ಶಾಂತಿ ಮಾರ್ಗದಲ್ಲಿ ಬಂದರೆ ಸರಿ, ಇಲ್ಲದಿದ್ದರೇ ತಕ್ಕ ಪ್ರತ್ಯುತ್ತರ: ರಾಜನಾಥ್ ಸಿಂಗ್
ದೆಹಲಿ: ಪವಿತ್ರ ರಮ್ಜಾನ್ ಮಾಸದಲ್ಲಿ ಭಾರತ ಕದನ ವಿರಾಮ ಘೋಷಿಸಿದ್ದರೂ, ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸುತ್ತಿದ್ದು, ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದೆ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಶತ್ರು ರಾಷ್ಟ್ರಕ್ಕೆ ಯಾವ ರೀತಿ ಪ್ರತ್ಯುತ್ತರ ನೀಡಬೇಕು ಎಂಬುದು ನಮ್ಮ ಭದ್ರತಾ ಪಡೆಗಳಿಗೆ ತಿಳಿದಿದೆ. ಅವರು ತಕ್ಕ ಪ್ರತ್ಯುತ್ತರ ನೀಡುತ್ತಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗಡಿ ಭದ್ರತಾ ಪಡೆಯ 16ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೇ, ತರಾಟೆಗೆ ತೆಗೆದುಕೊಂಡರು. ಭಾರತ ಶಾಂತಿ ಬಯಸುತ್ತಿದೆ. ಆದರೂ ಪಕ್ಕದ ರಾಷ್ಟ್ರ ಉತ್ತಮ ಸ್ಪಂದನೆ ತೋರುತ್ತಿಲ್ಲ. ಹಲವು ಭಾರಿ ಏಟು ಬಿದ್ದರೂ ಪಾಠ ಕಲಿಯದ ಪಕ್ಕದ ರಾಷ್ಟ್ರದ ವರ್ತನೆ ಅರ್ಥ ಮಾಡಿಕೊಳ್ಳುವುದೇ ಕಷ್ಟಕರವಾಗಿದೆ ಎಂದು ಹೇಳಿದರು.
ಬಿಎಸ್ ಎಫ ಮತ್ತು ಇತರ ಭದ್ರತಾ ಪಡೆಗಳಿಗೆ ಶತ್ರುಗಳತ್ತ ಮೊದಲು ಗುಂಡು ಹಾರಿಸಬಾರದು ಎಂದು ಸೂಚಿಸಲಾಗಿದೆ. ಆದರೆ ಶತ್ರುಗಳಿಂದ ಗುಂಡು ಬಂದರೇ ತಕ್ಕ ಪ್ರತ್ಯುತ್ತರ ನೀಡಬೇಕು ಎಂಬದು ಸೈನ್ಯಕ್ಕೆ ಬಿಟ್ಟ ವಿಚಾರ. ಇದನ್ನು ಸರ್ಕಾರ ಪ್ರಶ್ನಿಸುವುದಿಲ್ಲ ಎಂದು ಹೇಳಿದರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ರಕ್ಷಣೆ ಮತ್ತು ಅಕ್ರಮ ನುಸುಳುವಿಕೆ ತಡೆಯಲು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಬೇಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
Leave A Reply