• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬಂದ್ ಎಡಪಕ್ಷಗಳಿಗೆ ಫ್ಯಾಶನ್ ಆಗಿರುವುದು ಜನರಿಗೆ ಗೊತ್ತಾಗಿದೆ!!

Hanumantha Kamath Posted On January 8, 2020
0


0
Shares
  • Share On Facebook
  • Tweet It

ಬಂದ್ ಯಶಸ್ವಿಯಾದರೆ ಆಡಲು ಬಂದ್ದಿದ್ವಿ. ಅದೇ ಬಂದ್ ಫ್ಲಾಪ್ ಆದರೆ ನೋಡಲು ಬಂದ್ದಿದ್ವಿ ಎನ್ನುವುದು ಎಡಪಕ್ಷಗಳ ಸಿದ್ಧಾಂತ. ಇವತ್ತು ಕೂಡ ಹಾಗೆ ಆಗಿದೆ. ವಿವಿಧ ಬೇಡಿಕೆಗಳನ್ನು ಇಟ್ಟು ಕಾರ್ಮಿಕ ಸಂಘಟನೆಗಳು ಬಂದ್ ಕರೆ ಕೊಟ್ಟಿದ್ದವು. ಹೇಳಲಿಕ್ಕೆ 250-350 ಸಂಘಟನೆಗಳು ಬಂದ್ ಗೆ ಬೆಂಬಲ ಕೊಟ್ಟಿವೆ ಎಂದು ಎಡಪಕ್ಷಗಳ ನಾಯಕರು ಹೇಳುತ್ತಾರೆ. ಆದರೆ ನೋಡಿದ್ರೆ ಇವತ್ತು ಮಂಗಳೂರಿನಲ್ಲಿ ಬಂದ್ ಆಗಿರುವ ಒಂದೇ ಒಂದು ಅಂಗಡಿ ಕೂಡ ಕಾಣಿಸಿಲ್ಲ. ಬಸ್ಸುಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿವೆ. ರಿಕ್ಷಾಗಳು ಓಡಾಡುತ್ತಿವೆ. ಹಾಗಾದರೆ ಎಡಪಕ್ಷಗಳು ಬಂದ್ ಕರೆ ಕೊಟ್ಟಿರುವುದು ಯಾರಿಗೆ? ಈಗ ಬಂದ್ ಅಲ್ಲ, ಮುಷ್ಕರ ಎಂದು ಅವರು ವರಸೆ ಬದಲಿಸಬಹುದು. ಆದರೆ ಮುಷ್ಕರಕ್ಕಾದರೂ ಬಂದ್ ಜನವೆಷ್ಟು? ವಿಷಯ ಏನೆಂದರೆ ಈ ಬಂದ್ ಕರೆ ಕೊಡುವುದು ಔಟ್ ಡೇಟೆಡ್ ಆಗಿದೆ. ಯಾರಿಗೂ ಬಂದ್ ಬೇಕಾಗಿಲ್ಲ. ಅದರಲ್ಲಿಯೂ ಅಗತ್ಯವೇ ಇಲ್ಲದ ವಿಷಯಗಳಲ್ಲಿ ಬಂದ್ ಮಾಡುವುದು