ಕೋರೋನಾ ಭಾರತದಲ್ಲಿ ಮಾತ್ರ ಇದ್ದಿದ್ದರೆ ಕಥೆಯೇ ಬೇರೆ ಇತ್ತು!!
ಶುಕ್ರವಾರದಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಗತ್ಯ ಇದ್ದರೆ ಮಾತ್ರ ಬರುವಂತೆ ಪಾಲಿಕೆಯ ಜಂಟಿ ಆಯುಕ್ತರು ಸೂಚನೆ ಹೊರಡಿಸಿದ್ದಾರೆ. ಸರಿಯಾಗಿ ಹೇಳಬೇಕಾದರೆ ನಾಗರಿಕರು ಕೆಲಸವಿದ್ದಾಗ ಅಗತ್ಯವಾಗಿ ಬರಲೇಬೇಕಾಗುತ್ತದೆ. ಹಾಗಿರುವಾಗ ಅವರನ್ನು ತಡೆ ಹಿಡಿದ ಹಾಗೆ ಈ ನಿಯಮ ತಂದಿರುವುದು ತಪ್ಪು. ಬೇಕಾದರೆ ಪಾಲಿಕೆಯ ಬಾಗಿಲಿನಲ್ಲಿ ಥರ್ಮಲ್ ಕಂಪ್ಲಾಟ್ ವ್ಯವಸ್ಥೆಯನ್ನು ಮಾಡಲಿ. ಅದರಲ್ಲಿ ಪರಿಶೀಲಿಸಿ ಒಳಗೆ ಕಳುಹಿಸಲಿ. ಇನ್ನು ಇವರು ಹೋಟೇಲುಗಳಲ್ಲಿ ಸೊಡಿಯಂ ಹೈಪೋಕ್ಲೋರೈಡ್ ಹಾಕಿ ಬಾಗಿಲು ಹಿಡಿಕೆ, ಟೇಬಲ್ ಎಲ್ಲಾ ಸ್ವಚ್ಚ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಆದರೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳ ಬಾಗಿಲಿನ ಹಿಡಿಕೆಯನ್ನು ಸ್ವಚ್ಚ ಮಾಡುವವರು ಯಾರು?
ದೇವಸ್ಥಾನಗಳಲ್ಲಿ ಜಾತ್ರೆ ಸರಳವಾಗಿ ಆಚರಿಸಲಾಗುತ್ತಿದೆ. ಮದುವೆ, ಉಪನಯನ, ಗೃಹಪ್ರವೇಶ ಸಹಿತ ಶುಭ ಸಮಾರಂಭಗಳು ಕೂಡ ಸರಳವಾಗಿ ಆಚರಿಸಲಾಗುತ್ತದೆ. ರಸ್ತೆಗಳಲ್ಲಿ ಜನ ಸಂಚಾರ ಕಡಿಮೆ. ಬಹುಶ: ಹೀಗೆ ಆದರೆ ಮುಂದಿನ ವಾರದಿಂದ ಬಸ್ಸುಗಳ ಸಂಚಾರ ಕೂಡ ಗಣನೀಯವಾಗಿ ಕಡಿಮೆಯಾಗಲಿದೆ. ಮಂಗಳೂರಿನಿಂದ ಪಕ್ಷಿಕೆರೆ ಕಡೆಗೆ ಹೋಗುವ ಕೆಲವು ಬಸ್ಸುಗಳು ಈಗಾಗಲೇ ತಮ್ಮ ಪ್ರಯಾಣವನ್ನು ನಿಲ್ಲಿಸಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಉಳಿದ ಬಸ್ಸುಗಳ ಪರಿಸ್ಥಿತಿ ಕೂಡ ಹೀಗೆ ಆಗಬಹುದು. ಕಾರಣ ಮಾಲ್ ಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಶಾಲೆ, ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಮತ್ತು ಅನೇಕ ಸಂಸ್ಥೆಗಳು ಶಟಲ್ ಎಳೆದುಕೊಂಡಿರುವುದರಿಂದ ಸದ್ಯ ಬಸ್ಸುಗಳಿಗೂ ಜನವಿಲ್ಲ. ಇನ್ನು ಕೆಲವು ಜನ ಬಸ್ಸುಗಳಲ್ಲಿ ಹೋದರೆ ರಿಸ್ಕ್ ಎಂದು ಸ್ವಲ್ಪ ಜಾಸ್ತಿ ಪೆಟ್ರೋಲ್, ಡಿಸೀಲ್ ಗೆ ಖರ್ಚು ಮಾಡಿದರೂ ಪರವಾಗಿಲ್ಲ ಎಂದು ಸ್ಕೂಟರ್, ಕಾರು, ಇತರ ವಾಹನಗಳನ್ನು ಹೊರಗೆ ತೆಗೆಯುತ್ತಿದ್ದಾರೆ. ಸದ್ಯ ಹೆಚ್ಚು ಬೇಡಿಕೆ ಇರುವುದು ಮಾಸ್ಕ್ ಗಳಿಗೆ ಮಾತ್ರ. ಹಿಂದೆ ವೈದ್ಯರು ಮಾತ್ರ ಧರಿಸುತ್ತಿದ್ದ ಮಾಸ್ಕ್ ಗಳನ್ನು ಈಗ ರಸ್ತೆಯಲ್ಲಿ ಇಳಿಯುತ್ತಿರುವ ಪ್ರತಿಯೊಬ್ಬ ಧರಿಸಲು ಹೊರಟಿದ್ದಾನೆ. ಇದು ಹೀಗೆ ಮುಂದುವರೆದರೆ ವೈದ್ಯರಿಗೆ ಮತ್ತು ಅವರ ಸಹಾಯಕ ಸಿಬ್ಬಂದಿಗಳಿಗೆ ಸೂಕ್ತ ಗುಣಮಟ್ಟದ ಮಾಸ್ಕ್ ಗಳ ಕೊರತೆ ಸೃಷ್ಟಿಯಗಲಿದೆ. ಇದು ವೈದ್ಯಕೀಯ ಲೋಕದ ನಿಜವಾದ ಕಳಕಳ.
