನ್ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಆಸಿಯಾನ್ ನ ಎಲ್ಲ ರಾಷ್ಟ್ರಗಳು ಸ್ಪರ್ಧೆಗಳು ಹಾಗೂ ಹಕ್ಕುಗಳನ್ನೂ ಮೀರಿ, ಒಂದು ಸೌಹಾರ್ದಯುತವಾದ ಸ್ನೇಹ ಗಳಿಸಿವೆ. ಭಾರತ ಅದನ್ನು ಎಂದಿಗೂ ಕಾಪಿಟ್ಟುಕೊಳ್ಳುತ್ತದೆ ಎಂದು ಮೋದಿ ಬರೆದಿದ್ದಾರೆ.
ಬರೀ ಸ್ನೇಹವೊಂದೇ ಅಲ್ಲ ಆಸಿಯಾನ್ ನ ಎಲ್ಲ ರಾಷ್ಟ್ರಗಳ ಗುರಿಯೂ ಒಂದೇ ಆಗಿದೆ. ನಾವೆಲ್ಲರೂ ರಾಷ್ಟ್ರಗಳಾಗಿ ಬದ್ಧತೆ ಹಾಗೂ ಸಮಗ್ರತೆಯ ಆಧಾರದ ಮೇಲೆ ದೇಶ ಕಟ್ಟುವ ಗುರಿ ಹೊಂದಿದ್ದೇವೆ. ಯಾವುದೇ ರಾಷ್ಟ್ರಗಳ ಗಾತ್ರ, ಜನಸಂಖ್ಯೆಯನ್ನು ಅಳೆಯದೆ, ಎಲ್ಲ ರಾಷ್ಟ್ರಗಳ ಸಾರ್ವಭೌಮತ್ವವನ್ನು ಕಾಪಾಡುವುದೇ ನಮ್ಮೆಲ್ಲರ ಆಶಯವಾಗಿದೆ ಎಂದು “ಶೇರ್ಡ್ ವ್ಯಾಲ್ಯುವ್ಸ್, ಕಾಮನ್ ಡೆಸ್ಟಿನಿ’ ಎಂಬ ತಲೆಬರಹದಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರಧಾನಿ ಉಲ್ಲೇಖಿಸಿದ್ದಾರೆ.
ಅಚ್ಚರಿಯ ಸಂಗತಿ ಏನೆಂದರೆ, ಆಸಿಯಾನ್ ರಾಷ್ಟ್ರಗಳೆಲ್ಲವೂ ಒಗ್ಗೂಡಿ ವಿಶ್ವದ ಪ್ರಮುಖ ವ್ಯಾಪಾರ ನಡೆಸುವ ರಾಷ್ಟ್ರಗಳ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಭಾರತವೊಂದೇ ಸೇರಿದರೂ 7ನೇ ಸ್ಥಾನ ಪಡೆಯುತ್ತದೆ. ವಿಶ್ವದಲ್ಲಿ ಭಾರತ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ ಎಂದು ಹೊಗಳಿದ್ದಾರೆ.
ಅಷ್ಟೇ ಅಲ್ಲ, ದಕ್ಷಿಣ ಏಷ್ಯಾ, ಅಂತಾರಾಷ್ಟ್ರೀಯ ಸಂಬಂಧ, ವ್ಯಾಪಾರ ಸೇರಿ ಹಲವು ವಿಷಯಗಳ ಕುರಿತು ಪ್ರಧಾನಿ ಮೋದಿ ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.
Leave A Reply