ಈ ಬಾರಿಯ ಬಜೆಟ್‍ನಲ್ಲೂ ಕುಮಾರಸ್ವಾಮಿಯವರು ಕರಾವಳಿಗೆ ಮಲತಾಯಿ ಧೋರಣೆ ಮಾಡಿದ್ರಾ?!
ಸರ್ಕಾರದ ಕಿತ್ತಾಟದ ನಡುವೆಯೂ ಅಬ್ಬಾ ಅಂತೂ ಇಂತೂ ಕುಮಾರಸ್ವಾಮಿಯವರು ಬಜೆಟ್ ಮಂಡಿಸಿಯೇ ಬಿಟ್ಟರು.. ಬಜೆಟ್ ಆರಂಭಿಸುವ ಮೊದಲೇ ರಾಜ್ಯದ ಜನತೆ ಕುಮಾರಸ್ವಾಮಿ ವಿರುದ್ಧ ಬೇಸರ ವ್ಯಕ್ತಪಡಿಸಿಕೊಂಡಿದ್ದರು. ಯಾಕೆಂದರೆ ಈ ಹಿಂದೆ ಬಜೆಟ್ ಮಂಡನೆಯಲ್ಲಿ ಆಶ್ವಾಸನೆ ಕೊಟ್ಟ ರೀತಿಯಲ್ಲಿ ಯಾವೂದೂ ಫಲಿಸಿಲ್ಲ.. ಈ ಬಾರಿಯಾದರೂ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಬೇಡಿ ಎಂದು ಇಡೀ ರಾಜ್ಯದ ಜನತೆ ಕುಮಾರ ಸ್ವಾಮಿಯರಿಗೆ ಛೀಮಾರಿ ಹಾಕಿತ್ತು. ಲೋಕಸಭಾ ಚುನಾವಣೆ ಹತ್ತಿರ ಬರುತಿದ್ದು ಈ ಬಾರಿಯಾದರೂ ರಾಜ್ಯದ ಜನತೆಗೆ ಹೆಚ್ಚಿನ ಸೌಲಭ್ಯ ನೀಡುತ್ತೆ ಎಂದು ಜನರು ನಿರೀಕ್ಷಿಸಿದ್ದೇ ನಿರೀಕ್ಷಿಸಿದ್ದು.. ಆದರೆ ಕುಮಾರಸ್ವಾಮಿಯವರು ಮತ್ತೆ ಹಳೇ ಛಾಳಿಯನ್ನು ಮುಂದುವರಿಸಿದ್ದಾರೆ. ಬಜೆಟ್ ನಲ್ಲಿ ತಮಗೆ ಯಾವ ಕ್ಷೇತ್ರ ಬೇಕೋ ಅಲ್ಲಿಗೆ ಹೆಚ್ಚಿನ ಒತ್ತು ನೀಡಿ ಕೆಲವೊಂದು ಕ್ಷೇತ್ರಕ್ಕೆ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಮತ್ತೆ ಮತ್ತೆ ಕೇಳಿಬರುತ್ತಿದೆ.
