• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೆಲವು ಪತ್ರಕರ್ತರೇ “ಬ್ರಾಂಡೆಡ್” ಆಗಿರುವಾಗ ಊರು ಬ್ರಾಂಡ್ ಆಗುವುದು ಅಷ್ಟು ಸುಲಭವಲ್ಲ!!

hanumantha kamath Posted On November 29, 2018


  • Share On Facebook
  • Tweet It

ಬ್ರಾಂಡ್ ಮಂಗಳೂರು ಮಾಡುವುದು ಹೇಗೆ ಎನ್ನುವ ಚರ್ಚೆ ನಿಜಕ್ಕೂ ಆರೋಗ್ಯಪೂರ್ಣವಾದುದು. ಇಡೀ ರಾಜ್ಯ, ರಾಷ್ಟ್ರದಲ್ಲಿ ಅತ್ಯುತ್ತಮ ವಿಮಾನ ಸಂಪರ್ಕ, ರೈಲು ಸಂಪರ್ಕ, ನೌಕಾ ಸಂಪರ್ಕ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಇರುವ ಬೆರಳೆಣಿಕೆಯ ನಗರಗಳಲ್ಲಿ ಮಂಗಳೂರು ಒಂದು. ಅದರಲ್ಲಿಯೂ ನಮ್ಮ ರಾಜ್ಯದಲ್ಲಿ ಈ ಅರ್ಹತೆಯನ್ನು ಪಡೆದುಕೊಂಡಿರುವ ಏಕೈಕ ನಗರ ಮಂಗಳೂರು.

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ, ವಿದೇಶದಿಂದ ವಿದ್ಯಾರ್ಥಿಗಳು ಮಂಗಳೂರಿಗೆ ಬಂದು ಇಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ರಾಷ್ಟ್ರಮಟ್ಟದಲ್ಲಿ ಖ್ಯಾತ ಆಸ್ಪತ್ರೆಗಳಿಗೆ ಸ್ಪರ್ಧೆ ಕೊಡುವಂತಹ ಆಸ್ಪತ್ರೆಗಳು ಮಂಗಳೂರಿನಲ್ಲಿವೆ. ರಾಷ್ಟ್ರೀಯ ಬ್ಯಾಂಕುಗಳ ತವರೂರು ಮಂಗಳೂರು. ಇನ್ನು ಹಲವು ವಿಭಿನ್ನತೆಗಳು ಮಂಗಳೂರಿನಲ್ಲಿವೆ. ಹಾಗಾದರೆ ಇದನ್ನು ಬ್ರಾಂಡ್ ಮಂಗಳೂರು ಎನ್ನಬಹುದಾ? ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲ ಹೆಗ್ಗಳಿಕೆ ಇರುವ ಮಂಗಳೂರು ಬ್ರಾಂಡ್ ಆಗುವಲ್ಲಿ ಎಲ್ಲೋ ಎಡವಿದೆ ಎನ್ನಬಹುದು. ಅದನ್ನು ಪಾಸಿಟಿವ್ ರೀತಿಯಲ್ಲಿ ಬ್ರಾಂಡ್ ಮಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಮುಂಚೂಣಿಯಲ್ಲಿ ನಿಂತು ಮಂಗಳೂರಿನ ಗಣ್ಯರ ಅಭಿಪ್ರಾಯ ಕೇಳುವ ಪ್ರಯತ್ನವನ್ನು ಇತ್ತೀಚೆಗೆ ಮಾಡಿತ್ತು.

