• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಏಕಕಾಲದಲ್ಲಿ ಮಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯಲಿದೆ “ಅಯ್ಯಪ್ಪಜ್ಯೋತಿ”

Tulunadu News Posted On December 22, 2018
0


0
Shares
  • Share On Facebook
  • Tweet It

ಅಯ್ಯಪ್ಪನನ್ನು ರಕ್ಷಿಸಲು ನಮಗೆ ಸಾಧ್ಯವಿಲ್ಲ ಆದರೆ ನಮ್ಮ ಧರ್ಮ ಆಚಾರ ಪರಂಪರೆಯನ್ನು ರಕ್ಷಿಸಿ ಉಳಿಸಬೇಕಾದುದು ನಮ್ಮ ಆಧ್ಯ ಕರ್ತವ್ಯವೇ ಆಗಿದೆ. ದೇವರನ್ನು ನಂಬದವರು ನಾಸ್ತಿಕರು ಹಾಗೂ ಅನ್ಯಧರ್ಮದವರು ನಮ್ಮ ಪುಣ್ಯಕ್ಷೇತ್ರಗಳನ್ನು ಉಧ್ಯಾನವನವನ್ನಾಗಿಸುವ ನಿಟ್ಟಿನಲ್ಲಿ ನಂಬಿಕೆಗಳನ್ನು ತಮ್ಮದೇ ರೀತಿಯಲ್ಲಿ ಪ್ರಶ್ನಿಸಿ ಗೊಂದಲಗಳನ್ನುಂಟುಮಾಡಿ ಕೋರ್ಟ್ ಮೆಟ್ಟಲೇರಿ ಜಯಗಳಿಸಿ,ಧಾರ್ಮಿಕ ಭಾವನೆ ನಂಬಿಕೆಗಳೊಂದಿಗೆ ಚೆಲ್ಲಾಟವಾಡುವುದು ಇದೇ ಮೊದಲಲ್ಲ ಹಾಗೂ ಸುಮ್ಮನಿದ್ದರೆ ಇದು ಕೊನೆಯಾಗುವುದಿಲ್ಲ.

ತಿರುಪತಿಯ ಬೆಟ್ಟದ ತಪ್ಪಲಿನಲ್ಲಿರುವ ತಿರುಮಲ ದೇವಾಲಯವನ್ನೇ ತೆಗೆದು ಅಲ್ಲಿ ಹಿಂದೂ ಧರ್ಮದ ಆಚರಣೆಗಳಿಗೆ ಕಡಿವಾಣ ಹಾಕಲು ನಿಂತಾಗ ಭಕ್ತರ ಒಗ್ಗಟ್ಟಿನ ಹೋರಾಟಕ್ಕೆ ಮಣಿದು ತಾತ್ಕಾಲಿಕ ಜಯ ನಮ್ಮದಾಗಿತ್ತು.ಈಗ ಕಂಟಕ ಬಂದಿರುವುದು ಶ್ರೀ ಶಬರಿಯಲ್ಲಿ ನೆಲೆಸಿರುವ ಕಾನನವಾಸನ ದರ್ಶನಕ್ಕೆ.
ಇದು ಮುಂದುವರಿದರೆ ದಕ್ಷಿಣಕನ್ನಡದ ಆಚರಣೆ ಕಂಬಳಗಳನ್ನು ಕೋರ್ಟ್ ಗೆ ಒಯ್ದಂತೆ ಎಲ್ಲಾ ದೇವಾಲಯಗಳಿಗೂ ಸಂಕಷ್ಟ ಖಂಡಿತ.

