ಮೋದಿ ಮಾಡಿದರು ಮೋಡಿ, ಜಿಎಸ್ಟಿ ವಿರೋಧಿಗಳೇ ಜಿಡಿಪಿ ದರ ನೋಡಿ ಮಾತಾಡಿ
ದೆಹಲಿ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಮಹತ್ತರ ಯೋಜನೆ ಜಾರಿಗೆ ತರಲಿ, ಅದನ್ನು ಸುಖಾಸುಮ್ಮನೆ ವಿರೋಧಿಸಲೆಂದೇ ಕೆಲವು ಪಡೆಗಳು ಬಕಪಕ್ಷಿಗಳಂತೆ ಕಾಯುತ್ತವೆ.
ಅದಕ್ಕೆ ನೋಟು ನಿಷೇಧ, ಜಿಎಸ್ಟಿ ಜಾರಿ, ತ್ರಿವಳಿ ತಲಾಖ್ ರದ್ದು ಮಸೂದೆ, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ… ಹೀಗೆ ಯಾವುದೇ ಪ್ರಮುಖ ನಿರ್ಧಾರ ಕೈಗೊಂಡರೂ ಮೋದಿ ಅವರನ್ನು ತೆಗಳಿಯೇ ತೆಗಳಿದ್ದಾರೆ. ಹಾಗೆಯೇ ತಮ್ಮ ತೆಗಳಿಕೆಯೇ ಸುಳ್ಳು ಎಂಬುದು ಪ್ರತಿ ಬಾರಿಯೂ ಸಾಬೀತಾಗಿದೆ.
ಅದರಲ್ಲೂ ಕೇಂದ್ರ ಸರ್ಕಾರ ಭ್ರಷ್ಟಾಚಾರ ತೊಲಗಿಸಲು ಹಾಗೂ ತೆರಿಗೆ ಪದ್ಧತಿ ಸುಧಾರಣೆ ಮಾಡಲು ನೋಟುನಿಷೇಧ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿದಾಗಲಂತೂ ಈ ಮೋದಿ ವಿರೋಧಿ ಪಡೆ ಆರ್ಥಿಕ ತಜ್ಞರಂತೆ, ಭಾರತದ ಆರ್ಥಿಕತೆ ಕುಸಿಯುತ್ತದೆ, ಜಿಡಿಪಿ ದರ ನೋಡಿ ಕುಸಿಯುತ್ತಿದೆ, ಮೋದಿ ಅವರು ದೇಶದ ವಿತ್ತೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದರು ಎಂದು ಬೊಬ್ಬೆ ಹಾಕಿದರು.
ಆದರೆ ಏನಾಯಿತು ನೋಡಿ. ಭಾರತದ ನೋಟು ನಿಷೇಧ ಹಾಗೂ ಜಿಎಸ್ಟಿ ದೇಶದ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದ್ದು, ಭಾರತದ ಜಿಡಿಪಿ ಜಿಂಕೆಯಂತೆ ನೆಗೆಯುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಇದುವರೆಗೆ ಇದ್ದ ಭಾರತದ ಜಿಡಿಪಿ ಶೇ.6.5 ರಿಂದ ಶೇ.7.2ನ್ನು ತಲುಪುವ ಮೂಲಕ ದೇಶದ ಅಭಿವೃದ್ಧಿಯ ಮಾನದಂಡವಾಗಿ ಕಾಣುತ್ತಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಶೇ.6.3ರಷ್ಟಿದ್ದ ಜಿಡಿಪಿ ವರ್ಷಾಂತ್ಯದ ವೇಳೆಗೆ 6.5 ತಲುಪಿತ್ತು. ಪ್ರಸಕ್ತ ವರ್ಷದಲ್ಲಿ ಈ ದರ ಶೇ.7.1 ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜಿಡಿಪಿ ದರದಲ್ಲಿ ಬೆಳವಣಿಗೆಯಾಗಿದ್ದು, 7.2 ತಲುಪಿದೆ. ಆ ಮೂಲಕ ಜಿಎಸ್ಟಿ, ನೋಟು ನಿಷೇಧ ವಿರೋಧಿಸಿದವರಿಗೆ ಸರಿಯಾದ ಉತ್ತರವೇ ಸಿಕ್ಕಂತಾಗಿದೆ.
Leave A Reply