• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕೇರಳದ ಅಸೆಂಬ್ಲಿಯಲ್ಲಿ ಗುಣಗುನಿಸಿತು ತುಳುನಾಡಿನ ದೇವತಾರಾಧನೆ!

Girish Kumar Posted On July 21, 2018
0


0
Shares
  • Share On Facebook
  • Tweet It

ಹಿಂದು ದೇವರ ಬಗ್ಗೆ ದೇವಸ್ಥಾನದ ಬಗ್ಗೆ ಯಾವೋಬ್ಬ ಹಿಂದುವೂ ಮಾತನಾಡಿದ ಚರಿತ್ರೆ ಇಲ್ಲ. ಆದರೆ ಕೇರಳದ ಅಸೆಂಬ್ಲಿಯಲ್ಲಿ ಮಲಬಾರ್ ದೇವಸ್ವಂ ಬೋರ್ಡ್ ನ ಮಸೂದೆ ಅಂಗೀಕಾರ ಸಂದರ್ಭದಲ್ಲಿ ಕೆ.ಯನ್.ಎ.ಖಾದರ್ ಎಂಬ ಮುಸ್ಲಿಂ ಎಂ.ಲ್.ಎ. ದೇವತಾರಾಧನೆ ಬಗ್ಗೆ ಮಾತನಾಡಿದ ಉತ್ಕೃಷ್ಟ ವೇದೋಕ್ತಿಗಳು.

ಸರ್.. ನಾವಿದನ್ನು ತಿಳಿದುಕೊಂಡರೆ ಒಳ್ಳೆದು . 2011 ರ ಜನಗಣತಿ ಪ್ರಕಾರ  ಹಿಂದೂ 79.8% ಮುಸ್ಲಿಂ 14.2 % ಕ್ರಿಸ್ತಿಯನ್ 2.3 %ಸಿಖ್ 1.7% ಬೌದ್ದ 0.7% ಜೈನ 0.4% ಉಳಿದಂತೆ ಪಾರ್ಸಿ ,ಯಹೂದ್ಯ 0.7% ಧರ್ಮ ಇಲ್ಲದವರು 0.2% ಇದರಲ್ಲಿ ಈ ಕಮ್ಯುನಿಸ್ಟ್ ರು ಸೇರುತ್ತಾರೆ . ಈ ಧರ್ಮ ಇಲ್ಲದ 0.2% ನಮ್ಮ ವಿಧ್ಯಾಭ್ಯಾಸ ಮಂತ್ರಿಗಳು ಹೇಳುವ ರೀತಿಯ ಲೆಕ್ಕಾಚರಗಳೇನೂ ಇಲ್ಲ. ಇದರಲ್ಲಿ ಕಮ್ಯುನಿಸ್ಟ್ರ ಲ್ಲದವರೂ ಇರಬಹುದು . ಹಾಗೆ ನೋಡಿದರೂ ನಗಣ್ಯರಾದ ಈ 0.2%ಗೆ ಸೇರಿದವರು 79.8% ಹಿಂದುಗಳಿಗೆ ಸೇರಿದ ದೇವಸ್ಥಾನಗಳ ಆಡಳಿತ ನಡೆಸುತ್ತಿರುವುದು ಅನ್ನುವ ಜ್ಞಾನ ಆಧಿಕಾರ ನಡೆಸುವಾಗ, ಕಾನೂನನ್ನು ರೂಪಿಸುವಾಗ ಇರಬೇಕು ಅಂತ ನಾನು ಹೇಳುವುದು . ಈ ಸಂಪತ್ತು ಇದ್ದಾಗ ಅಲ್ಲಿ ತರ್ಕಗಳು , ನಿಯಂತ್ರಣಗಳ ಅವಶ್ಯಕತೆ ಇರುವುದು . ಸಾದಾರಣವಾಗಿ ಈ ಪಾರ್ಟಿಗಳಿಗೆ ದಾರಾಳ ಹಣ ಸಂಪತ್ತುಗಳು ಇರುತ್ತವೆ ಆದರೂ ಸರ್ಕಾರಗಳು ಅದರ ನಿಮತ್ರಣಕ್ಕೆ ಹೋಗುವುದಿಲ್ಲ . ಉದಾಹರಣೆಗೆ ಈ ಕಮ್ಯುನಿಸ್ಟ್ ಪಕ್ಷಕ್ಕೆ ದಾರಾಳ ಹಣ ಆಸ್ತಿ ಕಟ್ಟಡಗಳು ನಿತ್ಯ ವರಮಾನಗಳು ಹೀಗೇ ತುಂಬಾ ಸಂಪತ್ತುಗಳಿದ್ದರೂ ಸರ್ಕಾರ ಅದನ್ನು ನಿಯಂತ್ರಿಸುವುದಿಲ್ಲ . ದ್ವಜಾರೋಹಣ , ಪುಷ್ಪಾರ್ಚನೆ ಸಮ್ಮೇಳನಗಳಂತಹ ಆಚರಣೆಗಳನ್ನು ಮಾತ್ರ ಪಕ್ಷಕ್ಕೆ ಬಿಟ್ಟು ಉಳಿದ ಕೆಲಸಗಳನ್ನು ಸರ್ಕಾಗಳೇನೂ ಹೋಗಿ ಮಾಡುದಿಲ್ಲ . ಹಾಗೆಯೇ , ಅದನ್ನು ಮನಸ್ಸಿನಲ್ಲಿಟ್ಟುಕೊಂಡು ದೇವಸ್ಥಾನಗಳ ಆಡಳಿತ ಕೈಗೆತ್ತಿಕೊಂಡು ಅಧಿಕಾರ ಚಲಾಯಿಸುವಾಗ ಆಲೋಚಿಸಬೇಕು .

ಭಾರತ ಒಂದು ವಿವಿಧತೆಯ ದೇಶ . ಈ ವಿವಿಧತೆಯ ದೇಶದಲ್ಲಿ , ವಿಶ್ವಾಸಿಗಳ ದೇವಸ್ಥಾನಗಳ ಪ್ರಾಧಾನ್ಯತೆ ಸಣ್ಣದೇನಲ್ಲ . ದೇವಸ್ಥಾನಗಳು ಬರೇ ಅರಾಧನಾಲಯಗಳಲ್ಲ , ಅಲ್ಲಿ ಅಗ್ರಮಾನ್ಯ ಸಂಗೀತ ನೃತ್ಯ ಕಲೆ ಶಾಸ್ತ್ರಗಳೂ ಒಳಗೊಂಡಿವೆ . ಭಾರತದ ಪ್ರಮುಖ ದೇವಸ್ಥಾನಗಳು , ಮದುರೈ ಮೀನಾಕ್ಷಿ ದೇವಸ್ಥಾನ , ಅಮೃತಸರದ ಸ್ವರ್ಣ ಮಂದಿರ, ಶಿರಡಿ , ವೈಷ್ಣೋದೇವಿ , ಶ್ರವಣಬೆಳಗೊಳ , ಚೆನ್ನಕೇಶವ , ಶಬರಿಮಲೆ , ಕುಂಬಕೋಣಂ , ಪುರಿ ಜಗನ್ನಾಥ , ಬದರಿ ಕೇದಾರನಾಥ , ಯಮುನೋತ್ರಿ , ತಿರುಪತಿ , ಶ್ರೀ ಪದ್ಮನಾಭ ಮುಂತಾದ ಹಲವಾರು ವಿಶ್ವ ಪ್ರಸಿದ್ದ ದೇವಸ್ಥಾನಗಳಿವೆ . ಕೇರಳದಲ್ಲೂ ಹಲವು ಪ್ರಸಿದ್ದ ದೇವಸ್ಥಾನಗಳಿವೆ , ತಮಿಳುನಾಡಿನ ದೇವಾಲಯ ಸಂಸ್ಕೃತಿಗಳನ್ನು ಆದರಣೀಯ ಮಂತ್ರಿಗಳು ಒಮ್ಮೆ ನೋಡಬೇಕು , ಅವರು ಆ ವಿಚಾರಗಳಲ್ಲಿ ಆಸಕ್ತರು ಅಂತ ತಿಳ್ಕೊಂಡಿದ್ದೇನೆ .

ಕರ್ನಾಟಕದಲ್ಲಿ ಮೂಡಬಿದ್ರೆಯ ಸಾವಿರ ಕಂಬದ ಬಸದಿ , ತಮಿಳುನಾಡಿನ ಮದುರೈ ಮೀನಾಕ್ಷಿ ದೇವಾಲಯದಲ್ಲಿ ಮಟ್ಟಿದರೆ ಸಂಗೀತ ಕೇಳುವ ಕಂಬಗಳಿದ್ದು 33 ದಶಲಕ್ಷ ಕೆತ್ತನೆ ಕೆಲಸಗಳು ಮದುರೈ ಮೀನಾಕ್ಷಿ ದೇವಸ್ಥಾನದಲ್ಲಿ ಮಾತ್ರ ಇದೆ . ಅಂತಹ ವಾಸ್ತು ಶಿಲ್ಪ . ವಿಶ್ವವನ್ನೇ ಬೆರಗುಗೊಳಿಸಿದ ವಾಸ್ತು ಶಿಲ್ಪ . ಖಜರಾಹೋ ದೇವಸ್ಥಾನ ಸಮುಚ್ಚಯ , 20,30 ಚದರ ಕಿಲೋಮೀಟರ್ ಗಳಷ್ಟಿದ್ದ ದೊಡ್ಡ ಬಂಡೆ , ಅದನ್ನು ಕೆತ್ತಿ ನಿರ್ಮಿಸಲಾಗಿದೆ , ಎಷ್ಟೋ ದಶಲಕ್ಷ ಟನ್ ಗಳಷ್ಟು ಕಲ್ಲನ್ನು ಅಲ್ಲಿಂದ ಹೊರ ತೆಗೆಯಲಾಗಿತ್ತು . ಯಾವ ಮನುಷ್ಯರು ಇದನ್ನು ನಿರ್ಮಿಸಿದರು .? ಯಾವ ಇಂಜಿನಿಯರ್ ಗಳು ಇದನ್ನು ಮಾಡಿದ್ರು ..? ಎಂತಹ ಅದ್ಬುತವಾದ ಸಂಗತಿಗಳು ಸರ್..!  ದೇವಸ್ಥಾನಗಳು ಅಂದರೆ ಬರೇ ಆರಾಧನೆಗಳು , ವಿಶ್ವಾಸಿಗಳು ಅಂತ ಕಡೆಗಣಿಸಬೇಕಾದ್ದಲ್ಲ .ಅದು ಮಹಾದ್ಬುತ .. ಅದ್ಯಾತ್ಮವನ್ನು ಹುಡುಕಿಕೊಂಡು ಪ್ರಪಂಚದ ಮೂಲೆ ಮೂಲೆಯಿಂದ ಇಲ್ಲಿಗೆ ಬರುವವರಿದ್ದಾರೆ . ತಂಜಾವೂರಿನ ಬೃಹದೀಶ್ವರ ದೇವಸ್ಥಾನ ಸಾವಿರ ವರ್ಷಗಳ ಇತಿಹಾಸ ಇರುವ ಏಕಶಿಲಾ ದೇವಾಲಯ . ಹಾಗೆಯೇ ತಿರುನ್ನಲ್ವೇಲಿಯ 9 ದೇವಸ್ಥಾನಗಳು . ಇದನ್ನೆಲ್ಲ ಒಮ್ಮೆ ಹೋಗಿ ನೋಡ್ವೇಕು ಸರ್ . ಮಂತ್ರಿಗಳು ಒಮ್ಮೆ ಇದನ್ನೆಲ್ಲಾ ನೋಡ್ಬೇಕು . ಆಗಲೇ ದೇವಸ್ಸಂ ಅಂತ ಬರುವಾಗ ಮನಸ್ಸಿನಲ್ಲಿ ಒಂದು ಆಲೋಚನೆ ಬರಬಹುದು , ಭಾರತ ಅಂದರೇನು ? ದೇವಸ್ಥಾನಗಳು ಅಂದರೇನು ? ಅದನ್ನು ಹೇಗೆ ನಡೆಸಬೇಕು ಅಂತ . ಇದೆಲ್ಲ ಯಾವುದೇ ಸರ್ಕಾರಗಳಿಲ್ಲದ ಕಾಲದಲ್ಲಿಯೂ ನೆಲೆ ನಿಂತಿದ್ದವು .