ಕುರಿ ಮಾರಿ ಶೌಚಗೃಹ ಕಟ್ಟಿಸಿದ 106 ವರ್ಷದ ಆ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಫೂರ್ತಿ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ, ದೂರದೃಷ್ಟಿಯ ಸ್ವಚ್ಛ ಭಾರತ ಯೋಜನೆಗೆ ಪ್ರೇರಣೆ ಹಲವು ಜನರು. ಸ್ವಚ್ಛ ಭಾರತ ಕಲ್ಪನೆಗೆ ಮಹಿಳೆಯರ ಪಾಲು ಅಮೋಘ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ದಿನಾಚರಣೆ ನಿಮಿತ್ತ ಸಾಧಕ, ತಮಗೆ ಸ್ಫೂರ್ತಿಯಾಗಿರುವ ಮಹಿಳೆಯರನ್ನು ಸ್ಮರಿಸಿದ್ದಾರೆ. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಮಹಿಳೆ, ಪ್ರಧಾನಿಗಳ ಮನ ಸೆಳೆದವರು ಛತ್ತಿಸಗಡ್ ದ 106 ವರ್ಷದ ಕುನ್ವರ್ ಬಾಯಿ.
106 ವರ್ಷದ ಕುನ್ವರ್ ಬಾಯಿ ತಮ್ಮ ಮನೆಯಲ್ಲಿದ್ದ ಕುರಿಗಳನ್ನು ಮಾರಾಟ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕಲ್ಪನೆಗೆ ಪೂರಕವಾಗಿ, ಶೌಚಗೃಹ ನಿರ್ಮಿಸುವ ಮೂಲಕ ದೇಶಕ್ಕೆ ಮಾದರಿಯಾಗಿದ್ದರು. 106 ವರ್ಷದಲ್ಲೂ ಶೌಚಗೃಹ ನಿರ್ಮಿಸುವ ಮೂಲಕ ಮಾದರಿಯಾದ ಕುನ್ವರ್ ಬಾಯಿ ಅವರ ಕಾರ್ಯಕ್ಕೆ ಪ್ರಧಾನಿ ಮೋದಿ ಶಿರಭಾಗಿ ನಮಿಸಿದ್ದರು.
ವಿಶ್ವಮಹಿಳಾ ದಿನದಂದು ಕುನ್ವರ್ ಬಾಯಿ ಅವರನ್ನು ನೆನಪಿಸಿರುವ ಪ್ರಧಾನಿ ನರೇಂದ್ರ ಮೋದಿ ‘106 ವರ್ಷದ ಕುನ್ವರ್ ಬಾಯಿ ನನಗೆ ಸ್ಫೂರ್ತಿಯಾಗಿದ್ದಾರೆ. ಸ್ವಚ್ಛಭಾರತಕ್ಕೆ ಕುನ್ವರ್ ಬಾಯಿ ಅವರ ಕೊಡುಗೆ ಅಪಾರ. ನಾನು ಕುನ್ವರ್ ಬಾಯಿ ಅವರ ಉದಾತ ಚಿಂತನೆಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಫೂರ್ತಿಯಾಗಿರುವ ಕುನ್ವರ್ ಬಾಯಿ ಇತ್ತೀಚೆಗೆ ನಿಧನರಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲೂ ಶೌಚಗೃಹ ಕಟ್ಟಿಸುವ ಮೂಲಕ ಯುವಕರಿಗೆ ಪ್ರೇರಣೆಯಾಗಿದ್ದಾರೆ.
Leave A Reply