• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಕ್ಕುಪತ್ರದ ಮೈಲೇಜ್ ಹೋಗಬೇಕಾಗಿರುವುದು ವಜುಬಾಯ್ ಪಟೇಲ್ ಗೆ!

Hanumantha Kamath Posted On February 21, 2018


  • Share On Facebook
  • Tweet It

ಮಂಗಳೂರಿನ ಬೆಂಗರೆಯಲ್ಲಿ ಮಂಗಳವಾರ ರಾತ್ರಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮಲ್ಪೆಯ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಇಬ್ಬರ ತಲೆಗೆ ಪೆಟ್ಟಾಗಿದ್ದು, ರಕ್ತ ಸಾಕಷ್ಟು ಹರಿದು ಹೋಗಿದೆ. ಒಟ್ಟು ಮೂರು ಜನರಿಗೆ ಗಾಯವಾಗಿದೆ. ಸುಮಾರು ಮೂವತ್ತು, ನಲ್ವತ್ತು ಜನರ ತಂಡ ದಾಳಿ ಮಾಡಿ ಭಯೋತ್ಪಾದಕರ ರೀತಿಯಲ್ಲಿ ವರ್ತಿಸಿದೆ.

ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸದೇ ಹೋಗಿದ್ದರೆ ಇನ್ನಷ್ಟು ಹೆಚ್ಚಿನ ಪ್ರಾಣಾಪಾಯ ನಡೆಯುತ್ತಿತ್ತು. ಎಲ್ಲಿಯ ತನಕ ಅಂದರೆ ಸ್ಥಳಕ್ಕೆ ಬಂದಿದ್ದ ಪೊಲೀಸ್ ವಾಹನಗಳ ಮೇಲೆಯೂ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಎಸಿಪಿ ಸಹಿತ ಪೊಲೀಸ್ ಸಿಬ್ಬಂದಿಗಳಿಗೆ ಕೂಡ ಇದರಿಂದ ಗಾಯಗಳಾಗಿವೆ. ಒಟ್ಟಿನಲ್ಲಿ ಬೆಂಗರೆ ಪ್ರದೇಶ ಒಂದು ರಾತ್ರಿಯಿಡಿ ಉಗ್ರಗಾಮಿಗಳು ಯಾವಾಗ ದಾಳಿ ಮಾಡುತ್ತಾರೋ ಎಂದು ಹೆದರಿಕೊಳ್ಳುವ ಕಾಶ್ಮೀರದ ಲೆವೆಲ್ಲಿಗೆ ಬಂದಿತ್ತು. ಇಂತಹ ಭಯೋತ್ಪಾದಕ ವಾತಾವರಣ ನಿರ್ಮಿಸಿದವರ ವಿರುದ್ಧ ಯಾವ ಪ್ರಕಾಶ್ ರೈ ಕೂಡ ಮಾತನಾಡುವುದಿಲ್ಲ, ಯಾವ ಬುದ್ಧಿಜೀವಿ ಕೂಡ ಮಾತನಾಡುವುದಿಲ್ಲ. ಯಾಕೆಂದರೆ ಬ್ಲೇಡ್, ಕಲ್ಲು ಹಿಡಿದು ದಾಳಿ ಮಾಡಿದವರಿಗೆ ಬೇಸರವಾಗಿ ಅವರು ವೋಟ್ ಹಾಕದಿದ್ದರೆ ಎನ್ನುವ ಭಯವೇ?

