ಕೊಡಗು ಮತ್ತು ಕರಾವಳಿಯನ್ನು ಸಂಪರ್ಕಿಸಲು ಆರಂಭಗೊಂಡಿರುವ ಸುಳ್ಯ ಭಾಗಮಂಡಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್
ಮಂಗಳೂರು: ಕೊಡಗು ಮತ್ತು ಕರಾವಳಿಯನ್ನು ಸಂಪರ್ಕಿಸಲು ಆರಂಭಗೊಂಡಿರುವ ಸುಳ್ಯ ಭಾಗಮಂಡಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಕರಿಕೆ ಎಂಬಲ್ಲಿ 10 ಚಕ್ರದ ಲಾರಿಯೊಂದು ತಿರುವುವಿನಲ್ಲಿ ಸಿಲುಕಿಕೊಂಡ ಪರಿಣಾಮ ಎರಡು ಬದಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಸುಮಾರು 2 ಗಂಟೆಯಿಂದ ವಾಹನಗಳು ರಸ್ತೆಯಲ್ಲಿ ನಿಂತಿದ್ದು ಲಾರಿಯನ್ನು ಹೊರತೆಗೆಯಲು ಹರಸಾಹಸ ನಡೆಯುತ್ತಿದೆ. ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಆದರೂ ಈ ಲಾರಿ ಹೋಗಿದ್ದು ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಸಂಪಾಜೆ ಘಾಟಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸುಳ್ಯ, ಕರಿಕೆ ಮಾರ್ಗವಾಗಿ ಭಾಗಮಂಡಲಕ್ಕೆ ಬಸ್ ಸಂಚಾರ ಆರಂಭಗೊಂಡಿತ್ತು. ಲಘು ವಾಹನಗಳ ಸಂಚಾರಕ್ಕ ಮಾತ್ರ ಈ ರಸ್ತೆಯೋಗ್ಯವಾಗಿದೆ.
ಮಡಿಕೇರಿ, ಭಾಗಮಂಡಲ, ಕರಿಕೆ, ಆಲೆಟ್ಟಿ, ಮಾರ್ಗವಾಗಿ ಸುಳ್ಯಕ್ಕೆ ಏಳು ಬಸ್ಸುಗಳು ಈಗ ಸಂಚರಿಸುತ್ತಿವೆ. ಬಸ್ ಪ್ರಯಾಣದ ಅವಧಿ 4 ಗಂಟೆಯಾಗಿದ್ದು ಒಂದು ಟಿಕೆಟ್‍ಗೆ 90 ರೂ. ಶುಲ್ಕ ನಿಗದಿಯಾಗಿದೆ. ಈ ಮೊದಲು 50 ಕಿ.ಮೀ ದೂರವನ್ನು ಬಸ್ಸಿನಲ್ಲಿ 1 ಗಂಟೆ 15 ನಿಮಿಷದಲ್ಲಿ ತಲುಪಬಹುದಾಗಿತ್ತು.
Leave A Reply