ಮೊದಲಿಗೆ ನಾನು ನನ್ನ ಅಭಿಪ್ರಾಯ ಮಂಡಿಸಿದ್ದೆ. ಅದನ್ನು ಮೊನ್ನೆಯೇ ಬರೆಯಲು ಶುರು ಮಾಡಿದ್ದೆ. ಮೊದಲಿಗೆ ಪೊಲೀಸ್ ಇಲಾಖೆಯ ಬಗ್ಗೆನೆ ಹೇಳಿದ್ದ ಕಾರಣ ಅದನ್ನೇ ಬರೆದಿದ್ದೆ. ನಮ್ಮ ಮಂಗಳೂರು ಅನೇಕ ದಕ್ಷ ಪೊಲೀಸ್ ಅಧಿಕಾರಿಗಳನ್ನು ಕಂಡಿದೆ. ಎಂತೆಂತಹ ಸಂಕೀರ್ಣ ಪ್ರಕರಣಗಳನ್ನು ನಮ್ಮ ಪೊಲೀಸರು ಭೇದಿಸಿದ್ದಾರೆ. ಉಳ್ಳಾಲದಲ್ಲಿ ಬಾಂಬ್ ಪತ್ತೆಯಿಂದ ಹಿಡಿದು ಟಾರ್ಗೆಟ್ ಗ್ರೂಪಿನವರೊಂದಿಗೆ ಸೆಣಸಾಡಿ ಆರೋಪಿಗಳನ್ನು ಬಂಧಿಸುವ ತನಕ ಪೊಲೀಸರು ಮಾಡಿದ ಸಾಧನೆ ಚಿಕ್ಕದೇನಲ್ಲ. ಎಲ್ಲೋ ಪಂಜಿಮೊಗರು ಡಬಲ್ ಮರ್ಡರ್ ಮತ್ತು ಒಂದೆರಡು ಪ್ರಕರಣಗಳನ್ನು ಬಿಟ್ಟರೆ ನಮ್ಮ ಪೊಲೀಸರು ಪ್ರತಿಯೊಂದರಲ್ಲಿಯೂ ಗೆಲ್ಲುತ್ತಾ ಬಂದಿದ್ದಾರೆ. ಆದರೆ ಕೋಮು ಗಲಭೆಗಳ ವಿಷಯ ಬಂದಾಗ ಮಾತ್ರ ಏನಾಗುತ್ತದೆ ಎನ್ನುವುದನ್ನು ಮೊನ್ನೆ ಬರೆದಿದ್ದೆ. ಅದೊಂದು ಸರಿ ಆದ್ರೆ ಬ್ರಾಂಡ್ ಮಂಗಳೂರು ಆಗುವ ಪ್ರಯಾಣದಲ್ಲಿ ನಾವು ಅರ್ಧ ಗೆದ್ದಂತೆಯೇ. ಆ ಕುರಿತು ನನ್ನ ಮೊನ್ನೆಯ ಜಾಗೃತ ಅಂಕಣ ಓದಿದರೆ ನಿಮಗೆ ಅರ್ಥವಾಗುತ್ತದೆ. ಮತ್ತೆ ಅದನ್ನೇ ಬರೆದು ಟೈಮ್ ವೇಸ್ಟು ಮಾಡುವುದು ಬೇಡಾ. ಇನ್ನು ಈ ಅಭಿಯಾನವನ್ನು ನನ್ನ ಪತ್ರಕರ್ತ ಮಿತ್ರರೇ ಮುಂಚೂಣಿಯಲ್ಲಿ ನಿಂತು ಮಾಡುತ್ತಿರುವುದರಿಂದ ಅವರಿಗೂ ಒಂದು ವಿಷಯ ಹೇಳಲು ಇಚ್ಚೇ ಪಡುತ್ತೇನೆ. ಯಾವುದನ್ನು ಪ್ರಾಜೆಕ್ಟ್ ಮಾಡುವುದು ಎಂದು ಗೊತ್ತಿರಬೇಕು… ಟಿವಿ, ಪತ್ರಿಕೆ, ವೆಬ್ ಸೈಟ್ ಯಾವುದೇ ಮಾಧ್ಯಮದವರು ಇರಲಿ ನೀವು ಈ ಹುದ್ದೆಯಲ್ಲಿ ಇರುವ ತನಕ ಒಂದು ವಿಷಯ ಮರೆಯಲೇಬಾರದು. ತಪ್ಪು ಯಾರೇ ಮಾಡಿರಲಿ ಅದನ್ನು ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು. ನಿಮ್ಮ ಜವಾಬ್ದಾರಿ ಏನೆಂದರೆ ಸಮಾಜಕ್ಕೆ ಜಾಗೃತಿ ಮೂಡಿಸುವುದು. ನೀವು ಸಮಾಜದಲ್ಲಿ ಭ್ರಮೆ ಮೂಡಿಸುವ ಸಿನೆಮಾದವರು ಅಲ್ಲ. ಸಿನೆಮಾದಲ್ಲಿ ವೈಭವೀಕರಣ ಇರುತ್ತದೆ. ಕನಸುಗಳು ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಹೀರೋ ಎನ್ನುವವ ಇರುತ್ತಾನೆ. ಆದರೆ ನಿಜ ಜೀವನದಲ್ಲಿ ಹೀರೋ ಅಂತ ಮಾಧ್ಯಮಗಳಲ್ಲಿ ಮಿಂಚುವವರು ಎಷ್ಟೋ ಬಾರಿ ಮಾಧ್ಯಮಗಳ ಕ್ರಿಯೇಟ್ ಆಗಿರುತ್ತಾರೆ. ಅವರು ಎದುರಿಗೆ ಮಾತ್ರ ಗೋವಿನ ಮುಖ ಧರಿಸಿರುತ್ತಾರೆ. ಹಿಂದೆ ಕೆಟ್ಟಹುಳು ಆಗಿರುತ್ತಾರೆ. ಎಲ್ಲರೂ ಅಂತ ನಾನು ಹೇಳುವುದಿಲ್ಲ. ಆದರೆ ಹೆಚ್ಚಾಗಿ ಹಾಗೆ ಇರುತ್ತಾರೆ. ಇದು