ಮನಮೋಹನ್ ಸಿಂಗ್ ಬಗ್ಗೆ ಈಗ ಹೊಗಳುತ್ತಿರುವ ಇದೇ ಅರವಿಂದ್ ಕೇಜ್ರಿವಾಲ್ 2013ರಲ್ಲಿ ಹೇಗೆ ಟ್ವೀಟ್ ಮಾಡಿದ್ದರು ಗೊತ್ತೇ?
ಅರವಿಂದ ಕೇಜ್ರಿವಾಲ್. ಕೆಮ್ಮು ಇರುವವರಿಗೂ, ಇರದವರಿಗೂ, ಅಂದರೆ ಎಲ್ಲರಿಗೂ ಇವರು ಗೊತ್ತು. ಅದು ಹೇಗೆ? ದೆಹಲಿ ಮುಖ್ಯಮಂತ್ರಿಯಾಗಿ, ಮೋದಿ ಅವರನ್ನು ತೆಗಳುವುದಕ್ಕಾಗಿ, ತಮ್ಮ ಶಾಸಕರನ್ನೇ ನಿಯಂತ್ರಿಸದೆ ಇರುವುದಕ್ಕಾಗಿ, ವಿವಾದಾತ್ಮಕ ಹೇಳಿಕೆಗಳಿಗಾಗಿ, ಹಾಗೂ ತಮ್ಮ ನಾಲಗೆ ಮೇಲೆಯೇ ಹಿಡಿತ ಇಲ್ಲದೆ ಯೂ ಟರ್ನ್ ತೆಗೆದುಕೊಳ್ಳುವುದಕ್ಕಾಗಿ!
ಹಾಗಾದರೆ ಕಳೆದ ಮೂರು ವರ್ಷಗಳಲ್ಲಿ ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಅವರು ಮಾಡಿರುವ ಘನಕಾರ್ಯ ಯಾವುದು? ಯಾವ ಪ್ರಮುಖ ಯೋಜನೆ ಜಾರಿಗೆ ತಂದಿದ್ದಾರೆ? ಯಾವ ಯೋಜನೆ ದೇಶದ ಗಮನ ಸೆಳೆದಿದೆ? ದೆಹಲಿಯ ವಾಯುಮಾಲಿನ್ಯ ತಗ್ಗಿಸಲು ಯಾವ ಕ್ರಮ ಕೈಗೊಂಡರು?
ಪ್ರಣಾಳಿಕೆಯಲ್ಲಿ ಹೇಳಿದಂತೆ ಉಚಿತವಾಗಿ ವಿದ್ಯುತ್ ನೀಡಿದರಾ? ಜನರಿಗೆ ಉಚಿತ ವೈಫೈ ನೀಡಿದರಾ? ಹೋಗಲಿ ಯಾವುದಾದರೂ ಒಳ್ಳೆಯ ಮಾತುಗಳನ್ನಾಡಿದ್ದಾರಾ? ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರಾ? ರಾಜಕೀಯ ಸೌಹಾರ್ದತೆ ಮೆರೆದಿದ್ದಾರಾ? ಹೂಂ, ಹೂಂ, ಇದಾವುದನ್ನೂ ಅರವಿಂದ ಕೇಜ್ರಿವಾಲ್ ಮಾಡಲಿಲ್ಲ. ಯಾವ ಭರವಸೆಯನ್ನೂ ಈಡೇರಿಸಲಿಲ್ಲ.