ಇಂತಹ ಘಟನೆಗಳು ಈ ಹಿಂದೆ ಕೂಡ ಆಗಿವೆ. ಆವಾಗೆಲ್ಲ ಈ ಕಾಂಗ್ರೆಸ್ಸಿಗರು, ಅಲ್ಪಸಂಖ್ಯಾತ ಮೂಲಭೂತವಾದಿಗಳು ಏನು ಹೇಳುತ್ತಿದ್ದರೆಂದರೆ ನಿಮ್ಮ ಹಿಂದೂ ಸಂಘಟನೆಯ ಮುಖಂಡರು ಬಹಳ ಉಗ್ರ ಹಿಂದೂ ಭಾಷಣವನ್ನು ಮಾಡಿದ್ದಾರೆ. ಅವರು ಭಾಷಣ ಹಾಗೆ ಮಾಡಬಾರದಿತ್ತು. ಅದರಿಂದ ನಿಮ್ಮ ಯುವಕರು ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಹೋಗಿದ್ದಾರೆ. ಅದೇ ಕಾರಣಕ್ಕೆ ಪ್ರತಿಯಾಗಿ ಮಸೀದಿಯಿಂದ ಕಲ್ಲು ಬಿದ್ದಿರಬಹುದು ಎಂದು ಹೇಳುತ್ತಿದ್ದರು. ಅಂದರೆ ಘರ್ಷಣೆಗೆ ಹಿಂದೂ ನಾಯಕರ ಭಾಷಣವೇ ಕಾರಣ ಎನ್ನಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಯಾವ ಭಾಷಣ ಕೂಡ ಇರಲಿಲ್ಲವಲ್ಲ. ಯಾವ ಹಿಂದೂ ನಾಯಕ ಕೂಡ ಅತ್ಯುಗ್ರವಾಗಿ ಮಾತನಾಡಿರಲಿಲ್ಲ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಲ್ಪೆಯಲ್ಲಿ ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದರಲ್ಲಿ ಅಂತಹ ಹೆದರಿಕೆ ಪಡುವಂತಹ ಅಗತ್ಯ ಬ್ಲೇಡಿನಿಂದ ದಾಳಿ ಮಾಡಿದವರಿಗೆ ಏನಿತ್ತೋ? ಪೊಲೀಸರ ವಾಹನಗಳನ್ನು ಜಖಂ ಮಾಡುವ ಅಗತ್ಯ ಏನಿತ್ತೋ? ಅವರಿಗೆ ಗೊತ್ತು. ಅಮಿತ್ ಶಾ ಬಂದು ಹೋಗಿರುವುದಕ್ಕೆ ಈ ಪರಿ ಇವರು ಹೆದರಿದ್ದಾರೆ ಎಂದರೆ ಇನ್ನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಇನ್ನೆಂತಹ ವಾತಾವರಣ ಇವರು ಸೃಷ್ಟಿಸಲಿದ್ದಾರೋ. ಮೊನ್ನೆ ತಾನೆ ಕಾಂಗ್ರೆಸ್ ಶಾಸಕರ ಕೈಯಲ್ಲಿ ಹಕ್ಕುಪತ್ರ ಸ್ವೀಕರಿಸಿದ್ದಕ್ಕೆ ಬಹುಶ: ಋಣಸಂದಾಯಕ್ಕೆ ಹೀಗೆ ಮಾಡಿರಬಹುದು.

ಹಕ್ಕುಪತ್ರ ಕಾಂಗ್ರೆಸ್ ಯೋಜನೆ ಅಲ್ಲ….

ಹಕ್ಕುಪತ್ರ ಎಂದ ಕೂಡಲೇ ನೆನಪಾಯಿತು. ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದರೂ ಅಲ್ಲಿ ಚಕ್ಕರ್ ಹಾಕಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಶಾಸಕರು ಅಲ್ಲಲ್ಲಿ ಹಕ್ಕುಪತ್ರಗಳನ್ನು ಕಡ್ಲೆಪುರಿಯಂತೆ ಹಂಚುತ್ತಿದ್ದಾರೆ. ಹಕ್ಕುಪತ್ರ ಹಂಚುವುದೇ ಒಂದು ರೀತಿಯಲ್ಲಿ ತಮ್ಮ ಸಾಧನೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜೆ ಆರ್ ಲೋಬೋ ಅವರು ಹಕ್ಕುಪತ್ರ ಹಂಚುವಾಗಲೇ ತಾವು ಮುಂದಿನ ಬಾರಿ ಅಭ್ಯರ್ಥಿ, ಬೆಂಬಲಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಅಧಿವೇಶನ ಆದರೆ ಪರವಾಗಿಲ್ಲ, ನಾವು ಜನಸೇವೆ ಮೊದಲು ಮಾಡಬೇಕು ಎಂದು ಹಲ್ಲುಕಿರಿಯುತ್ತಾ ಮೊಯ್ದೀನ್ ಬಾವ ಹೇಳುತ್ತಾ ತಾವು ಮಾಡುತ್ತಿರುವುದು ಮಹಾಸಾಧನೆ ಅದು ತಮ್ಮ ಸರಕಾರದ ದೊಡ್ಡ ಯೋಜನೆ ಎನ್ನುವ ರೀತಿಯಲ್ಲಿ ಪೋಸ್ ಕೊಡುತ್ತಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಹಕ್ಕುಪತ್ರ ಹಂಚುವುದು ಶಾಸಕರ ಕೆಲಸ ಅಲ್ಲವೇ ಅಲ್ಲ. ಅದು ತಾಲೂಕು ಕಚೇರಿಯವರು ಮಾಡುವಂತದ್ದು. ಸರಕಾರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿ ವಾಸಿಸುವವರಿಗೆ ಸರಕಾರದ ಮಟ್ಟದಲ್ಲಿ ಅಲ್ಲಿ ವಾಸಿಸುವುದನ್ನು ಮುಂದುವರೆಸಲು ಸರಕಾರ ಕೊಡುವ ಕಾನೂನಾತ್ಮಕ ಮಂಜೂರಾತಿ. ಇದು ನಿಜಕ್ಕೂ ಒಳ್ಳೆಯ ವ್ಯವಸ್ಥೆ. ಆದರೆ ಇದಕ್ಕೂ ಈಗಿನ ಸಿದ್ಧರಾಮಯ್ಯ ಸರಕಾರಕ್ಕೂ ಒಂದು ಪೈಸೆಯ ಸಂಬಂಧವಿಲ್ಲ.

