ಕೇರಳದ ಅಸೆಂಬ್ಲಿಯಲ್ಲಿ ಗುಣಗುನಿಸಿತು ತುಳುನಾಡಿನ ದೇವತಾರಾಧನೆ!
ಹಿಂದು ದೇವರ ಬಗ್ಗೆ ದೇವಸ್ಥಾನದ ಬಗ್ಗೆ ಯಾವೋಬ್ಬ ಹಿಂದುವೂ ಮಾತನಾಡಿದ ಚರಿತ್ರೆ ಇಲ್ಲ. ಆದರೆ ಕೇರಳದ ಅಸೆಂಬ್ಲಿಯಲ್ಲಿ ಮಲಬಾರ್ ದೇವಸ್ವಂ ಬೋರ್ಡ್ ನ ಮಸೂದೆ ಅಂಗೀಕಾರ ಸಂದರ್ಭದಲ್ಲಿ ಕೆ.ಯನ್.ಎ.ಖಾದರ್ ಎಂಬ ಮುಸ್ಲಿಂ ಎಂ.ಲ್.ಎ. ದೇವತಾರಾಧನೆ ಬಗ್ಗೆ ಮಾತನಾಡಿದ ಉತ್ಕೃಷ್ಟ ವೇದೋಕ್ತಿಗಳು.
ಸರ್.. ನಾವಿದನ್ನು ತಿಳಿದುಕೊಂಡರೆ ಒಳ್ಳೆದು . 2011 ರ ಜನಗಣತಿ ಪ್ರಕಾರ ಹಿಂದೂ 79.8% ಮುಸ್ಲಿಂ 14.2 % ಕ್ರಿಸ್ತಿಯನ್ 2.3 %ಸಿಖ್ 1.7% ಬೌದ್ದ 0.7% ಜೈನ 0.4% ಉಳಿದಂತೆ ಪಾರ್ಸಿ ,ಯಹೂದ್ಯ 0.7% ಧರ್ಮ ಇಲ್ಲದವರು 0.2% ಇದರಲ್ಲಿ ಈ ಕಮ್ಯುನಿಸ್ಟ್ ರು ಸೇರುತ್ತಾರೆ . ಈ ಧರ್ಮ ಇಲ್ಲದ 0.2% ನಮ್ಮ ವಿಧ್ಯಾಭ್ಯಾಸ ಮಂತ್ರಿಗಳು ಹೇಳುವ ರೀತಿಯ ಲೆಕ್ಕಾಚರಗಳೇನೂ ಇಲ್ಲ. ಇದರಲ್ಲಿ ಕಮ್ಯುನಿಸ್ಟ್ರ ಲ್ಲದವರೂ ಇರಬಹುದು . ಹಾಗೆ ನೋಡಿದರೂ ನಗಣ್ಯರಾದ ಈ 0.2%ಗೆ ಸೇರಿದವರು 79.8% ಹಿಂದುಗಳಿಗೆ ಸೇರಿದ ದೇವಸ್ಥಾನಗಳ ಆಡಳಿತ ನಡೆಸುತ್ತಿರುವುದು ಅನ್ನುವ ಜ್ಞಾನ ಆಧಿಕಾರ ನಡೆಸುವಾಗ, ಕಾನೂನನ್ನು ರೂಪಿಸುವಾಗ ಇರಬೇಕು ಅಂತ ನಾನು ಹೇಳುವುದು . ಈ ಸಂಪತ್ತು ಇದ್ದಾಗ ಅಲ್ಲಿ ತರ್ಕಗಳು , ನಿಯಂತ್ರಣಗಳ ಅವಶ್ಯಕತೆ ಇರುವುದು . ಸಾದಾರಣವಾಗಿ ಈ ಪಾರ್ಟಿಗಳಿಗೆ ದಾರಾಳ ಹಣ ಸಂಪತ್ತುಗಳು ಇರುತ್ತವೆ ಆದರೂ ಸರ್ಕಾರಗಳು ಅದರ ನಿಮತ್ರಣಕ್ಕೆ ಹೋಗುವುದಿಲ್ಲ . ಉದಾಹರಣೆಗೆ ಈ ಕಮ್ಯುನಿಸ್ಟ್ ಪಕ್ಷಕ್ಕೆ ದಾರಾಳ ಹಣ ಆಸ್ತಿ ಕಟ್ಟಡಗಳು ನಿತ್ಯ ವರಮಾನಗಳು ಹೀಗೇ ತುಂಬಾ ಸಂಪತ್ತುಗಳಿದ್ದರೂ ಸರ್ಕಾರ ಅದನ್ನು ನಿಯಂತ್ರಿಸುವುದಿಲ್ಲ . ದ್ವಜಾರೋಹಣ , ಪುಷ್ಪಾರ್ಚನೆ ಸಮ್ಮೇಳನಗಳಂತಹ ಆಚರಣೆಗಳನ್ನು ಮಾತ್ರ ಪಕ್ಷಕ್ಕೆ ಬಿಟ್ಟು ಉಳಿದ ಕೆಲಸಗಳನ್ನು ಸರ್ಕಾಗಳೇನೂ ಹೋಗಿ ಮಾಡುದಿಲ್ಲ . ಹಾಗೆಯೇ , ಅದನ್ನು ಮನಸ್ಸಿನಲ್ಲಿಟ್ಟುಕೊಂಡು ದೇವಸ್ಥಾನಗಳ ಆಡಳಿತ ಕೈಗೆತ್ತಿಕೊಂಡು ಅಧಿಕಾರ ಚಲಾಯಿಸುವಾಗ ಆಲೋಚಿಸಬೇಕು .
ಭಾರತ ಒಂದು ವಿವಿಧತೆಯ ದೇಶ . ಈ ವಿವಿಧತೆಯ ದೇಶದಲ್ಲಿ , ವಿಶ್ವಾಸಿಗಳ ದೇವಸ್ಥಾನಗಳ ಪ್ರಾಧಾನ್ಯತೆ ಸಣ್ಣದೇನಲ್ಲ . ದೇವಸ್ಥಾನಗಳು ಬರೇ ಅರಾಧನಾಲಯಗಳಲ್ಲ , ಅಲ್ಲಿ ಅಗ್ರಮಾನ್ಯ ಸಂಗೀತ ನೃತ್ಯ ಕಲೆ ಶಾಸ್ತ್ರಗಳೂ ಒಳಗೊಂಡಿವೆ . ಭಾರತದ ಪ್ರಮುಖ ದೇವಸ್ಥಾನಗಳು , ಮದುರೈ ಮೀನಾಕ್ಷಿ ದೇವಸ್ಥಾನ , ಅಮೃತಸರದ ಸ್ವರ್ಣ ಮಂದಿರ, ಶಿರಡಿ , ವೈಷ್ಣೋದೇವಿ , ಶ್ರವಣಬೆಳಗೊಳ , ಚೆನ್ನಕೇಶವ , ಶಬರಿಮಲೆ , ಕುಂಬಕೋಣಂ , ಪುರಿ ಜಗನ್ನಾಥ , ಬದರಿ ಕೇದಾರನಾಥ , ಯಮುನೋತ್ರಿ , ತಿರುಪತಿ , ಶ್ರೀ ಪದ್ಮನಾಭ ಮುಂತಾದ ಹಲವಾರು ವಿಶ್ವ ಪ್ರಸಿದ್ದ ದೇವಸ್ಥಾನಗಳಿವೆ . ಕೇರಳದಲ್ಲೂ ಹಲವು ಪ್ರಸಿದ್ದ ದೇವಸ್ಥಾನಗಳಿವೆ , ತಮಿಳುನಾಡಿನ ದೇವಾಲಯ ಸಂಸ್ಕೃತಿಗಳನ್ನು ಆದರಣೀಯ ಮಂತ್ರಿಗಳು ಒಮ್ಮೆ ನೋಡಬೇಕು , ಅವರು ಆ ವಿಚಾರಗಳಲ್ಲಿ ಆಸಕ್ತರು ಅಂತ ತಿಳ್ಕೊಂಡಿದ್ದೇನೆ .
