ಡಿಸಿಎಂ ಡಾ.ಜಿ.ಪರಮೇಶ್ವರ್ ಬೆಂಬಲಿಗರ ವಿರುದ್ಧ ಕೇಸ್ ದಾಖಲಾಗಿದ್ದು ಏಕೆ ಗೊತ್ತಾ?
ಇತ್ತೀಚೆಗೆ ಬೆಂಗಳೂರಿನಲ್ಲಿ ಯಾವುದೇ ಫ್ಲೆಕ್ಸ್, ಬ್ಯಾನರ್ ಅಳವಡಿಸುವುದನ್ನು ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿತ್ತು. ಅದರಂತೆ ಆ ರಾಜಕಾರಣಿಗಳ ಹುಟ್ಟುಹಬ್ಬ, ಈ ರಾಜಕಾರಣಿಯ ಮಗನ ಜನ್ಮದಿನದ ಶುಭಾಶಯ ಎಂದು ಬರೆಸಲಾಗಿದ್ದ ಬ್ಯಾನರ್ ಗಳನ್ನು ತೆರವು ಮಾಡಲಾಗಿದೆ. ಅದು ಎಂಥಹದ್ದೇ ಪ್ರಭಾವಿ ರಾಜಕಾರಣಿಯಾಗಿದ್ದರೂ ಅವರ ಫ್ಲೆಕ್ಸ್ ಕಿತ್ತುಹಾಕಲಾಗಿದೆ.
ಆದರೆ ಬಿಬಿಎಂಪಿ ಆದೇಶದ ಹೊರತಾಗಿಯೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿ ಶುಭಾಶಯ ಕೋರುವ ಬ್ಯಾನರ್ ಹಾಕಿದ್ದರು. ಬಿಬಿಎಂಪಿ ಆದೇಶದ ಹೊರತಾಗಿಯೂ ಬ್ಯಾನರ್ ಅಳವಡಿಸಿದ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರಿಗೆ ಶುಭಾಶಯ ಕೋರುವ ಬ್ಯಾನರ್ ಗಳನ್ನು ಬಿಬಿಎಂಪಿ ಅಧಿಕಾರಿಗಳು ನಿರ್ದಾಕ್ಷಿಣ್ಯವಿಲ್ಲದೆ ತೆರವುಗೊಳಿಸಿದೆ.
ಅಲ್ಲದೆ ಬ್ಯಾನರ್ ಅಳವಡಿಸಿದ ಕೂಡಲೇ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿರಲಿಲ್ಲ. ಆದರೆ ಬಿಬಿಎಂಪಿ ಸಭೆಯಲ್ಲಿ ವಿರೋಧ ಪಕ್ಷದವರು ಟೀಕೆ ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತ ಆಡಳಿತ ಮಂಡಳಿ ಬ್ಯಾನರ್ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಪರಮೇಶ್ವರ್ ಬೆಂಬಲಿಗರ ವಿರುದ್ಧ ಎಫ್ಐಆರ್ ಸಹ ದಾಖಲಿಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಆರ್. ಸಂಪತ್ ರಾಜ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಡಾ,ಜಿ.ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು, ಬ್ಯಾನರ್, ಫ್ಲೆಕ್ಸ್ ಹಾಕಿ ಯಾರೂ ನಗರದ ಸೌಂದರ್ಯ ಹಾಳುಮಾಡಬಾರದು. ನನ್ನ ಬೆಂಬಲಿಗರಿಗೂ ಇದೇ ಮನವಿ ಮಾಡಿದ್ದೇನೆ ಎಂದಿದ್ದಾನೆ. ಆದರೆ ಇಷ್ಟೆಲ್ಲ ಆದರೂ ತಮ್ಮ ಬೆಂಬಲಿಗರು ಮಾಡಿದ ಅನಾಹುತದ ಬಗ್ಗೆ ಡಿಸಿಎಂ ಒಂದೂ ಮಾತು ಆಡಿಲ್ಲ,
Leave A Reply