ಈಗ ಮಾತ್ರ ಸ್ವಲಪವಾದರೂ ಸಮಸ್ಯೆಗಳಾಗಿರುವಂತದ್ದು. ಮೊದಲು ಸರಿಯಾಗಿಯೇ ನಡೀತಾ ಇತ್ತು .  ಈ ಬೃಹದೀಶ್ವರ ದೇವಸ್ಥಾನದಲ್ಲಿ ಇಷ್ಟು ದೊಡ್ಡ ಗಾತ್ರದ ಕಲ್ಲುಗಳನ್ನು ಹೇಗೆ ಮೇಲೆ ಏರಿಸಿದ್ರಿ ಅಂತ ಕೇಳಿದ್ರೆ ಹೇಳ್ತಾರೆ . ಏಳು ಕಿಲೋಮೀಟರ್ ಗಳಷ್ಟು ಮಣ್ಣನ್ನು ಇಳಿಜಾರಾಗಿ ಹಾಕಿ ಆನೆ ಈ ಕಲ್ಲುಗಳನ್ನು ಎಳಕೊಂಡು ಹೋಗಿ ಮೇಲೆ ಇಡಲಾಯಿತು . ಕೆಲಸ ಆಗುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಮಣ್ಣನ್ನು ತೆರವುಗೊಳಿಸಲಾಯಿತು ಅಂತ . ಅಂತಹ ಅದ್ಬುತ ವಾದ ಇಂಜಿನಿಯರಿಂಗ್ . ಇಂದಿನ ಕಾಲದಲ್ಲಿ ಅಸಾಧ್ಯವಾದ ಇಂಜಿನಿಯರಿಂಗ್ . ಜಗತ್ತಿನ ಏಳು ಅದ್ಬುತಗಳಲ್ಲಿ ಸೇರಿಸಬಹುದಾದಂತಹ ದೇವಸ್ಥಾನಗಳು ಇವೆಲ್ಲ.

ಮಹಾರಾಷ್ಟ್ರದಲ್ಲಿ ಖಜರಾಹೋ ಅಂತಹ ದೇವಸ್ಥಾನಗಳನ್ನು ಹೇಗೆ ನಿರ್ಮಿಸಿದರು ಅಂತ ಹೇಳ್ಳಿಕ್ಕೆ ಸಾಧ್ಯ ಇಲ್ಲ ಅಂತಹ ಅದ್ಬುತ ಇಂಜಿನಿಯರಿಂಗ್ . ಹಾಗಾಗಿ ತಂತ್ರಜ್ಞಾನ ಇಲ್ಲಿ ಇದೆ . ಸಾವಿರ ಕಂಬಗಳ ಮಂದಿರ. ಕಲ್ಲಿನ ಕಂಬಗಳು ಯಾವ ದಿಕ್ಕಿನಿಂದ ನೋಡಿದರೂ ನೇರವಾಗಿ ಕಾಣಿಸುವಂತಹ ತಂತ್ರಜ್ಞಾನ . ಯಾವ ಗಣಿತ ಶಾಸ್ತ್ರ , ಯಾವ ಫಿಸಿಕ್ಸ್ , ಯಾವ ಸಿವಿಲ್ ಇಂಜಿನಿಯರಿಂಗ್ . ನಮಿಗೆ ಆಲೋಚನೆ ಮಾಡಲಿಕ್ಕೆ ಸಾಧ್ಯವಾ..? ಪಿ. ಡಬ್ಲ್ಯೂ.ಡಿ ಬಿಡಿ ಯಾರಿಗೂ ಈಗ ಅಂತದ್ದನ್ನು ಮಾಡ್ಲಿಕ್ಕೆ ಸಾಧ್ಯ ಇಲ್ಲ . ಇದರ ಮುಂದೆ ಎಲ್ಲ ಪಿ. ಡಬ್ಲ್ಯೂ.