ಸುಷ್ಮಾ ಸ್ವರಾಜ್ ರಾಜತಾಂತ್ರಿಕ ನೈಪುಣ್ಯ, 22 ಭಾರತೀಯರ ರಕ್ಷಣೆ
ದೆಹಲಿ: ಬಲಿಷ್ಠ ಮತ್ತು ಸೌಹಾರ್ದಯುತ ವಿದೇಶಾಂಗ ನೀತಿಗಳ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ಭಾರತಕ್ಕೆ ವಿಶ್ವ ಸಮುದಾಯದಲ್ಲಿ ನಿರಂತರ ಯಶಸ್ಸು ದೊರೆಯುತ್ತಿದೆ. ಭಾರತೀಯರು ಯಾವುದೇ ರಾಷ್ಟ್ರದಲ್ಲೂ ಸ್ವಾತಂತ್ರ್ಯವಾಗಿ ಜೀವಿಸಬಹುದು ಎಂಬ ಭಾವನೆಗೆ ಬಲ ಬರುತ್ತಿದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜತಾಂತ್ರಿಕ ನೈಪುಣ್ಯಗಳನ್ನು ಮೆರೆಯುತ್ತಿದ್ದಾರೆ. ಇದೀಗ ಸುಷ್ಮಾ ಸ್ವರಾಜ್ ಆಫ್ರಿಕಾ ಬೆನಿನ್ ಕರಾವಳಿಯಿಂದ ಅಪಹರಣಗೊಂಡಿದ್ದ ಇಂಧನ ಹಡಗಿನಲ್ಲಿದ್ದ 22 ಭಾರತೀಯರನ್ನು ಯಶಸ್ವಿಯಾಗಿ ರಕ್ಷಣೆ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ.
ಫೆ.1 ರಂದು ಪಶ್ಚಿಮ ಆಫ್ರಿಕಾ ಕರಾವಳಿಯಿಂದ ಹಡಗು ನಾಪತ್ತೆಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನನಗೆ ತುಂಬಾ ಸಂತೋಷವಾಗುತ್ತಿದೆ. 22 ಭಾರತೀಯ ಪ್ರಜೆಗಳಿದ್ದ ಹಡಗನ್ನು ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ. ಸಹಾಯ ಮಾಡಿದ ನೈಜೇರಿಯಾ ಹಾಗೂ ಬಿನಿನ್ ಗೆ ಧನ್ಯವಾದಗಳನ್ನು ಹೇಳಿದ್ದಾರೆ.
ನೈಜೀರಿಯಾ ವಿದೇಶಾಂಗ ಇಲಾಖೆಯೊಂದಿಗೆ ಸಂಪರ್ಕ ಮಾಡಿದ್ದು, ಅವರು ಸಹಕಾರ ನೀಡುವುದಾಗಿ ತಿಳಿಸಿದ್ದರು ಎಂದು ಇತ್ತೀಚೆಗೆ ಸುಷ್ಮಾ ಸ್ವರಾಜ್ ಟ್ವೀಟ್ ನಲ್ಲಿ ಮಾಹಿತಿ ನೀಡಿದ್ದರು,
13,500 ಟನ್ ಗ್ಯಾಸೋಲಿನ್ ಹೊಂದಿದ್ದ ಹಡಗನ್ನು ಹೈಜಾಕ್ ಮಾಡಲಾಗಿತ್ತು. ಇದಕ್ಕೂ ಮುನ್ನ ಹಡಗಿನ ಎಲ್ಲಾ ಸಂವಹನ ವ್ಯವಸ್ಥೆಗಳನ್ನು ಕಡಿತಗೊಳಿಸಿದ್ದರು. ಹಡಗನ್ನು ಗಲ್ಫ್ ನ ಬೆನಿನ್ ಗಿನಿಯ ಪ್ರದೇಶದಲ್ಲಿ ನಿಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಮುಂಬೈ ಮೂಲದ ಆಂಗ್ಲೋ ಇಸ್ಟ್ರನ್ ಕಂಪನಿ ಮಾಲೀಕತ್ವದ ಇಂಧನ ಹಡಗು ಕಾಣೆಯಾಗಿರುವ ಶಂಕೆ ಇತ್ತು. ಆದರೆ ನಂತರ ಅಪಹರಣವಾಗರುವುದು ದೃಢಪಟ್ಟಿತ್ತು. ಹಡಗು ಶೋಧಕ್ಕೆ ಸಹಾಯ ಮಾಡುವಂತೆ ಹಡಗು ಮಾಲೀಕರು ಮುಂಬೈನ ನೌಕ ಮಹಾನಿರ್ದೇಶನಾಲಯಕ್ಕೆ ಮನವಿ ಮಾಡಿದ್ದರು. ಭಾರತೀಯ ವಿದೇಶಾಂಗ ಇಲಾಖೆ ನೈಜೀರಿಯಾ ದೇಶದ ಸಹಾಯ ಪಡೆದು ಪತ್ತೆ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜತಾಂತ್ರಿಕ ನೈಪುಣ್ಯತೆ ಮೆರೆದಿದ್ದು, ನೇರವಾಗಿ ನೈಜೇರಿಯಾದ ಅಧಿಕಾರಿಗಳೊಂದಿಗೆ ಮಾತನಾಡಿ, ಹಡಗು ಬಿಡುಗಡೆಯಲ್ಲಿ ಯಶಸ್ವಿಯಾಗಿ 22 ಭಾರತೀಯರ ಜೀವ ಉಳಿಸಿದ್ದಾರೆ.
I am happy to inform that Merchant Ship Marine Express with 22 Indian nationals on board has been released.
— Sushma Swaraj (@SushmaSwaraj) February 6, 2018
We are delighted to report that the MT Marine Express, which was hijacked by pirates on Feb 1, is now back under the command of the captain & crew since ~04:00 SG time today. All crew members are reported to be safe & well & the cargo intact. We thank you all for your well wishes
— Anglo-Eastern (@angloeasterngrp) February 6, 2018
Leave A Reply