ಸಮ್ಮಿಶ್ರ ಸರ್ಕಾರದ ಗೂಂಡಾಗಿರಿ ನಡೆಯುತ್ತಿದೆ ಪೂಜಾರಿ ವಾಗ್ದಾಳಿ.
ಉಡುಪಿ:- ರಾಜ್ಯವೇ ಕಂಡು ಕೇಳರಿಯದ ದಬ್ಬಾಳಿಕೆ ಇಂದು ನಡೆದಿದೆ.ಕಾಂಗ್ರೆಸ್ ಕಾರ್ಯಕರ್ತರು ಬಿಎಸ್ ವೈ ಮನೆಗೆ ಮುತ್ತಿಗೆ ಹಾಕಿದ್ದಾರೆ ಇದು ಸಮ್ಮಿಶ್ರ ಸರ್ಕಾರದ ಗೂಂಡಾಗಿರಿ.ಆಳುವ ಪಕ್ಷದ ಆಣತಿಯಂತೆ ಎಲ್ಲವೂ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ ಸಿಎಂ ಭಯೋತ್ಪಾದಕನ ಮಾದರಿಯ ಹೇಳಿಕೆ ಕೊಡುತ್ತಾರೆ.ಭಯೋತ್ಪಾದಕರ ಮಾದರಿಯಲ್ಲಿ ದಂಗೆ ಏಳುವುದಾಗಿ ಕರೆ ಕೊಟ್ಟಿದ್ದಾರೆ.ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ ಆಡಳಿತದಲ್ಲಿ ಹಿಡಿತ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ
ಯಡಿಯೂರಪ್ಪ ಮೇಲಿನ ಎಲ್ಲಾ ಕೇಸ್ ಖುಲಾಸೆಯಾಗಿದೆ
ಸಿಎಂ ಹಳೇ ಕೇಸ್ ರೀ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದಾರೆ.ರೇವಣ್ಣ ಮೇಲಿನ ಕೇಸಿಗೂ ಪುನರ್ ಜೀವ ಕೊಡ್ತೀರಾ? ಎಂದು ಪ್ರಶ್ನಿಸಿದ್ರು.ರೇವಣ್ಣ ಮೇಲೆ ಭಾರೀ ಭೂಕಬಳಿಕೆ ಆರೋಪವಿದೆ.ಮಾಜಿ ಸಚಿವ ಓಲೆ ಮಂಜು ಆರೋಪಗಳ ಸಮಗ್ರ ತನಿಖೆ ಮಾಡ್ತೀರಾ..? ಎಂದು ಸವಾಲು ಹಾಕಿದ್ರು ಐಟಿ ಇಡಿ ಸ್ವತಂತ್ರ ಸಂಸ್ಥೆ ಗೃಹಸಚಿವ ರಾಜ್ ನಾಥ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ನುಡಿದಂತೆ ನಡೆಯುವ ಸರ್ಕಾರ ನಿಮ್ಮದು. ಡಿಕೆಶಿಯವರನ್ನು ಸಚಿವ ಸಂಪುಟದಿಂದ ಕೈಬಿಡಿ.
ಇಡಿ ತನಿಖೆ ನಡೆಯುವಾಗ ಡಿಕೆ ಅಧಿಕಾರದಲ್ಲಿ ಇರುವುದು ಎಷ್ಟು ಸರಿ ರಾಜ್ಯದಲ್ಲಿ ಗೂಂಡಾಗಿರಿ ರಾಜಕಾರಣ ನಡೆಯೋದಿಲ್ಲ. ಕಾಂಗ್ರೆಸ್ ನಾಯಕ ಜಾರಕಿ ಹೋಳಿ ಸಹೋದರರಿಗೆ ಸಮಾಧಾನವಿದೆ. ಕುಂದಾನಗರದ ಮೇಲೆ ಕನಕಪುರದ ಬಂಡೆ ಬಿದ್ದಿದೆ.ಕಾಂಗ್ರೆಸ್ ನ ಒಳಗೆ ಯಾವುದೂ ಸರಿಯಿಲ್ಲ ಎಂದು ಅವರೇ ಒಪ್ಪಿದ್ದಾರೆ ಎಂದು ಪೂಜಾರಿ ಹೇಳಿದರು.
Leave A Reply