ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ ಮೋದಿ, ರಕ್ಷಣೆಗಾಗಿ ಖರ್ಚು ಮಾಡುವ ಟಾಪ್ ಐದು ರಾಷ್ಟ್ರದಲ್ಲಿ ಭಾರತವೂ ಒಂದು!
ದೆಹಲಿ: ಇಂದಿನ ಆಧುನಿಕ ಹಾಗೂ ರಕ್ಷಣೆಗೆ ಹೆಚ್ಚಿನ ಮಹತ್ವ ಕೊಡುವ ಜಗತ್ತಿನಲ್ಲಿ ಪ್ರತಿ ರಾಷ್ಟ್ರವೂ ತನ್ನ ಆಂತರಿಕ ರಕ್ಷಣೆ ಹಾಗೂ ಬಾಹ್ಯ ರಾಷ್ಟ್ರಗಳ ದಾಳಿ ತಡೆಯುವ ಶಕ್ತಿ ಹೊಂದುವುದು ಅನಿವಾರ್ಯ.
ಇದೇ ದಿಸೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವೂ ಬೆಳೆದಿದ್ದು, ದೇಶದ ರಕ್ಷಣೆಗಾಗಿ ಅತಿಹೆಚ್ಚು ಹಣ ವಿನಿಯೋಗಿಸುವ ವಿಶ್ವದ ಐದು ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಒಂದಾಗಿದೆ.
2017ರಲ್ಲಿ ದೇಶದ ರಕ್ಷಣೆಗಾಗಿ ಅತಿಹೆಚ್ಚು ಹಣ ವಿನಿಯೋಗಿಸಿದ ರಾಷ್ಟ್ರಗಳ ಸಾಲಿನಲ್ಲಿ ಭಾರತಕ್ಕೆ ಐದನೇ ಸ್ಥಾನ ಲಭಿಸಿದ್ದು, ಈ ಹಿಂದೆ ಇದ್ದ ಬ್ರಿಟನ್ ಅನ್ನು ಭಾರತ ನಿರಾಯಾಸವಾಗಿ ಹಿಂದಿಕ್ಕಿದೆ ಎಂದು ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರ್ಯಾಟಿಜಿಕ್ ಸಡೀಸ್ ತಯಾರಿಸಿದ “ಮಿಲಿಟರಿ ಬ್ಯಾಲೆನ್ಸ್ 2018” ಎಂಬ ವರದಿಯಲ್ಲಿ ಬಹಿರಂಗವಾಗಿದೆ.
ಅದ್ಯಾಗ್ಯೂ ಅಮೆರಿಕ ತನ್ನ ಬಜೆಟ್ ನಲ್ಲಿ ರಕ್ಷಣೆಗಾಗಿಯೇ 38.52 ಲಕ್ಷ ಕೋಟಿ ರೂ. ವಿನಿಯೋಗಿಸಿ ಮೊದಲ ಸ್ಥಾನದಲ್ಲಿದ್ದರೆ, 9.61 ಲಕ್ಷ ಕೋಟಿ ರೂ. ಮೀಸಲಿಡುವ ಚೀನಾ ಎರಡನೇ, 4.90 ಲಕ್ಷ ಕೋಟಿ ರೂ. ವಿನಿಯೋಗಿಸುವ ಸೌದಿ ಅರೇಬಿಯಾ ಮೂರನೇ, 3.91 ಲಕ್ಷ ಕೋಟಿ ರೂ. ಮೀಸಲಿಟ್ಟ ರಷ್ಯಾ ನಾಲ್ಕನೇ ಹಾಗೂ 3.35 ಲಕ್ಷ ಕೋಟಿ ರೂ. ವಿನಿಯೋಗಿಸಿದ ಭಾರತ ಐದನೇ ಸ್ಥಾನದಲ್ಲಿದೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಾರತೀಯ ಸೈನ್ಯದ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಖರೀದಿ, ಸೈನ್ಯಕ್ಕೆ ಆರ್ಥಿಕ ಸ್ವಾತಂತ್ರ್ಯ ಸೇರಿ ಹಲವು ಸೌಲಭ್ಯ ನೀಡುವ ಮೂಲಕ ಭಾರತೀಯ ಸೈನ್ಯವನ್ನು ಗಟ್ಟಿಗೊಳಿಸುತ್ತಿದೆ. ಅದರ ಭಾಗವಾಗಿಯೇ ಭಾರತ ರಕ್ಷಣೆಗಾಗಿ ಇಷ್ಟೊಂದು ಹಣ ಬಜೆಟ್ ನಲ್ಲಿ ಮೀಸಲಿಟ್ಟಿದೆ.
Leave A Reply