• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವರ್ಷದ ಕೊನೆಯ ಪ್ರಮುಖ ಕಾಟಾಚಾರದ ಸಭೆಯನ್ನು ಮುಗಿಸಿ ಎದ್ದಾಗ ಇದ್ದವರು ಬೆರಳೆಣಿಕೆಯ ಜನ!!

Hanumantha Kamath Posted On December 31, 2018


  • Share On Facebook
  • Tweet It

ಇದ್ದದ್ದು ಜನರ ಪರವಾಗಿ ನಾನು ಮತ್ತು ಇನ್ನೊಬ್ಬರು. ಚೇಂಬರ್ ಆಫ್ ಕಾಮರ್ಸ್ ಪರವಾಗಿ ಒಬ್ಬರಿದ್ದರು. ಅಲ್ಲಿಗೆ ಒಟ್ಟು ಮೂರು ಜನ. ಸಭೆಗೆ ಮೂಹೂರ್ತ ನಿಗದಿಯಾದದ್ದು ಮಧ್ಯಾಹ್ನ ಮೂರು ಗಂಟೆಗೆ. ಸಭೆ ಶುರುವಾಗುವ ಹೊತ್ತಿನಲ್ಲಿ ಮೂರು ಜನ ಕಾರ್ಪೋರೇಟರ್ಸ್, ಒಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸಚೇತಕರು ಹಾಗೂ ಪಾಲಿಕೆ ಕಮೀಷನರ್ ಬಂದರು. ಅಲ್ಲಿಗೆ ಮಂಗಳೂರಿನ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರಮುಖವಾಗಿರುವ ಸಭೆಯೊಂದು ಪ್ರಾರಂಭವಾಯಿತು. ಯಾವುದೇ ಒಂದು ನಗರ ಅಭಿವೃದ್ಧಿ ಆಗಬೇಕಾದರೆ ಅಭಿವೃದ್ಧಿಯ ರೂಪುರೇಶೆ ಬೇಕಾಗುತ್ತದೆ. ಅದರೊಂದಿಗೆ ಬರುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದರಿಂದ ಹಿಡಿದು ಬರಬೇಕಾಗಿರುವ ಹಣವನ್ನು ಹೇಗೆ ತರಿಸುವುದು ಮತ್ತು ಹಣವನ್ನು ಹೇಗೆ ಉಳಿಸುವುದು ಕೂಡ ಮುಖ್ಯ. ಅಂತಹ ಸಭೆಯೊಂದು ಶುರುವಾದರೂ ಮಂಗಳೂರಿನ ಪ್ರಥಮ ಪ್ರಜೆ ಬರಲೇ ಇಲ್ಲ. ಪ್ರಥಮ ಪ್ರಜೆ ಅಂದರೆ ಮೇಯರ್ ಬರುವಾಗ ಐದು ಗಂಟೆ. ಮೀಟಿಂಗ್ ನಾಲ್ಕು ಗಂಟೆ ಹತ್ತು ನಿಮಿಷಕ್ಕೆ ಸರಿಯಾಗಿ ಆರಂಭವಾಗಿತ್ತು. ನಾಗರಿಕರ ಪರವಾಗಿ ಇತ್ತೀಚೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಕಾರಣ ಸಭೆಯಲ್ಲಿ ಏನು ಹೇಳಿದರೂ ಆಡಳಿತ ಪಕ್ಷದವರು ತಮ್ಮ ಮನಸ್ಸಿಗೆ ಬಂದಂತೆ ಮಾಡುವುದು ಎಂದು ಅಂದುಕೊಂಡಿರುವುದರಿಂದ ಮತ್ತು ಬಹುತೇಕ ಸಂದರ್ಭದಲ್ಲಿ ಅದು ನಿಜವೂ ಆಗಿರುವುದರಿಂದ ಯಾರಿಗೂ ಆಸಕ್ತಿ ಇಲ್ಲ. ಆದರೆ ಸಾಮಾನ್ಯವಾಗಿ ನಾನು ಅಂತಹ ವಿಪರೀತ ಪ್ರಾಮುಖ್ಯವಾದ ಕೆಲಸಗಳು ಇರದಿದ್ದರೆ ಇಂತಹ ಸಭೆಗಳಿಗೆ ಹೋಗುತ್ತೇನೆ. ಈ ಸಲವೂ ಹೋಗಿದ್ದೆ ಮತ್ತು ನಾಗರಿಕರ ಪರವಾಗಿ ಬರೆದುಕೊಂಡು ಹೋಗಿರುವ ಎಲ್ಲ ಅಂಶಗಳನ್ನು ವಿವರವಾಗಿ ಹೇಳಲು ಅವಕಾಶ ಸಿಕ್ಕಿತ್ತು. ಅವಕಾಶ ಮಾಡಿಕೊಟ್ಟ ಸಮಸ್ತ ನಾಗರಿಕರಿಗೆ ಥ್ಯಾಂಕ್ಸ್.

