• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸೈನಿಕರ ಮೇಲೆ, ಹೆಣ್ಣಿನ ಬಗ್ಗೆ ಗೌರವ ಇಲ್ಲದವರನ್ನು ವಿವಿಯಲ್ಲಿ ವಿಶೇಷಾಧಿಕಾರಿ ಮಾಡಿದ್ದು ಭೈರಪ್ಪ!

Ganeshraj Posted On August 2, 2018
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಗೆದಷ್ಟು ಭ್ರಷ್ಟಾಚಾರದ ಪಳೆಯುಳಿಕೆಗಳು ಸಿಗುತ್ತವೆ. ಅಲ್ಲಿನ ಭ್ರಷ್ಟರೆಲ್ಲ ಸೇರಿ ತಮ್ಮ ಕರ್ಮಕಾಂಡವನ್ನು ಹೂತು ಅದರ ಮೇಲೆ ವಿರಾಜಮಾನರಾಗಿದ್ದರೂ ಮಾಡಿದ ಪಾಪ ಎಲ್ಲಿಗೂ ಹೋಗುವುದಿಲ್ಲ ಎನ್ನುವಂತೆ ಇವರನ್ನೇ ಸುತ್ತಿಕೊಳ್ಳುವುದು ಗ್ಯಾರಂಟಿಯಾಗುತ್ತಿದೆ. ಕುಲಪತಿಯಾಗಿದ್ದ ಭೈರಪ್ಪ ಮತ್ತು ಅವರ ತಂಡ ಮಕ್ಕಳು ಓದುವ ಪುಸ್ತಕದಲ್ಲಿಯೂ ಹಣ ತಿನ್ನುತ್ತಿತ್ತು ಎಂದರೆ ನೀವೆ ಯೋಚಿಸಿ. ಇವರನ್ನು ಸರಸ್ವತಿ ಬೋಧಕರು ಎಂದು ದೇವರು ಕೊಟ್ಟ ಭಾಗ್ಯವನ್ನು ಇವರೇ ಕೈಯಾರೆ ಕಿತ್ತುಕೊಂಡಂತೆ ಆಗುತ್ತಿಲ್ಲವೆ? ಎಲ್ಲ ಶಿಕ್ಷಣ ಸಂಸ್ಥೆಯಲ್ಲಿ ಇದ್ದಂತೆ ಇಲ್ಲಿಯೂ ವಿಶಾಲವಾದ ಲೈಬ್ರರಿ ಇದೆ. ಅಲ್ಲಿ ಆಗಾಗ ಹೊಸ ಹೊಸ ಪುಸ್ತಕಗಳನ್ನು ಖರೀದಿಸಲಾಗುತ್ತದೆ. ಆ ಪುಸ್ತಕ ಖರೀದಿ ಮಾಡುವಾಗ ಭೈರಪ್ಪನವರ ಟೀಮು ಎಲ್ಲಿಂದ ಅತೀ ಹೆಚ್ಚು ಕಮೀಷನ್ ಸಿಗುತ್ತದೋ ಅಲ್ಲಿಂದಲೇ ಪುಸ್ತಕ ಖರೀದಿ ಮಾಡುತ್ತದೆ. ಇವರಿಗೆ ಕಮೀಷನ್ ಮುಖ್ಯವೇ ಹೊರತು ಇವರು ಖರೀದಿ ಮಾಡುವ ಪುಸ್ತಕ ಮಕ್ಕಳಿಗೆ ಉಪಯುಕ್ತವೋ ಅಗತ್ಯವೋ ಎನ್ನುವುದಲ್ಲ. ಈ ಪುಸ್ತಕದ ಕಮೀಷನ್ ವ್ಯವಹಾರವನ್ನು ನೋಡಿಕೊಳ್ಳಲು ಭೈರಪ್ಪನವರು ಕೊಟ್ಟಿರುವುದು ತಮ್ಮ ಆಪ್ತ ಪುರುಷೋತ್ತಮ ಗೌಡ ಎನ್ನುವವರ ಕೈಗೆ. ಪುರುಷೋತ್ತಮ ಗೌಡ ಅವರೊಂದಿಗೆ ಪ್ರಶಾಂತ, ನಾಗಪ್ಪ ಗೌಡ, ಎಎಂ ಖಾನ್, ಕಿಶೋರ್ ಕುಮಾರ್, ರವೀಂದ್ರ ಆಚಾರ್ಯ, ಧರ್ಮಪ್ರಕಾಶ, ಬಿಎಚ್ ಶೇಖರ್ ಅವರು ಭೈರಪ್ಪನವರ ಸೂಚನೆಯಂತೆ ಕಮೀಷನ್ ಪುಸ್ತಕ ಅವ್ಯವಹಾರ ಮಾಡುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಇವರೆಲ್ಲ ತಮಗೆ ಕಮೀಷನ್ ಸಿಗುತ್ತದೆ ಎಂದು ಬೇಕಾಬಿಟ್ಟಿ ಪುಸ್ತಕ ಖರೀದಿ ಮಾಡಿದ್ದಾರೆ. ಇದರಿಂದ ಪೋಲಾದದ್ದು ನಮ್ಮ ನಿಮ್ಮ ತೆರಿಗೆಯ ಹಣ.

