ಪಾಕ್ ಪೋಷಿತ ಉಗ್ರ ಸೈಯದ್ ಸಲಾಹುದ್ದೀನ್, ಮಸೂದ್ ಅಜರ್ ಸುಂಜನ್ವಾ ದಾಳಿ ಮಾಸ್ಟರ್ ಮೈಂಡ್
ದೆಹಲಿ: ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಪೋಷಿತ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದ್ದು, ಶನಿವಾರ ಜಮ್ಮು ಕಾಶ್ಮೀರದ ಸುಂಜನ್ವಾ ಸೈನಿಕ ಶಿಬಿರದ ಮೇಲೆ ದಾಳಿ ನಡೆಸಿದ್ದರಿಂದ ಮೂವರು ಯೋಧರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದರು. ಇದುವರೆಗೂ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಈ ದಾಳಿಯ ಮುಖ್ಯ ಸೂತ್ರದಾರರೂ ಪಾಕಿಸ್ತಾನದಲ್ಲಿ ಸುಖದಾಯಕ ಜೀವನ ಕಳೆಯುತ್ತಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಜೈಷ್ ಎ ಮಹಮ್ಮದ್ ಮುಖ್ಯಸ್ಥ ಮಸೂದ್ ಸುಂಜನ್ವಾ ದಾಳಿಯ ಪ್ರಮುಖ ರೂವಾರಿಗಳು ಎಂಬ ವರದಿ ಹೊರಬಿದ್ದಿದೆ. ಈ ಮೂಲಕ ಮತ್ತೊಮ್ಮೆ ಪಾಕಿಸ್ತಾನ ಪೋಷಿತ ಭಯೋತ್ಪಾದಕರು ಭಾರತಕ್ಕೆ ಕಂಟವಾಗಿದ್ದು ಸಾಬೀತಾಗಿದೆ.
ಇತ್ತೀಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆಗಳ ಸಭೆ ನಡೆದಿದ್ದು, ಆ ಸಭೆಯಲ್ಲೇ ಸುಂಜನ್ವಾ ದಾಳಿಯ ಷಡ್ಯಂತ್ರ ರೂಪಿಸಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಅಲ್ಲದೇ ಎರಡು ಸಂಘಟನೆಗಳು ಮುಜಾಫರಬಾದ್ ನಲ್ಲಿ ಉಗ್ರ ತರಬೇತಿ ಕ್ಯಾಂಪ್ ಆರಂಭಿಸಿದ್ದು, ಪ್ರಸ್ತುತ ಸುಂಜನ್ವಾ ಸೈನಿಕ ಶಿಬಿರದ ಮೇಲೆ ದಾಳಿ ಮಾಡಿದವರೂ ಮುಜಾಫರಬಾದ್ ಸೈನಿಕ ಶಿಬಿರದಲ್ಲೇ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ.
ಸುಂಜನ್ವಾ ಸೈನಿಕ ನೆಲೆ ಮೇಲೆ ದಾಳಿ ನಡೆಸಿದ ಮೂವರು ಉಗ್ರನ್ನು ಹೊಡೆದುರಿಳಿಸಿದ್ದು, ಅವರಿಂದ ವಶಕ್ಕೆ ಪಡೆದ ಶಸ್ತ್ರಾಗಳು ಜೈಷ್ ಎ ಮಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ಗುರುತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಸಮುದಾಯವೇ ಈ ಉಗ್ರರನ್ನು ಜಾಗತಿಕ ಭಯೋತ್ಪಾದಕರು ಎಂದು ಘೋಷಿಸಿದ್ದರೂ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಈ ಮೂಲಕ ಭಾರತ ಸೇರಿ ನಾನಾ ಕಡೆ ನಿರಂತರವಾಗಿ ದಾಳೆ ನಡೆಸುತ್ತಿರುವ ಭಯೋತ್ಪಾದಕರಿಗೆ ಪಾಕಿಸ್ತಾನ ಪರೋಕ್ಷ ಕುಮ್ಮಕ್ಕು ನೀಡುತ್ತಿರುವುದು ಪದೇ ಪದೆ ಸಾಬೀತಾಗುತ್ತಿದೆ.
ಶನಿವಾರ ನಡೆದ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ 9 ಜನರಿಗೆ ಗಾಯಗಳಾಗಿದ್ದವು. ಸೈನಿಕರ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆ ಮುಂದುವರಿದಿದೆ.
Leave A Reply