• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಲ್ಯಾನ್ಸ್ ಲಾಟ್ ಪಿಂಟೊ, ವಿನಯರಾಜ್, ನವೀನಚಂದ್ರ ವಾರ್ಡ ಕಮಿಟಿ ರಚಿಸುವ ಬಗ್ಗೆ ನೀಡಿದ ವರದಿ ಏನಾಯ್ತು?

Hanumantha Kamath Posted On October 29, 2020
0


0
Shares
  • Share On Facebook
  • Tweet It

corporator ಅಂದರೆ ಅದು ವೃತ್ತಿಯಲ್ಲ, ಅದು ಒಬ್ಬ ವ್ಯಕ್ತಿ ಮಾಡುವ ಜನಸೇವೆಗೆ ಅವನ ward ನ ಜನರು ನೀಡುವ ಅಧಿಕೃತ ಜವಾಬ್ದಾರಿ ಅಷ್ಟೇ. ಅಂದರೆ ನಮ್ಮ ward ನ ಸಮಸ್ಯೆಯನ್ನು ಮಹಾನಗರ ಪಾಲಿಕೆಯ ಸಭೆಗಳಲ್ಲಿ ಮೇಯರ್, ಅಧಿಕಾರಿಗಳ ಮುಂದೆ ಇಟ್ಟು, ಎಲ್ಲರೂ ಸೇರಿ ತಮ್ಮ ಹೊಣೆ ಅರಿತು ಆ ನಗರದ ಅಭಿವೃದ್ಧಿಯನ್ನು ಒಳ್ಳೆಯದಾಗಿ ಮಾಡುವುದು. ಆದರೆ ಹಲವು ಜನ ಸದಸ್ಯರಿಗೆ corporator ಎನ್ನುವುದು ಫುಲ್ ಟೈಮ್ ಜಾಬ್. ಇರಲಿ, ಅದು ಹಣೆಬರಹ, ಬೇರೆ ಕಡೆ ಹೋಗಿ ಕೆಲಸ ಮಾಡಿ ನಂತರ ward ನಲ್ಲಿ ಜನರ ಸೇವೆ(?) ಮಾಡಲು ಸಮಯ ಸಿಗುತ್ತದಾ? ಎಂದು ಕೇಳುವವರಿದ್ದಾರೆ. ಸ್ವಂತ ವೃತ್ತಿಯಲ್ಲಿ ಇದ್ದವರು ತಮ್ಮ ವ್ಯಾಪಾರ, ವ್ಯವಹಾರ ಬಿಟ್ಟು ಈ ಕ್ಷೇತ್ರಕ್ಕೆ ಬರುವುದಿಲ್ಲ, ಬೇರೆ ಕಡೆ ಉದ್ಯೋಗದಲ್ಲಿದ್ದವರು ಅಲ್ಲಿ ಮತ್ತು ಇಲ್ಲಿ ಸಮಯ ಹೊಂದಿಸಲು ಆಗುವುದಿಲ್ಲ. ಆದ್ದರಿಂದ ಎಲ್ಲಿಯೂ ಸಲ್ಲದವರು ಇಲ್ಲಿ ಬಂದು ಫುಲ್ ಟೈಮ್ ಆಗಿ ಇದನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾದರೆ ಆದಾಯ, ಅದನ್ನು ಅವರು ಮಾಡಿಕೊಳ್ಳುತ್ತಾರೆ, ಬಿಡಿ. ಅದೇ ಉದ್ದೇಶಕ್ಕಾಗಿ ಅವರು ವಾರ್ಡ ಸಮಿತಿಗೆ ವಿರುದ್ಧವಾಗಿರುವುದು, ಈ ಮೇಲಿನ ಪ್ರತಿ ವಾಕ್ಯ ಪಾಲಿಕೆಯ ಸದಸ್ಯರು ವಾರ್ಡ ಸಮಿತಿಗೆ ಯಾಕೆ ವಿರೋಧ ಎನ್ನುವುದನ್ನು ಹೇಳುತ್ತವೆ. ಇನ್ನೊಂದು ವಿಷಯ ಅಂದರೆ ವಾರ್ಡ ಸಮಿತಿ ಅಸ್ತಿತ್ವಕ್ಕೆ ಬಂದರೆ ನಿಮ್ಮ ward ನ corporator ನಿಮ್ಮಲ್ಲಿ ಒಬ್ಬನಾಗುತ್ತಾನೆ ವಿನ: ಈಗ ಇರುವಂತೆ ಅವನ ಅಥವಾ ಅವಳ ತಲೆಯ ಮೇಲೊಂದು ಕೋಡು ಇರುತ್ತದೆಯಲ್ಲ, ಅದು ಕಳಚಿ ಬೀಳುತ್ತದೆ. ಕೊಬ್ಬು ಇಳಿಯುತ್ತದೆ.
“ನೀವು ನನಗೆ ವೋಟ್ ಕೊಡಲಿಲ್ಲ, ಅದಕ್ಕೆ ನಿಮ್ಮ ರಸ್ತೆಗೆ ಕಾಂಕ್ರೀಟ್ ಹಾಕುವುದಿಲ್ಲ ಅಂತಾನೊ, ಹಣವಿದ್ದವರು ಎಷ್ಟು ಅತಿಕ್ರಮಣ ಮಾಡಿದರೂ ಸುಮ್ಮನಿರುವುದರಿಂದಲೂ, ನನಗೆ ಯಾವ ಕೆಲಸ ಮೊದಲು ಆಗಬೇಕು ಎಂದು ಗೊತ್ತಿದೆ ಎನ್ನುವ ಅಹಂಕಾರದ ಮಾತುಗಳೆಲ್ಲ ಕಡಿಮೆಯಾಗುತ್ತದೆ. ಯಾಕೆಂದರೆ ವಾರ್ಡ ಕಮಿಟಿಯ ಕೈಯಲ್ಲಿ ಲಗಾಮು ಇರುವುದರಿಂದ ಕುದುರೆ ನೋಡುವುದಕ್ಕೆ ಮಾತ್ರ ಜಾಕಿ ಮನಸ್ಸು ಮಾಡಿದರೆ ಮಾತ್ರ ಕುದುರೆ ಓಡಬೇಕಾಗುತ್ತದೆ. ಅದು ಹೇಗೆಂದರೆ ಒಂದು ward ನಲ್ಲಿ ಯಾವುದೇ ಕಾಮಗಾರಿ ನಡೆಯಬೇಕಾದರೂ ಅದಕ್ಕೆ ಇಡೀ ವಾರ್ಡ ಸಮಿತಿಯ ಒಪ್ಪಿಗೆ ಬೇಕು. corporator ನ\ಳ ಸೌರ್ವಭೌಮತೆ ಎಲ್ಲ ಅಟ್ಟ ಸೇರಿಬಿಡುತ್ತದೆ.
ಇದಕ್ಕಾಗಿ 2011 ರಲ್ಲಿ Karnataka Municipal Corporation ಕಾಯಿದೆಯಲ್ಲಿ ಒಂದು ತಿದ್ದುಪಡಿ ಮಾಡಿ ವಾರ್ಡ ಕಮಿಟಿ ಮಾಡಲೇಬೇಕೆಂಬ ಆದೇಶ ಜಾರಿ ಮಾಡಲಾಯಿತು. ಅದರಂತೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಠರಾವು 119\2014-15 ರ ಅಡಿಯಲ್ಲಿ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು. ಪರಿಷತ್ ಸಭೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು ಬೇರೆ ಪಾಲಿಕೆಯಲ್ಲಿ ವಾರ್ಡ ಕಮಿಟಿಗಳು ಅಸ್ತಿತ್ವದಲ್ಲಿ ಇರುವುದರಿಂದ ಅಲ್ಲಿನ ಸಾಧಕ-ಭಾದಕದ ಬಗ್ಗೆ ತಿಳಿದುಕೊಂಡು ಬಂದು ವರದಿ ನೀಡುವಂತೆ ಒಂದು ಸಮಿತಿ ರಚಿಸುವ ನಿರ್ಣಯ ಕೈಗೊಳ್ಳಲಾಯಿತು. ಆ ಕಮಿಟಿಯ ಅಧ್ಯಕ್ಷರನ್ನಾಗಿ ಕಾಂಗ್ರೆಸ್ಸಿನ ಹಿರಿಯ ಸದಸ್ಯ ಲ್ಯಾನ್ಸ್ ಲಾಟ್ ಪಿಂಟೋ, ಸದಸ್ಯರಾಗಿ ವಕೀಲ ಮತ್ತು ಪ್ರಥಮ ಬಾರಿ ಮನಪಾ ಸದಸ್ಯರಾಗಿರುವ ಉತ್ಸಾಹಿ ಎ.