ಯೋಗಿ ಮಾಸ್ಟರ್ ಸ್ಟ್ರೋಕ್: ಉತ್ತರ ಪ್ರದೇಶದ ಖೈರಾನ ಬಿಟ್ಟಿದ ಹಿಂದೂಗಳು ಮರಳಿ ಗೂಡಿಗೆ
ಲಖನೌ: ಉತ್ತರ ಪ್ರದೇಶದ ಗಲಭೆ ಪೀಡಿತ ಮುಸ್ಲಿಂ ಬಾಹುಳ್ಯದ ಖೈರಾನ್ ದಲ್ಲಿ ಮೂಲಭುತವಾದಿಗಳ ಕಿರುಕುಳಕ್ಕೆ ಊರು ಬಿಟ್ಟಿದ್ದ ಹಿಂದೂ ಕುಟುಂಬಗಳು ಇದೀಗ ಮರಳಿ ಗೂಡು ಸೇರುತ್ತಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾನೂನು ಸುವ್ಯಸ್ಥೆ ಕುರಿತು ಕೈಗೊಂಡ ಕಠಿಣ ಕ್ರಮಗಳು, ದಿಟ್ಟ ನಿಲುವುಗಳಿಂದ ಹಿಂದೂಗಳಿಗೆ ಸೂಕ್ತ ಭದ್ರತೆ ದೊರಕಿದೆ. ಮುಸ್ಲಿಂ ಮೂಲಭೂತವಾದಿಗಳಿಂದ ನಿತ್ಯ ಆತಂಕದಿಂದ ಖೈರಾನ್ ಬಿಟ್ಟು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿದ್ದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಸಮಾಜದಲ್ಲಿ ಶಾಂತಿ ಕೆಡಿಸುವವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಖೈರಾನ ಪ್ರದೇಶದ ಜನರಿಗೆ ಹೊಸ ಭರವಸೆ ಮೂಡಿಸಿದೆ. ಮುಸ್ಲಿಂ ಗುಂಡಾಗಳಿಂದ, ಗಲಭೆಗಳಿಂದ ಚಿಂತಿತರಾಗಿದ್ದ ಹಿಂದೂಗಳಿಗೆ ಹಿಂದಿನ ಸರ್ಕಾರ ಸೂಕ್ತ ಭದ್ರತೆ ನೀಡಿರಲಿಲ್ಲ. ಇದರಿಂದ ಹಿಂದೂಗಳು ವಲಸೆ ಹೋಗಿದ್ದರು. ಇದೀಗ ಯೋಗಿ ಆಡಳಿತದ 10 ತಿಂಗಳಲ್ಲಿ ಚಮತ್ಕಾರಿ ಬದಲಾವಣೆಯಾಗಿದೆ. ಸುಮಾರು ಒಂದು ಡಜನ್ ಗಿಂತ ಹೆಚ್ಚು ಹಿಂದೂ ಕುಟುಂಬಗಳು ಇದೀಗ ಖೈರಾನ್ ಕ್ಕೆ ವಾಪಸ್ಸ್ ಆಗಿವೆ.
‘ಮನೆ ಮಾರಾಟಕ್ಕಿವೆ’ ಬೋರ್ಡ್ ಬದಲು
ಮುಸ್ಲಿಂ ಗುಂಡಾಗಳ ಕಿರುಕುಳಕ್ಕೆ ಬೇಸತ್ತು ವಲಸೆ ಹೋಗಿದ್ದ ಹಿಂದೂಗಳ ಎಲ್ಲ ಮನೆ ಎದುರು ಮನೆ ಮಾರಾಟಕ್ಕಿವೆ ಎಂಬ ಬೋರ್ಡ್ ಗಳೇ ಇಷ್ಟು ದಿನ ಕಾಣುತ್ತಿದ್ದವು. ಯಾವಾಗ ಯೋಗಿ ಅಧಿಕಾರ ವಹಿಸಿಕೊಂಡರೋ ಆಗ ಖೈರಾನ್ ದಲ್ಲಿನ ಚಿತ್ರಣ ಬದಲಾಗಿದ್ದು, ಹಿಂದೂಗಳು ವ್ಯಾಪಾರ ಆರಂಭಿಸಿದ್ದು, ತಮ್ಮ ನಿತ್ಯದ ಕಾರ್ಯಕಲಾಪಗಳಲ್ಲಿ ತೊಡಗಿದ್ದಾರೆ.
ಸಂಭ್ರಮದಿಂದ ಹೋಲಿ ಆಚರಿಸುತ್ತೇವೆ
2014ರಲ್ಲಿ ಮೂಲಭೂತವಾದಿಗಳ ಕಿರುಕುಳಕ್ಕೆ ಖೈರಾನ್ ಬಿಟ್ಟು ಹೋಗಿದ್ದ ಅಂಕುರ ಮಿತ್ತಲ್ ಇದೀಗ ಮರಳಿದ್ದು, ಮತ್ತೆ ತಮ್ಮ ಸಿನೆಮಾ ಮಂದಿರವನ್ನು ಮುಂದುವರಿಸಿಕೊಂಡಿದ್ದಾರೆ. ಶೀಘ್ರದಲ್ಲಿ ನಾವು ಸಂಭ್ರಮದಿಂದ ಹೋಲಿ ಹಬ್ಬವನ್ನು ಆಚರಿಸುತ್ತೇವೆ ಎಂದಿದ್ದಾರೆ. ತನ್ನ ಸಹೋದರನನ್ನು ಎದುರಲ್ಲೇ ಹತ್ಯೆ ಮಾಡಿದ್ದರಿಂದ ಊರು ಬಿಟ್ಟಿದ್ದ ವಿನೋಧ ಕುಮಾರ ಇದೀಗ ಮರಳಿ ಖೈರಾನ್ ಕ್ಕೆ ಬಂದಿದ್ದು, ಸರ್ಕಾರದ ರಕ್ಷಣೆಯಲ್ಲಿ ಸ್ವಂತ ಊರಲ್ಲಿ ಜೀವನ ನಡೆಸಲು ಆರಂಭಿಸಿದ್ದಾರೆ.
ಇತ್ತೀಚೆಗೆ ಸಮಾಜಘಾತುಕ ಶಾರ್ಪಶೂಟರ್ ಶಬ್ಬೀರ್ ಅಹ್ಮದ್ ಎಂಬಾತನನ್ನು ಪೊಲೀಸರು ಹತ್ಯೆ ಮಾಡಿದ್ದರು. ಆತನ ವಿರುದ್ಧ ಕೊಲೆ ಮತ್ತು ದರೋಡೆ ಕುರಿತ 20 ಪ್ರಕರಣಗಳಿದ್ದವು. ಶಬ್ಬೀರ್ ಹತ್ಯೆಯಿಂದ ಹಿಂದೂಗಳಲ್ಲಿ ಹೊಸ ಆಶಾಕಿರಣವೊಂದು ಮೂಡಿದ್ದು, ಯೋಗಿ ಸರ್ಕಾರ ರಕ್ಷಣೆ ನೀಡುತ್ತದೆ ಎಂಬ ಭರವಸೆ ಮೂಡಿದೆ.
Leave A Reply