• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಡ್ವಾಣಿಯವರನ್ನು ಮುಂದಿಟ್ಟು ಮೋದಿ ರಾಮಮಂದಿರ ಶಿಲಾನ್ಯಾಸ!!

Hanumantha Kamath Posted On July 21, 2020


  • Share On Facebook
  • Tweet It

ಕೊನೆಗೂ ಕೋಟ್ಯಾಂತರ ಹಿಂದೂಗಳ ಆಶಯದಂತೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭಗವಂತ ಶ್ರೀ ರಾಮಚಂದ್ರ ದೇವರ ಭವ್ಯ ಮಂದಿರ ನಿರ್ಮಾಣವಾಗಲು ದಿನಗಣನೆ ಆರಂಭವಾಗಿದೆ. ಇದೇ ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಿಲಾನ್ಯಾಸದಲ್ಲಿ ಭಾಗವಹಿಸಲಿದ್ದಾರೆ. ನಿಮಗೆ ಒಂದು ಫೋಟೋ ನೆನಪಿರಬಹುದು. ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವ ಭಾರತೀಯ ಜನತಾ ಪಾರ್ಟಿಯ ಅಜೆಂಡಾವನ್ನು ರಾಷ್ಟ್ರದ ಮನೆಮನೆಗಳಿಗೆ ತಲುಪಿಸಲು ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿಯವರು ರಥಯಾತ್ರೆ ಮಾಡಿದರಲ್ಲ, ಆ ರಥಯಾತ್ರೆಯಲ್ಲಿ ಅಡ್ವಾಣಿಯ ಹಿಂದೆ ಮುಂದೆ ಮೈಕ್, ಸ್ಪೀಕರ್ ಹಿಡಿದು ನಿಂತಿದ್ದರಲ್ಲ ಅವರೇ ಮೋದಿ. ಆವತ್ತು ಅಡ್ವಾಣಿಯವರೊಂದಿಗೆ ದೇಶದ ಉದ್ದಗಲಕ್ಕೂ ರಥಯಾತ್ರೆಯೊಂದಿಗೆ ಸುತ್ತಾಡಿದವರಲ್ಲಿ ಮೋದಿ ಪ್ರಮುಖರು. ಆದರೆ ಆಗ ಮೋದಿ ಯಾರೆಂದು ದೇಶಕ್ಕೆ ಗೊತ್ತಿರಲಿಲ್ಲ. ಅವರು ಗುಜರಾತ್ ಮುಖ್ಯಮಂತ್ರಿಯೂ ಆಗಿರಲಿಲ್ಲ. ಭಾಜಪಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅದರ ನಂತರ ಬಿಜೆಪಿಯ ಅಸ್ತಿತ್ವ ಬೆಳೆಯುತ್ತಾ ಹೋಯಿತು. ಉಮಾಭಾರತಿ, ಮುರಳಿ ಮನೋಹರ್ ಜೋಷಿಯವರು ವಾಜಪೇಯಿ ಹಾಗೂ ಅಡ್ವಾಣಿಯವರೊಂದಿಗೆ ದೇಶದ ಮುಂಚೂಣಿ ನಾಯಕರಾದರು. 