ಅದರಲ್ಲೂ ಕರಾವಳಿಗಂತೂ ಮಲತಾಯಿ ಧೋರಣೆ ಮಾಡುತ್ತಿದ್ದಾರೆಂದನಿಸುತ್ತಿದೆ. ಕಳೆದ ಬಜೆಟ್‍ನಲ್ಲೂ ಮಂಗಳೂರಿಗೆ ನಿರೀಕ್ಷಿಸಿದ ಯಾವುದೇ ಸೌಲಭ್ಯವೂ ದೊರಕಿಲ್ಲ. ಇದು ಇಡೀ ಕರಾವಳಿ ಜನತೆಗೆ ಬೇಸರ ತಂದಿದೆ. ಕರಾವಳಿಯನ್ನು ಗಣನೆಗೆ ತೆಗೆದುಕೊಂಡರೆ ಯವುದೇ ಟ್ಯಾಕ್ಸ್ ವಿಚಾರದಲ್ಲೂ ಸರ್ಕಾರಕ್ಕೆ ಮೋಸ ಮಾಡದೆ ಆಯಾ ಸಮಯದಲ್ಲಿ ಟ್ಯಾಕ್ಸ್ ಕಟ್ಟುತ್ತಾರೆ, ಅದಲ್ಲದೆ ವಿದ್ಯುತ್ ಬಿಲ್‍ಗಳನ್ನು ಆಯಾ ಸಮಯಕ್ಕೆ ಸರಿಯಾಗಿ ಕಟ್ಟುತ್ತಾರೆ… ಹೀಗಾಗಿ ರಾಜ್ಯಕ್ಕೆ ಕರಾವಳಿ ಜನರಿಂದ ಇಲ್ಲಿಯವರೆಗೆ ಯಾವುದೇ ನಷ್ಟವಾಗದೇ ಲಾಭವೇ ತಂದು ಕೊಟ್ಟಿದೆ. ಆದರೂ ಕುಮಾರ ಸ್ವಾಮಿ ಸರ್ಕಾರ ಮಾತ್ರ ಹೋದ ಬಜೆಟ್‍ನಲ್ಲೂ ಕರಾವಳಿಗರನ್ನು ನಿರ್ಲಕ್ಷ್ಯಿಸುವ ಮೂಲಕ ನಿಜಕ್ಕೂ ಕರಾವಳಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ. ಕರಾವಳಿ ಭಾಗದಲ್ಲಿ ಏಳು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಧಿಕಾರಕ್ಕೇರಿರುವುದರಿಂದ ಈ ಧೋರಣೆಯೋ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅನುದಾನ ಭಾಗ್ಯವಿಲ್ಲ, ಸರಕಾರಿ ವೈದ್ಯಕೀಯ ಕಾಲೇಜಿಲ್ಲ, ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಪೆÇ್ರೀತ್ಸಾಹಕ ಯೋಜನೆಯಿಲ್ಲ…
ಇದು ಸಮ್ಮಿಶ್ರ ಸರಕಾರದ ಮಹತ್ವಕಾಂಕ್ಷೆಯ ಬಜೆಟ್. ಅದರಲ್ಲೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರಾವಳಿಗೆ ಉತ್ತಮ ಕೊಡುಗೆಗಳು ಸಿಗಬಹುದೆನ್ನುವ ನಿರೀಕ್ಷೆಗಳು ಹುಸಿಯಾಗಿವೆ. 1997ರಲ್ಲಿ ಉಡುಪಿ ಜಿಲ್ಲೆಯಾದರೂ 1967ರಿಂದ ಇರುವ ಬೋರ್ಡ್(ತಾಲೂಕು) ಆಸ್ಪತ್ರೆ 21 ವರ್ಷಗಳಿಂದ ಕೇವಲ ಫಲಕದಲ್ಲಿ ಜಿಲ್ಲಾಸ್ಪತ್ರೆಯಾಗಿದ್ದು, ಸಮ್ಮಿಶ್ರ ಸರಕಾರದಲ್ಲೂ ಮೇಲ್ದರ್ಜೆಗೇರುವ ಭಾಗ್ಯ ಸಿಗದೆ ಅಧಿಕಾರಿಗಳು, ಸಚಿವರು, ಸರಕಾರದ ಇಚ್ಛಾಶಕ್ತಿ ಕೊರತೆಗೆ ಸಾಕ್ಷಿಯಾಗಿದೆ. ಆದರೆ ಇದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ತಮಗೆ ಇಷ್ಟ ಬಂದ ನಡೆದುಕೊಂಡಿದ್ದಾರೆ ಕುಮಾರ ಸ್ವಾಮಿಯವರು…
ಈ ಬಾರಿಯ ಬಜೆಟ್ ಮಂಡನೆ ಮಾಡುವ ಮೂಲಕ ಇಡೀ ರಾಜ್ಯದ ಅಭಿವೃದ್ಧಿ ಮಾಡುತ್ತೀರಿ ಎಂದು ನಂಬಿದ್ದ ಜನರಿಗೆ ನೀವು ಕೊಟ್ಟಿದ್ದು ಏನು ಎಂಬುವುದು ಯೋಚಿಸಿ ಕುಮಾರಸ್ವಾಮಿಯವರೇ.. ಕೇವಲ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಅಭಿವೃದ್ಧಿಯೇ ನಿಮಗೆ ಮುಖ್ಯವಾಯಿತು. ಯಾಕೆಂದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡನೆ ಮಾಡಿದ ಬಜೆಟ್‍ನಿಂದ ರಾಜ್ಯದ ಅಭಿವೃದ್ಧಿ ಅಥವಾ ಹಿಂದೂಗಳ ಅಭಿವೃದ್ಧಿಗೆ ಯಾವುದೇ ಯೋಜನೆ ಕೊಟ್ಟಿಲ್ಲ ಮತ್ತು ರೈತರ ಸಾಲಮನ್ನಾ ಮಾಡುತ್ತೇನೆ ಎಂದ ಕುಮಾರಸ್ವಾಮಿ ಈ ಬಾರಿಯೂ ತಮ್ಮ ಮಾತು ಮರೆತಿದ್ದಾರೆ. ರಾಜ್ಯದ ಜನರ ನಿರಾಸೆಯನ್ನುಂಟು ಮಾಡುವ ಮೂಲಕ ಬೋಗಸ್ ಬಜೆಟ್ ಮಂಡನೆ ಮಾಡಿದ್ದು, ರಾಜ್ಯಾದ್ಯಂತ ಭಾರೀ ಟೀಕೆಗೆ ಗುರಿಯಾಗಿದ್ದಾರೆ.!
