ಹುತಾತ್ಮ ಸೈನಿಕರ ಮಕ್ಕಳ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಎಂತಹ ಸಹಕಾರ ನೀಡಿದೆ ಗೊತ್ತಾ?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಸೈನಿಕರು, ನಮ್ಮ ಸೇನೆ ಬಗ್ಗೆ ಗೌರ, ಹೆಮ್ಮೆಯನ್ನು ತೋರಿಸುತ್ತಾರೆ. ದೀಪಾವಳಿಯನ್ನು ಸಹ ಸೈನಿಕರ ಜತೆಯೇ ಆಚರಿಸುತ್ತಾರೆ. ಇದರ ಜತೆಗೆ ಈಗ ಹುತಾತ್ಮ ಸೈನಿಕರ ಮಕ್ಕಳ ಶಿಕ್ಷಣಕ್ಕೂ ನೆರವಾಗಿದ್ದಾರೆ.
ಹೌದು, ಒನ್ ರ್ಯಾಂಕ್, ಒನ್ ಪೆನ್ಶನ್ ಅನ್ವಯ ಕಳೆದ ಜುಲೈನಿಂದ ನೀಡುತ್ತಿದ್ದ 10 ಸಾವಿರ ರೂಪಾಯಿಯನ್ನು ರದ್ದುಗೊಳಿಸಿದ್ದು, ಇನ್ನು ಮೇಲೆ ಇದೇ ಹತ್ತು ಸಾವಿರ ರೂಪಾಯಿಯನ್ನು ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೇ ನೇರವಾಗಿ ನೀಡಲಿದೆ. ಇದರಿಂದ ದೇಶದ ಸುಮಾರು 3500 ಮಕ್ಕಳಿಗೆ ಸಹಾಯವಾಗಲಿದೆ ಎಂದು ತಿಳಿದುಬಂದಿದೆ.
ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಲೇ ಕಾಣೆಯಾದವರು, ದಿವ್ಯಾಂಗರಾಗಿರುವವರು ಹಾಗೂ ಹುತಾತ್ಮರಾಗಿರುವ ಸೈನಿಕರ ಮಕ್ಕಳು ಯೋಜನೆಯ ಲಾಭ ಪಡೆಯಲಿದ್ದು, ಅವರಿಗೆ ಸರ್ಕಾರ ಶೈಕ್ಷಣಿಕ ವೆಚ್ಚವಾಗಿ 10 ಸಾವಿರ ರೂ. ಒದಗಿಸುತ್ತದೆ.
ಸರ್ಕಾರಿ, ಸರ್ಕಾರಿ ಅನುದಾನಿತ, ಕೇಂದ್ರ ಸರ್ಕಾರ ನಡೆಸುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಯೋಜನೆಯ ಅನುಕೂಲ ಸಿಗಲಿದೆ. ಇದಕ್ಕಾಗಿ ಸರ್ಕಾರ ಪ್ರತಿ ವರ್ಷ 4 ಕೋಟಿ ರೂಪಾಯಿ ಖರ್ಚು ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ.
ಒಟ್ಟಿನಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಲೇ ಮಡಿದವರ, ಸಂಕಷ್ಟಕ್ಕೆ ಈಡಾದವರ ಮಕ್ಕಳ ನೆರವಿಗೆ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.
Leave A Reply