ಅಸ್ತಿತ್ವಕ್ಕೆ ಬಂದ ಹಿಂದೂ ಟಾಸ್ಕ್ ಫೋರ್ಸ್, ಹಿಂದೂ ಲಾ ಬೋರ್ಡಿಗೆ ಒತ್ತಾಯ
ಮಂಗಳೂರು : ರಾಜ್ಯದ ಕಡಲತಡಿಯಲ್ಲಿ ಸದ್ದಿಲ್ಲದೇ ‘ಹಿಂದೂ ಟಾಸ್ಕ್ ಫೋರ್ಸ್’ ಸಿದ್ದಗೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ ಮೊದಲು ಕರಾವಳಿಯ ಫೈರ್ ಬ್ರಾಂಡ್ ಸ್ವಾಮೀಜಿ ಎಂದೇ ಗುರುತಿಸಿಕೊಂಡಿರುವ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಈ ಟಾಸ್ಕ್ ಫೋರ್ಸ್ ರಚನೆಗೆ ಚಾಲನೆ ನೀಡಲಾಗಿತ್ತು. ಹಿಂದೂ ಯುವತಿಯರ ರಕ್ಷಣೆ, ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಟಾಸ್ಕ್ ಫೋರ್ಸ್ ಗೆ ಚಾಲನೆ ನೀಡಲಾಗಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ತಣ್ಣಗಾಗಿದ್ದ ಟಾಸ್ಕ್ ಫೋರ್ಸ್ ರಚನೆ ಪ್ರಕ್ರಿಯೆ ಈಗ ಚುರುಕಾಗಿದ್ದು ಅಂತಿಮ ಹಂತಕ್ಕೆ ಬಂದು ನಿಂತಿದೆ.
ಜಿಲ್ಲೆಯಲ್ಲಿ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ ಎನ್ನಲಾದ ಲವ್ ಜಿಹಾದ್ ಪ್ರಕರಣಗಳನ್ನು ತಡೆಯಲು ಹಿಂದೂ ಟಾಸ್ಕ್ ಫೋರ್ಸ್ ನ್ನು ಹಿಂದೂ ಸಂಘಟನೆಗಳು ರಚಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಈ ಹಿಂದೂ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ಆರಂಭಿಸಲಿದೆ. ದಕ್ಷಿಣ ಕನ್ನಡ ಮೊದಲ ಟಾರ್ಗೆಟ್ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತ ವಾಗುವಂತೆ ಮೊದಲು ಈ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ಆರಂಭವಾದರೂ ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಇದನ್ನು ವಿಸ್ತರಿಸುವ ಯೋಜನೆ ಹೊಂದಲಾಗಿದೆ. ದೇಶದಾದ್ಯಂತ ಟಾಸ್ಕ್ ಫೋರ್ಸ್ ವಿಸ್ತರಿಸುವ ಚಿಂತನೆ ಕೂಡ ಮಾಡಲಾಗುತ್ತಿದೆ. ಲವ್ ಜಿಹಾದ್ ಪ್ರಕರಣ ಗಳನ್ನು ಬೆಳಕಿಗೆ ಬರುವ ಮೊದಲೇ ಪತ್ತೆ ಹಚ್ಚಿ ಪ್ರಕರಣ ಬಗೆಹರಿಸುವುದು ಈ ಟಾಸ್ಕ್ ಫೋರ್ಸ್ ನ ಮೂಲ ಉದ್ದೇಶ ಹಾಗು ಜವಾಬ್ದಾರಿಯಾಗಿರುತ್ತದೆ ಎಂದು ಹೇಳಲಾಗಿದೆ.
Leave A Reply