ಕರ್ನಾಟಕದಲ್ಲಿ ಮೂಡಬಿದ್ರೆಯ ಸಾವಿರ ಕಂಬದ ಬಸದಿ , ತಮಿಳುನಾಡಿನ ಮದುರೈ ಮೀನಾಕ್ಷಿ ದೇವಾಲಯದಲ್ಲಿ ಮಟ್ಟಿದರೆ ಸಂಗೀತ ಕೇಳುವ ಕಂಬಗಳಿದ್ದು 33 ದಶಲಕ್ಷ ಕೆತ್ತನೆ ಕೆಲಸಗಳು ಮದುರೈ ಮೀನಾಕ್ಷಿ ದೇವಸ್ಥಾನದಲ್ಲಿ ಮಾತ್ರ ಇದೆ . ಅಂತಹ ವಾಸ್ತು ಶಿಲ್ಪ . ವಿಶ್ವವನ್ನೇ ಬೆರಗುಗೊಳಿಸಿದ ವಾಸ್ತು ಶಿಲ್ಪ . ಖಜರಾಹೋ ದೇವಸ್ಥಾನ ಸಮುಚ್ಚಯ , 20,30 ಚದರ ಕಿಲೋಮೀಟರ್ ಗಳಷ್ಟಿದ್ದ ದೊಡ್ಡ ಬಂಡೆ , ಅದನ್ನು ಕೆತ್ತಿ ನಿರ್ಮಿಸಲಾಗಿದೆ , ಎಷ್ಟೋ ದಶಲಕ್ಷ ಟನ್ ಗಳಷ್ಟು ಕಲ್ಲನ್ನು ಅಲ್ಲಿಂದ ಹೊರ ತೆಗೆಯಲಾಗಿತ್ತು . ಯಾವ ಮನುಷ್ಯರು ಇದನ್ನು ನಿರ್ಮಿಸಿದರು .? ಯಾವ ಇಂಜಿನಿಯರ್ ಗಳು ಇದನ್ನು ಮಾಡಿದ್ರು ..? ಎಂತಹ ಅದ್ಬುತವಾದ ಸಂಗತಿಗಳು ಸರ್..! ದೇವಸ್ಥಾನಗಳು ಅಂದರೆ ಬರೇ ಆರಾಧನೆಗಳು , ವಿಶ್ವಾಸಿಗಳು ಅಂತ ಕಡೆಗಣಿಸಬೇಕಾದ್ದಲ್ಲ .ಅದು ಮಹಾದ್ಬುತ .. ಅದ್ಯಾತ್ಮವನ್ನು ಹುಡುಕಿಕೊಂಡು ಪ್ರಪಂಚದ ಮೂಲೆ ಮೂಲೆಯಿಂದ ಇಲ್ಲಿಗೆ ಬರುವವರಿದ್ದಾರೆ . ತಂಜಾವೂರಿನ ಬೃಹದೀಶ್ವರ ದೇವಸ್ಥಾನ ಸಾವಿರ ವರ್ಷಗಳ ಇತಿಹಾಸ ಇರುವ ಏಕಶಿಲಾ ದೇವಾಲಯ . ಹಾಗೆಯೇ ತಿರುನ್ನಲ್ವೇಲಿಯ 9 ದೇವಸ್ಥಾನಗಳು . ಇದನ್ನೆಲ್ಲ ಒಮ್ಮೆ ಹೋಗಿ ನೋಡ್ವೇಕು ಸರ್ . ಮಂತ್ರಿಗಳು ಒಮ್ಮೆ ಇದನ್ನೆಲ್ಲಾ ನೋಡ್ಬೇಕು . ಆಗಲೇ ದೇವಸ್ಸಂ ಅಂತ ಬರುವಾಗ ಮನಸ್ಸಿನಲ್ಲಿ ಒಂದು ಆಲೋಚನೆ ಬರಬಹುದು , ಭಾರತ ಅಂದರೇನು ? ದೇವಸ್ಥಾನಗಳು ಅಂದರೇನು ? ಅದನ್ನು ಹೇಗೆ ನಡೆಸಬೇಕು ಅಂತ . ಇದೆಲ್ಲ ಯಾವುದೇ ಸರ್ಕಾರಗಳಿಲ್ಲದ ಕಾಲದಲ್ಲಿಯೂ ನೆಲೆ ನಿಂತಿದ್ದವು .