ಗಂಡನ ಅಂತ್ಯಸಂಸ್ಕಾರಕ್ಕೆ 5 ದಿನದ ಕಂದನೊಂದಿಗೆ ಸಮವಸ್ತ್ರ ಧರಿಸಿ ಬಂದ ಮಹಿಳಾ ಸೇನಾಧಿಕಾರಿಗೆ ಸಲಾಂ!
ದೆಹಲಿ: ಪ್ರಾಯಶಃ ಭಾರತದಲ್ಲಿ ಮಾತ್ರ ಮಹಿಳೆಯರು ಇಂತಹ ದಿಟ್ಟತನ, ಕರ್ತವ್ಯಪ್ರಜ್ಞೆ ಮೆರೆಯಬಹುದೇನೋ ಎನಿಸುತ್ತದೆ. ಹೌದು, ಅಸ್ಸೋಂನಲ್ಲಿ ಕೆಲ ದಿನಗಳ ಹಿಂದೆ ಮೈಕ್ರೋಲೈಟ್ ಎಂಬ ವಿಮಾನ ಪತನವಾಗಿ ಡಿ. ವತ್ಸ್ ಎಂಬ ವಾಯುಪಡೆ ಸಿಬ್ಬಂದಿ ಮೃತಪಟ್ಟಿದ್ದು, ಆತನ ಪತ್ನಿ ಐದು ತಿಂಗಳ ಮಗುವಿನೊಂದಿಗೆ ಗಂಡನ ಶವಸಂಸ್ಕಾರಕ್ಕೆ ಆಗಮಿಸಿ ದಿಟ್ಟತನ ಮೆರೆದಿದ್ದಾರೆ.
ಮಹಿಳಾ ಸೇನಾಧಿಕಾರಿ ಸಹ ಆಗಿರುವ ಮೇಜರ್ ಕುಮುದ್ ಡೋಗ್ರಾ ಸೇನಾ ಸಮವಸ್ತ್ರ ಧರಿಸಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮೂಲಕ ದಿಟ್ಟತನ ಹಾಗೂ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.
ಗಂಡ ಸತ್ತ ಎಂದು ತಿಂಗಳುಗಟ್ಟಲೇ ಮಹಿಳೆಯರು ಕೋಣೆಯಲ್ಲಿ ಚಿಂತಿಸುತ್ತ ಕೂರುವುದು ಸಾಮಾನ್ಯ. ಆದರೆ ಗಂಡ ದೇಶಸೇವೆಗಾಗಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟ ಹೆಮ್ಮೆಯಿಂದ ಅಂತ್ಯ ಸಂಸ್ಕಾರಕ್ಕೆ ತೆರಳಿದ ಕುಮುದ್, ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.
ಕುಮುದ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಗಂಡ ಹುತಾತ್ಮನಾದರೂ, ತಾನೂ ಸೇನೆಯಲ್ಲಿರುವ ಮಹಿಳೆ ಸಮವಸ್ತ್ರ ಧರಿಸಿ ಮಗುವಿನೊಂದಿಗೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರುವುದು ದಿಟ್ಟತನಕ್ಕೆ ನಿದರ್ಶನ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಇಂತಹ ದಿಟ್ಟೆಗೆ ನಮ್ಮದೂ ಒಂದು ಸಲಾಂ ಇರಲಿ.
Leave A Reply