ಎರಡು ದಿನದಲ್ಲಿ ಬರುತ್ತೇನೆ ಎಂದು ಪೋಷಕರಿಗೆ ಹೇಳಿದ್ದ ಆ ಯೋಧ ಮನೆಗೆ ಬಂದ, ಆದರೆ ಜೀವಂತವಾಗಿ ಅಲ್ಲ!
ಮುಂಬೈ: ಜಮ್ಮು-ಕಾಶ್ಮೀರ ಎಂದರೇನೇ ಹಾಗೆ. ಪುಸ್ತಕದಲ್ಲಿ ಬರೆದಿರುವುದನ್ನು ನೋಡಿಯೋ, ಕಾಶ್ಮೀರದ ಯಾವುದೋ ಒಂದು ಸುಂದರ ಚಿತ್ರವನ್ನು ನೋಡಿಯೋ ನಾವು ಅದು ಭೂ ಲೋಕದ ಸ್ವರ್ಗ ಎಂದು ಕರೆಯುತ್ತೇವೆ. ಆದರೆ ಅಲ್ಲಿ ಗಡಿ ಕಾಯುವ ಯೋಧರಿಗೆ ಮಾತ್ರ ಕಾಶ್ಮೀರ ಅಕ್ಷರಶಃ ನರಕ.
ಅದಕ್ಕೆ ನಾವು ಪ್ರತಿದಿನ ಸುದ್ದಿವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಯೋಧರು ಹುತಾತ್ಮರಾದ ಕುರಿತು ಸುದ್ದಿಗಳನ್ನು ಓದುವಾಗ ಸ್ವಲ್ಪ ವಿಚಲಿತರಾದರೂ, ದಿನಾಲೂ ಇದೇ ಸುದ್ದಿ ಎಂದು ನಾವು ಸುಮ್ಮನಾಗುತ್ತೇವೆ. ಆದರೆ ಪ್ರಾಣದ ಹಂಗು ತೊರೆದು ಹೋರಾಡುವವರು ಮಾತ್ರ ಕಾಶ್ಮೀರ ಗಡಿಯ ಸೈನಿಕರು.
ಇದೇ ಕಾಶ್ಮಿರದಿಂದ ಮೊನ್ನೆ ಆ ಚಿಗುರು ಮೀಸೆಯ, 20 ವರ್ಷದ ಯೋಧ ಮನೆಗೆ ಕರೆ ಮಾಡಿದ್ದ. ಇನ್ನೆರಡು ದಿನದಲ್ಲಿ ಮನೆಗೆ ಬರುತ್ತೇನೆ ಎಂದು ದೂರದ ಮಹಾರಾಷ್ಟ್ರದಲ್ಲಿರುವ ತಂದೆ-ತಾಯಿಗೆ ಹೇಳಿದ್ದ. ಹಾಗಂತ ಆ ಯೋಧನೇನೂ ಮನೆಗೆ ಬರದೇ ಇರಲಿಲ್ಲ. ಬಂದ, ಆದರೆ ಜೀವಂತವಾಗಿ ಅಲ್ಲ ಎಂಬುದೇ ದುಃಖಕರವಾದ ವಿಷಯ.
ಶುಭಂ ಸೂರ್ಯಕಾಂತ್ ಮುಸ್ತಾಪುರೆ ಎಂಬ ಆ ಯೋಧ ಮೊನ್ನೆಮಂಗಳವಾರ ಪೂಂಚ್ ನಲ್ಲಿ ಕಿಸ್ತಾನಿ ಸೈನಿಕರ ಗುಂಡಿಗೆ ಮೊನ್ನೆ ಬಲಿಯಾಗಿದ್ದು, ಬುಧವಾರ ಕಣ್ಣೀರಿನೊಂದಿಗೆ ಸ್ವಾಗತಿಸುವಾಗ ಎಲ್ಲರ ಕಣ್ಣಂಚಲ್ಲೂ ನೀರು ಬರುವಂತಿತ್ತು ದೃಶ್ಯ.
ಮಗನ ಸಾವಿನಿಂದ ದುಃಖಿತರಾದ ಪೋಷಕರು, ಎರಡೇ ದಿನದಲ್ಲಿ ಬರುತ್ತೇನೆ ಎಂದು ಫೋನಿನಲ್ಲಿ ಹೇಳಿದ್ದ. ಎರಡು ದಿನಗಳಲ್ಲಿ ಮನೆಗೆ ಬಂದ ನಿಜ, ಆದರೆ ಆತನ ದೇಹದ ಸುತ್ತ ಭಾರತದ ಧ್ವಜ ಸುತ್ತಲಾಗಿದೆ, ಅವನ ಉಸಿರಾಟ ನಿಂತು ಹೋಗಿದೆ ಎಂದು ಕಣ್ಣೀರಾಗುತ್ತಾರೆ. ಆಗೆಲ್ಲ ಮನಸ್ಸು ಕಾಶ್ಮೀರ ಗಡಿಯಲ್ಲಿ ಉಪಟಳ ಮಾಡುವ ಪಾಕಿಸ್ತಾನಿ ಸೈನಿಕರನ್ನು ಶಪಿಸುತ್ತದೆ.
Leave A Reply