ನಾಗಪ್ಪ ಗೌಡ ಯಾರು…

ಈ ತಂಡದಲ್ಲಿರುವ ನಾಗಪ್ಪ ಗೌಡ ಅವರದ್ದು ಮತ್ತೊಂದು ಭ್ರಷ್ಟಾಚಾರದ ವಿರಾಟ್ ರೂಪ. ಇವರು ವಿವಿಯ ದೂರಶಿಕ್ಷಣ ದಂಧೆಯ ರೂವಾರಿ. ಇವರು ಮಂಗಳೂರು ವಿವಿಯ ಹಂಪನಕಟ್ಟೆಯ ಸಮೀಪವಿರುವ ಸರಕಾರಿ ಕಾಲೇಜು ಇದರ ಕನ್ನಡ ಶಿಕ್ಷಕ. ಭೈರಪ್ಪನವರ ಸಕಲ “ಬೇಕು” ಬೇಡಾ ಗಳನ್ನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ಪೂರೈಸುವ ಮನುಷ್ಯ. ಇಂತಹ ವ್ಯಕ್ತಿ ಹಂಪನಕಟ್ಟೆಯಲ್ಲಿರುವ ಕಾಲೇಜಿನಲ್ಲಿ ಇರುವುದಕ್ಕಿಂತ ತಮ್ಮ ಹತ್ತಿರದಲ್ಲಿಯೇ ಇದ್ದರೆ ಕಮ್ಯೂನಿಕೇಶನ್ “ಗ್ಯಾಪ್” ಕಡಿಮೆಯಾಗುತ್ತದೆ ಎಂದುಕೊಂಡ ಭೈರಪ್ಪ ನಾಗೇಶ್ ಗೌಡರನ್ನು ಕೊಣಾಜೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಾಗಪ್ಪ ಗೌಡ ಎಂತಹ ವಿಕೃತ ಮನಸ್ಸಿನ ಶಿಕ್ಷಕ ಎಂದರೆ ಸೈನಿಕರನ್ನು ವ್ಯಭಿಚಾರಿಗಳು ಎಂದು ಸಂಭೋದಿಸಿ ಕಳೆದ ವರ್ಷ ಪಠ್ಯಪುಸ್ತಕದಲ್ಲಿ ಪ್ರಿಂಟ್ ಕೂಡ ಮಾಡಲಾಗಿತ್ತಲ್ಲ, ಆಗ ಪಠ್ಯಪುಸ್ತಕ ಪಠ್ಯ ಸಮಿತಿಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ಮೊದಲ ವರ್ಷದ ಬಿಸಿಎ ಕನ್ನಡ ಪಠ್ಯದಲ್ಲಿ ಯುದ್ಧ ಒಂದು ಉದ್ಯಮ ಎನ್ನುವ ಶೀರ್ಚಿಕೆಯಡಿಯಲ್ಲಿ ಸೈನಿಕರ ಬಗ್ಗೆ ಕೀಳಾಗ ಬರೆಯಲಾಗಿತ್ತು. ಅದರಲ್ಲಿ ಏನು ಬರೆಯಲಾಗಿತ್ತು ಎಂದರೆ ಮೇಲ್ನೋಟಕ್ಕೆ ಸೈನಿಕರನ್ನು ಕೊಂಡಾಡುವ ನಮಗೆ ವಾಸ್ತವದಲ್ಲಿ ಅವರ ಹಿಂದಿನ ಮುಖದ ಅರಿವಿರುವುದಿಲ್ಲ ಎನ್ನುವ ಅರ್ಥದಲ್ಲಿ ಸೈನಿಕರು ವ್ಯಭಿಚಾರಿಗಳು ಎಂದು ಚಿತ್ರಿಸಲಾಗಿತ್ತು. ಇನ್ನೊಂದು ಬಿಕಾಂ ತರಗತಿಯ ವಿದ್ಯಾರ್ಥಿಗಳಿಗೆ ಮಗುವಿನ ತಂದೆ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಮದುವೆಯಾಗದ ಹೆಣ್ಣುಮಕ್ಕಳ ವಿಷಯದಲ್ಲಿ ಕೆಟ್ಟದಾಗಿ ಚಿತ್ರಿಸಲಾಗಿತ್ತು. ಅಂತಹ ಕೆಟ್ಟ ಮನಸ್ಸಿನ ವ್ಯಕ್ತಿಗಳನ್ನು ಭೈರಪ್ಪ ತಲೆ ಮೇಲೆ ಕೂರಿಸಿ ಮೆರವಣಿಗೆ ಮಾಡುತ್ತಾರೆ. ಅಂತಹ ನಾಗಪ್ಪ ಗೌಡ ತಮ್ಮ ಜಾತಿ ಬಾಂಧವ ಎನ್ನುವ ಕಾರಣಕ್ಕೆ ಸರಕಾರಿ ಕಾಲೇಜಿನಿಂದ ಮಂಗಳಾ ಗಂಗೋತ್ರಿಗೆ ವಿಶೇಷ ಅಧಿಕಾರಿ ಎನ್ನುವ ವಿಶೇಷ ಸ್ಥಾನಮಾನ ಕಲ್ಪಿಸಿ ವರ್ಗಾವಣೆ ಮಾಡಿಕೊಂಡಿದ್ದಾರೆ.

