ಭಾರತದ ವಿರುದ್ಧ ಹೋರಾಟಕ್ಕೆ ಜೈಲು ಕೈದಿಗಳನ್ನು ಬಳಸಿಕೊಳ್ಳಲು ಮುಂದಾದ ಪಾಕ್ ಐಎಸ್ ಐ
ದೆಹಲಿ: ಭಾರತದ ವಿರುದ್ಧ ಷಡ್ಯಂತ್ರಗಳನ್ನು ಮಾಡುತ್ತ, ಭಾರತದ ಮೇಲೆ ದಾಳಿ ನಡೆಸಲು ಭಯೋತ್ಪಾದಕರಿಗೆ ಪ್ರಚೋಧನೆ ನೀಡುತ್ತಿದ್ದ ಪಾಕಿಸ್ತಾನ ಇದೀಗ ಭಾರತದ ವಿರುದ್ಧ ಹೋರಾಟ ಮಾಡುವುದಕ್ಕಾಗಿ ತೀರ ಕೀಳು ಮಟ್ಟಕ್ಕೆ ಇಳಿದಿದ್ದು, ಜೈಲಿನಲ್ಲಿರುವ ಕೈದಿಗಳನ್ನು ಭಾರತದ ಗಡಿಯಲ್ಲಿ ಹೋರಾಟಕ್ಕೆ ಕಳುಹಿಸುವ ಕುರಿತು ತರಬೇತಿ ನೀಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಮುಂದಾಗಿದೆ.
ಕೈದಿಗಳನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ಮಾಡಬೇಕು, ಭಾರತೀಯ ಸೈನಿಕರ ವಿರುದ್ಧ ಹೇಗೆ ಹೋರಾಡಬೇಕು ಎಂಬುದರ ಕುರಿತು ಜೈಲಿನಲ್ಲೇ ತರಬೇತಿ ನೀಡಲಾಗುತ್ತಿದೆ ಎನ್ನಲಾಗಿದೆ. ಐಎಸ್ ಐ ನ ಈ ನಿರ್ಧಾರ ಭಾರತಕ್ಕೆ ಹೊಸ ತಲೆ ನೋವು ಒಡ್ಡಿದೆ. ಜೈಲಿನಲ್ಲಿರುವ ನಟೋರಿಯಸ್ ಕ್ರಿಮಿನಲ್ ಗಳನ್ನು ಗಡಿ ಮೂಲಕ ನುಸುಳಿಸಿ, ಹೋರಾಟಕ್ಕೆ ಬಳಸಿಕೊಳ್ಳಲು ಪಾಕ್ ಮುಂದಾಗಿದೆ ಎನ್ನಲಾಗಿದೆ.
ಲೈನ್ ಆಫ್ ಕಂಟ್ರೋಲ್ (ಎಲ್ ಒಸಿ) ಬಳಿ ಇರುವ ಭಾರತೀಯ ಸೇನೆಯ ಶಿಬಿರಗಳ ಮೇಲೆ ದಾಳಿ ಮಾಡುವುದು, ಶಿಬಿರಗಳನ್ನು ಲೂಟಿ ಮಾಡುವುದು, ದೋಚುವುದು ಸೇರಿ ನಾನಾ ಕಾರ್ಯಕ್ಕೆ ಜೈಲಿನಲ್ಲಿರುವ ಕ್ರಿಮಿನಲ್ ಗಳನ್ನು ಬಳಸಿಕೊಳ್ಳುವುದು ಐಎಸ್ ಐ ಹುನ್ನಾರ ಎನ್ನಲಾಗಿದೆ. ಕೈದಿಗಳಿಗೆ ಬೇಕಾದ ಇಡೀ ತರಬೇತಿಯ ಹೊಣೆಯನ್ನು ಐಎಸ್ ಐ ಹೊತ್ತುಕೊಂಡಿದ್ದು, ಯುದ್ದಾಸ್ತ್ರಗಳ ತರಬೇತಿಯನ್ನು ನೀಡಲಾಗುತ್ತಿದೆ. ಅವರನ್ನು ಗಡಿಯಲ್ಲಿ ಬಾರ್ಡರ್ ಆ್ಯಕ್ಷನ್ ಟೀಮ್ (ಬ್ಯಾಟ್) ಆಗಿ ಬಳಸಿಕೊಳ್ಳಲಾಗುತ್ತದೆ.
ಕೈದಿಗಳು ಗಡಿಯಲ್ಲಿ ತಮ್ಮ ಸೇವೆ ಸಲ್ಲಿಸಿ ವಾಪಸ್ ಬಂದರೇ ಅವರಿಗೆ ಜೈಲುವಾಸದ ಶಿಕ್ಷೆಯನ್ನು ಕಡಿಮೆ ಮಾಡುವುದು ಮತ್ತು ಸೇವೆ ಸೂಕ್ತ ಭತ್ಯೆ ನೀಡಲು ಐಎಸ್ ಐ ನಿರ್ಧರಿಸಿದೆ. ಅಲ್ಲದೇ ಇವರಲ್ಲಿ ಕೆಲವರನ್ನು ಆತ್ಮಹತ್ಯಾ ಬಾಂಬರ್ ಗಳನ್ನಾಗಿಯೂ ಕೂಡ ಬಳಸಿಕೊಳ್ಳುವ ಆತಂಕ ಎದುರಾಗಿದೆ.
ಇದಲ್ಲದೇ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಪಂಜಾಬ್ ನಲ್ಲಿ ಖಲಿಸ್ತಾನ ಹೋರಾಟಕ್ಕೆ ಬೆಂಬಲ ನೀಡುವುದು, ಆತ್ಮಹುತಿ ಬಾಂಬರ್ ಗಳನ್ನು ಸೃಷ್ಟಿ ಮಾಡುವುದು, ಹನಿ ಟ್ರ್ಯಾಪ್ ಮೂಲಕ ಯುವಕರನ್ನು ಸೆಳೆಯುವುದು, ನಿರಂತರವಾಗಿ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುವ ಹುನ್ನಾರವನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಹುನ್ನಾರ ನಡೆಸಿದೆ.
Leave A Reply