ಏನಾಗಿದೆ ಈ ಆರ್ಚ್ ಬಿಷಪ್ ಗಳಿಗೆ, ಯಾರ ಬೆಂಬಲದಿಂದ ಇವರು ಹೀಗೆ ಆಡುತ್ತಿದ್ದಾರೆ?
ಇತ್ತೀಚೆಗೆ ದೆಹಲಿಯ ಆರ್ಚ್ ಬಿಷಪ್ ಅನಿಲ್ ಕೌಂಟೋ ಒಂದು ಹೇಳಿಕೆ ಮೂಲಕ ಭಾರತದಾದ್ಯಂತ ವಿವಾದ ಸೃಷ್ಟಿಸಿದ್ದರು. ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸರ್ಕಾರ ಬದಲಾಯಿಸಬೇಕು ಎಂದು ಎಲ್ಲರೂ ಪ್ರಾರ್ಥಿಸಬೇಕು ಎಂಬುದಾಗಿ ಪ್ರಕಟಣೆ ಹೊರಡಿಸಿದರು. ಕ್ರೈಸ್ತ ಮತೀಯರು ಪ್ರಾರ್ಥನೆ ಮಾಡಬೇಕು ಎಂದು ಕೋರಿದ್ದರು.
ಇವರ ಬೆನ್ನಲ್ಲೇ ಈಗ ಗೋವಾ ಆರ್ಚ್ ಬಿಷಪ್ ಫಿಲಿಪ್ ನೆರಿ ಪೆರಾವೋ ಎಂಬಾತ ಸಹ ಇಂಥಾದ್ದೇ ಹೇಳಿಕೆ ನೀಡಿದ್ದು, ಇಡೀ ದೇಶದ ಗಮನ ಸೆಳೆದಿದ್ದಾರೆ. ಸಂವಿಧಾನ ಅಪಾಯದಲ್ಲಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಉರುಳಿಸುವುದೇ ತಮ್ಮ ಉದ್ದೇಶ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಅಷ್ಟಕ್ಕೂ ದೇಶದಲ್ಲಿ ಮತಪ್ರಚಾರಕರಾಗಿ ಬಂದಿರು, ಏಸು ಕ್ರಿಸ್ತನ ಸಂದೇಶ ಸಾರುವುದರಲ್ಲಿ ನಿರತರಾಗಿರುವ, ವ್ಯಾಟಿಕನ್ ಸಿಟಿ ಹಾಗೂ ವಿದೇಶಿ ಎನ್ ಜಿಒಗಳ ಹಣ ಪಡೆಯುವ ಈ ಕ್ರೈಸ್ತ ಪಾದ್ರಿಗಳಿಗೂ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಏನು ಸಂಬಂಧ? ಯಾವ ಜನ್ಮದ ದ್ವೇಷ ಇದು? ಯಾಕಾಗಿ ಆರ್ಚ್ ಬಿಷಪ್ ಗಳು ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ?
ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಲವು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಮೊದಲಿಗೆ ನೋಂದಣಿಯಾಗದ, ಲೆಕ್ಕಪತ್ರ ಸಲ್ಲಿಸದ ಸುಮಾರು 20 ಸಾವಿರಕ್ಕೂ ಎನ್ಜಿಒಗಳನ್ನು ಬ್ಯಾನ್ ಮಾಡಿದ್ದಾರೆ. ನೋಟು ನಿಷೇಧ ಮಾಡಿದ ಕಾರಣ ಎನ್ ಜಿಒಗಳು ಬೇಕಾಬಿಟ್ಟಿ ಸಹಾಯಧನ ಪಡೆಯಲು ಕಡಿವಾಣ ಹಾಕಿದ್ದಾರೆ. ಇದರಿಂದ ಕ್ರೈಸ್ತ ಮಿಷನರಿಗಳಿಗೆ ಭಾರತದಲ್ಲಿ ಮತಾಂತರಕ್ಕಾಗಿ ಹಣ ವ್ಯಯಿಸಲು ಆಗುತ್ತಿಲ್ಲ. ಭಾರತದ ಸಮಸ್ಯೆ ತೋರಿಸಿ ಹಣ ಪೀಕಲು ಆಗುತ್ತಿಲ್ಲ.
ಹೌದು, ಇಷ್ಟು ದಿನ ಇಲ್ಲದೆ ಈಗ ಏಕಾಏಕಿ ನರೇಂದ್ರ ಮೋದಿ ವಿರುದ್ಧ ತಿರುಗಿಬೀಳುತ್ತಿದ್ದಾರೆ ಎಂದರೆ, ಅದರಲ್ಲೂ ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕೂ ಮೊದಲೇ ಇವರು ಪರೋಕ್ಷವಾಗಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದರೆ ಇವರಿಗೆ ದೇಶದೊಳಗಿನ ಪಕ್ಷಗಳೇ ಬೆಂಬಲ ನೀಡುತ್ತಿವೆ ಹಾಗೂ ದೇಶದೊಳಗಿನ ಪಕ್ಷಗಳಿಗೆ ಕ್ರೈಸ್ತ ಮಿಷನರಿಗಳು ಬೆಂಬಲ ನೀಡುತ್ತಿವೆ ಎಂದರೆ ಇದರೊಳಗೆ ಏನೋ ಮಸಲತ್ತು ಇದೆ ಎಂದಾಯಿತಲ್ಲ.
ಅಷ್ಟಕ್ಕೂ ಈ ಕ್ರೈಸ್ತ ಮಿಷನರಿಗಳು, ಆರ್ಚ್ ಬಿಷಪ್ ಗಳು ಭಾರತದ ಸಂವಿಧಾನ ಹೇಗೆ ಅಪಾಯದಲ್ಲಿದೆ? ಸಂವಿಧಾನಕ್ಕೆ ಏನು ಅನ್ಯಾಯವಾಗಿದೆ? ಸಂವಿಧಾನದ ನಿಯಮ ಪಾಲಿಸದೆ ಯಾರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಕುರಿತು ಉದಾಹರಣೆ ಮೂಲಕ ತಿಳಿಸುವುದಿಲ್ಲ. ಬದಲಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ, ಹುರುಳಿಲ್ಲದೆ ಹೀಗೆ ಸಂವಿಧಾನ ಅಪಾಯದಲ್ಲಿದೆ ಎಂದು ಜನರ ತಲೆ ಕೆಡಿಸುತ್ತಿದ್ದಾರೆ. ಏಸು ಸಂದೇಶ ಸಮಾಧಿ ಮಾಡಿ ರಾಜಕೀಯ ಕಟ್ಟಡ ಕಟ್ಟಲು ಹೊರಟಿದ್ದಾರೆ. ಇಂತಹವರನ್ನು ನಂಬುವುದಾದರೂ ಹೇಗೆ?
Leave A Reply