ರೋಹಿಂಗ್ಯಾ ಮುಸ್ಲಿಮರು ಭಾರತದೊಳಕ್ಕೆ ನುಸುಳದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಏನು ಮಾಡಿದೆ ಗೊತ್ತಾ?
ಮ್ಯಾನ್ಮಾರ್ ದೇಶಕ್ಕೇ ರೋಹಿಂಗ್ಯಾ ಮುಸ್ಲಿಮರು ಕಂಟಕವಾಗಿದ್ದಾರೆ. ದೇಶದ ಭದ್ರತೆಗೇ ಶಾಪವಾಗಿದ್ದಾರೆ. ಬಾಂಗ್ಲಾದೇಶ ಸಹ ರೋಹಿಂಗ್ಯಾಗಳ ಸಮಸ್ಯೆ ನಿವಾರಣೆಗೆ ಭಾರತದ ನೆರವು ಕೋರಿದ್ದಾರೆ. ಆದರೆ ಭಾರತದಲ್ಲಿರುವ ಪ್ರಗತಿಪರರು, ಬುದ್ಧಿಜೀವಿಗಳು, ಅಸಾದುದ್ದೀನ್ ಓವೈಸಿಯಂತಹವರು ಅವರನ್ನು ಸಾಕಬೇಕು ಎನ್ನುತ್ತಾರೆ.
ಆದರೆ ನರೇಂದ್ರ ಮೋದಿ ಸರ್ಕಾರ ದೇಶಕ್ಕೆ ಕಂಟಕವಾಗುವ ಯಾರನ್ನೂ ಬಿಡುವುದಿಲ್ಲ. ಹಾಗಾಗಿಯೇ ಕೇಂದ್ರ ಸರ್ಕಾರ ಭಾರತದಲ್ಲಿರುವ ರೋಹಿಂಗ್ಯಾ ಮುಸ್ಲಿಮರನ್ನು ಹೊರಹಾಕಲು ಚಿಂತನೆ ನಡೆಸಿದೆ ಹಾಗೂ ಹೊರಗಿನಿಂದ ಇವರು ದೇಶದೊಳಕ್ಕೆ ಬಾರದಂತೆ ನೋಡಿಕೊಳ್ಳಲು ಮುಂದಾಗಿದೆ.
ಈಗ ಕೇಂದ್ರ ಸರ್ಕಾರ ರೋಹಿಂಗ್ಯಾ ಮುಸ್ಲಿಮರು ಭಾರತದೊಳಕ್ಕೆ ಬಾರದಿರದಂತೆ ತಡೆಯಲು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಜಮ್ಮು-ಕಾಶ್ಮೀರ ಸೇರಿ ದೇಶದ ಎಲ್ಲ ರಾಜ್ಯಗಳು ತಮ್ಮ ಗಡಿಯಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ವರದಿ ನೀಡುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಕೇಂದ್ರ ಗೃಹ ಸಚಿವಾಲಯ ಈ ಕುರಿತು ದೇಶದ ಎಲ್ಲ ರಾಜ್ಯ ಸರ್ಕಾರಗಳಿಗೂ ಪತ್ರ ಬರೆದಿದ್ದು, ಅದರಲ್ಲಿ ರೋಹಿಂಗ್ಯಾ ಮುಸ್ಲಿಮರು ಇಡೀ ದೇಶಕ್ಕೇ ಕಂಟಕವಾಗುತ್ತಿದ್ದಾರೆ. ಅವರು ದೇಶದ ಭದ್ರತೆಗೂ ಆತಂಕವಾಗಿ ಪರಿಣಮಿಸಿದ್ದಾರೆ. ಹಾಗಾಗಿ ರೋಹಿಂಗ್ಯಾ ಮುಸ್ಲಿಮರು ಭಾರತದೊಳಕ್ಕೆ ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ ಇದುವರೆಗೆ ರೋಹಿಂಗ್ಯಾ ಮುಸ್ಲಿಮರ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಹಾಗೂ ಇನ್ನು ಮುಂದೆ ತೆಗೆದುಕೊಳ್ಳುವ ಕ್ರಮಗಳಿಂದಾದ ಬದಲಾವಣೆ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದ ರಕ್ಷಣೆಗೆ ಈ ಕ್ರಮ ಕೈಗೊಂಡಿರುವುದು ಶ್ಲಾಘನೀಯವಾಗಿದೆ.
Leave A Reply