1980 ರ ರಥಯಾತ್ರೆಯ ಬಳಿಕ 1989ರಲ್ಲಿ ಭಾಜಪಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಡ್ವಾಣಿಯವರು ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಸ್ಥಾಪನೆ ನಿಶ್ಚಿತ ಎನ್ನುವ ಭರವಸೆ ನೀಡಿದರು. ಆದರೆ ರಾಮಮಂದಿರ ಬಿಜೆಪಿ ರಾಷ್ಟ್ರದಲ್ಲಿ ಬೆಳೆಯಲು ಶಕ್ತಿ ನೀಡಿತೆ ವಿನ: ಅಧಿಕಾರಕ್ಕೆ ತರಲು ಆಗಿಲ್ಲ. ನಂತರ ವಾಜಪೇಯಿಯವರು ಪ್ರಧಾನಿಯಾಗಿದ್ದಾಗಲೂ ಕಿಚಡಿ ಸರಕಾರ ಇದ್ದ ಕಾರಣ ರಾಮಮಂದಿರದ ಪ್ರಕ್ರಿಯೆಗಳಿಗೆ ವೇಗ ಸಿಗಲಿಲ್ಲ. ಈ ನಡುವೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅವರೇ ದೇಶದ ಪ್ರಧಾನಿಯಾಗಲೂ ಸೂಕ್ತ ಎನ್ನುವಂತಹ ವಾತಾವರಣ ಮೂಡಿತ್ತು. ಕೇಂದ್ರದ ನಾಯಕರಲ್ಲಿ ಅಡ್ವಾಣಿ ಅಗ್ರಗಣ್ಯರಾಗಿದ್ದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ನಿಶ್ಚಿತವಾಗಿತ್ತು. ಒಂದು ವೇಳೆ ಎನ್ ಡಿಎ ಅಧಿಕಾರಕ್ಕೆ ಬಂದರೆ ಅಡ್ವಾಣಿಯವರೇ ಪ್ರಧಾನಿಯಾಗಬೇಕು ಎಂದು ಕೇಂದ್ರದ ಹಿರಿಯರ ತಂಡವೊಂದು ವಾದ ಮುಂದಿಟ್ಟಿತ್ತು. ಆದರೆ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಬೇಕು ಎನ್ನುವುದು ರಾಷ್ಟ್ರದ ಧ್ವನಿಯಾಗಿತ್ತು. ಕೊನೆಗೆ ಬೇರೆ ದಾರಿಕಾಣದೇ ಅಡ್ವಾಣಿಯವರು ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಲು ಒಪ್ಪಿದರು. ಎನ್ ಡಿಎ ಅಧಿಕಾರಕ್ಕೆ ಬಂತು. ಮೋದಿ ಪ್ರಧಾನಿಯಾದರು. ಮಾಧ್ಯಮಗಳ ಒಂದು ವರ್ಗ ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ ಎನ್ನುವ ಸುದ್ದಿಯನ್ನು ವೈಭವಿಕರಿಸಿ ಪ್ರಸಾರ ಮಾಡಿತು. ಮೋದಿಯವರಿಂದ ಅಡ್ವಾಣಿ ಮೂಲೆಗುಂಪಾಗಿದ್ದಾರೆ ಎನ್ನುವ ಸುದ್ದಿಯನ್ನು ಜನರಲ್ಲಿ ನಂಬಿಸಲು ಪ್ರಯತ್ನಿಸಲಾಯಿತು. ಅಡ್ವಾಣಿಯವರ ಮನಸ್ಸಲ್ಲಿ ಮೋದಿಯವರ ಬಗ್ಗೆ ಬೇಸರ ಇತ್ತೋ, ಇಲ್ವೋ ಆದರೆ ಎಡಪಂಥಿಯ ಮನಸ್ಸಿನ ಪತ್ರಕರ್ತರನ್ನು ಒಳಗೊಂಡ ವಾಹಿನಿಗಳು ತಮ್ಮ ಕೈಲಾದ ಗರಿಷ್ಟ ಪ್ರಯತ್ನ ಮಾಡಿ ಅಡ್ವಾಣೀಯವರ ಮತ್ತು ಮೋದಿ ಮಧ್ಯೆ ಕಂದಕ ಸೃಷ್ಟಿಯಾಗುವಂತೆ ಶತಪ್ರಯತ್ನ ಮಾಡಿದರು.