ಅದಲ್ಲದೆ, ಈ ಬಜೆಟ್ ಅಂಶ ಗಮನಿಸಿದರೆ ಇದೊಂದು ಹಿಂದೂ ವಿರೋಧಿ ಬಜೆಟ್ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಯಾಕೆಂದರೆ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಮುಸ್ಲಿಮರ ಸಮಗ್ರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಿದ್ದು, ಬರೋಬ್ಬರಿ 400 ಕೋಟಿ ಮೀಸಲಿಟ್ಟಿದ್ದಾರೆ ಮತ್ತು ಮುಸ್ಲಿಮರ ಖಬರ್‍ಸ್ಥಾನ ಅಭಿವೃದ್ಧಿಗೆ 10 ಕೋಟಿ ಮೀಸಲಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕ್ರೈಸ್ತರ ಮೂಲಸೌಕರ್ಯಕ್ಕಾಗಿ 200 ಕೋಟಿ ಮೀಸಲಿಟ್ಟಿದ್ದಾರೆ. ಆದರೆ ಹಿಂದೂಗಳಿಗೆ ಎಂದು ಎಲ್ಲೂ ಪ್ರಸ್ತಾಪ ಮಾಡದ ಮುಖ್ಯಮಂತ್ರಿಗಳು ಬಜೆಟ್‍ನಲ್ಲೂ ತಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.! ಬಜೆಟ್‍ನಲ್ಲಿ ಮುಸ್ಲಿಮರಿಗೆ ಮತ್ತು ಕ್ರೈಸ್ತರಿಗೆ ಪ್ರತ್ಯೇಕ ಅನುದಾನ ನೀಡಿದ ಮುಖ್ಯಮಂತ್ರಿಗಳು ಹಿಂದೂಗಳಿಗೆ ಯಾವುದೇ ಯೋಜನೆ ಘೋಷಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿ. ಚುನಾವಣೆ ಹತ್ತಿರ ಬರುವಾಗ ನಿಮಗೆ ಎಲ್ಲಾ ಧರ್ಮದವರೂ ಬೇಕಾಗುತ್ತೆ.. ಆದರೆ ಅಧಿಕಾರವೇರಿದ ಮೇಲೆ ನೀವು ನಡೆದುಕೊಳ್ಳುವ ರೀತಿ ನಿಜಕ್ಕೂ ಬೇಸರ ತಂದಿದೆ. ತಾವೊಬ್ಬ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಗೆ ಸಮಾನ ರೀತಿಯಲ್ಲಿ ನೋಡುವುದನ್ನು ಇನ್ನಾದರೂ ಕಲಿಯಿರಿ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಾಕಿ ರಾಜ್ಯದ ಜನತೆಯನ್ನು ಮತ್ತಷ್ಟು ನಿರ್ಲಕ್ಷ್ಯ ಮಾಡಬೇಡಿ.. ಮುಂದೆ ಅದರ ಪರಿಣಾಮ ನೀವೇ ಅನುಭವಿಸಬೇಕಾಗುತ್ತದೆ.
Leave A Reply