ನಿಂತು ನೈಜ ಸಮಾಜ ಸುಧಾರಕರನ್ನ, ಮಕ್ಕಳ ಬಗ್ಗೆ ನಿಜವಾದ ಕಳಕಳಿಯುಳ್ಳ ಶಿಕ್ಷಣ ತಜ್ಞರನ್ನ, ಪ್ರಾಮಾಣಿಕ ರಾಜಕಾರಣಿಯನ್ನ, ಬಡವರ ಬಗ್ಗೆ ಮಿಡಿಯುವ ವಕೀಲರನ್ನ, ಪಾಪದವರ ಬಗ್ಗೆ ಪ್ರೀತಿ ಇರುವ ಉದ್ಯಮಿಗಳನ್ನ, ಚುನಾವಣೆ ದೃಷ್ಟಿಯಲ್ಲಿ ಇಟ್ಟು ಕೆಲಸ ಮಾಡದ ಸಾಮಾಜಿಕ ಕಾರ್ಯಕರ್ತರನ್ನ ನೀವು ಪ್ರಾಜೆಕ್ಟ್ ಮಾಡುತ್ತಾ ಹೋಗಬೇಕು. ಆಗ ಕೆಟ್ಟ ಗಿಡಗಳು ನಾಶವಾಗಿ ಸುಗಂಧಬರಿತ ಸಸ್ಯಗಳ ಬೆಳವಣಿಗೆ ಆಗುತ್ತದೆ. ಸ್ವಅಭಿವೃದ್ಧಿ ಬಿಟ್ಟರೆ ಏನಾದರೂ ಮಾಡಬಹುದು… ಆದರೆ ಈಗ ಹೇಗೆ ಆಗುತ್ತಿದೆ ಎಂದರೆ ಒಂದು ದೊಡ್ಡ ಶಿಕ್ಷಣ ಸಂಸ್ಥೆಯ ಮಾಲೀಕ ವರ್ಷಕ್ಕೆ ಇಂತಿಷ್ಟು ಜಾಹೀರಾತು ಕೊಟ್ಟರೆ ಅವನು ಏನು ತಪ್ಪು ಮಾಡಿದರೂ ಬರೆಯುವುದಿಲ್ಲ. ಒಂದಿಬ್ಬರು ಬರೆಯುವವರು ಕ್ರಮೇಣ ಯಾಕೋ ಮೆದುವಾಗುತ್ತಾ ಹೋಗುತ್ತಾರೆ. ಇದರಲ್ಲಿ ಪ್ರತಿ ಬಾರಿ ಜಿಲ್ಲಾ, ನಗರ ವರದಿಗಾರರದ್ದೇ ತಪ್ಪಿದೆ ಎಂದು ಹೇಳುವುದಿಲ್ಲ. ಮೇಲಿನಿಂದ ಒತ್ತಡವೂ ಇರುತ್ತದೆ. ಹಲವು ಬಾರಿ ನಗರದಲ್ಲಿ ತನ್ನ ಉದಾರತೆಯಿಂದ ಹೆಸರು ಮಾಡಿದವರು ತಮ್ಮ ಯಾವುದೇ ತಪ್ಪು ಹೊರಗೆ ಬರಬಾರದು ಎಂದು ಸ್ಥಳೀಯ ವರದಿಗಾರರನ್ನು ಚೆನ್ನಾಗಿ ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಕೆಲವು ಪತ್ರಿಕೆಗಳಲ್ಲಿ ಮೂರು ವರ್ಷಕ್ಕೊಮ್ಮೆ ವರ್ಗಾವಣೆಯ ಪ್ರಕ್ರಿಯೆ ಕೂಡ ಇರುವುದು. ಯಾವಾಗ ಒಬ್ಬ ಪತ್ರಕರ್ತ ತನ್ನ “ಸ್ವ ಅಭಿವೃದ್ಧಿಯ” ಕನಸು ಕಾಣುತ್ತಾನೋ ಆಗ ಆತ ಮಾತ್ರ ಬ್ರಾಂಡ್ ಆಗುತ್ತಾನೆ ವಿನ: ಊರು ಸಕರಾತ್ಮಕವಾಗಿ ಬ್ರಾಂಡ್ ಆಗುವುದಿಲ್ಲ. ಒಂದು ವೇಳೆ ಸಮಾಜದ ಅಂಕುಡೊಂಕುಗಳನ್ನು ಸರಿ ಮಾಡಲು ಆಗದೇ ಹಣ ಮತ್ತು ವೈಭವದ ಜೀವನಕ್ಕೆ ಒಗ್ಗಿಕೊಳ್ಳುವವರು ಪತ್ರಕರ್ತರಾದರೆ ಅದರಿಂದ ಯಾವ ಬ್ರಾಂಡ್ ಕೂಡ ಕ್ರಿಯೇಟ್ ಆಗುವುದಿಲ್ಲ. ಇದೆಲ್ಲ ಸಾಧ್ಯಾನಾ ಎಂದು ಕೇಳಿದೆ. ಎದುರಿಗೆ ವೇದಿಕೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಪಕ್ಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಕುಳಿತಿದ್ದರು. ಅವರು ಏನು ಅಂದುಕೊಂಡರೋ?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
hanumantha kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
hanumantha kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search