ಅಣ್ಣಾ ಮಲೈ ಸೇರಿ ನಾಲ್ವರು ಬೆಂಗಳೂರಿಗೆ….!!!!! ಯಾಕೆ ಗೊತ್ತೆ..?
Posted On October 16, 2018
ಬೆಂಗಳೂರು: ಅಲೋಕ್ ಕುಮಾರ್ ಮತ್ತು ಗಿರೀಶ್ ಅವರಂತಹ ಖಡಕ್ ಪೊಲೀಸ್ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ, ದಂಧೆಕೋರರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಸಿ ಮುಟ್ಟಿಸಿದ್ದಾರೆ. ಇದರ ಬೆನ್ನಲ್ಲೇ ಐವರು ಖಡಕ್ ಆಫೀಸರ್ ಗಳನ್ನು ವರ್ಗಾವಣೆ ಮಾಡಿದ್ದಾರೆ.ಭೂ ಮಾಫಿಯಾ ಮಟ್ಟ ಹಾಕಲು ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅಣ್ಣಾ ಮಲೈ ಹಾಗೂ ಪೂರ್ವ ವಿಭಾಗ ಡಿಸಿಪಿಯಾಗಿ ರಾಹುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬೆಂಗಳೂರು ವಿಭಾಗದ ಹೆಚ್ಚುವರಿ ಸಂಚಾರ ಆಯುಕ್ತರಾಗಿ ಹರಿಶೇಖರನ್, ಕೆಎಸ್‍ಆರ್‍ಪಿ 1ನೇ ಬೆಟಾಲಿಯನ್ ಕಮಾಂಡೆಂಟ್‍ಗೆ ಅಜಯ್ ಹಿಲೋರಿ ಹಾಗೂ ಚಿಕ್ಕಮಗಳೂರು ಎಸ್‍ಪಿಯಾಗಿ ಹರೀಶ್ ಪಾಂಡೆ ಅವರು ವರ್ಗಾವಣೆಯಾಗಿದ್ದಾರೆ. ಭೂಕಳ್ಳರನ್ನು ಮಟ್ಟ ಹಾಕಲು ಬೆಂಗ್ಳೂರಿಗೆ ಬರ್ತಿದ್ದಾರೆ ಎಸ್‍ಪಿ ಅಣ್ಣಾ ಮಲೈ
ಈ ಮೂಲಕ ಮತ್ತೆ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಮಣೆ ಹಾಕಿ, ಕಳ್ಳರಿಗೆ ಹಾಗೂ ನಿಯಮ ಉಲ್ಲಂಘನೆ ಮಾಡುವವರಲ್ಲಿ ನಡುಕ ಹುಟ್ಟಿಸಲು ಎಚ್.ಡಿ.ಕುಮಾರಸ್ವಾಮಿ ಅವರು ತಂತ್ರ ಹೆಣೆಯುತ್ತಿದ್ದಾರೆ.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply