ಪೊಲೀಸರ ಮೇಲೆಯೇ ಕಾರು ಚಲಾಯಿಸಿದ ಕೇರಳದ ಯುವಕ; ಇಬ್ಬರು ಪೊಲೀಸ್ ಪೇದೆಗಳು ಗಾಯ
ಮಂಗಳೂರು: ಕೇರಳದ ಯುವಕನೊಬ್ಬ ಪೊಲೀಸರ ಮೇಲೆಯೇ ಕಾರು ಚಲಾಯಿಸಿದ ಪರಿಣಾಮ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿರುವ ಘಟನೆ ನಗರದ ಪಂಪ್ ವೆಲ್ ಸರ್ಕಲ್ ಬಳಿ ನಡೆದಿದೆ.
ಮಹಮ್ಮದ್ ಕುಂಞ(18) ಬಂಧಿತ ಆರೋಪಿಯಾಗಿದ್ದು, ಮೂಲತಃ ಕಾಸರಗೋಡು ನಿವಾಸಿ ಎಂಬ ಮಾಹಿತಿ ಲಭಿಸಿದೆ. ಕೇರಳದಿಂದ ಕಾರಿನಲ್ಲಿ ಯುವತಿಯೊಂದಿಗೆ ಆಗಮಿಸಿದ ಮಹಮ್ಮದ್ ಪೊಲೀಸ್ ಚೆಕ್ ಪೋಸ್ಟ್ ಬಳಿ ಪರಿಶೀಲನೆ ನಡೆಸಲು ಮುಂದಾದ ವೇಳೆ ಪೊಲೀಸರ ಮೇಲೆಯೇ ಕಾರು ಚಲಾಯಿಸಿದ್ದಾನೆ.
ಮಹಮ್ಮದ್ ಕಾರು ಪರಿಶೀಲನೆ ವೇಳೆ ಪರಾರಿಯಾಗಲು ವೇಗವಾಗಿ ಕಾರು ಚಲಾಯಿಸಿದ್ದರಿಂದ ಪೊಲೀಸ್ ಪೇದೆಗಳಾದ ಮಾರಪ್ಪ, ಕೆ.ಬಿ.ಸ ಗಜೇಂದ್ರ ಗಾಯಗೊಂಡಿದ್ದಾರೆ. ಇದರ ನಡುವೆಯೂ ಪೊಲೀಸರು ಮಹಮ್ಮದ್ ಕಾರನ್ನು ತಡೆಯಲು ಯಶಸ್ವಿಯಾಗಿದ್ದು, ಸದ್ಯ ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಪೊಲೀಸರು ಸ್ಥಳೀಯ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಂಗಳೂರು ಭಾಗದಲ್ಲಿ ಕೇರಳ ಯುವಕರು ಕಾರಿನಲ್ಲಿ ಯುವತಿರೊಂದಿಗೆ ಆಗಮಿಸಿ ಅನೈತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹೆಚ್ಚಾಗಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದರು. ಪೊಲೀಸ್ ಇಲಾಖೆಯೂ ಸಹ ಕಾನೂನು ಬಾಹಿರ ಕೃತ್ಯಗಳನ್ನು ತಡೆಯಲು ಹೆಚ್ಚಿನ ಕ್ರಮಗೊಂಡಿದ್ದು, ಕೇರಳದಿಂದ ಆಗಮಿಸುವ ವಾಹನ ಮೇಲೆ ನಿಗಾ ವಹಿಸಿದೆ. ಘಟನೆಯ ಕುರಿತು ಮಂಗಳೂರಿನ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave A Reply