ಈಗ ಮಾತ್ರ ಸ್ವಲಪವಾದರೂ ಸಮಸ್ಯೆಗಳಾಗಿರುವಂತದ್ದು. ಮೊದಲು ಸರಿಯಾಗಿಯೇ ನಡೀತಾ ಇತ್ತು . ಈ ಬೃಹದೀಶ್ವರ ದೇವಸ್ಥಾನದಲ್ಲಿ ಇಷ್ಟು ದೊಡ್ಡ ಗಾತ್ರದ ಕಲ್ಲುಗಳನ್ನು ಹೇಗೆ ಮೇಲೆ ಏರಿಸಿದ್ರಿ ಅಂತ ಕೇಳಿದ್ರೆ ಹೇಳ್ತಾರೆ . ಏಳು ಕಿಲೋಮೀಟರ್ ಗಳಷ್ಟು ಮಣ್ಣನ್ನು ಇಳಿಜಾರಾಗಿ ಹಾಕಿ ಆನೆ ಈ ಕಲ್ಲುಗಳನ್ನು ಎಳಕೊಂಡು ಹೋಗಿ ಮೇಲೆ ಇಡಲಾಯಿತು . ಕೆಲಸ ಆಗುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಮಣ್ಣನ್ನು ತೆರವುಗೊಳಿಸಲಾಯಿತು ಅಂತ . ಅಂತಹ ಅದ್ಬುತ ವಾದ ಇಂಜಿನಿಯರಿಂಗ್ . ಇಂದಿನ ಕಾಲದಲ್ಲಿ ಅಸಾಧ್ಯವಾದ ಇಂಜಿನಿಯರಿಂಗ್ . ಜಗತ್ತಿನ ಏಳು ಅದ್ಬುತಗಳಲ್ಲಿ ಸೇರಿಸಬಹುದಾದಂತಹ ದೇವಸ್ಥಾನಗಳು ಇವೆಲ್ಲ.
ಮಹಾರಾಷ್ಟ್ರದಲ್ಲಿ ಖಜರಾಹೋ ಅಂತಹ ದೇವಸ್ಥಾನಗಳನ್ನು ಹೇಗೆ ನಿರ್ಮಿಸಿದರು ಅಂತ ಹೇಳ್ಳಿಕ್ಕೆ ಸಾಧ್ಯ ಇಲ್ಲ ಅಂತಹ ಅದ್ಬುತ ಇಂಜಿನಿಯರಿಂಗ್ . ಹಾಗಾಗಿ ತಂತ್ರಜ್ಞಾನ ಇಲ್ಲಿ ಇದೆ . ಸಾವಿರ ಕಂಬಗಳ ಮಂದಿರ. ಕಲ್ಲಿನ ಕಂಬಗಳು ಯಾವ ದಿಕ್ಕಿನಿಂದ ನೋಡಿದರೂ ನೇರವಾಗಿ ಕಾಣಿಸುವಂತಹ ತಂತ್ರಜ್ಞಾನ . ಯಾವ ಗಣಿತ ಶಾಸ್ತ್ರ , ಯಾವ ಫಿಸಿಕ್ಸ್ , ಯಾವ ಸಿವಿಲ್ ಇಂಜಿನಿಯರಿಂಗ್ . ನಮಿಗೆ ಆಲೋಚನೆ ಮಾಡಲಿಕ್ಕೆ ಸಾಧ್ಯವಾ..? ಪಿ. ಡಬ್ಲ್ಯೂ.ಡಿ ಬಿಡಿ ಯಾರಿಗೂ ಈಗ ಅಂತದ್ದನ್ನು ಮಾಡ್ಲಿಕ್ಕೆ ಸಾಧ್ಯ ಇಲ್ಲ . ಇದರ ಮುಂದೆ ಎಲ್ಲ ಪಿ. ಡಬ್ಲ್ಯೂ.