ಮೋದಿ ಎಫೆಕ್ಟ್: ಉಜ್ಬೇಕ್ ಮಹಿಳೆ ಬಾಯಲ್ಲಿ ಶಾಂತಿ ಮಂತ್ರ
ತಾಷ್ಕೆಂಟ್: ವಸುದೈವ ಕುಟುಂಬಕಂ ಮಂತ್ರವನ್ನು ನೀಡುವ ಮೂಲಕ ವಿಶ್ವಕ್ಕೆ ಶಾಂತಿ, ಸೌಹಾರ್ದತೆಯನ್ನು ಹಂಚಿದ ಭಾರತ. ಇದೀಗ ಇಡೀ ವಿಶ್ವ ಭಾರತದ ಶಾಂತಿ ಮಂತ್ರಕ್ಕೆ ಶರಣಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ಸಾಕ್ಷಿ ದೊರೆತಿದೆ. ಇಡೀ ವಿಶ್ವ ಭಾರತ ಯೋಗ, ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಇದೀಗ ಅದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದ್ದು ತಾಷ್ಕೆಂಟ್ ನಲ್ಲಿ ಮಹಿಳೆಯೊಬ್ಬರು ಹಿಂದಿಯಲ್ಲಿರುವ ಶಾಂತಿ ಮಂತ್ರವನ್ನು ಅನುರಣಿಸುವ ಮೂಲಕ ಭಾರತೀಯರ ಗಮನ ಸೆಳೆದಿದ್ದಾರೆ.
ತಾಷ್ಕೆಂಟ್ ನಲ್ಲಿ ನಡೆದ ಹಿಂದಿ ಬಾತ್ ಚೀತ್ ಕ್ಲಬ್ ನ ಉದ್ಘಾಟನೆ ಸಮಾರಂಭದಲ್ಲಿ ತಾಷ್ಕೆಂಟ್ ಮೂಲದ ಮಹಿಳೆಯೊಬ್ಬರು ಶಾಂತಿ ಮಂತ್ರ ಹಾಡಿರುವುದು ಗಮನ ಸೆಳೆದಿದೆ. ಈ ವಿಡಿಯೋವನ್ನು ಭಾರತೀಯ ವಿದೇಶಾಂಗ ಇಲಾಖೆಯ ಎಂ.ಜೆ.ಅಕ್ಬರ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಶ್ವಕ್ಕೆ ಶಾಂತಿ ಮಂತ್ರ ಬೋದಿಸುವ ತಾಕತ್ತು ಇರುವುದು ಭಾರತಕ್ಕೆ ಮಾತ್ರ ಎಂಬ ಸಂದೇಶ ನೀಡಿದಂತಾಗಿದೆ.
2015 ಪ್ರಧಾನಿ ನರೇಂದ್ರ ಮೋದಿ ಏಷಿಯಾನ್ ದೇಶಗಳಿಗೆ ಭೇಟಿ ನೀಡಿದಾಗ ಹಿಂದಿ ವಿಸ್ತರಣೆ ಕುರಿತು ಒತ್ತು ನೀಡಿದ್ದರು. ಅಲ್ಲದೇ ಭಾರತದ ಮೂಲಕ ವಿಶ್ವಕ್ಕೆ ಶಾಂತಿ ಮಂತ್ರ ಬೋಧಿಸುವ ಕುರಿತು ಸ್ಪಷ್ಟ ಸಂದೇಶ ನೀಡಿದ್ದರು. ಅಲ್ಲದೇ ಉಜ್ಬೇಕಿಸ್ತಾನದ ಜನರೊಂದಿಗೆ ಬೆರೆಯಲು ಹಿಂದಿ ಭಾಷೆಯನ್ನು ಅಲ್ಲಿನ ಜನರಿಗೆ ಕಲಿಸುವ ಕುರಿತು ಮಾತುಕತೆ ನಡೆಸಿದ್ದರು. ಅಲ್ಲದೇ ಜನರೊಂದಿಗೆ, ಸಂಸ್ಕೃತಿ ಅರಿಯಲು ಭಾಷೆ ಪ್ರಬಲ ಮಾಧ್ಯಮ ಎಂಬುದನ್ನು ಮೋದಿ ಉಜ್ಬೇಕಿಸ್ತಾನ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
Uzbek ladies singing Shanti Mantra at the inauguration of Hindi Baatcheet Club by me in Tashkent.. pic.twitter.com/GEJpsKMxfS
— M.J. Akbar (@mjakbar) March 25, 2018
Leave A Reply