ಸಿ.ವಿನಯರಾಜ್ ಹಾಗೂ ಭಾರತೀಯ ಜನತಾ ಪಕ್ಷದ ಕ್ರಿಯಾಶೀಲ ಸದಸ್ಯ ನವೀನ ಚಂದ್ರ ಅವರನ್ನು ನೇಮಿಸಲಾಯಿತು. ಮೂರು ಜನ ಟೂರಿಗೆ ಹೋದಂತೆ ಮೈಸೂರಿಗೆ ಹೊರಟರು. ಅಲ್ಲಿ ಮೈಸೂರು ಅರಮನೆ, ಅದು, ಇದು ಎಂದು ತಿರುಗಾಡಿ ಬಂದರೊ, ಅಥವಾ ನಿಜವಾಗಿ ಮೈಸೂರು ಪಾಲಿಕೆಯ ವಾರ್ಡ ಕಮಿಟಿಗಳ ಅಧ್ಯಯನ ಮಾಡಿ ಬಂದರೋ ಮೈಸೂರಿನ ಚಾಮುಂಡೇಶ್ವರಿ ದೇವಿಯೇ ಹೇಳಬೇಕು. ರಾಜ್ಯದ ಶಾಸಕರು ವಿದೇಶ ಪ್ರವಾಸಕ್ಕೆ ಹೋದಾಗ ಮಾಧ್ಯಮಗಳಲ್ಲಿ ತುಂಬಾ ಡಿಬೆಟ್ ಆಗುತ್ತದೆ. ಶಾಸಕರು ನಿಜವಾಗಿಯೂ ಅಧ್ಯಯನ ಮಾಡಲು ಹೋಗುತ್ತಾರೊ ಅಥವಾ ಗಮ್ಮತ್ತು ಮಾಡಲು ಹೋಗುತ್ತಾರೊ ಎಂದು ವಿಶ್ಲೇಷಣೆ ನಡೆಯುತ್ತದೆ. ನಂತರ ಆ ನಿಯೋಗಗಳಿಂದ ವರದಿ ಬಂದಿದೆಯಾ ಇಲ್ಲವಾ ಎಂದು ಯಾರೂ ನೋಡಲು ಹೋಗಿರುವುದಿಲ್ಲ. ಯಾಕೆಂದರೆ ವರದಿ ಬಂದರೆ ತಾನೆ. ಏನಾದರೂ ಒಂದು ಕಾಟಾಚಾರಕ್ಕೆ ಬರೆದು ಬಿಸಾಡಿರುತ್ತಾರೆ. ಆದ್ದರಿಂದ ವಾರ್ಡ ಕಮಿಟಿ ಅಧ್ಯಯನಕ್ಕೆ ಹೋದ ಸಮಿತಿಯಿಂದ ಅದೆಂತಹ ವರದಿ ಬಂದಿದೆಯೊ ಇಲ್ಲಿಯ ತನಕ ಯಾರಿಗೂ ಗೊತ್ತಿಲ್ಲ.
ಅದರೆ 2015ರ ಜನವರಿಯಲ್ಲಿ ವಾರ್ಡ ಕಮಿಟಿ ಎಂದರೇನು, ಅದರ ಉದ್ದೇಶವೇನು, ಅದನ್ನು ಮಾಡುವುದರಿಂದ ward ಗೆ ಆಗುವ ಲಾಭವೇನು ಎಂದು ಜನರಿಗೆ ಗೊತ್ತಾಗಲು ಒಂದು ಕಾರ್ಯಗಾರ ಮಾಡುತ್ತೆವೆ ಎಂದು ಪಾಲಿಕೆಯ ಕಮೀಷನರ್ ಅವರು ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದು ಹಾಕಿದ್ದಾರೆ. ಅಂದರೆ ತಾವು ಅದನ್ನು ಮರೆತಿಲ್ಲ ಎಂದು ತೋರಿಸುವ ನಾಟಕ ಅಷ್ಟೇ. ಆದರೆ ಅದು