ಡಿ ಬರೇ ಕಾಗದದ ಕಟ್ಟು ಅಷ್ಟೇ.. ಹಾಗೆಯೇ ಹಲವಾರು ವಿಷಯಗಳಿವೆ . ಈ ದೇವಸ್ಥಾನ ಗಳಿಗೆ ಸಂಬಂಧಿಸಿದ ವಿಚಾರಗಳು ಮೂಡನಂಬಿಕೆಗಳೇನಲ್ಲ . ಶಿರಡಿಯ ಸಾಯಿಬಾಬ ಹೇಳ್ತಾರೆ ‘ಸಬ್ಕಾ ಮಾಲಿಕ್ ಏಕ್ ಹೆ ‘ ದೇವರು ಒಬ್ಬನೇ .. ಇಸ್ಲಾಂ ಕೂಡಾ ಅದನ್ನೇ ಹೇಳುತ್ತದೆ , ಕ್ರಿಶ್ಚಿಯಾನಿಟಿ ಕೂಡ ಅದೇ ಹೇಳುತ್ತದೆ . ವೇದಗಳೂ ಅದನ್ನೇ ಹೇಳುತ್ತದೆ . ಬ್ರಹ್ಮ ಕುಮಾರೀಸ್ ಎನ್ನುವ ಸಂಘಟನೆ ಎಲ್ಲರನ್ನೂ ಸಮಾನಗವಾಗಿ ಕಾಣುತ್ತಾರೆ , ಅವರು ವಿಗ್ರಹಾರಾಧರಲ್ಲ .
“ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ” ಭಗವಾನ್ ಕೃಷ್ಣ ಗೀತೆಯಲ್ಲಿ ಹೇಳಿರುವುದು . ನಾನು ಆತ್ಮ , ಅನಶ್ವರವಾದ ಆತ್ಮ .
ಶಸ್ತ್ರ ಕತ್ತರಿಸಲಾಗದು , ಅಗ್ನಿ ಸುಡಲಾರದು , ನೀರು ನೆನೆಸಲಾರದು , ಗಾಳಿ ಒಣಗಿಸಲಾಗದು . ಹಾಗಾಗಿ ಎಲ್ಲರೂ ಆತ್ಮಗಳು ಸರ್ ಆತ್ಮಗಳಿಗೆ LDF ಅಂತ ಇಲ್ಲ , UDF ಅಂತ ಇಲ್ಲ . ಗಂಡು ಇಲ್ಲ ಹೆಣ್ಣು ಇಲ್ಲ , ಬಹುಸಂಖ್ಯಾತ ಅಲ್ಪಸಂಖ್ಯಾತ ಎನ್ನುವುದಿಲ್ಲ MLA ಇಲ್ಲ ಮಂತ್ರಿ ಇಲ್ಲ ,ಜಾತಿ ಇಲ್ಲ .
ಇದು ಭಾರತದ ಚಿಂತನೆ.
ಇದೆಲ್ಲ ದಿವಾಕರನಿಗೆ ಅರ್ಥ ಆಗಿದ್ರೆ ಮೊದಲೇ ಸರಿದಾರಿಗೆ ಬರ್ತಿದ್ದರಲ್ವೇ . ಇದಲ್ಲ ಅರ್ಥ ಆಗದ ಕಾರಣ ಅಷ್ಟೇ . 50 ದಶಲಕ್ಷ ಜನ 41 ದಿನ ಮಾತ್ರ ತೆರೆದಿರುವ ಶಬರಿಮಲೆಗೆ ಬರುತ್ತಾರೆ , ಸ್ವರ್ಣ ಮಂದಿರಲ್ಲಿ ನಿತ್ಯ ಒಂದು ಲಕ್ಷ ಜನಕ್ಕೆ ಅನ್ನದಾನ ನಡಿತದೆ . ಅತ್ಯಂತ ಶ್ರೀಮಂತರು ಅಲ್ಲಿ ಚಪ್ಪಲಿ ಒರೆಸ್ತಾರೆ .