ಮಂಗಳೂರಿನಲ್ಲಿ ಗಲಾಟೆ ಮಾಡಿಸಲು ಪ್ಲಾನ್ ಆಗುತ್ತಿದೆಯಾ?
ಮಂಗಳೂರಿನಲ್ಲಿ ಮತ್ತೆ ಗಲಭೆ ನಡೆಸಲು ಪ್ಲಾನ್ ನಡೆಸಲಾಗಿದೆಯಾ ಎನ್ನುವ ಸಂಶಯ ಮೂಡುತ್ತಿದೆ. ಇದಕ್ಕೆ ಮುಖ್ಯ ಕಾರಣ ವಿಶ್ವ ಹಿಂದೂ ಪರಿಷತ್ ಮುಖಂಡ ಹರೀಶ್ ಶೆಟ್ಟಿ ಮೇಲೆ ನಡೆದಿರುವ ದಾಳಿ. ಮಸೀದಿಯೊಂದರ ಪಕ್ಕದಲ್ಲಿ ಹಣ್ಣುಹಂಪಲು ಖರೀದಿಸಲು ನಿಂತಿದ್ದಾಗ ದಾಳಿ ನಡೆದಿದೆ. ಕೈಗೆ ತೀವ್ರತರವಾಗಿರುವ ಗಾಯವಾಗಿದೆ. ಆ ನೋವನ್ನು ಅವರು ಅದೇಗೆ ಸಹಿಸಿಕೊಂಡು ಇರುತ್ತಾರೋ. ಅವರ ಕೊಲೆನೆ ಮಾಡಬೇಕು ಎಂದು ದುಷ್ಕರ್ಮಿಗಳು ಪ್ಲಾನ್ ಮಾಡಿರಬಹುದು. ಆದರೆ ಅದೃಷ್ಟ ಚೆನ್ನಾಗಿತ್ತು. ಬದುಕಿ ಉಳಿದಿದ್ದಾರೆ. ಪೊಲೀಸ್ ಕಮೀಷನರ್ ಸುರೇಶ್ ಅವರು ಆದಷ್ಟು ಶೀಘ್ರದಲ್ಲಿ ನೈಜ ಆರೋಪಿಗಳನ್ನು ಬಂಧಿಸಲಿ ಎನ್ನುವುದು ಹಾರೈಕೆ.
ಮತ್ತೊಂದೆಡೆ ಮೂಡಬಿದ್ರೆಯ ಹಿಂದೂ ಮುಖಂಡ ಪ್ರಶಾಂತ ಪೂಜಾರಿಯ ಹತ್ಯಾ ಆರೋಪಿ ಇಮ್ತಿಯಾಜ್ ಮೇಲೆ ದಾಳಿ ನಡೆದಿದೆ. ಅಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಮಾಹಿತಿ ಬರುತ್ತಿದೆ. ಇದನ್ನೆಲ್ಲ ಗಮನಿಸಿದರೆ ಯಾರಿಗೋ ಈ ಎಲ್ಲಾ ಘಟನೆಗಳಿಂದ ಲಾಭ ಇದೆಯೋ ಎಂದು ಅನಿಸುತ್ತದೆ. ಮಂಗಳೂರು ಶಾಂತಿಯುತವಾಗಿ ಇರಬಾರದು ಎಂದು ಯಾರೋ ಎಲ್ಲಿಯೋ ಕುಳಿತುಕೊಂಡು ಸಂಚು ಹೂಡುತ್ತಿದ್ದಾರೋ ಎನ್ನುವ ಸಂಶಯ ಬರುತ್ತದೆ. ಕೇವಲ ಬಿಡಿಗಾಸಿಗೆ ಯಾರ ಮೇಲೆ ಬೇಕಾದರೂ ತಲವಾರು ಬೀಸಲು ತಯಾರಾಗಿ ಇರುವಂತಹ ಕೆಲವು ಯುವಕರು ಇರುತ್ತಾರೆ. ಇನ್ನು ಕೆಲವು ಬಿಡಿಗಾಸಿಗೆ ಸರೆಂಡರ್ ಆಗಿ ಜೈಲಿನಲ್ಲಿ ಕುಳಿತುಕೊಳ್ಳುವ ಯುವಕರು ಕೂಡ ಇರುತ್ತಾರೆ. ವಿದೇಶದಲ್ಲಿ ಕುಳಿತ ಕೆಲವು ಶ್ರೀಮಂತರಿಗೆ ಮಂಗಳೂರಿನಲ್ಲಿ ಗಲಾಟೆ ಮಾಡಿಸುವುದು ಖಯಾಲಿಯಾಗಿರಬಹುದು. ಸ್ವಲ್ಪ ಹಣ, ಬೈಕು, ಸೆಂಟ್, ಗಾಂಜಾ, ಮದ್ಯದ ಹೊಳೆ ಹರಿಸಿ ಅವರು ಇಲ್ಲಿ ಯಾರ ಮೇಲೆ ಹಲ್ಲೆ ಮಾಡಲು ಹೇಳುತ್ತಾರೋ ಅಂತವರಿಗೆ ಹೊಡೆಯಲು ತಯಾರಾಗಿರುವ ಯುವಕರು ಇರಬಹುದು. ಇದು ನಿಲ್ಲಬೇಕು.
ಹಣ, ಡ್ರಗ್ಸ್ ಗಾಗಿ ಏನನ್ನು ಬೇಕಾದರೂ ಮಾಡಲು ತಯಾರಾಗುವ ಯುವಕರು ಯಾರು ಎನ್ನುವುದು ಪೊಲೀಸರಿಗೆ ಗೊತ್ತೆ ಇರುತ್ತದೆ. ಪೊಲೀಸರು ಅಂತವರ ಪಟ್ಟಿ ತೆಗೆಯಬೇಕು. ಅಂತವರಿಗೆ ಚೆನ್ನಾಗಿ “ಬುದ್ಧಿ”ವಾದ ಹೇಳಬೇಕು. ಅವರು ಮುಂದೆ ಅಂತಹ ಕೆಲಸ ಮಾಡದೇ ಇರುವ ಹಾಗೆ ಮಾಡಿಬಿಡಬೇಕು. ಈ ಮೂಲಕ ಅಂತಹ ಕೆಟ್ಟ ತಳಿಗಳು ಚಿಗುರದ ಹಾಗೆ ನೋಡಿಕೊಳ್ಳಬೇಕು. ಹಾಗೆ ಮಾಡಿದಾಗ ಯಾರಿಗೂ ಕೈಯಲ್ಲಿ ತಲವಾರು ಹಿಡಿಯಲು ಮನಸ್ಸು ಬರುವುದಿಲ್ಲ.
ಇಲ್ಲದಿದ್ರೆ ಏನು ಆಗುತ್ತದೆ ಎಂದರೆ ಹಲ್ಲೆ, ಕೊಲೆ ಮತ್ತೆ ಶುರುವಾಗುತ್ತದೆ. ಮತ್ತೆ ಶಾಂತಿ ಕದಡುತ್ತದೆ. ಇದು ಮಂಗಳೂರಿಗೆ ಕೆಟ್ಟ ಹೆಸರು ತರುತ್ತದೆ. ಇಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತದೆ. ಯಾರೋ ಎಲ್ಲಿಯೋ ಕುಳಿತು ಮೈ ಕಾಯಿಸಿಕೊಳ್ಳುತ್ತಿರುತ್ತಾರೆ!
Leave A Reply