ನಮ್ಮ ನಡುವೆ ಏನೂ ವೈಮನಸ್ಸು ಇಲ್ಲ ಎನ್ನುವುದಕ್ಕೆ ಮೋದಿಯವರು ಹೋಗಲಿಲ್ಲ. ಅಡ್ವಾಣಿಯವರಿಗೆ ಶಬ್ದಗಳು ಸಿಗಲಿಲ್ಲ. ಕೊನೆಗೆ ಈ ಎಲ್ಲಾ ಅಧ್ಯಾಯಗಳಿಗೆ ಅಂತ್ಯ ಹಾಡುವ ಸಮಯ ಬಂದಿದೆ. ಯಾವ ವ್ಯಕ್ತಿ ಬಿಜೆಪಿಯನ್ನು ದೆಹಲಿಯ ಸಿಂಹಾಸನದ ತನಕ ತೆಗೆದುಕೊಂಡು ಹೋದರೋ ಆ ಮನುಷ್ಯನನ್ನೇ ಎದುರಿಗೆ ನಿಲ್ಲಿಸಿ ಪ್ರಧಾನಿ ಶಿಲಾನ್ಯಾಸ ನಡೆಸಲಿದ್ದಾರೆ. ಇದು ಬಿಜೆಪಿಯಲ್ಲಿ ಶ್ರಮ ವಹಿಸಿದವರಿಗೆ ಸಿಗುವ ಗೌರವ. ಪ್ರಧಾನಿಯಾಗುವುದು, ಸಿಎಂ ಆಗುವುದು, ಸಂಸದ, ಶಾಸಕ ಆಗುವುದು ಎಲ್ಲವೂ ಅವರವರ ಹಣೆಯಲ್ಲಿ ಬರೆದಿರಬೇಕು. ಒಂದು ವೇಳೆ ಪಕ್ಷ ಕಟ್ಟಿದವರೇ ಇಂತಹ ಹುದ್ದೆಗೆ ಏರಿದರೆ ಅದು ಅವರ ಹಣೆಯಲ್ಲಿ ಬರೆದಿತ್ತು ಎನ್ನಬಹುದು. ದೊಡ್ಡ ಹುದ್ದೆ ಸಿಗಬೇಕು ಎಂದು ಪಕ್ಷದಲ್ಲಿ ಶ್ರಮ ವಹಿಸಿದರೂ ಸಿಗದೇ ಹೋದರೆ ಅದಕ್ಕೆ ಬೇಸರಪಟ್ಟುಕೊಳ್ಳಬಾರದು. ಯಾಕೆಂದರೆ ಹಣೆಯಲ್ಲಿ ಬರೆದದ್ದೇ ಆಗುವುದು. ಹಾಗೆ ನೋಡಿದರೆ ಇವತ್ತು ಬಿಜೆಪಿ ಇಷ್ಟು ಬೃಹದಾಕಾರವಾಗಿ ಬೆಳೆಯಲು ಅಡ್ವಾಣಿಯವರ ಕೊಡುಗೆ ಸಾಕಷ್ಟಿದೆ. ಆದರೂ ಅವರು ಪ್ರಧಾನಿಯಾಗಲಿಲ್ಲ. ಹಾಗಂತ ಪಕ್ಷ ಅವರನ್ನು ಮರೆತಿಲ್ಲ. ಮೋದಿ ಮರೆತಿಲ್ಲ. ಗುಜರಾತಿನಲ್ಲಿ ಕೋಮುಗಲಭೆಯಾದಾಗ ಸ್ವತ: ವಾಜಪೇಯಿಯವರೇ “ರಾಜಧರ್ಮ ಪಾಲಿಸು” ಎಂದು ಮೋದಿಯವರನ್ನು ಪಕ್ಕಕ್ಕೆ ಕೂರಿಸಿ ಹೇಳಿದಾಗಲೂ ಮೋದಿ ಬೆನ್ನಿಗೆ ನಿಂತು ಧೈರ್ಯ ತುಂಬಿದ್ದು ಅಡ್ವಾಣಿ. ಹಾಗೆ ನೋಡಿದರೆ ಅಡ್ವಾಣಿಯವರು ಮೋದಿಯ ರಾಜಕೀಯ ಗುರು. ನಾಡಿದ್ದು ತಮ್ಮ ರಾಜಕೀಯ ಗುರುವನ್ನು ಮುಂದಿಟ್ಟು 40 ಕೆಜಿ ಬೆಳ್ಳಿ ಇಟ್ಟಿಗೆ ಅಡಿಯಲ್ಲಿಟ್ಟು ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಾಶಿ ವಿಶ್ವನಾಥ ದೇವಾಲಯದ ಪುರೋಹಿತರು ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ. ಸಿಎಂ ಯೋಗಿ ಹಾಗೂ ರಾಜನಾಥ ಸಿಂಗ್ ಹೇಗೂ ಇದ್ದೇ ಇರುತ್ತಾರೆ. ಇರುವುದಿಲ್ಲ ಎಂದರೆ ಅದು ವಾಜಪೇಯಿ ಮಾತ್ರ. ತಮ್ಮ ಆಪ್ತ ಸ್ನೇಹಿತನ ಅನುಪಸ್ಥಿತಿಯಲ್ಲಿ ಅಡ್ವಾಣಿ ಈ ಶತಮಾನದ ಶ್ರೇಷ್ಟ ಕಾರ್ಯಕ್ಕೆ ಸಾಕ್ಷಿಯಾಗಲಿದ್ದಾರೆ. ಪಕ್ಕದಲ್ಲಿ ಶಿಷ್ಯ ಮೋದಿ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search