ಚಲಿಸುತ್ತಿರುವ ರೈಲಿನಲ್ಲಿ ಲೈಂಗಿಕ ಕಿರುಕುಳದಿಂದ ಮಹಿಳೆ ರಕ್ಷಿಸಿದ ಪೇದೆಗೆ ರೈಲ್ವೆ ಸಚಿವಾಲಯದ ಪ್ರಶಸ್ತಿ
ದೆಹಲಿ: ಭಾರತದಲ್ಲಿ ದೇಶದ ಹಲವೆಡೆ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ ಯಾವಾಗಲೂ ಶೌರ್ಯ, ರಕ್ಷಣೆಗೆ ಹೆಸರು ಎಂಬ ಮಾತಿಗೆ ರೈಲ್ವೆ ಭದ್ರತಾ ಪಡೆ ಪೇದೆಯೊಬ್ಬರು ಅನ್ವರ್ಥವಾಗಿ ನಿಂತಿದ್ದು, ಅವರಿಗೆ ರೈಲ್ವೆ ಸಚಿವಾಲಯದಿಂದ ಸಿಗುವ ಶೌರ್ಯ ಪ್ರಶಸ್ತಿ ಲಭಿಸಿದೆ.
ಹೌದು, ಕಳೆದ ಏಪ್ರಿಲ್ 4, 2018ರಂದು ರೈಲೊಂದು ವೆಲಚೇರಿಯಿಂದ ಚಿಂತಾದ್ರಿಪೇಟೆಗೆ ಹೊರಟಿದ್ದ ರೈಲಿನಲ್ಲಿ ರಾತ್ರಿ 11.45ರ ಸುಮಾರಿಗೆ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಇದನ್ನು ಗಮನಿಸಿದ ರೈಲ್ವೆ ಭದ್ರತಾ ಪಡೆಯ ಪೇದೆ ಕೆ,ಶಿವಾಜಿ, ಲೈಂಗಿಕ ಕಿರುಕುಳ ನೀಡುತ್ತಿದ್ದವನಿಗೆ ಹೊಡೆದು, ಮಹಿಳೆಯನ್ನು ರಕ್ಷಿಸಿದ್ದಾರೆ, ಬಳಿಕ ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಲಾಗಿದೆ.
ಬಳಿಕ ಮಹಿಳೆಯನ್ನು ರಕ್ಷಿಸಿ ಚೆನ್ನೈನ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದಾಗ್ಯೂ, ಪೇದೆಯವರ ಶೌರ್ಯದಿಂದ ಮಹಿಳೆಯೊಬ್ಬರ ಮಾನ ರಕ್ಷಣೆಯಾಗಿದ್ದು ಇಲಾಖೆಯ ಸಿಬ್ಬಂದಿ ಮೆಚ್ಚುಗೆ ವ್ಯಕ್ತಡಪಡಿಸಿದ್ದಾರೆ.
ಮೊದಲಿಗೆ ಪೇದೆಯ ಶೌರ್ಯ ಮೆಚ್ಚಿ ಪೂರ್ವ ರೈಲು ವಿಭಾಗದ ಜನರಲ್ ಇನ್ಸ್ಪೆಕ್ಟರ್ ಪೊನ್ನ್ ಮಾಣಿಕಾವೆಲ್ ಅವರು ಐದು ಸಾವಿರ ರೂಪಾಯಿ ನಗದು ಬಹುಮಾನ ನೀಡಿದ್ದರು,
ಹೀಗೆ ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯದಿಂದ ಯಾವುದೇ ಅಧಿಕಾರಿ ಶೌರ್ಯ, ಭದ್ರತೆಯಲ್ಲಿ ಬದ್ಧತೆ ತೋರಿಸಿದರೆ ನೀಡುವ ಶೌರ್ಯ ಪ್ರಶಸ್ತಿ ನೀಡಲಾಗುವುದು ಎಂಬುದಾಗಿ ರೈಲ್ವೆ ಸಚಿವಾಲಯ ಘೋಷಿಸಿದೆ ಎಂದು ತಿಳಿದುಬಂದಿದೆ. ಬಹುಮಾನ ಒಂದು ಲಕ್ಷ ರೂಪಾಯಿ ನಗದು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
Leave A Reply