ನಾಡಪ್ರಭುವಿಗೆ ರಾಜ್ಯ ಸರ್ಕಾರದಿಂದ ಅವಮಾನ, ಅನೈತಿಕ ತಾಣದಲ್ಲಿ ಕೆಂಪೇಗೌಡರ ಪ್ರತಿಮೆ
ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ ಜನರ ಮಧ್ಯೆ ಜಾತಿ, ಧರ್ಮಗಳ ಹೆಸರಲ್ಲಿ ವಿಷ ಬೀಜ ಬಿತ್ತಿ ಒಡೆದು ಆಳುತ್ತಿದೆ. ಇನ್ನೊಂದೆಡೆ ಕೆಲವು ಜಾತಿಗಳನ್ನು ಸೆಳೆಯಲು ಹೀನ ಕುತಂತ್ರ ಸಿದ್ದರಾಮಯ್ಯ ಸರ್ಕಾರ ಕೈಗೊಂಡಿದೆ. ಅಲ್ಲದೇ ಇತ್ತೀಚೆಗೆ ಚುನಾವಣೆ ನೀತಿ ಸಂಹಿತೆಯ ಭೀತಿಯಲ್ಲಿ ಆತುರದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ, ಅಪೂರ್ಣ ಕಾಮಗಾರಿಗಳನ್ನೇ ಉದ್ಘಾಟಿಸಲಾಗಿದೆ. ಚುನಾವಣೆಗಾಗಿ ಎಂತಹುದ್ದೇ ಹೀನ ಕೆಲಸಕ್ಕೆ ಬೇಕಾದರೂ ಇಳಿಯುತ್ತೇನೆ ಎನ್ನುವ ಕಾಂಗ್ರೆಸ್ ಸರ್ಕಾರದ ಧ್ಯೇಯ ಸ್ಪಷ್ಟವಾಗಿದ್ದು, ಸರ್ಕಾರ ನಾಡಪ್ರಭು ಕೆಂಪೇಗೌಡರಿಗೆ ಭಾರಿ ಅವಮಾನ ಮಾಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಬ್ಬಾಳ ಜಂಕ್ಷನ್ ನಲ್ಲಿರೋ ಕಗ್ಗತ್ತಲ್ಲಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ರಾಜ್ಯ ಸರ್ಕಾರ ಅನಾವರಣಗೊಳಿಸಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೇ ಮೂರ್ತಿ ಸ್ಥಾಪನೆ ಸ್ಥಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಮೂರ್ತಿ ಅನಾವರಣಗೊಂಡರೂ ಇಡೀ ಸ್ಥಳದಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ದುರಂತವೆಂದರೆ ಸ್ಥಳ ಸ್ವಚ್ಛತೆ ನಡೆಸದೇ ಇರುವುದರಿಂದ ಕಾಂಡೋಮ್ ಗಳು ಕಾಣುತ್ತಿರುವುದು ಒಕ್ಕಲಿಗ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಅಭಿವೃದ್ಧಿ ಕಾಣದ ಪಾರ್ಕ್ ನಲ್ಲಿ ಅನೈತಿಕ ಚಟುವಟಿಕೆಗಳು ನಿರಂತರವಾಗಿದ್ದು, ಮದ್ಯದ ಬಾಟಲಿಗಳು, ಕಾಂಡೋಮ್ ಗಳು ಕಾಣುವುದು ಸಾಮಾನ್ಯವಾಗಿದೆ. ಚುನಾವಣೆಗಾಗಿ ಕೆಂಪೇಗೌಡರಿಗೆ ಅವಮಾನ ಮಾಡಿದಕ್ಕೆ ರಾಜ್ಯ ಒಕ್ಕಲಿಗರ ಸಂಘ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಹೆಬ್ಬಾಳ ಜಂಕ್ಷನಲ್ಲಿ ನಿರ್ಮಾಣವಾಗಿರೋ ನಾಡಪ್ರಭುವಿನ ಪುತ್ಥಳಿ ಸ್ಥಳ ಬಿಡಿಎ ಪಾರ್ಕ್ ಎನ್ನುತ್ತಿದ್ದರೂ ಅದು ಕಸದ ಡಂಪಿಂಗ್ ಯಾರ್ಡ್ ಆಗಿದೆ. ಇಲ್ಲಿ ಸ್ವಚ್ಛತೆ, ರಕ್ಷಣೆ ಇಲ್ಲವೇ ಇಲ್ಲ. 3 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಿರುವ ಕೆಂಪೇಗೌಡರ ಅಶ್ವಾರೂಢನ ಪುತ್ಥಳಿಗೆ ಒಂದೇ ಒಂದು ವಿದ್ಯುತ್ ದೀಪ ಹಾಕಿಲ್ಲ. ಅಲ್ಲದೇ ಬಿದ್ದಿರುವ ಕಾಂಡೋಮ್ ತೆರವು ಮಾಡಿ್ಲ. ಮಂಗಳಮುಖಿಯರ ಉಪಟಳವನ್ನು ತಡೆಯುತ್ತಿಲ್ಲ ಎಂದು ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
Leave A Reply