ನಿಯಮದಲ್ಲಿ ಹುದ್ದೆಗೆ ಅವಕಾಶ ಇಲ್ಲ…

ಉಪಕುಲಸಚಿವ ಹುದ್ದೆಗೆ ಸಮನಾಗಿರುವ ಈ ವಿಶೇಷ ಅಧಿಕಾರಿಯನ್ನು ಭೈರಪ್ಪ ಸೃಷ್ಟಿಸಿದ್ದು ಕೇವಲ ನಾಗಪ್ಪ ಗೌಡ ತಮ್ಮ ಆಪ್ತರು ಎನ್ನುವ ಕಾರಣಕ್ಕೆ. ಅವರಿಗೆ ಒಂದು ಲಕ್ಷ ನಲ್ವತ್ತು ಸಾವಿರದಷ್ಟು ಸಂಬಳ ಫಿಕ್ಸ್ ಮಾಡಲಾಗಿದೆ ಎನ್ನುತ್ತಾರೆ ಬಲ್ಲವರು. ಒಟ್ಟಿನಲ್ಲಿ ಕನ್ನಡದ ಗಾದೆ ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎನ್ನುವ ರೀತಿಯಲ್ಲಿ ತಾವು ಕೂಡ ತಿಂದು ತಮ್ಮ ಆಪ್ತರು ಕೂಡ ವಿವಿಯನ್ನು ಕ್ಲೀನ್ ಮಾಡಿ ಉಣ್ಣಲು ಭೈರಪ್ಪ ಅವಕಾಶ ಮಾಡಿಕೊಟ್ಟಿದ್ದಾರೆ. ನಾಗಪ್ಪ ಗೌಡ ಭೈರಪ್ಪನವರ ಅನೇಕ ದಂಧೆಯ ಕಿಂಗ್ ಪಿನ್. ಆದ್ದರಿಂದ ನಿಯಮದಲ್ಲಿ ಅವಕಾಶ ಇಲ್ಲದಿದ್ದರೂ ಇವರಿಗಾಗಿ ಹುದ್ದೆ ಸೃಷ್ಟಿಸಲಾಗುತ್ತದೆ. ಇಂತಹ ಹಲವರು ಮಂಗಳೂರು ವಿವಿಯಲ್ಲಿ ಇದ್ದಾರೆ. ಉಳಿದವರ ಬಗ್ಗೆ ನಾಳೆ “ಪ್ರಶಾಂತ”ವಾಗಿ ತಿಳಿಸಲಾಗುವುದು!

0
Shares
  • Share On Facebook
  • Tweet It




Trending Now
ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
Ganeshraj February 27, 2026
ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
Ganeshraj February 25, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
  • Popular Posts

    • 1
      ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • 2
      ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • 3
      ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • 4
      ಕೇರಳ ಇನ್ನು ಮುಂದೆ ಕೇರಳಂ!

  • Privacy Policy
  • Contact
© Tulunadu Infomedia.

Press enter/return to begin your search