ಡಿ ಬರೇ ಕಾಗದದ ಕಟ್ಟು ಅಷ್ಟೇ.. ಹಾಗೆಯೇ ಹಲವಾರು ವಿಷಯಗಳಿವೆ . ಈ ದೇವಸ್ಥಾನ ಗಳಿಗೆ ಸಂಬಂಧಿಸಿದ ವಿಚಾರಗಳು ಮೂಡನಂಬಿಕೆಗಳೇನಲ್ಲ . ಶಿರಡಿಯ ಸಾಯಿಬಾಬ ಹೇಳ್ತಾರೆ ‘ಸಬ್ಕಾ ಮಾಲಿಕ್ ಏಕ್ ಹೆ ‘ ದೇವರು ಒಬ್ಬನೇ .. ಇಸ್ಲಾಂ ಕೂಡಾ ಅದನ್ನೇ ಹೇಳುತ್ತದೆ , ಕ್ರಿಶ್ಚಿಯಾನಿಟಿ ಕೂಡ ಅದೇ ಹೇಳುತ್ತದೆ . ವೇದಗಳೂ ಅದನ್ನೇ ಹೇಳುತ್ತದೆ . ಬ್ರಹ್ಮ ಕುಮಾರೀಸ್ ಎನ್ನುವ ಸಂಘಟನೆ ಎಲ್ಲರನ್ನೂ ಸಮಾನಗವಾಗಿ ಕಾಣುತ್ತಾರೆ , ಅವರು ವಿಗ್ರಹಾರಾಧರಲ್ಲ .
“ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ”  ಭಗವಾನ್ ಕೃಷ್ಣ ಗೀತೆಯಲ್ಲಿ ಹೇಳಿರುವುದು . ನಾನು ಆತ್ಮ , ಅನಶ್ವರವಾದ ಆತ್ಮ .
ಶಸ್ತ್ರ ಕತ್ತರಿಸಲಾಗದು , ಅಗ್ನಿ ಸುಡಲಾರದು , ನೀರು ನೆನೆಸಲಾರದು , ಗಾಳಿ ಒಣಗಿಸಲಾಗದು . ಹಾಗಾಗಿ ಎಲ್ಲರೂ ಆತ್ಮಗಳು ಸರ್ ಆತ್ಮಗಳಿಗೆ LDF ಅಂತ ಇಲ್ಲ , UDF ಅಂತ ಇಲ್ಲ . ಗಂಡು ಇಲ್ಲ ಹೆಣ್ಣು ಇಲ್ಲ , ಬಹುಸಂಖ್ಯಾತ ಅಲ್ಪಸಂಖ್ಯಾತ ಎನ್ನುವುದಿಲ್ಲ MLA ಇಲ್ಲ ಮಂತ್ರಿ ಇಲ್ಲ ,ಜಾತಿ ಇಲ್ಲ .
ಇದು ಭಾರತದ ಚಿಂತನೆ.

ಇದೆಲ್ಲ ದಿವಾಕರನಿಗೆ ಅರ್ಥ ಆಗಿದ್ರೆ ಮೊದಲೇ ಸರಿದಾರಿಗೆ ಬರ್ತಿದ್ದರಲ್ವೇ . ಇದಲ್ಲ ಅರ್ಥ ಆಗದ ಕಾರಣ ಅಷ್ಟೇ . 50 ದಶಲಕ್ಷ ಜನ 41 ದಿನ ಮಾತ್ರ ತೆರೆದಿರುವ ಶಬರಿಮಲೆಗೆ ಬರುತ್ತಾರೆ , ಸ್ವರ್ಣ ಮಂದಿರಲ್ಲಿ ನಿತ್ಯ ಒಂದು ಲಕ್ಷ ಜನಕ್ಕೆ ಅನ್ನದಾನ ನಡಿತದೆ . ಅತ್ಯಂತ ಶ್ರೀಮಂತರು ಅಲ್ಲಿ ಚಪ್ಪಲಿ ಒರೆಸ್ತಾರೆ .ನಾವು ಇದನ್ನೆಲ್ಲ ನೋಡ್ಲಿಲ್ವೇ. ಏನೂ ಇಲ್ಲದೆ ಇದೆಲ್ಲ ಹೇಗೆ ಸಾಧ್ಯ ಸರ್..? ಕಾಂಚೀಪುರದಲ್ಲಿ ಪಂಚಭೂತಗಳನ್ನು ಆರಾಧಿಸುತ್ತಾರೆ . ಅಗ್ನಿ , ಜಲ , ವಾಯು , ನೆಲ , ಆಕಾಶಗಳನ್ನು ಆರಾಧಿಸುವುದು ಪ್ರಕೃತಿಯ ಆರಾಧನೆ . ಇದು ಪರಿಸರಕ್ಕೆ ಪೂರಕವಾದ ಕಾರ್ಯ ಅಲ್ಲವೇ..? ದ್ವಾರಕೆಯ ದೇವಾಲಯಕ್ಕೆ ಎರಡೂವರೆ ಸಾವಿರ ವರ್ಷದ ಇತಿಹಾಸ ಇದೆ , ಕುಂಬಕೋಣದ 18 ದೇವಸ್ಥಾನಗಳು , ಅಕ್ಷರಧಾಮ , ತಿರುನ್ನಲ್ವೇಲಿಯ 9 ದೇವಸ್ಥಾನಗಳು ಇದೆಲ್ಲ ನಾವು ಸಂದರ್ಶಿಸಲೇ ಬೇಕಾದ ಸ್ಥಳಗಳು . ಇದೇರೀತಿ ಅಸಂಖ್ಯ ದೇವಸ್ಥಾನಗಳು, ಅಲ್ಲಿಯ ಆರಾಧನೆಗಳು ವಿಶ್ವಾಸಗಳು ಮೂಲಭೂತವಾಗಿ ಏಕದೇವತಾ ವಿಶ್ವಾಸವನ್ನು , ಮನುಷ್ಯರ ಮಧ್ಯೆ ಒಳ್ಳೆ ಸಂಬಂದವನ್ನೂ .ಸಕಲ ಜೀವಜಾಲಗಳಿಗೆ ಸಕಲೈಶ್ವರ್ಯಗಳೂ ಬರಲು ಆಗ್ರಹಿಸುವಂತದ್ದಾಗಿದೆ .

ಎಲ್ಲಾ ಜೀವಜಾಗಳಿಗೆ ಇರುವಂತದ್ದು ವೇದಗಳು . ಮೊದಲ ವೇದ ಋಗ್ವೇದ , ಅದೇ ರೀತಿ ಐತರೇಯ , ಬೃಹದಾರಣ್ಯಕ , ಈಶಾವಾಸ್ಯ , ತೈತ್ತರೇಯ , ಛಾಂದ್ಯೋಗ , ಕೇನ , ಮಂಡೂಕ , ಮಾಂಡೂಕ್ಯ, ಕಠ , ಪ್ರಶ್ನ ಮುಂತಾದ ಉಪನಿಷತ್ ಗಳು ಎಲ್ಲವನ್ನು ನೋಡಿದರೂ , ಅದರಲ್ಲಿ ಮಹತ್ತರವಾದ ಎಲ್ಲಾ ಜೀವಜಾಲಗಳನ್ನೂ ಸರ್ವ ಮನುಷ್ಯರನ್ನೂ ಸಮನಾಗಿ ಕಾಣುವಂತಹ ವಿಚಾರಗಳಿವೆ . ಅಲ್ಲದೇ ನಾವು ಮಾತ್ರ ಪ್ರಗತಿಪರರು , ಬಾಕಿ ಇರುವವರು ಸರಿ ಇಲ್ಲ ಅಂತ ನಿರ್ಲಕ್ಷಿಸಬಾರದು .  ಮದ್ಯಪಾನಿಗಳಿಗಳ ಮೇಲೆ ತೋರಿಸುವ ಕಾಳಜಿಯ ಅರ್ಧದಷ್ಟು ಕಾಳಜಿಯನ್ನಾದರೂ ದೇವಸ್ಥಾನಗಳ ಮೇಲೆ ಅಲ್ಲಿಯ ಕೆಲಸಗಾರರ ಮೇಲೆ ತೋರಿಸಬೇಕು ಸರ್. ನಮ್ಮ ದೇಶದ ತಾಜ್ ಮಹಲ್ , ಕುತುಬ್ ಮಿನಾರ್ , ದೇವಸ್ಥಾನಗಳು , ಪರಂಪರೆ , ಸಂಸ್ಕಾರ, ಸಂಸ್ಕೃತಿಗಳು , ಆಚಾರಗಳು , ಅನುಷ್ಠಾನಗಳು ಉಳಿಯಬೇಕು ಸರ್. ಎಮ್ ಎಸ್ ಸುಬ್ಬಲಕ್ಷ್ಮಿ ,ಹರಿಪ್ರಸಾದ್ ಚೌಡಸ್ಯ , ಪಂಡಿತ್ ರವಿಶಂಕರ್ , ಲತಾ ಮಂಗೇಷ್ಕರ್ ,ಹೀಗೆ ಅನೇಕರು ಅದೇ ರೀತಿ ಉಸ್ತಾದ್ ಬಿಸ್ಮಿಲ್ಲಾ ಖಾನ್ , ಅವರ ಹೆಸರು ಕೇಳಿ ಬೇಜಾರಾಗಬೇಡಿ , ಅವರು ತಮ್ಮ ಸಂಗೀತವನ್ನು ವಾರಣಾಸಿ ಕಾಶಿ ವಿಶ್ವನಾಥನ ಸನ್ನಿದಾನದಲ್ಲಿ ಸಮರ್ಪಿಸಿದವರು . ಹಾಗೆಯೇ , ಇಳೆಯರಾಜ ,ಭಿಮಸೇನ್ ಜೋಷಿ , ಮಾಸ್ಟರ್ ಮದನ್ , ಕದ್ರಿ ಗೋಪಿನಾಥ್ ಹೀಗೆ ಅಸಂಖ್ಯ ವಿಶ್ವ ವಿಖ್ಯಾತ ಸಂಗೀತಗಾರರ ನಾಡು .ಶಿಲ್ಪಕಲೆಗಳ ನಾಡು , ದೇವಾಲಯಗಳ ನಾಡು  ಅಧ್ಯಾತ್ಮದ ನಾಡು . ಮಹತ್ತಾದ ಈ ಭಾರತದ ಸಂಸ್ಕೃತಿಯನ್ನು ಅರಸಿ ಜಗತ್ತಿನ ಮೂಲೆ ಮೂಲೆಯಿಂದ ಜನರು ಬರುತ್ತಾರೆ . ಆದರೆ ಈ ಎಲ್ಲಾ ಸಂಸ್ಕೃತಿಯ ಮೂಲ ದೇವಸ್ಥಾನಗಳು , ಕಲೆ ಸಾಹಿತ್ಯಗಳು . ನಾವಿದನ್ನು ಮರೆಯಬಾರದು .

ಮಲಬಾರ್ ದೇವಸಂ ಒಂದು ಸಣ್ಣ ಭಾಗ , ಒಬ್ಬ ಕಮೀಷನರ್ ನನ್ನ ನೇಮಿಸಿ ಏನೋ ಒಂದೆರಡು ದಿನಗಳು ಏನೋ ಕೆಲವು ಬದಲಾವಣೆ ಮಾಡಿದರೆ ಮುಗಿಯುವ ವಿಷಯ ಅಲ್ಲ. ದೊಡ್ಡ ಮಟ್ಟಿನ 79.8% ಹಿಂದೂಗಳಿರುವ ದೇಶದ ಮಹತ್ತಾದ ಸಂಸ್ಕೃತಿಯ ಅಸ್ತಿವಾದ ದೇವಸ್ಥಾನದ ಸಂಸ್ಕಾರಕ್ಕೆ ಸಂಬಂದಿಸಿದ ಬಿಲ್ ಇದು ಎಂದುದನ್ನು ಮರೆಯಬಾರದು . ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ ತೇಜಸ್ವಿ ನಾಮದೀತಮಸ್ತು ಮಾ ವಿದ್ವಿಶಾವಹೈ
ಓಂ ಶಾಂತಿ ಶಾಂತಿ ಶಾಂತಿಃ

0
Shares
  • Share On Facebook
  • Tweet It




Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Girish Kumar November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Girish Kumar November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search