ಶಬರಿಮಲೆಯಲ್ಲಿರುವುದು ಕೇವಲ ಇತರ ದೇವಾಲಯಗಳಂತಿರುವ ದೇವರ ವಿಗ್ರಹವಲ್ಲ ಇಡೀ ಭಾರತದಲ್ಲಿ ವೃತಾಚರಣೆ ಮಾಡಿಯೇ ಹದಿನೆಂಟು ಮೆಟ್ಟಿ ದರ್ಶಿಸಬೇಕಾದ ತತ್ವಮಸಿ ಆರಾಧನೆ. ಹೆಣ್ಣುಮಕ್ಕಳು ಹಾಗೂ ಮಾತೆಯರು ತಮ್ಮ ತಿಂಗಳ ಮುಟ್ಟು ನಿಂತ ನಂತರ ಈಗಲೂ ದರ್ಶಿಸಬಹುದಾದ ದೇವಾಲಯ ಆದರೆ ಮಧ್ಯವಯಸ್ಸಿನ ಮತ್ತು ಋತುಮತಿಯಾಗುವ ಸಮಯದಲ್ಲಿ ಮಾತ್ರ ಅವಕಾಶ ಇಲ್ಲ ಯಾಕೆಂಬುದೇ ಈಗ ಅಲ್ಲಿರುವ ವಿವಾದ. ಒಂದೊಂದು ದೇವಾಲಕ್ಕೂ ತಮ್ಮದೇ ಆದ ಆಚಾರ ಅನುಷ್ಟಾನಗಳಿದೆ.ಪ್ರಶ್ನಿಸುತ್ತಾ ಹೋದರೆ ಎಲ್ಲವೂ ಕೇವಲ ಮೂಡನಂಬಿಕೆ ಎಂಬುದಾಗಿ ನಿರೂಪಿಸಲೂ ಬಹುದು.ನಂಬುತ್ತಾ ಹೋದರೆ ಪ್ರತೀ ಕಲ್ಲು, ಮರ ವಸ್ತು ಆತ್ಮಗಳಲ್ಲೂ ದೇವರಿದೆ ಎಂದು ನಂಬಿರುವ ನಮ್ಮ ಹಿಂದೂ ಧರ್ಮದ ಆಚರಣೆಗಳ ತೀರ್ಪನ್ನು ಯಾವುದೇ ಕೋರ್ಟ್ ತೀರ್ಮಾನಿಸುವುದೆಂದರೆ ಇದನ್ನು ಪ್ರಶ್ನಿಸದಿದ್ದರೆ ಇದೇ ನಮ್ಮ ಧಾರ್ಮಿಕ ನಂಬಿಕೆಗಳ ಅದ:ಪತನದ ಭಾಗವಾಗಿ ಮುಂದೊಂದು ದಿನ ನಮ್ಮ ಪ್ರತೀ ದೇವರು ದೇವಾಲಯಗಳನ್ನು ಕಟ ಕಟೆಯಲ್ಲಿ ನಿಲ್ಲಿಸುವ ಕಾಲವೂ ಬರುವುದು ಖಂಡಿತ. ಮೂರು ಹೊತ್ತು ಆರಾಧನೆಗಳಲ್ಲಿ ತೊಡಗಿರುವ ವ್ಯಕ್ತಿ ಅಥವಾ ಎರಡು ಹೊತ್ತು ದೇಹಶುದ್ದಮಾಡಿ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವ ನಮ್ಮ ಆಸ್ತಿಕ ಭಕ್ತರು ಆಚರಣೆಗಳಲ್ಲಿ ಮಾರ್ಪಾಡುಗಳನ್ನು ಬಯಸಿದರೆ ಅದನ್ನು ಗಣನೆಗೆ ತೆಗೆದುಕೊಂಡು ಮಾರ್ಪಾಡು ಬೇಕಾದುದರಲ್ಲಿ ಮಾಡುವ ಆವಶ್ಯಕತೆ ನಮಗಂತೂ ಖಂಡಿತವಾಗಿದೆ‌.ಆದರೆ ದೇವರನ್ನೇ ನಂಬದವರನ್ನು ಅಸ್ತ್ರವಾಗಿ ಬಳಸಿ ಕಮ್ಯೂನಿಸ್ಟ್ ಸಿದ್ದಾಂತವನ್ನು ದೇವರ ಆಚರಣೆಗಳಲ್ಲಿ ತೂರಿ ನಂಬಿಕೆಗಳನ್ನೇ ಪ್ರಶ್ನಿಸಿ ಅನ್ಯಧರ್ಮದ ಯುವತಿ ರೆಹನಾಳ ಶಬರಿಮಲೆ ಪ್ರವೇಶಕ್ಕೆ ಅಲ್ಲಿಯ ಕಮ್ಯೂನಿಸ್ಟ್ ಸರಕಾರ ಇನ್ನೂರು ಪೋಲಿಸರನ್ನು ನಿಯೋಜಿಸಿ ಕಾವಲಾಗಿ ನಿಲ್ಲಿಸಿ ಇಡೀ ಶಬರಿಮಲೆಯಾಧ್ಯಂತ 16000 ಪೋಲಿಸರನ್ನು ಪಹರೆ ಹೂಡುವಂತೆ ಮಾಡುತ್ತಾರೆಂದರೆ ಇದು ನಮ್ಮ ನಂಬಿಕೆಗೆ ಕಮ್ಯೂನಿಸ್ಟರು ಕೊಡುವ ಏಟಲ್ಲದೆ ಇನ್ನೇನು ಅಲ್ಲ.

