ಈ ಮುಸ್ಲಿಂ ಯುವತಿಯ ಕ್ರೀಡಾ ಸಾಧನೆಗೆ 5 ಲಕ್ಷ ರೂಪಾಯಿ ಕೊಡದೆ ಅನ್ಯಾಯ ಮಾಡಿತಲ್ಲ ಪಿಣರಾಯಿ ಸರ್ಕಾರ!
ದೇಶದಲ್ಲಿ ಮುಸ್ಲಿಮರು ಏಳಿಗೆ ಹೊಂದುತ್ತಿದ್ದಾರೆ. ಪರಿಸ್ಥಿತಿ ಬದಲಾಗಿದೆ. ಸಿನಿಮಾ, ಕ್ರೀಡೆ ಸೇರಿ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ತೊಂದರೆ ಆಗಬಾರದು ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧ ಕಾಯಿದೆ ಜಾರಿಗೆ ತರಲು ಸಹ ಮುಂದಾಗಿದೆ.
ಆದರೆ ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರ ಮಾತ್ರ ರಾಜ್ಯದಲ್ಲಿ ಕ್ರೀಡಾ ಸಾಧನೆ ಮೆರೆಯಲು ಉತ್ಸಾಹ ತೋರಿಸುತ್ತಿರುವ ಮುಸ್ಲಿಂ ಮಹಿಳೆಗೆ ಧನಸಹಾಯ ಮಾಡದೆ, ಅವರ ಕನಸನ್ನೇ ಕಮರಿಸುವ ಹಂತಕ್ಕೆ ತಂದುಬಿಟ್ಟಿದೆ. ಆ ಮೂಲಕ ಯುವತಿಯ ಅಸಮಾಧಾನಕ್ಕೆ ಕಾರಣವಾಗಿದೆ.
ಹೌದು, ಕೇರಳದಲ್ಲಿ ಭಾರತ ಎತ್ತುವ ಸ್ಪರ್ಧೆಯಲ್ಲಿ ಉತ್ತಮ ಹೆಸರು ಮಾಡಿರುವ ಮಜಿಜಿಯಾ ಭಾನು ಅವರು ಕಳೆದ ಮಾರ್ಚ್ ನಲ್ಲಿ ಕೇರಳದಲ್ಲಿ ಆಯೋಜಿಸಿದ್ದ ಆರ್ಮ್ ರೆಸ್ಲಿಂಗ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ಅಕ್ಟೋಬರ್ ನಲ್ಲಿ ಟರ್ಕಿಯಲ್ಲಿ ನಡೆಯಲಿರುವ ವಿಶ್ವ ಆರ್ಮ್ ರೆಸ್ಲಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.
ಅಷ್ಟೇ ಅಲ್ಲ, ಕಳೆದ ಮೇ ತಿಂಗಳಲ್ಲಿ ನಡೆದ ರಾಷ್ಟ್ರೀಯ ಆರ್ಮ್ ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲೂ ಚಿನ್ನದ ಪದಕ ಪಡೆದಿದ್ದಾರೆ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿರುವ ಭಾನು, ಟರ್ಕಿಯಲ್ಲಿ ನಡೆಯುವ ಪಂದ್ಯಾವಳಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಭಾನು ಅವರಿಗೆ 5 ಲಕ್ಷ ರೂಪಾಯಿ ಖರ್ಚಾಗುತ್ತದೆ, ಅಲ್ಲದೆ, ಜುಲೈ 10ರೊಳಗೆ ಅವರು ಟರ್ಕಿಗೆ 2 ಲಕ್ಷ ರೂಪಾಯಿ ಪಾವತಿ ಮಾಡಬೇಕು. ಈ ಕುರಿತು ಕೇರಳ ಕ್ರೀಡಾ ಸಚಿವರಿಗೆ ಮನವಿ ಮಾಡಿದರೆ, ಅವರು ಶೀಘ್ರದಲ್ಲೇ ಇಷ್ಟು ಹಣ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ, ಐದಾರು ಕಂಪನಿಗಳು ಹಣ ನೀಡಲು ಮುಂದೆ ಬಂದವಾದರೂ, ಕೊನೇ ಕ್ಷಣದಲ್ಲಿ ನೀಡಲಿಲ್ಲ, ಅತ್ತ ಸರ್ಕಾರವೂ ನೆರವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಭಾನು.
Leave A Reply