ಮದರಸಾ ಯುವಕರನ್ನು ಲಷ್ಕರೆ ತಯ್ಯಬಾ ಉಗ್ರ ಸಂಘಟನೆಗೆ ನೇಮಕ; ಇದು ಉಗ್ರ ಬಿಚ್ಚಿಟ್ಟ ಸತ್ಯ!
ಉತ್ತರ ಪ್ರದೇಶ ಸೇರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಕಲಿ ಹಾಗೂ ನೋಂದಣಿ ಮಾಡಿಸದ ಮದರಸಾಗಳನ್ನು ಮುಚ್ಚಿಸಲು ಮುಂದಾದಾಗಲ ಕೆಲವರು ಇದು ಅಲ್ಪಸಂಖ್ಯಾತರ ವಿರುದ್ಧದ ನೀತಿ ಎಂದು ಬೊಬ್ಬೆ ಹಾಕಿದ್ದರು. ಆದರೆ ಕಲವು ಮದರಸಾಗಳು ಉಗ್ರ ಸಂಘಟನೆಗೆ ಯುವಕರ ಸರಬರಾಜು ಆಗುತ್ತಿದೆ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.
ಹೌದು, ಈ ಕುರಿತು ಕಳೆದ ಮಾರ್ಚ್ ನಲ್ಲಿ ಕಾಶ್ಮೀರದ ಕುಪ್ವಾರದಲ್ಲಿ ಉಗ್ರ ನಿಗ್ರಹ ಪಡೆ ಜಬೀವುಲ್ಲಾ ಅಲಿಯಾಸ್ ಹಮ್ಸಾನನನ್ನು ಬಂಧಿಸಿದ್ದು, ಆತನ ವಿಚಾರಣೆಯಿಂದ ಈ ಮಹತ್ವದ ಸಂಗತಿ ತಿಳಿದಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಲಷ್ಕರೆ ತಯ್ಯಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫಿಜ್ ಸಯೀದ್ ಭಾರತದ ವಿರುದ್ಧ ಹೋರಾಡಲು ಭಾರತದ ಯುವಕರನ್ನೇ ಉಗ್ರ ಸಂಘಟನೆಗಳು ಬಳಸಲು ತೀರ್ಮಾನಿಸಲಾಗಿತ್ತು. ಅದರಂತೆ ಭಾರತದ ಹಲವು ಮದರಸಾಗಳಿಂದ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿ ಅವರಿಗೆ ತರಬೇತಿ ನೀಡಲಾಗುತ್ತದೆ ಎಂದು ವಿಚಾರಣೆಯಲ್ಲಿ ಜಬೀವುಲ್ಲಾ ಬಾಯಿಬಿಟ್ಟಿದ್ದಾನೆ.
ಮೊದಲು ಮದರಸಾಗಳಲ್ಲಿರುವ ಯುವಕರನ್ನು ನೇಮಕ ಮಾಡಿಕೊಳ್ಳುವುದು. ಬಳಿಕ ಅವರನ್ನು ಲಾಹೋರಿನ ತರಬೇತಿ ಕೇಂದ್ರಕ್ಕೆ ಕಳಿಸುವುದು. ಅಲ್ಲಿ ಹಫೀಜ್ ಸಯೀದ್ ಯುವಕರನ್ನು ಪ್ರಚೋದಿಸಿ ಭಾರತದ ವಿರುದ್ಧವೇ ಹೋರಾಟ ಮಾಡಲು ಸ್ಫೂರ್ತಿ ನೀಡುತ್ತಿದ್ದ ಎಂದು ಜಬೀವುಲ್ಲಾ ತಿಳಿಸಿದ್ದಾನೆ.
ಅಷ್ಟೇ ಅಲ್ಲ, ತರಬೇತಿ ವೇಳೆ ಆಧುನಿಕ ತಂತ್ರಜ್ಞಾನದ ಬಳಕೆ, ಹೆಚ್ಚಿನ ತೂಕ ಹೊತ್ತು ದುರ್ಗಮ ಹಾದಿಯಲ್ಲಿ ಸಂಚರಿಸುವುದು, ಹಿಮ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವುದು, ಶಸ್ತ್ರಾಸ್ತ್ರ ಬಳಸುವುದು ಸೇರಿ ಹಲವು ವಿಧದಲ್ಲಿ ಮದರಸಾದಿಂದ ನೇಮಕವಾದ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು ಎಂದು ಜಬೀವುಲ್ಲ ಹೇಳಿದ್ದಾನೆ.
ಉಗ್ರ ಜಬೀವುಲ್ಲಾನ ಈ ಹೇಳಿಕೆಯಿಂದ ಭಾರತದಲ್ಲಿರುವ ಮದರಸಾಗಳು ಉಗ್ರ ಸಂಘಟನೆಗಳಿಗೆ ಯುವಕರನ್ನು ಸರಬರಾಜು ಮಾಡುವ ಕುರಿತು ಅನುಮಾನ ಮೂಡುತ್ತಿದ್ದು, ಇಂತಹ ಮದರಸಾಗಳನ್ನು ಹುಡುಕಿ ನಿರ್ನಾಮ ಮಾಡಬೇಕು. ಇಲ್ಲದಿದ್ದರೆ, ಇವರೇ ಮುಂದೆ ದೇಶಕ್ಕೆ ಕಂಟಕವಾಗುವ ಲಕ್ಷಣಗಳು ಗೋಚರಿಸಿವೆ.
Leave A Reply