ಇದನ್ನು ಪ್ರತಿಭಟಿಸಿದ ಹಲವು ದೇವಭಕ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟುವ ಪ್ರಯತ್ನ,ಮಾನಸಿಕ ಹಿಂಸೆ,ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ,ಇದಕ್ಕೆಲ್ಲ ಅಲ್ಲಿಯ ಪಿಣರಾಯಿ ಸರಕಾರ ಪ್ರತ್ಯಕ್ಷ ಬೆಂಬಲ ಕೊಡುತ್ತಿದೆಯೆಂದರೆ ಇವರು ಕೋರ್ಟ್ ಹೇಳಿದ್ದನ್ನು ಅನುಸರಿಸುವುದಲ್ಲಾ ಇದನ್ನೇ ನೆಪವಾಗಿಟ್ಟು ಧಾರ್ಮಿಕ ಕ್ಷೇತ್ರದ ಪರಂಪರೆಯನ್ನು ನಂಬಿಕೆಗಳನ್ನು ತಿರುಚಿ ಜನರ ಭಾವನೆಗಳಿಗೆ ಸ್ಪಂದಿಸದೆ ಅಧಿಕಾರದ ದುರುಪಯೋಗ ಮಾಡಿ ಎಲ್ಲಾ ಹೋರಾಟಗಳನ್ನು ಹತ್ತಿಕ್ಕುವುದು ಮಾತ್ರ ಅವರ ಉದ್ದೇಶ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ದಿನಾಂಕ 26-12-18 ಬುಧವಾರ ಕೇರಳದ ಎಲ್ಲಾ ದೇವಾರಾಧಕರೂ ಅಯ್ಯಪ್ಪ ಮಾಲಾಧಾರಿಗಳೂ ಭಕ್ತರೂ ಹಿಂದೂ ಧರ್ಮದ ಅನುಯಾಯಿಗಳು ಸೇರಿಕೊಂಡು ಸಾಯಂಕಾಲ 6ಗಂಟೆಯಿಂದ ತೊಡಗಿ 7ತನಕ ಕೇರಳದ ಗಡಿಭಾಗ ಮಂಜೇಶ್ವರದಿಂದ ಹಿಡಿದು ತಿರುವನಂತಪುರದ ವರೆಗೆ ದಾರಿಯುದ್ದಕ್ಕೂ ಅಂದಾಜು 720 ಕಿಮೀ ಅಂತರಗಳಲ್ಲಿ ದೀಪ ಬೆಳಗಿ ಹಿಡಿದು ನಿಲ್ಲುವುದರ ಮೂಲಕ ನಮ್ಮ ತೀರ್ಥಾಲಯಗಳು ದುಡ್ಡುಮಾಡುವ ಕಾರ್ಖಾನೆಗಳಲ್ಲಿ ಆಧ್ಯಾತ್ಮಿಕ ಕೇಂದ್ರಗಳು,ನಮ್ಮ ಭಾರತವೇ ಪುಣ್ಯಕ್ಷೇತ್ರ ಇಲ್ಲಿರುವ ಪ್ರತೀ ನಂಬಿಕೆಗಳು ಪ್ರತೀ ಹಿಂದುವಿನ ಆಸ್ತಿ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ.ಇದರ ಭಾಗವಾಗಿ ಇತರ ರಾಜ್ಯಗಳಲ್ಲೂ ಇದೇ ರೀತಿಯ ಹಲವು ಕಾರ್ಯಕ್ರಮಗಳು ಏರ್ಪಡಿಸಲಾಗಿದ್ದು ಕರ್ನಾಟಕದ ಸಮಸ್ತ ಭಕ್ತರೂ ಕೂಡ ಅವರ ಬೆನ್ನಿಗೆ ನಿಂತು ಇದು ಸಮಸ್ತ ದೇವಾರಾಧಕರಿಗಾಗುವ ಸಮಸ್ಯೆಯೆಂಬುದನ್ನು ಮನವರಿಕೆ ಕೊಡುವ ಪ್ರಯತ್ನ ಮಾಡಲಿದೆ. ಕೇರಳದಲ್ಲಿ ಶಬರಿಮಲೆ ಹೋರಾಟಗಳನ್ನು ಹತ್ತಿಕ್ಕುವ ರೀತಿಯಲ್ಲಿ ಹಿಂದೂ ಭಕ್ತರನ್ನು ಹೊಡೆಯುವುದು ಹಿಂಸಿಸುವುದು,ಇರುಮುಡಿ ಕಟ್ಟನ್ನು ಬೀಳಿಸುವುದು,ಕ್ಷೇತ್ರದಲ್ಲಿ ತಂಗದಂತೆ ದೇವಾಲಯದ ಸುತ್ತಲೂ ನೀರು ಹಾಕುವುದು,ಮೂಲ ಸೌಲಭ್ಯಗಳಿಂದ ವಂಚಿತರಾಗಿಸುವುದು,ಕುಡಿಯಲು ನೀರು ಪೂರೈಸದಿರುವುದು ಹೀಗೆ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಲೆಂದೇ ಶ್ರೀ ಕ್ಷೇತ್ರದಲ್ಲಿ ನಾಸ್ತಿಕ ವರ್ಗದ ಜನರನ್ನು ಕೆಲಸಕ್ಕೆ ನಿಯೋಜಿಸಿ ಭಕ್ತರ ನಂಬಿಕೆಗಳನ್ನು ಅವಮಾನಿಸುವ ಪ್ರಕ್ರೀಯೆ ಅಲ್ಲಿಯ ಕಮ್ಯೂನಿಸ್ಟ್ ರಿಂದ ನಡೆಯುತ್ತಿದೆ. ಬನ್ನಿ ನಾವೂ ಕೂಡ ನಿಮ್ಮೊಂದಿಗಿದ್ದೇವೆ ಎನ್ನುವ ಸ್ಪಷ್ಟ ಸಂದೇಶವನ್ನು ಎಲ್ಲಾ ದೇವಾರಾಧಕರಿಗೂ ಅಯ್ಯಪ್ಪ ಭಕ್ತರಿಗೂ ಕೇರಳದಲ್ಲಿ ಹಿಂಸಿಸಲ್ಪಟ್ಟವರಿಗೂ ಕೊಡೋಣ. ಬುದವಾರ ದಿನಾಂಕ 26ಡಿಸೆಂಬರ್ ಸಾಯಂಕಾಲ ಸಂಜೆ 5-45 ರಿಂದ ಸುಮಾರು ಪ್ರಾರಂಭಿಸಿ ಎಲ್ಲಾ ಮಂಗಳೂರಿನ ಆಸ್ತಿಕರನ್ನು ವಿವಿದೆಡೆ ಸೇರಿಸುವ ಪ್ರಯತ್ನ ಶ್ರೀ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ತೀರ್ಮಾನವಾಗಿದ್ದು ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ. ನಿಗದಿತ ಸ್ಥಳಗಳಲ್ಲಿ ಒಟ್ಟಾಗಿ ನಿಂತು ದೀಪ ಬೆಳಗಿ ಶರಣುಘೋಷ ಕೂಗಿ ಅಯ್ಯಪ್ಪ ಭಕ್ತರೊಂದಿಗೆ ನಾವಿದ್ದೇವೆ ಎಂಬುದನ್ನು ತೋರಿಸಿ ನಮ್ಮ ಒಗ್ಗಟ್ಟನ್ನು ಬಲಪಡಿಸೋಣ. ಎಲ್ಲಾ ಮಾತೆಯರೂ, ಭಜನಾ ತಂಡಗಳು,ಎಲ್ಲಾ ಸಾಮಾಜಿಕ ಹಾಗೂ ಧಾರ್ಮಿಕ ಸಂಬಂದಿತ ಸಂಘಟನೆಗಳು,ಅಯ್ಯಪ್ಪ ಮಾಲಾಧಾರಿಗಳು ಹಾಗೂ ಪ್ರತೀ ಹಿಂದೂ ಧರ್ಮದ ಅನುಯಾಯಿಗಳು ಕುಟುಂಬ ಸಮೇತ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಿತಿಯ ಪದಾಧಿಕಾರಿಗಳು ಕೋರಿದ್ದಾರೆ. ಸ್ಥಳಗಳ ವಿವರ ಮಂಗಳೂರು ವಿಭಾಗದಲ್ಲಿ ಈ ಕೆಳಗಿನಂತಿದೆ…

ಮಂಗಳೂರಿನ ಪಂಪ್ವೆಲ್ ಸರ್ಕಲ್ ಹತ್ತಿರ ಕದ್ರಿ ಮಲ್ಲಿಕಟ್ಟೆ ಮೈದಾನ,ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಮುಂಬಾಗ,ಮಂಗಳಾದೇವಿ ದೇವಸ್ಥಾನ,ಸುರತ್ಕಲ್ ಜಂಕ್ಷನ್, ವಾಮಂಜೂರು,ಕಾವೂರುಗಳಲ್ಲಿ ಅದೇ ದಿನ ಅಂದರೆ ದಿನಾಂಕ 26-12-18 ಬುದವಾರ ಸಾಯಂಕಾಲ 5-45ರ ನಂತರ 7ರ ಮಧ್ಯೆ ಏಕಕಾಲದಲ್ಲಿ ದೀಪವನ್ನು ಬೆಳಗುವ ಮೂಲಕ ಕೇರಳದ ಭಕ್ತರ ಅಯ್ಯಪ್ಪ ದೀಪ ಜ್ಯೋತಿಯಾತ್ರೆಗೆ ಬೆಂಬಲ ಸೂಚಿಸಲಿದೆ.ದೀಪ ಬೆಳಗಿ ಕನಿಷ್ಠ 15ನಿಮಿಷ ಅಯ್ಯಪ್ಪ ಶರಣುಘೋಷಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದರ ವಿರೋದವನ್ನು ಪ್ರಾರ್ಥನೆಯ ಮೂಲಕ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಸಹಕರಿಸಬೇಕೆಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search