ನಾವು ಇದನ್ನೆಲ್ಲ ನೋಡ್ಲಿಲ್ವೇ. ಏನೂ ಇಲ್ಲದೆ ಇದೆಲ್ಲ ಹೇಗೆ ಸಾಧ್ಯ ಸರ್..? ಕಾಂಚೀಪುರದಲ್ಲಿ ಪಂಚಭೂತಗಳನ್ನು ಆರಾಧಿಸುತ್ತಾರೆ . ಅಗ್ನಿ , ಜಲ , ವಾಯು , ನೆಲ , ಆಕಾಶಗಳನ್ನು ಆರಾಧಿಸುವುದು ಪ್ರಕೃತಿಯ ಆರಾಧನೆ . ಇದು ಪರಿಸರಕ್ಕೆ ಪೂರಕವಾದ ಕಾರ್ಯ ಅಲ್ಲವೇ..? ದ್ವಾರಕೆಯ ದೇವಾಲಯಕ್ಕೆ ಎರಡೂವರೆ ಸಾವಿರ ವರ್ಷದ ಇತಿಹಾಸ ಇದೆ , ಕುಂಬಕೋಣದ 18 ದೇವಸ್ಥಾನಗಳು , ಅಕ್ಷರಧಾಮ , ತಿರುನ್ನಲ್ವೇಲಿಯ 9 ದೇವಸ್ಥಾನಗಳು ಇದೆಲ್ಲ ನಾವು ಸಂದರ್ಶಿಸಲೇ ಬೇಕಾದ ಸ್ಥಳಗಳು . ಇದೇರೀತಿ ಅಸಂಖ್ಯ ದೇವಸ್ಥಾನಗಳು, ಅಲ್ಲಿಯ ಆರಾಧನೆಗಳು ವಿಶ್ವಾಸಗಳು ಮೂಲಭೂತವಾಗಿ ಏಕದೇವತಾ ವಿಶ್ವಾಸವನ್ನು , ಮನುಷ್ಯರ ಮಧ್ಯೆ ಒಳ್ಳೆ ಸಂಬಂದವನ್ನೂ .ಸಕಲ ಜೀವಜಾಲಗಳಿಗೆ ಸಕಲೈಶ್ವರ್ಯಗಳೂ ಬರಲು ಆಗ್ರಹಿಸುವಂತದ್ದಾಗಿದೆ .
ಎಲ್ಲಾ ಜೀವಜಾಗಳಿಗೆ ಇರುವಂತದ್ದು ವೇದಗಳು . ಮೊದಲ ವೇದ ಋಗ್ವೇದ , ಅದೇ ರೀತಿ ಐತರೇಯ , ಬೃಹದಾರಣ್ಯಕ , ಈಶಾವಾಸ್ಯ , ತೈತ್ತರೇಯ , ಛಾಂದ್ಯೋಗ , ಕೇನ , ಮಂಡೂಕ , ಮಾಂಡೂಕ್ಯ, ಕಠ , ಪ್ರಶ್ನ ಮುಂತಾದ ಉಪನಿಷತ್ ಗಳು ಎಲ್ಲವನ್ನು ನೋಡಿದರೂ , ಅದರಲ್ಲಿ ಮಹತ್ತರವಾದ ಎಲ್ಲಾ ಜೀವಜಾಲಗಳನ್ನೂ ಸರ್ವ ಮನುಷ್ಯರನ್ನೂ ಸಮನಾಗಿ ಕಾಣುವಂತಹ ವಿಚಾರಗಳಿವೆ . ಅಲ್ಲದೇ ನಾವು ಮಾತ್ರ ಪ್ರಗತಿಪರರು , ಬಾಕಿ ಇರುವವರು ಸರಿ ಇಲ್ಲ ಅಂತ ನಿರ್ಲಕ್ಷಿಸಬಾರದು . ಮದ್ಯಪಾನಿಗಳಿಗಳ ಮೇಲೆ ತೋರಿಸುವ ಕಾಳಜಿಯ ಅರ್ಧದಷ್ಟು ಕಾಳಜಿಯನ್ನಾದರೂ ದೇವಸ್ಥಾನಗಳ ಮೇಲೆ ಅಲ್ಲಿಯ ಕೆಲಸಗಾರರ ಮೇಲೆ ತೋರಿಸಬೇಕು ಸರ್. ನಮ್ಮ ದೇಶದ ತಾಜ್ ಮಹಲ್ , ಕುತುಬ್ ಮಿನಾರ್ , ದೇವಸ್ಥಾನಗಳು , ಪರಂಪರೆ , ಸಂಸ್ಕಾರ, ಸಂಸ್ಕೃತಿಗಳು , ಆಚಾರಗಳು , ಅನುಷ್ಠಾನಗಳು ಉಳಿಯಬೇಕು ಸರ್. ಎಮ್ ಎಸ್ ಸುಬ್ಬಲಕ್ಷ್ಮಿ ,ಹರಿಪ್ರಸಾದ್ ಚೌಡಸ್ಯ , ಪಂಡಿತ್ ರವಿಶಂಕರ್ , ಲತಾ ಮಂಗೇಷ್ಕರ್ ,ಹೀಗೆ ಅನೇಕರು ಅದೇ ರೀತಿ ಉಸ್ತಾದ್ ಬಿಸ್ಮಿಲ್ಲಾ ಖಾನ್ , ಅವರ ಹೆಸರು ಕೇಳಿ ಬೇಜಾರಾಗಬೇಡಿ , ಅವರು ತಮ್ಮ ಸಂಗೀತವನ್ನು ವಾರಣಾಸಿ ಕಾಶಿ ವಿಶ್ವನಾಥನ ಸನ್ನಿದಾನದಲ್ಲಿ ಸಮರ್ಪಿಸಿದವರು . ಹಾಗೆಯೇ , ಇಳೆಯರಾಜ ,ಭಿಮಸೇನ್ ಜೋಷಿ , ಮಾಸ್ಟರ್ ಮದನ್ , ಕದ್ರಿ ಗೋಪಿನಾಥ್ ಹೀಗೆ ಅಸಂಖ್ಯ ವಿಶ್ವ ವಿಖ್ಯಾತ ಸಂಗೀತಗಾರರ ನಾಡು .ಶಿಲ್ಪಕಲೆಗಳ ನಾಡು , ದೇವಾಲಯಗಳ ನಾಡು ಅಧ್ಯಾತ್ಮದ ನಾಡು . ಮಹತ್ತಾದ ಈ ಭಾರತದ ಸಂಸ್ಕೃತಿಯನ್ನು ಅರಸಿ ಜಗತ್ತಿನ ಮೂಲೆ ಮೂಲೆಯಿಂದ ಜನರು ಬರುತ್ತಾರೆ . ಆದರೆ ಈ ಎಲ್ಲಾ ಸಂಸ್ಕೃತಿಯ ಮೂಲ ದೇವಸ್ಥಾನಗಳು , ಕಲೆ ಸಾಹಿತ್ಯಗಳು . ನಾವಿದನ್ನು ಮರೆಯಬಾರದು .
ಮಲಬಾರ್ ದೇವಸಂ ಒಂದು ಸಣ್ಣ ಭಾಗ , ಒಬ್ಬ ಕಮೀಷನರ್ ನನ್ನ ನೇಮಿಸಿ ಏನೋ ಒಂದೆರಡು ದಿನಗಳು ಏನೋ ಕೆಲವು ಬದಲಾವಣೆ ಮಾಡಿದರೆ ಮುಗಿಯುವ ವಿಷಯ ಅಲ್ಲ. ದೊಡ್ಡ ಮಟ್ಟಿನ 79.8% ಹಿಂದೂಗಳಿರುವ ದೇಶದ ಮಹತ್ತಾದ ಸಂಸ್ಕೃತಿಯ ಅಸ್ತಿವಾದ ದೇವಸ್ಥಾನದ ಸಂಸ್ಕಾರಕ್ಕೆ ಸಂಬಂದಿಸಿದ ಬಿಲ್ ಇದು ಎಂದುದನ್ನು ಮರೆಯಬಾರದು . ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ ತೇಜಸ್ವಿ ನಾಮದೀತಮಸ್ತು ಮಾ ವಿದ್ವಿಶಾವಹೈ
ಓಂ ಶಾಂತಿ ಶಾಂತಿ ಶಾಂತಿಃ
Leave A Reply