ಬೋರಿಂಗ್ ಪರೋಟಗಳಿಗಿಂತ ಡಿಫರೆಂಟಿದು!
Posted On July 19, 2017
ಮುಲ್ಲಂಗಿ ಪರೋಟ
ಬೇಕಾಗುವ ಪದಾರ್ಥಗಳು:
- ಒಂದು ಮುಲ್ಲಂಗಿ,
- 4 ಬೆಳ್ಳುಳ್ಳಿ ಬೀಜ,
- 1/2 ಚಮಚಾ ಮೆಣಸಿನ ಹುಡಿ,
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಮುಲ್ಲಂಗಿ ತೊಳೆದು ಅದರ ಸಿಪ್ಪೆ ಸುಲಿದು ಅದರ ಸಪೂರ ಎಳೆಗಳಾಗಿ ತುಂಡು ಮಾಡಿ. ನಂತರ ಕಾವಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಉಪ್ಪು, ಮೆಣಸಿನ ಹುಡಿ, ಬೆಳ್ಳುಳ್ಳಿ ಬೀಜದ ಚಿಕ್ಕ ಚಿಕ್ಕ ತುಂಡುಗಳನ್ನು ಹಾಕಿ, ಸ್ವಲ್ಪ ಹುರಿದು ಅದಕ್ಕೆ ತಯಾರಾಗಿಟ್ಟ ಮುಲ್ಲಂಗಿಯನ್ನು ಹಾಕಿ, ಐದು ನಿಮಿಷ ಬಿಡದೆ ಹುರಿದು ಮುದ್ದೆ ಮಾಡಿ ಇಡಬಹುದು.
ಪರೋಟ್ ದ ಹಿಟ್ಟು ಮಾಡುವ ಬಗೆ:
ಬೇಕಾಗುವ ಪದಾರ್ಥಗಳು:
- ಅರ್ಧ ಗ್ಲಾಸ್ ನೀರು,
- ರುಚಿಗೆ ತಕ್ಕಷ್ಟು ಉಪ್ಪು,
- ಮಿಕ್ಸ್ ಮಾಡಲು ಬೇಕಾದಷ್ಟು ಗೋಧಿ ಹಿಟ್ಟು,
- 2 ಚಮಚಾ ಎಣ್ಣೆ,
ತಯಾರಿಸುವ ವಿಧಾನ:
ಹಿಟ್ಟಿನ ಹದವಾಗಿರುವ ಗುಳಿಗಳನ್ನು ತಯಾರಿಸಿ ಅದನ್ನು ಹಪ್ಪಳ ಮಾಡುವಾಗ ಲಟ್ಟಿಸಿದಂತೆ ಮಾಡಿ ಮೇಲೆ ಬರದಂತೆ ಮೂಲಂಗಿ ಚೂರ್ಣವನ್ನು ಎರಡು ಚಮಚಾ ಅದರಲ್ಲಿ ಇಟ್ಟು ಹೋಳಿಗೆ ಮಡಚಿದಂತೆ ಮಡಚಿ ನಂತರ ಅದನ್ನು ದೋಸೆಯ ಕಾವಲಿಯಲ್ಲಿ ಇಟ್ಟು ಬೇಕಾಗುವಷ್ಟು ಎಣ್ಣೆ ಹಾಕಿ ಕಾಯಿಸುವುದು. ಬಿಸಿ ಬಿಸಿ ಮುಲ್ಲಂಗಿ ಪರೋಟ ತಿನ್ನಲು ರೆಡಿ.
- Advertisement -
Leave A Reply