ಜನರಿಗೆ ವಾಕರಿಕೆ ಬಂದಿದೆ. ಅಷ್ಟಕ್ಕೂ ನೀವು ಒಮ್ಮೆ ಅವರು ಬಂದ್ ಗೆ ಕೊಟ್ಟಿರುವ ಕಾರಣಗಳನ್ನು ನೋಡಿ. ಜಿಡಿಪಿ ಇಳಿದಿದೆ. ಉದ್ಯೋಗಗಳು ಕಡಿಮೆ ಆಗಿದೆ ಇಂತದ್ದೇ ಕಾರಣಗಳು. ನಾನು ಆ ಕಾರಣಗಳು ಸರಿ ಇಲ್ಲ ಎನ್ನುತ್ತಿಲ್ಲ. ಆದರೆ ಈ ಕಾರಣಗಳನ್ನು ಎಡಪಕ್ಷಗಳು ನಿತ್ಯ ಕೇಂದ್ರ ಸರಕಾರದ ವಿರುದ್ಧ ಅಸ್ತ್ರವಾಗಿ ಬಳಸುತ್ತಾ ಇವೆ. ಆದ್ದರಿಂದ ಮತ್ತೆ ಅದೇ ವಿಷಯಕ್ಕೆ ಬಂದ್ ಕೊಡುವುದು ಯಾಕೆ? ಇನ್ನು ಬಂದ್ ಗೆ ಕೈ ಜೋಡಿಸಿರುವ ಬ್ಯಾಂಕು ಸಂಘಟನೆಗಳು ಬಂದ್ ಗೆ ಇಳಿದರೂ, ಇಲ್ಲದಿದ್ದರೂ ಬ್ಯಾಂಕು ಸಿಬ್ಬಂದಿಗಳು ಕೆಲಸ ಮಾಡುವುದು ಅಷ್ಟರಲ್ಲಿಯೇ ಇದೆ. ಬ್ಯಾಂಕುಗಳ ಸಿಬ್ಬಂದಿಗಳಿಗೆ ಇರುವಷ್ಟು ವೇತನ, ಸೌಲಭ್ಯ ಬೇರೆ ಯಾರಿಗೆ ಇದೆ ಎಂದು ನೋಡಿ.
ಬರುವುದೇ ಹತ್ತು ಗಂಟೆಗೆ, ಹತ್ತೂವರೆಗೆ ಕಾಫಿ, ಮಧ್ಯದಲ್ಲಿ ಫ್ಯಾನ್, ಎಸಿಯ ತಂಪಿನಲ್ಲಿ ಕೆಲಸ ಮಾಡಿದಂತೆ ಮಾಡಿ ಊಟಕ್ಕೆ ಬ್ರೇಕ್. ಝೀರೋ ಬಡ್ಡಿ ಸಾಲ, ವರ್ಷಕ್ಕೆ ಟೂರ್, ಫ್ರೀ ಮೆಡಿಕಲ್ ಎಲ್ಲಾ ಸೇರಿಸಿದರೆ ಬ್ಯಾಂಕು ಕೆಲಸ ಎಂದರೆ ಅದೊಂದು ರೀತಿಯಲ್ಲಿ ಸ್ವರ್ಗದಲ್ಲಿ ಹಾಸಿಗೆ ಹಾಸಿದಂತೆ. ಅಂತವರು ಇನ್ನು ಸೌಲಭ್ಯಕ್ಕಾಗಿ ಹೋರಾಟಕ್ಕೆ ಇಳಿಯುತ್ತಾರೆ ಎಂದರೆ ಒಂದು ರೂಪಾಯಿ ಕೊಡಲ್ಲ, ಕೊಟ್ಟದ್ದೇ ಜಾಸ್ತಿಯಾಗಿದೆ, ಬೇಕಿದ್ರೆ ಮಾಡಿ, ಇಲ್ಲದಿದ್ದರೆ ರೈಟ್ ಹೇಳಿ ಎಂದು ಹೇಳಿಬಿಡಬೇಕು.
ಒಂದು ಪ್ರತಿಭಟನೆ ವಿಫಲವಾಗುವುದು ಸಂಘಟಕರ ಬಳಿ ಸರಿಯಾದ ವಿಷಯ ಇಲ್ಲದೇ ಇರುವುದರಿಂದ. ಇವತ್ತಿಗೆ ಎಷ್ಟೋ ಕೆಲಸಗಳಿಗೆ ಜನ ಸಿಗದೇ ಮಾಲೀಕರು ಸಂಕಷ್ಟ ಅನುಭವಿಸುತ್ತಾರೆ. ಕೃಷಿಯಲ್ಲಿ ದುಡಿಯಲು ಮನಸ್ಸಿಲ್ಲದೆ ಯುವಕರು ನಗರಕ್ಕೆ ಬರುತ್ತಿದ್ದಾರೆ. ಅಲ್ಲಿ ಕೃಷಿ ಜಮೀನುಗಳು ಪಾಲು ಬೀಳುತ್ತಿವೆ. ಹಾಗಂತ ಉದ್ಯೋಗಗಳು ಕಡಿಮೆಯಾಗಲು ಮತ್ತೊಂದು ಕಾರಣ ಈಗ ರೂಪಾಯಿ ಅಪಮೌಲ್ಯವಾಗಿರುವುದರಿಂದ ಕೆಲವು ಬ್ಲ್ಯಾಕ್ ಮನಿಯಿಂದ ಓಡುತ್ತಿದ್ದ ಕಾರ್ಖಾನೆಗಳು ಮುಚ್ಚಿರಬಹುದು. ಜಿಎಸ್ ಟಿಯಿಂದ ವ್ಯಾಪಾರಿಗಳು ಅಗತ್ಯಕ್ಕೆ ತಕ್ಕಷ್ಟೇ ದಾಸ್ತಾನು ಮಾಡುತ್ತಾ ಇರಬಹುದು. ಇದೆಲ್ಲದರಿಂದ ಉದ್ಯೋಗಗಳು ಕಡಿಮೆ ಆಗಿರಬಹುದು. ಆದರೆ ಸರಕಾರಗಳು ಈ ಸಮಸ್ಯೆಗಳು ಆಗಲಿ ಎಂದು ಬಯಸಿ ಕಾನೂನು ತರುವುದಿಲ್ಲ. ಕೆಲವೊಮ್ಮೆ ದೇಶದಲ್ಲಿ ಆರ್ಥಿಕ ಶಿಸ್ತು ತರಲು ಕೆಲವು ನಿಯಮಗಳನ್ನು ತರಬೇಕಾಗುತ್ತದೆ. ಆಗ ಒಂದಿಷ್ಟು ಸಮಯ ವ್ಯವಸ್ಥೆ ಹೆಚ್ಚು ಕಡಿಮೆ ಆಗುತ್ತದೆ. ಆದರೆ ಅದೆಲ್ಲ ಕ್ಷಣಿಕ. ಅದೆಲ್ಲ ಗೊತ್ತಿರುವುದರಿಂದ ಜನ ಎಡಪಕ್ಷಗಳ ಹೋರಾಟಕ್ಕೆ ಬೆಂಬಲ ಕೊಡುತ್ತಿಲ್ಲ. ಅದಕ್ಕೆ ಬಂದ್ ನೀರಸವಾಗಿದೆ. ಕರಾವಳಿಯಲ್ಲಿ ಎಡಪಕ್ಷಗಳಿಗೆ ಅಂತಹ ಬೆಂಬಲ ಇಲ್ಲದೇ ಇರಬಹುದು. ಆದರೆ ಕಾರ್ಮಿಕರು ಎಲ್ಲಾ ಕಡೆ ಕಾರ್ಮಿಕರೇ ಅಲ್ವಾ? ಅವರ್ಯಾಕೆ ಬೆಂಬಲ ಕೊಟ್ಟಿಲ್ಲ. ವಿಷಯ ಏನೆಂದರೆ ಮಂಗಳೂರಿನ ಜನ ಪ್ರಜ್ಞಾವಂತರು. ಅವರಿಗೆ ಬಂದ್, ಮುಷ್ಕರ ಎಲ್ಲಾ ನೋಡಿ ಸಾಕಾಗಿದೆ. ಸರಿಯಾಗಿ ದುಡಿದರೆ ಮಾತ್ರ ನಾಲ್ಕು ಕಾಸು ಎನ್ನುವುದು ಗೊತ್ತಿದೆ. ಇನ್ನು ಎಡಪಕ್ಷಗಳ ಹೋರಾಟದ ಹಿಂದೆ ಅದರ ನಾಯಕರಿಗೆ ಮಾತ್ರ ಲಾಭ ಆಗುತ್ತದೆ ಎಂದು ಅರಿವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೋದಿ ಕೇಂದ್ರದಲ್ಲಿ ಇರುವುದರಿಂದ ವಿಶ್ವಾಸವಿದೆ !!
0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Hanumantha Kamath June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Hanumantha Kamath June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search