ಲೆಕ್ಕಕ್ಕಿಂತ ಹೆಚ್ಚು ಹಣ ಹೋದರೂ ಕಾಣುವುದಿಲ್ಲ..

ನನ್ನ ಮೊದಲ ಸಲಹೆ ಏನೆಂದರೆ ಸರಕಾರ ಪ್ರತಿಯೊಂದು ಸರಕಾರಿ ಇಲಾಖೆಗಳಲ್ಲಿ ಇಂತಿಂತಹ ಕೆಲಸಗಳಿಗೆ ಇಂತಿಷ್ಟು ಎಂದು ಸಿಬ್ಬಂದಿಗಳನ್ನು ನಿಗದಿಪಡಿಸಿರುತ್ತದೆ. ನಮ್ಮ ಪಾಲಿಕೆಯಲ್ಲಿ ಪಂಪ್ ಹೌಸ್ ಮತ್ತು ವಾಲ್ ಮೆನ್ ಕೆಲಸಗಳಿಗಾಗಿ ನಿಯಮ ಪ್ರಕಾರ ಇರಬೇಕಾದ ಸಿಬ್ಬಂದಿಗಳ ಸಂಖ್ಯೆ 99. ಆದರೆ ನಮ್ಮ ಪಾಲಿಕೆಯಲ್ಲಿ ಎಷ್ಟು ಜನ ಇದ್ದಾರೆ ಎಂದು ಗೊತ್ತಾದರೆ ನಿಮಗೆ ಆಶ್ಚರ್ಯವಾಗಬಹುದು. ಬರೋಬ್ಬರಿ 287 ಜನ ಈ ಕೆಲಸಕ್ಕೆ ನೇಮಕವಾಗಿದ್ದಾರೆ. ನೀವು ಹೇಗೆ ಲೆಕ್ಕ ಹಾಕಿದರೂ ನಿಯಮಕ್ಕಿಂತ 188 ಜನ ಜಾಸ್ತಿ ಇದ್ದಾರೆ. ನಿಗದಿಗಿಂತ ಹೆಚ್ಚು ಇರುವ ಸಿಬ್ಬಂದಿಗಳಿಗಾಗಿ ತಿಂಗಳಿಗೆ 30 ಲಕ್ಷದ ಎಂಟು ಸಾವಿರ ರೂಪಾಯಿಯಂತೆ ವರ್ಷಕ್ಕೆ ಮೂರು ಕೋಟಿಯ ಅರವತ್ತು ಲಕ್ಷದ 90 ಸಾವಿರ ರೂಪಾಯಿಗಳು ಖರ್ಚಾಗುತ್ತಿವೆ. ಈ ಬಗ್ಗೆ ಅಡಿಟ್ ಮಾಡಿದ ಲೆಕ್ಕ ಪರಿಶೋಧಕರು ತಮ್ಮ ಕಡೆಯಿಂದ ಆಕ್ಷೇಪ ಎತ್ತಿದ್ದಾರೆ. ಆದರೂ ನೀವು ಹೆಚ್ಚಿರುವ ಸಿಬ್ಬಂದಿಗಳನ್ನು ಯಾಕೆ ಕಡಿಮೆ ಮಾಡಿಲ್ಲ ಎಂದು ಪ್ರಶ್ನಿಸಿದೆ. ಈ ವಿಷಯವನ್ನು ನಾನು ಕಳೆದ ಸಭೆಯಲ್ಲೊಮ್ಮೆ ಹೇಳಿದೆ. ಆದರೆ ಅದು ಅನುಷ್ಟಾನಕ್ಕೆ ಬಂದಿರಲಿಲ್ಲ. ನನಗೆ ಹಲವು ಬಾರಿ ಈ ಪಾಲಿಕೆಯವರು ಮಾಡುವ ಸಭೆಗಳು ಕೇವಲ ದಾಖಲೆಗಳಲ್ಲಿ ತೋರಿಸುವುದಕ್ಕೆ ಮಾತ್ರ ಎಂದು ಅನಿಸಿದೆ. ಅದು ನಿಜ ಕೂಡ. ಇವರಿಗೆ ಇಂತಿಂತಹ ಸಭೆ ಅಂದರೆ ಈಗ ನಾನು ಹೇಳುತ್ತಿರುವ ಬಜೆಟ್ ಪೂರ್ವ ಸಭೆ ಮಾಡಲೇಬೇಕು ಎನ್ನುವ ಕಂಡೀಷನ್ ಇದೆ. ಅದಕ್ಕಾಗಿ ಇವರು ಮಾಡುತ್ತಾರೆ. ಜನರು ಬರುವುದು ಬಿಡಿ, ಪಾಲಿಕೆಯ ಅರವತ್ತು ಜನ ಕಾರ್ಪೋರೇಟರ್ ಗಳೇ ಬರುವುದಿಲ್ಲ. ಪ್ರತಿಯೊಬ್ಬ ಕಾರ್ಫೋರೇಟರ್ ವಾರ್ಡಿನಿಂದ ಒಬ್ಬೊಬ್ಬರು ಬಂದರೂ ಅವರವರ ಅಭಿಪ್ರಾಯ ಹೇಳಬಹುದಿತ್ತು. ನಂತರ ನಾನು ನನ್ನ ಎರಡನೇ ಪಾಯಿಂಟ್ ಅನ್ನು ಹೇಳಲು ಶುರು ಮಾಡಿದೆ.

