• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸಚಿವ ಖಾದರ್ ಅವರೇ ಇಂತಹ ತಪ್ಪಾಗದ ಹಾಗೆ ನೋಡಿಕೊಳ್ಳಿ!!

Hanumantha kamath Posted On November 19, 2018
0


0
Shares
  • Share On Facebook
  • Tweet It

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ಇವತ್ತು ಶುಕ್ರವಾರ ಕಂದಾಯ ಅದಾಲತ್ ಎನ್ನುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಹತ್ತು ಗಂಟೆಗೆ ಭಾಗವಹಿಸಬೇಕಾಗಿತ್ತು. ಸುಮಾರು 83 ಅರ್ಜಿಗಳು ವಿಲೇವಾರಿಗೆ ಬಂದಿದ್ದವು. ನನ್ನದು 83 ನೇ ಕೊನೆಯ ಅರ್ಜಿ. ಹಿರಿಯರಾಗಿರುವ ರತ್ನಾಕರ್ ಎಂಬುವವರ ಅವರ ಪರವಾಗಿ ನಾನು ಹೋಗಿದ್ದೆ. ನನ್ನದು ಕೊನೆಯ ಅರ್ಜಿ ಮುಗಿಯುವಾಗ ಗಂಟೆ 11.30. ಖಾದರ್ ಅವರು ಬರಲೇ ಇಲ್ಲ. ಅದರ ನಂತರ 11.45 ಕ್ಕೆ ನಾನು ಅಲ್ಲಿಂದ ಬಂದುಬಿಟ್ಟೆ. ಅಲ್ಲಿಯ ತನಕ ಅಧಿಕಾರಿಗಳನ್ನು ಬಿಟ್ಟರೆ ಜನಪ್ರತಿನಿಧಿಗಳು ಎಂದು ಯಾರೂ ಇರಲಿಲ್ಲ. ಇದು ಜಿಲ್ಲಾ ಕಾರ್ಯಕ್ರಮ. ಖಾದರ್ ಅವರ ವೈಯಕ್ತಿಕ ಕಾರ್ಯಕ್ರಮ ಅಲ್ಲ. ಹೇಗೆ ಅವರನ್ನು ಜನ ಆರಿಸಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೋ ಹಾಗೆ ಜನರಿಂದ ಆರಿಸಲ್ಪಟ್ಟ ಉಳಿದ ಏಳು ಜನ ಶಾಸಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದಾರೆ. ಅವರನ್ನು ಕರೆಯಬೇಕಿತ್ತು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ವೇದಿಕೆಯಲ್ಲಿ ಇರಬೇಕಿತ್ತು. ಆದರೆ ಸಚಿವ ಖಾದರ್ ಅವರು ತಾವು ಬರುವುದಿಲ್ಲ. ಹಾಗೆ ಬೇರೆ ಸ್ಥಳೀಯ ಶಾಸಕರು ವೇದಿಕೆಯ ಮೇಲೆ ಇದ್ದರೆ ಕ್ರೆಡಿಟ್ ಅವರಿಗೆ ಹೋಗುತ್ತೆ ಎಂದು ಅಂದುಕೊಂಡು ಜಿಲ್ಲೆಯ ಯಾವ ಶಾಸಕರನ್ನು ಕೂಡ ಖಾದರ್ ಕರೆದಿಲ್ಲ. ಪಾಲಿಕೆಯ ಸದಸ್ಯರೂ ಕೂಡ ವೇದಿಕೆಯ ಮೇಲೆ ಇರಲಿಲ್ಲ. ಖಾದರ್ ಅವರು ಇಂತಹ ಮನಸ್ಥಿತಿಯನ್ನು ಆದಷ್ಟು ಬೇಗ ಬಿಡಬೇಕು. ಯಾವ ವೇದಿಕೆಗೆ ಹೋದರೂ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುವ ಖಾದರ್ ಹಾಗೆ ಹೇಳಿದಂತೆ ನಡೆದುಕೊಳ್ಳುವುದಿಲ್ಲ ಎನ್ನುವುದೇ ಬೇಸರದ ವಿಷಯ. ಇದು ಇವರ ಉಸ್ತುವಾರಿಯಲ್ಲಿ ಆಗುತ್ತಿರುವ ಮೊದಲ ತಪ್ಪು ಅಲ್ಲ. ಹಾಗಂತ ಖಾದರ್ ಮನಸ್ಸು ಮಾಡಿದ್ರೆ ಇದೇ ಕೊನೆಯ ತಪ್ಪಾಗಿ ಮಾಡಿ ಮುಂದಕ್ಕೆ ಸರಿಪಡಿಸಬಹುದು. ಯಾಕಂದ್ರೆ ಹೀಗೆ ಕಂದಾಯ ಅದಾಲತ್ ನಂತಹ ದೊಡ್ಡ ಕಾರ್ಯಕ್ರಮಗಳು ಆಗುವಾಗ ಅಲ್ಲಿ ಸಮಸ್ಯೆ ಕೂಡ ವಿಭಿನ್ನವಾಗಿರುತ್ತದೆ. ಆರ್ ಟಿಸಿ ಆಗಲಿಲ್ಲ ಎನ್ನುವುದರಿಂದ ಹಿಡಿದು ಉಳುವವನೇ ಭೂಮಿಯ ಒಡೆಯದಂತಹ ಯೋಜನೆ ಡಿಕ್ಲೇರೆಷನ್ ನಮ್ಮ ಹೆಸರಲ್ಲಿ ಆಗಲಿಲ್ಲ ಎನ್ನುವ ಸಮಸ್ಯೆ ಹೀಗೆ ಹಿರಿಯರ ಆಸ್ತಿ ಆರ್ ಟಿಸಿ ತಮ್ಮ ಹೆಸರಿಗೆ ಬರಲಿಲ್ಲ ಎನ್ನುವುದನ್ನು ಸೇರಿಸಿಕೊಂಡು ಹತ್ತು ಹಲವು ಸಮಸ್ಯೆಗಳು ಅಲ್ಲಿ ಇರುತ್ತವೆ. ಅದಕ್ಕೆ ಸೂಕ್ತ ಸ್ಪಂದನೆ ಕೊಡುವ ಅಗತ್ಯ ಇರುತ್ತದೆ. ಅಧಿಕಾರಿಗಳು ಮಾಡುವುದಿಲ್ಲ ಎಂದು ನಾನು ಹೇಳುವುದಿಲ್ಲ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಮತ್ತು ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಸಚಿವರು ಇಲ್ಲದಿದ್ದರೂ ಜನರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಆದರೆ ಪ್ರಶ್ನೆ ಇರುವುದು ಅವರೇ ಮಾಡುವುದಾದರೆ ಜನಪ್ರತಿನಿಧಿಗಳು ಇರುವುದು ಯಾಕೆ? ಅಷ್ಟೇ ಅಲ್ಲ, ಸಚಿವ ಯುಟಿ ಖಾದರ್ ಅವರು ಬೇರೆ ಶಾಸಕರನ್ನಾಗಲಿ, ಜನಪ್ರತಿನಿಧಿಗಳನ್ನಾಗಲಿ ಕರೆದಿಲ್ಲ ಎಂದು ಜನರಿಗೆ ಗೊತ್ತಿರುವುದಿಲ್ಲ. ಅವರು ಸ್ಥಳೀಯ ಶಾಸಕರಿಗೆ ಜನರ ಕಷ್ಟ ಕೇಳಲು ಮನಸ್ಸಿಲ್ಲ ಎಂದೇ ಅಂದುಕೊಳ್ಳುತ್ತಾರೆ. ಅದಕ್ಕೆ ಬರಲಿಲ್ಲ ಎಂದೇ ಭಾವಿಸುತ್ತಾರೆ. ಕೊನೆಗೂ ಸಚಿವ ಯುಟಿ ಖಾದರ್ 11.50ಕ್ಕೆ ಬಂದರಂತೆ. ಅವರು ಬಂದ ಬಳಿಕ ಉದ್ಘಾಟನೆ ನಡೆಯಿತಂತೆ. ಅದು ಕೇವಲ ಫೋಟೋ ಶೂಟ್ ಗೆ ಮಾತ್ರ. ನಾಳೆ ಪತ್ರಿಕೆಗಳಲ್ಲಿ ಸಚಿವ ಖಾದರ್ ಅವರಿಂದ ಕಂದಾಯ ಅದಾಲತ್ ಎಂದು ಬರುತ್ತದೆ. ವೇದಿಕೆಯಲ್ಲಿ ಖಾದರ್ ಮಾತ್ರ ಕಾಣಿಸುತ್ತಾರೆ. ಅವರೇ ಮಾಧ್ಯಮಗಳಲ್ಲಿ ಮಿಂಚುತ್ತಾರೆ. ಜನರ ಸಂಕಷ್ಟವನ್ನು ಆಲಿಸುವವ ಎಂದು ಬಿರುದು ಬೇರೆ ಸಿಗುತ್ತದೆ. ಬಿಜೆಪಿ ಶಾಸಕರು ಬರಲಿಲ್ಲ ಎಂದು ಸುದ್ದಿಯಾಗುತ್ತದೆ. ಕರೆದಿಲ್ಲ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಕರೆದರೂ ಕಾರ್ಯಕ್ರಮ ಶುರುವಾಗುವ ಕೆಲವೇ ನಿಮಿಷಗಳ ಮೊದಲು ಕಾಟಾಚಾರಕ್ಕೆ ಕರೆದು ಅಧಿಕಾರಿಗಳು ಸಾಧಿಸುವುದಾದರೂ ಏನು? ಇಂತಹ ಕಾರ್ಯಕ್ರಮ ಇದ್ದಾಗ ಲಿಖಿತ ಆಹ್ವಾನ ಒಂದೆರಡು ದಿನಗಳ ಮೊದಲೇ ಶಾಸಕರ ಕಚೇರಿ ತಲುಪಬೇಕು. ಬೆಳಿಗ್ಗೆ 9.30 ಕ್ಕೆ ತಹಶೀಲ್ದಾರ್ ಫೋನ್ ಮಾಡಿ ಹತ್ತು ಗಂಟೆಗೆ ಬರಬೇಕು ಎಂದು ಹೇಳುತ್ತಾರೆ ಎಂದರೆ ರಾಜ್ಯದ ಆಡಳಿತದೊಂದಿಗೆ ಜಿಲ್ಲಾಡಳಿತ ಕೂಡ ಮಲಗಿದೆಯಾ ??
0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Hanumantha kamath December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Hanumantha kamath December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search