ಇಂತಹ ಅರವಿಂದ್ ಕೇಜ್ರಿವಾಲ್ ಈಗ ಹೊಸದೊಂದು ಆಣಿಮುತ್ತು ಉದುರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯುವುದೇ ಮುಖ್ಯಮಂತ್ರಿ ಕೆಲಸ ಎಂದು ಭಾವಿಸಿರುವ ಇವರು ಕಳೆದ ಮೂರು ವರ್ಷಗಳಿಂದ ಇದನ್ನೇ ಮಾಡುತ್ತಿದ್ದಾರೆ. ಈಗಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳುವ ದೃಷ್ಟಿಯಿಂದ, ಭಾರತಕ್ಕೆ ಮನಮೋಹನ್ ಸಿಂಗ್ ಅವರಂತಹ ಉನ್ನತ ಶಿಕ್ಷಣ ಪಡೆದವರು ಪ್ರಧಾನಿಯ ಅವಶ್ಯಕತೆ ಇದೆ. ದೇಶದ ಜನ ಮನಮೋಹನ್ ಸಿಂಗ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಇದೇ ಅರವಿಂದ್ ಕೇಜ್ರಿವಾಲ್ 2013ರಲ್ಲಿ ಮನಮೋಹನ್ ಸಿಂಗ್ ಅವರ ಕುರಿತು ಹೇಗೆ ಟ್ವೀಟ್ ಮಾಡಿದ್ದರು ಗೊತ್ತೇ? ಹೇಗೆ ಮನಮೋಹನ್ ಸಿಂಗ್ ಅವರ ತಪ್ಪನ್ನು ಜನರಿಗೆ ತೋರಿಸಿದ್ದರು ಗೊತ್ತೇ? ಆ ಮೂಲಕ ತಾವು ಅಣ್ಣಾ ಹಜಾರೆಯವರ ತಂಡದ ಸದಸ್ಯ, ಅವರ ಬೆಂಬಲಿಗ ಎಂಬುದನ್ನು ಮನಮೋಹನ್ ಸಿಂಗ್ ಅವರಿಗೆ ಬೈದು ಜನರ ಕಣ್ಣೆದುರಿಗೆ ಮಣ್ಣೆರೆಚಿದ್ದರು ಗೊತ್ತೇ?
ಹೌದು, ಈಗ ಮನಮೋಹನ್ ಸಿಂಗ್ ಅವರನ್ನು ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿರುವ ಇದೇ ಅರವಿಂದ ಕೇಜ್ರಿವಾಲ್ 2013ರಲ್ಲಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಹಾಗೂ ಅಕ್ರಮ ಗುರುತಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ, ಮನಮೋಹನ್ ಸಿಂಗ್ ಅವರು ಒಬ್ಬ ವಿಫಲ ಪ್ರಧಾನಿ, ತಮ್ಮ ಮೂಗಿನ ಕೆಳಗೆ ಏನು ನಡೆದರೂ ಗೊತ್ತಾಗದವರು ಎಂಬರ್ಥದಲ್ಲಿ ಟೀಕೆ ಮಾಡಿದ್ದರು.
ಈಗ ಇದೇ ಅರವಿಂದ ಕೇಜ್ರಿವಾಲ್, ಮನಮೋಹನ್ ಸಿಂಗ್ ರನ್ನು ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಹೇಳಿ ಅರವಿಂದ ಕೇಜ್ರಿವಾಲ್ ಅವರಲ್ಲಿ ನಿಷ್ಠೆಗೆ ಜಾಗವಿದೆಯಾ? ಆಡಿದ ಮಾತಿಗೆ ಬೆಲೆ ಇದೆಯಾ? ಅಂದು ನಿಜವಾಗಿಯೂ ಮನಮೋಹನ್ ಸಿಂಗ್ ಅವರ ನಿಜಬಣ್ಣವನ್ನು ಜನರಿಗೆ ತಿಳಿಸಿ, ತಮ್ಮ ಬೇಳೆ ಬೇಯಿಸಿಕೊಂಡಿದ್ದರು.
ಆದರೆ ಈಗ ಸುಳ್ಳು, ಸುಳ್ಳೇ ನರೇಂದ್ರ ಮೋದಿ ಅವರನ್ನು ಟೀಕಿಸಿ, ತಾವು ಮುನ್ನೆಲೆಗೆ ಬರುವ ಯೋಜನೆಯಲ್ಲಿದ್ದಾರೆ ಈ ಕೇಜ್ರಿವಾಲ್. ಜತೆಯಲ್ಲಿಟ್ಟುಕೊಂಡಿದ್ದ ಅಣ್ಣಾ ಹಜಾರೆಯವರೇ ಅರವಿಂದ್ ಕೇಜ್ರಿವಾಲ್ ಅವರನ್ನು ತಿರಸ್ಕರಿಸಿರುವಾಗ, ಇನ್ನು ನಾವೇಕೆ ಈ ಊಸರವಳ್ಳಿಯಂತಹ ಮುಖ್ಯಮಂತ್ರಿಯ ಮಾತು ನಂಬಬೇಕು? ಹಾಗನಿಸುವುದಿಲ್ಲವೇ?
Leave A Reply