ಹೋರ್ಡಿಂಗ್ ನಲ್ಲಿ ಸೋರಿಕೆಯಾಗುವ ಹಣ…

ಅದು ಹೋರ್ಡಿಂಗ್ಸ್ ವಿಚಾರ. ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀವು ಅಸಂಖ್ಯಾತ ಹೋರ್ಡಿಂಗ್ಸ್ ನೋಡಿರಬಹುದು. ಭಯಂಕರ ದೊಡ್ಡ ದೊಡ್ಡ ಹೋರ್ಡಿಂಗ್ ನೋಡಿ ಆಶ್ಚರ್ಯಗೊಂಡಿರಬಹುದು. ಅದರಲ್ಲಿ ಹಾಕಿರುವ ಜಾಹೀರಾತು ನೋಡಿ ಇಂಪ್ರೆಸ್ ಆಗಿರಬಹುದು. ಆ ಉತ್ಪನ್ನಗಳನ್ನು ಕೊಳ್ಳಬೇಕು ಎಂದು ನಿರ್ಧರಿಸಿರಬಹುದು. ಹೀಗೆ ದೊಡ್ಡ ದೊಡ್ಡ ಹೋರ್ಡಿಂಗ್ಸ್ ಹಾಕಿರುವ ಜಾಹೀರಾತು ಸಂಸ್ಥೆಯವರು ಅಸಲಿಗೆ ಪಾಲಿಕೆಯ ದಾಖಲೆಗಳಲ್ಲಿ ತಾವು ಎಷ್ಟು ದೊಡ್ಡ ಹೋರ್ಡಿಂಗ್ ಹಾಕುತ್ತೇವೆ ಎಂದು ಬರೆದುಕೊಟ್ಟಿದ್ದಾರೋ ಅದರ ನಾಲ್ಕರಷ್ಟು ದೊಡ್ಡದು ಹಾಕಿರುವಂತಹ ಸಾಧ್ಯತೆ ಇರುತ್ತದೆ. ಅನೇಕರು ತಾವು ಖಾಸಗಿ ಜಾಗದಲ್ಲಿ ಹೋರ್ಡಿಂಗ್ಸ್ ಹಾಕುತ್ತೇವೆ ಎಂದು ಬರೆದುಕೊಟ್ಟಿದ್ದಾರೆ. ಅದರ ಪ್ರಕಾರ ಯಾರದ್ದೋ ಜಾಗದಲ್ಲಿ ಒಪ್ಪಂದ ಮಾಡಿ ಅಲ್ಲಿ ಹಾಕುತ್ತೇವೆ ಎಂದು ದಾಖಲೆ ಕೊಟ್ಟಿರುತ್ತಾರೆ. ಆದರೆ ಅಸಲಿಗೆ ಅದು ಸುಳ್ಳಾಗಿರುತ್ತದೆ. ಅವರು ವಾಸ್ತವದಲ್ಲಿ ಸಾರ್ವಜನಿಕ ಜಾಗದಲ್ಲಿಯೇ ತಮ್ಮ ಹೋರ್ಡಿಂಗ್ಸ್ ನಿಲ್ಲಿಸಿರುತ್ತಾರೆ. ಆದರೆ ಹಣ ಜಾಸ್ತಿ ಕಟ್ಟುವುದನ್ನು ತಪ್ಪಿಸುವುದಕ್ಕಾಗಿ ಸುಳ್ಳು ಮಾಹಿತಿ ಕೊಟ್ಟಿರುತ್ತಾರೆ. ಇನ್ನು ಹಲವರು ತಾವು ವಿದ್ಯುತ್ ಸಂಪರ್ಕ ಇಲ್ಲದ ಹೋರ್ಡಿಂಗ್ ಗಾಗಿ ಅನುಮತಿ ಪಡೆದುಕೊಂಡಿರುತ್ತಾರೆ. ಆದರೆ ರಾತ್ರಿ ಹೊತ್ತು ನೀವು ಒಂದು ರೌಂಡ್ ನೋಡಿ ಬಂದರೆ ಅಂತಹ ಅನೇಕ ಹೋರ್ಡಿಂಗ್ಸ್ ಗಳು ಮಿರಮಿರನೆ ಮಿಂಚುತ್ತಿರುತ್ತವೆ. ಇದೆಲ್ಲಾ ಪಾಲಿಕೆಗೆ ಗೊತ್ತಿರುತ್ತದೆಯಾ? ಖಂಡಿತ ಗೊತ್ತಿರುತ್ತದೆ. ಆದರೆ ಇವರು ಏನೂ ಮಾಡಲು ಹೋಗುವುದಿಲ್ಲ. ಇದರಿಂದ ಏನಾಗುತ್ತದೆ ಎಂದರೆ ಪಾಲಿಕೆಗೆ ಬರಬೇಕಾದ ಆದಾಯ ಸೋರಿ ಹೋಗುತ್ತದೆ. ಅಧಿಕಾರಿಗಳು ಗುಟುರು ಹಾಕಿದರೆ ಜಾಹೀರಾತು ಏಜೆನ್ಸಿಯವರ ಕವರ್ ಸಂಬಂಧಪಟ್ಟವರಿಗೆ ತಲುಪುತ್ತದೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search