ವಜುಬಾಯ್ ಪಟೇಲ್ ಅವರಿಗೆ ಕಾಂಗ್ರೆಸ್ ಥ್ಯಾಂಕ್ಸ್ ಅನ್ನಬೇಕು…

ಈಗ ಪರೋಕ್ಷವಾಗಿ ಬಿಜೆಪಿ ಪಕ್ಷದ ಮೇಲೆ ಹಟ ಸಾಧಿಸುತ್ತಿರುವಂತೆ ವರ್ತಿಸುತ್ತಿರುವ ಗುಜರಾತಿನ ಮಾಜಿ ಮಂತ್ರಿ, ಕರ್ನಾಟಕದ ಹಾಲಿ ಗವರ್ನರ್ ವಜುಬಾಯಿ ಪಟೇಲ್ ಅವರು ಈಗಲೇ ನಾನು ಸಹಿ ಹಾಕಲ್ಲ ಎಂದು ನಿರಾಕರಿಸಿದ್ದರೆ ಸಿದ್ಧರಾಮಯ್ಯ ಹಕ್ಕುಪತ್ರದ ಕಾಗದಗಳಿಗೆ ಉಪ್ಪು, ಖಾರ ಹಚ್ಚಿ ನೆಕ್ಕಬೇಕಾಗಿತ್ತು. ಆದರೆ ವಜುಬಾಯ್ ಪಟೇಲ್ ಸಹಿ ಹಾಕಿ ಬಿಟ್ಟರು. ಹೋಗಿ ಬೇಕಾದಷ್ಟು ಮೈಲೇಜ್ ಪಡೆದುಕೊಳ್ಳಿ ಎಂದು ಅನುಮತಿ ಕೊಟ್ಟರು. ಅವರ ಭಿಕ್ಷೆಯ ಫಲವಾಗಿ ತಾವಾಗಿ ಏನೂ ಮಾಡದಿದ್ದರೂ ಸಿದ್ಧರಾಮಯ್ಯ ಸರಕಾರದ ನಮ್ಮ ಇಬ್ಬರು ಶಾಸಕರು ಪ್ರತಿ ದಿನ ಹಕ್ಕುಪತ್ರ ಹಂಚುವ ನಾಟಕಕ್ಕೆ ವೇದಿಕೆ ಕಟ್ಟುತ್ತಿದ್ದಾರೆ.

ವಿಷಯ ಏನೆಂದರೆ ಈ ಯೋಜನೆಗೆ 2010 ರಲ್ಲಿ ಚಾಲನೆ ಕೊಟ್ಟಿದ್ದು ಬಿ ಎಸ್ ಯಡಿಯೂರಪ್ಪನವರ ಸರಕಾರ. ಬಡವರಿಗೆ ಅವರ ಮನೆಯ ಹಕ್ಕು ಸಿಗಬೇಕು ಎಂದು ಆಗಿನ ಬಿಜೆಪಿಯ ಸರಕಾರ ಎಲ್ಲಾ ಕಾಗದ ಪತ್ರಗಳನ್ನು ತಯಾರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಬಿಜೆಪಿಯ ಗ್ರಹಚಾರ ಎನ್ನುವಂತೆ ಆಗ ಇದ್ದವರು ಕಾಂಗ್ರೆಸ್ಸಿನ ಮಾಜಿ ಕೇಂದ್ರ ಸಚಿವರಾಗಿದ್ದ ಹಂಸರಾಜ್ ಭಾರದ್ವಾಜ್. ಹಂಸರಾಜ್ ಏನೇ ಆಗಲಿ, ಈ ಹಕ್ಕುಪತ್ರದ ಕ್ರೆಡಿಟ್ ಬಿಜೆಪಿಗೆ ಸಿಗಬಾರದು ಎಂದು ನಿರ್ಧರಿಸಿಬಿಟ್ಟರು. ಸಹಿ ಹಾಕುವುದಕ್ಕೆ ನಿರಾಕರಿಸಿದರು. ಬಿಜೆಪಿ ನಾಯಕರು ಸಪ್ಪೆ ಮೊರೆ ಹಾಕಿ ರಾಜಭವನದಿಂದ ವಾಪಾಸ್ ಬಂದರು. ಆವತ್ತು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಈ ಕುರಿತು ಮಾತನಾಡಿರಲೇ ಇಲ್ಲ. ರಾಜ್ಯಪಾಲರೇ ಸಹಿ ಹಾಕಿ, ಬಡವರಿಗೆ ಹಕ್ಕುಪತ್ರ ಕೊಡೋಣ ಎಂದಿರಲಿಲ್ಲ. ಆದರೆ ಈಗ ಅವರ ಲಕ್ ಚೆನ್ನಾಗಿತ್ತು. ವಜುಬಾಯ್ ಪಟೇಲ್ ಸಹಿ ಹಾಕಿದ್ದಾರೆ. ಆದ್ದರಿಂದ ಲೋಬೋ, ಬಾವ ಪಾಯಸ ಬರುವ ವೇಳೆಯಲ್ಲಿ ಊಟದ ವೇಗ ಜಾಸ್ತಿ ಇರುತ್ತಲ್ಲ, ಹಾಗೆ ವರ್ತಿಸುತ್ತಿದ್ದಾರೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search