ಭಗವಾನ್ ಹನುಮಾನನಿಗೆ ನಮಸ್ಕರಿಸಿದ್ದಕ್ಕೆ ಬಿಜೆಪಿ ಮುಸ್ಲಿಂ ಎಂಎಲ್ ಸಿ ವಿರುದ್ಧ ಫತ್ವಾ, ಇದಲ್ಲವೇ ಅಸಹಿಷ್ಣುತೆ?
ಲಖನೌ: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆಯನ್ನು ಬಾನೆತ್ತರಕ್ಕೆ ಹಾರಿಸಲು ಒಂದು ದಿನವೂ ರಜೆ ತೆಗೆದುಕೊಳ್ಳದೆ ದುಡಿಯುತ್ತಿದ್ದಾರೆ. ಪರಿಣಾಮ ದೇಶದ ಜಿಡಿಪಿ ದರ ಏರಿಕೆಯಾಗುತ್ತಿದೆ, ಪಾಕಿಸ್ತಾನ ಮಗುಮ್ಮಾಗಿ ಕುಳಿತಿದೆ, ಗಡಿಯಲ್ಲಿ ಉಪಟಳ ಮಾಡಲು ಚೀನಾ ಹೆದರುತ್ತಿದೆ. ಭಾರತದ ಆರ್ಥಿಕ ಪ್ರಗತಿ ಚೀನಾವನ್ನೇ ಹಿಂದಿಕ್ಕಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿವೆ.
ಹೀಗಿದ್ದರೂ ದೇಶದಲ್ಲಿರುವ ಕೆಲವು ಅತೃಪ್ತ ಆತ್ಮಗಳು, ಚುನಾವಣೆ ಸೋತವರು, ನರೇಂದ್ರ ಮೋದಿ ಅವರ ಮುಖ ಕಂಡರೇನೇ ಆಗದವರು ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಬೊಬ್ಬೆ ಹಾಕುತ್ತಾರೆ. ಅಲ್ಪಸಂಖ್ಯಾತರು, ದಲಿತರಿಗೆ ರಕ್ಷಣೆ ಇಲ್ಲ ಎಂದು ಬೊಗಳೆ ಬಿಡುತ್ತಾರೆ.
ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿರುವ ಮುಖಂಡರೊಬ್ಬರು ಭಗವಾನ್ ಹನುಮಾನನಿಗೆ ಪೂಜೆ ಸಲ್ಲಿಸಿದ್ದಕ್ಕೇ, ಆತನಿಗೆ ನಮನ ಸಲ್ಲಿಸಿದ್ದಕ್ಕೇ ಇಸ್ಲಾಮಿಕ್ ಸಂಘಟನೆ ಫತ್ವಾ ಹೊರಡಿಸಿದೆ. ಆದರೂ ಯಾರೂ ಇದು ಅಸಹಿಷ್ಣುತೆ, ದೇವರು ಎಲ್ಲರಿಗೂ ಒಂದೇ, ಫತ್ವಾ ಹೊರಡಿಸಿದ್ದು ತಪ್ಪು ಎಂದು ಬಾಯಿಬಿಡುತ್ತಿಲ್ಲ. ಧರ್ಮ, ಜಾತಿ ನೋಡಿ ಆಕ್ರೋಶ ವ್ಯಕ್ತಪಡಿಸುವ ಇಂತಹ ಇಬ್ಬಂದಿತನದ ಬುದ್ಧಿಜೀವಿಗಳಿಂದಲೇ ಇಂದು ತಾತ್ವಿಕ ವಿಚಾರ ಮರೀಚಿಕೆಯಾಗಿದೆ ಎನಿಸುತ್ತಿದೆ.
ಹೌದು, ಬುಕ್ಕಾಲ್ ನವಾಬ್ ಎಂಬ ಬಿಜೆಪಿ ಎಂಎಲ್ಸಿ ಹಿಂದೂ ದೇವರಾದ ಹನುಮಾನನಿಗೆ ಪ್ರಾರ್ಥನೆ ಸಲ್ಲಿಸಿದ್ದಕ್ಕೆ ಉತ್ತರ ಪ್ರದೇಶದ ದರೂಲ್ ಉಲುಮ್ ಅಶರ್ಫಿಯಾ ಎಂಬ ಮದರಸಾದ ಮುಖ್ಯಸ್ಥ ಮೌಲಾನಾ ಸಾಲಿಂ ಅಶ್ರಫ್ ಖಾಸ್ಮಿ ಎಂಬಾತ ಬುಕ್ಕಾಲ್ ವಿರುದ್ಧ ಫತ್ವಾ ಹೊರಡಿಸಿದ್ದು, ಆತ ಈಗ ಮುಸ್ಲಿಮನೇ ಅಲ್ಲ ಎಂದು ಘೋಷಿಸಲಾಗಿದೆ.
ಅಷ್ಟೇ ಅಲ್ಲ, ಇಸ್ಲಾಮಿನಲ್ಲಿ ಹಿಂದೂ ದೇವರನ್ನು ಪೂಜಿಸುವುದು ನಿಷಿದ್ಧವಂತೆ. ಹಾಗಾಗಿ ಬುಕ್ಕಾಲ್ ಅವರನ್ನು ಇಸ್ಲಾಮಿನಿಂದ ಬಹಿಷ್ಕರಿಸಲಾಗಿದೆ ಎಂದು ಮಾರುದ್ದ ತಿಪ್ಪೆ ಸಾರಿದ್ದಾನೆ ಈ ಮೌಲ್ವಿ. ದೇವರು ಎಲ್ಲರಿಗೂ ಒಂದೇ, ರಾಮ-ರಹೀಮ ಒಂದೇ ಎಂದು ಬದುಕುತ್ತಿರುವ ಭಾರತದಲ್ಲಿ ಇಂತಹ ಕುತ್ಸಿತ ಮನಸ್ಸುಗಳು ಇದ್ದರೂ ಯಾವ ಬುದ್ಧಿ ಜೀವಿಯೂ, ಯಾವ ಪ್ರಕಾಶ್ ರೈ, ಪ್ರಗತಿಪರರೂ ಧ್ವನಿ ಎತ್ತುವುದಿಲ್ಲವಲ್ಲ, ಏನೆನ್ನಬೇಕು ಇವರಿಗೆ?
Leave A Reply