ಮೊಣಕೈಯಿಗೆ ಜೇನುತುಪ್ಪ ಸವರಿ ನೆಕ್ಕಲು ಹೇಳಿದಂತೆ ಮುಂದೆ ಹೋಗುತ್ತಲೇ ಇದೆ. ಈಗ ಅಕ್ಟೋಬರ್ ಅರ್ಧ ಮುಗಿದಾಗಿದೆ. ಇನ್ಯಾವಾಗ ಕಾರ್ಯಗಾರ ಮಾಡುತ್ತಾರೊ, ಆ ಮಂಗಳಾದೇವಿಯೇ ಹೇಳಬೇಕು. ಇದರರ್ಥ ಏನು ಕಮೀಷನರ್ ಅವರಿಂದ ಹಿಡಿದು ಮೇಲಿನ, ಕೆಳಗಿನ ಎಲ್ಲಾ ಅಧಿಕಾರಿಗಳ ಸಮೂಹಕ್ಕೂ ಈ ವಾರ್ಡ ಕಮಿಟಿ ಆಗುವುದು ಇಷ್ಟವಿಲ್ಲ. ಸದಸ್ಯರಿಗೆ ಬಿಡಿ, ಅವರಿಗೆ ವಾರ್ಡ ಕಮಿಟಿ ಆಗುವುದೂ ಒಂದೆ, ಬಾವಿಗೆ ಯಾರಾದರೂ ಅವರನ್ನು ನೂಕುವುದು ಒಂದೆ ಎನ್ನುವಂತಹ ಪರಿಸ್ಥಿತಿ. ಆದ್ದರಿಂದ ಪಾಲಿಕೆಯಲ್ಲಿ ಎಲ್ಲರೂ ವಾರ್ಡ ಕಮಿಟಿ ಎಂದ ಕೂಡಲೇ ಹಾವು ತುಳಿದವರ ಹಾಗೆ ಆಡುತ್ತಾರೆ. ನನಗಂತೂ ಸದ್ಯಕ್ಕೆ ವಾರ್ಡ ಕಮಿಟಿ ಆಗುವ ಲಕ್ಷಣ ಕಾಣುವುದಿಲ್ಲ, ಕಾರಣ ಪಾಲಿಕೆಯ ಯಾರೂ ಕೂಡ ತಮ್ಮ ಅನ್ನದ ತಟ್ಟೆಗೆ ತಾವೇ ವಿಷ ಹಾಕಿಕೊಳ್ಳುತ್ತಾರಾ?ಅದರೂ ಒಂದು ಚೂರು ಅಸೆ ಉಳಿದಿದೆ ಐಎಎಸ್‌ ಅಧಿಕಾರಿ ಅಕ್ಷಯ್ ಶೀಧರ್ ಯಾವ ಒತ್ತಡಕ್ಕೂ ಮಣಿಯದೆ ವಾರ್ಡ್ ಕಮಿಟಿ ಮಾಡುತ್ತಾರೆ ಎಂದು ನಿಮಗೆ ಹೇಗೆ ಅನಿಸುತ್ತಿದೆ.

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
  • Popular Posts

    • 1
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 2
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 3
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 4
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 5
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

  • Privacy Policy
  • Contact
© Tulunadu Infomedia.

Press enter/return to begin your search