• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಎಫೆಕ್ಟ್: ಉಜ್ಬೇಕ್ ಮಹಿಳೆ ಬಾಯಲ್ಲಿ ಶಾಂತಿ ಮಂತ್ರ

TNN Correspondent Posted On March 26, 2018
0


0
Shares
  • Share On Facebook
  • Tweet It

ತಾಷ್ಕೆಂಟ್: ವಸುದೈವ ಕುಟುಂಬಕಂ ಮಂತ್ರವನ್ನು ನೀಡುವ ಮೂಲಕ ವಿಶ್ವಕ್ಕೆ ಶಾಂತಿ, ಸೌಹಾರ್ದತೆಯನ್ನು ಹಂಚಿದ ಭಾರತ. ಇದೀಗ ಇಡೀ ವಿಶ್ವ ಭಾರತದ ಶಾಂತಿ ಮಂತ್ರಕ್ಕೆ ಶರಣಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ಸಾಕ್ಷಿ ದೊರೆತಿದೆ. ಇಡೀ ವಿಶ್ವ ಭಾರತ ಯೋಗ, ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಇದೀಗ ಅದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದ್ದು ತಾಷ್ಕೆಂಟ್ ನಲ್ಲಿ ಮಹಿಳೆಯೊಬ್ಬರು ಹಿಂದಿಯಲ್ಲಿರುವ ಶಾಂತಿ ಮಂತ್ರವನ್ನು ಅನುರಣಿಸುವ ಮೂಲಕ ಭಾರತೀಯರ ಗಮನ ಸೆಳೆದಿದ್ದಾರೆ.

ತಾಷ್ಕೆಂಟ್ ನಲ್ಲಿ ನಡೆದ ಹಿಂದಿ ಬಾತ್ ಚೀತ್ ಕ್ಲಬ್ ನ ಉದ್ಘಾಟನೆ ಸಮಾರಂಭದಲ್ಲಿ ತಾಷ್ಕೆಂಟ್ ಮೂಲದ ಮಹಿಳೆಯೊಬ್ಬರು ಶಾಂತಿ ಮಂತ್ರ ಹಾಡಿರುವುದು ಗಮನ ಸೆಳೆದಿದೆ. ಈ ವಿಡಿಯೋವನ್ನು ಭಾರತೀಯ ವಿದೇಶಾಂಗ ಇಲಾಖೆಯ  ಎಂ.ಜೆ.ಅಕ್ಬರ್  ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಶ್ವಕ್ಕೆ ಶಾಂತಿ ಮಂತ್ರ ಬೋದಿಸುವ ತಾಕತ್ತು ಇರುವುದು ಭಾರತಕ್ಕೆ ಮಾತ್ರ ಎಂಬ ಸಂದೇಶ ನೀಡಿದಂತಾಗಿದೆ.

2015 ಪ್ರಧಾನಿ ನರೇಂದ್ರ ಮೋದಿ ಏಷಿಯಾನ್ ದೇಶಗಳಿಗೆ ಭೇಟಿ ನೀಡಿದಾಗ ಹಿಂದಿ ವಿಸ್ತರಣೆ ಕುರಿತು ಒತ್ತು ನೀಡಿದ್ದರು. ಅಲ್ಲದೇ ಭಾರತದ ಮೂಲಕ ವಿಶ್ವಕ್ಕೆ ಶಾಂತಿ ಮಂತ್ರ ಬೋಧಿಸುವ ಕುರಿತು ಸ್ಪಷ್ಟ ಸಂದೇಶ ನೀಡಿದ್ದರು. ಅಲ್ಲದೇ ಉಜ್ಬೇಕಿಸ್ತಾನದ ಜನರೊಂದಿಗೆ ಬೆರೆಯಲು ಹಿಂದಿ ಭಾಷೆಯನ್ನು ಅಲ್ಲಿನ ಜನರಿಗೆ ಕಲಿಸುವ ಕುರಿತು ಮಾತುಕತೆ ನಡೆಸಿದ್ದರು. ಅಲ್ಲದೇ ಜನರೊಂದಿಗೆ, ಸಂಸ್ಕೃತಿ ಅರಿಯಲು ಭಾಷೆ ಪ್ರಬಲ ಮಾಧ್ಯಮ ಎಂಬುದನ್ನು ಮೋದಿ ಉಜ್ಬೇಕಿಸ್ತಾನ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

Uzbek ladies singing Shanti Mantra at the inauguration of Hindi Baatcheet Club by me in Tashkent.. pic.twitter.com/GEJpsKMxfS

— M.J. Akbar (@mjakbar) March 25, 2018

0
Shares
  • Share On Facebook
  • Tweet It




Trending Now
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Tulunadu News January 12, 2026
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Tulunadu News January 10, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
  • Popular Posts

    • 1
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • 2
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!

  • Privacy Policy
  • Contact
© Tulunadu Infomedia.

Press enter/return to begin your search