ಇದನ್ನು ನಾರಾಯಣ ಹೃದಯಾಳಯದ ಡಾ.ದೇವಿಪ್ರಸಾದ್ ಶೆಟ್ಟಿಯವರ ವ್ಯಕ್ತಪಡಿಸಿದ್ದಾರೆ. ಜನರು ಯಾವುದೇ ವಸ್ತುಗಳನ್ನು ಮುಟ್ಟಿ ನಂತರ ಆಹಾರ ಸೇವಿಸುವ ಮೊದಲು ಕೈಗಳಿಗೆ ಸ್ಯಾನಿಟೈಸರ್ ಬಳಸಿ ಸರಿಯಾಗಿ ಸ್ವಚ್ಚ ಮಾಡಿದರೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವುದು ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿ ಕೆಲವರಿಗೆ ಒಂದು ಅಭ್ಯಾಸವಿದೆ. ನಿಮಿಷಕ್ಕೆ ಹತ್ತು ಸಲ ಕೈಯನ್ನು ಮುಖದ ಬಳಿ ತೆಗೆದುಕೊಂಡು ಹೋಗುವುದು, ಕಣ್ಣಿನ ಅಂಚಿನಲ್ಲಿರುವ ಕಸ ತೆಗೆಯುವುದು, ಕೆಲವರು ಕೈ ಬೆರಳನ್ನು ಮೂಗಿನ ಒಳಗೆ ಹಾಕುವುದರಿಂದ ಹಿಡಿದು ಕಿವಿಯೊಳಗಿನ ಕಸವನ್ನು ತೆಗೆಯುವ ತನಕ ಬಿಂದಾಸ್ ಆಗಿ ಬಳಸುತ್ತಾರೆ. ಇದರಿಂದ ಆಗುವ ತೊಂದರೆ ಏನೆಂದರೆ ಕೈಯ ಬೆರಳುಗಳ ನಡುವೆ ವೈರಸ್ ಸಿಲುಕಿಕೊಂಡಿದ್ದರೆ ಅದು ಸುಲಭವಾಗಿ ನಮ್ಮ ಕೈಯಿಂದ ನವರಂಧ್ರಗಳಲ್ಲಿ ಯಾವುದಾದರೂ ಒಂದು ರಂಧ್ರದಿಂದ ದೇಹದ ಒಳಗೆ ಪ್ರವೇಶ ಪಡೆಯುತ್ತದೆ. ಆದ್ದರಿಂದ ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಇಂತಹ ಒಂದು ಸಿಂಪಲ್ ಪರಿಹಾರ ಇದ್ದಾಗ ಅದೆಲ್ಲವನ್ನು ಬಿಟ್ಟು ನಾವು ಮಾಸ್ಕ್ ಧರಿಸಿ ಓಡಾಡಿದರೆ ಏನು ಆಗುತ್ತದೆ. ಆತಂಕ ನಮ್ಮ ಕೈಗಳಲ್ಲಿಯೇ ಇದೆ. ವಿಪತ್ತು ನಮ್ಮದು ನಾವೇ ಸೃಷ್ಟಿಕೊಳ್ಳುತ್ತಿದ್ದೇವೆ. ಹೀಗಿರುವಾಗ ರಾಹುಲ್ ತರದವರು ಮೋದಿಯಂತವರನ್ನು ಬೈದರೆ ಏನು ಪ್ರಯೋಜನ?
ಇನ್ನು ವೈರಸ್ ವಿರುದ್ಧ ಹೋರಾಡಲು ಎಲ್ಲಾ ಧರ್ಮದವರು ಕೂಡ ಮುಂದೆ ಬರಬೇಕು. ಕೆಲವು ದಿನ ಪ್ರಾರ್ಥನೆ ಮನೆಯಲ್ಲಿಯೇ ಮಾಡಿದರೆ ತೊಂದರೆ ಇಲ್ಲ. ದೇವರು ಎಲ್ಲಾ ಕಡೆ ಇದ್ದಾನೆ. ಅದನ್ನು ಬಿಟ್ಟು ನಾವು ಅಲ್ಲಿಯೇ ಮಾಡಬೇಕು ಎಂದು ಹಟ ಮಾಡಿದರೆ ಅಪಾಯ ಜಾಸ್ತಿ. ಕೋರೋನಾ ಇಡೀ ಪ್ರಪಂಚವನ್ನು ಕಾಡುತ್ತಿರುವುದರಿಂದ ನಮ್ಮ ಪ್ರಧಾನಿ ಮೋದಿ ಸೇಫ್. ಇಲ್ಲದಿದ್ದರೆ ಸಿಎಎ ವಿರುದ್ಧದ ಹೋರಾಟವನ್ನು ಹಣಿಯಲು ಮೋದಿಯೇ ಕೋರೋನಾ ವೈರಸ್ ನಮ್ಮ ನಡುವೆ ಬಿಟ್ಟಿದ್ದಾರೆ ಎಂದು ಸಿಎಎ ವಿರೋಧಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದರು. ಈ ಮೂಲಕ ಮೋದಿಯವರ ಹೆಸರು ಇಂತಹ ವಿಷಯಗಳಲ್ಲಿ ಎಳೆಯಲು ವಿರೋಧಿಗಳು ಹೇಸುತ್ತಿರಲಿಲ್ಲ!!
Leave A Reply