• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಬಜೆಟ್ ಬಗ್ಗೆ ಆಸಕ್ತಿ ಇಲ್ಲದ ಜಡ, ಆಲಸಿ ಮನಪಾ ಸದಸ್ಯರನ್ನು ಹೊಂದಿರುವ ಪಾಲಿಕೆ!!

Hanumantha Kamath Posted On January 13, 2021
0


0
Shares
  • Share On Facebook
  • Tweet It

ಕಾಂಗ್ರೆಸ್ ಅವರನ್ನು ಬಿಡಿ, ಮಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾಗಿರುವ ಬಹುತೇಕ ಕಾಂಗ್ರೆಸ್ ಕಾರ್ಪೋರೇಟರ್ ಗಳು ಹಳಬರು. ಅವರಿಗೆ ಆಸಕ್ತಿ ಇರುವುದಿಲ್ಲ. ಆದರೆ ಭಾರತೀಯ ಜನತಾ ಪಾರ್ಟಿಯಿಂದ ಅತೀ ಎನಿಸುವಷ್ಟು ಬಹುಮತದಲ್ಲಿ ಆಯ್ಕೆಯಾಗಿರುವ ಭಾರತೀಯ ಜನತಾ ಪಾರ್ಟಿಯ ಸದಸ್ಯರಿಗೆ ಏನಾಗಿದೆ? ಇಷ್ಟು ಬೇಗ ಆಸಕ್ತಿ ಕಳೆದು ಹೋಯಿತಾ? ಅಥವಾ ಬಜೆಟ್ ಪೂರ್ವ ಸಭೆಗಳಿಗೆ ಏನು ಮಹಾ ಬರುವುದು ಎನ್ನುವ ಅಹಂಕಾರ ಇದೆಯಾ ಅಥವಾ ಅಧ್ಯಯನ ಮಾಡುವ ಗೊಡವೆಗೆ ಹೋಗದೇ ಕಾಟಾಚಾರಕ್ಕೆ ಯಾಕೆ ಬರುವುದು ಎಂಬ ಅಸಡ್ಡೆಯಾ? ಒಟ್ಟಿನಲ್ಲಿ ಬುಧವಾರ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಾರ್ಪೋರೇಟರ್ ನೆಲೆಯಲ್ಲಿ ಉಪಸ್ಥಿತರಿದ್ದವರು ಒಬ್ಬರೇ ಒಬ್ಬರು. ಈ ಚೆಂದಕ್ಕೆ ಬಜೆಟ್ ಪೂರ್ವಸಭೆ ಬೇಕಾ? ಸಭೆ ನಿಗದಿ ಪ್ರಕಾರ ಶುರುವಾಗಬೇಕಾಗಿದ್ದದ್ದು ಬೆಳಿಗ್ಗೆ 11 ಗಂಟೆಗೆ. ಆದರೆ ಆರಂಭವಾದದ್ದು 11.30ಕ್ಕೆ. ಮೇಯರ್, ಉಪಮೇಯರ್ ಇದ್ದರು. ಅವರ ಅಧಿಕಾರಾವಧಿಯ ಕೊನೆಯ ಬಜೆಟ್ ಪೂರ್ವಭಾವಿ ಸಭೆ. ಇನ್ನು ಮುಂದಿನ ಬಾರಿ ಮೇಯರ್ ಆಗಲಿರುವ ಸಚೇತಕ ಇದ್ದರು. ಇಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದರು. ಇವರೆಲ್ಲರೂ ಮನಪಾ ಸದಸ್ಯರೂ ಆಗಿರುವುದರಿಂದ ಒಟ್ಟು ಆರು ಎಂದು ಲೆಕ್ಕ ಹಿಡಿದರೂ ಓಕೆ. ಹಾಗಾದರೆ ಉಳಿದ 54 ಮಂದಿ. ಅದೇನೋ ನಾಮನಿರ್ದೇಶಿತ ಸದಸ್ಯರು ಎಂದು ಮೊನ್ನೆ ಮೊನ್ನೆ ಆಯ್ಕೆಯಾಗಿದ್ದಾರಲ್ಲ, ಅವರು ಕೂಡ ಬರಲಿಲ್ಲ. ಇನ್ನು ಕಮೀಷನರ್, ಜಂಟಿ ಆಯುಕ್ತರು ಇದ್ದರು. ಅಕೌಂಟ್ ಸೆಕ್ಷನ್ ನಿಂದ ಕೆಲವರು ಇದ್ದರು ಬಿಟ್ಟರೆ ಪಾಲಿಕೆ ವತಿಯಿಂದ ಬೇರೆ ಯಾರೂ ಇರಲಿಲ್ಲ. ಬಜೆಟ್ ಎಂದ ಕೂಡಲೇ ಮುಖ್ಯವಾಗಿ ಬರುವುದು ಕಂದಾಯ ವಿಭಾಗ. ಅದಕ್ಕೆ ಪ್ರತ್ಯೇಕವಾಗಿ ಅಧಿಕಾರಿಗಳಿದ್ದಾರೆ. ಮೂರು ಜನ ಉಪ ಕಂದಾಯ ಆಯುಕ್ತರಿದ್ದಾರೆ. ಅವರ್ಯಾರು ಬಜೆಟ್ ವಿಷಯದಲ್ಲಿ ತಲೆ ಹಾಕಲೇ ಇಲ್ಲ ಎಂದರೆ ಏನು ಕಥೆ? ಅಷ್ಟಕ್ಕೂ ಬಜೆಟ್ ಎಂದರೆ ಏನು? ಒಂದು ವ್ಯವಸ್ಥೆಯಲ್ಲಿ ಆದಾಯವನ್ನು ಹೆಚ್ಚಿಸಿ, ಖರ್ಚನ್ನು ಕಡಿಮೆ ಮಾಡುವುದು ಹೇಗೆ ಎನ್ನುವುದು ಚರ್ಚೆಯಾಗಬೇಕು. ಅದಕ್ಕಾಗಿ ಕಾರ್ಪೋರೇಟರ್ ಗಳು ಸಲಹೆ ನೀಡಬೇಕು. ಅಧಿಕಾರಿಗಳು ಕೇಳಬೇಕು. ಇನ್ನು ಸಾರ್ವಜನಿಕರು ಭಾಗವಹಿಸಿ ತಮ್ಮ ಅಭಿಪ್ರಾಯ ನೀಡಬೇಕು. ಆದರೆ ನನ್ನನ್ನು ಸೇರಿಸಿ ನಾಗರಿಕರ ಪರವಾಗಿ ಬಂದದ್ದು ಐದು ಮಂದಿ. ಅದರಲ್ಲಿ ನಾಲ್ಕು ಜನ ಮಾತನಾಡಿದರು. ಆದರೆ ನಾಗರಿಕರ ಪರವಾಗಿ ಮಾತನಾಡುವಾಗ ಪಾಲಿಕೆಯ ಆದಾಯ ಹೇಗೆ ಹೆಚ್ಚಿಸಬಹುದು ಎಂದು ಸಲಹೆ ನೀಡಬೇಕೆ ವಿನ: ಅದು ಕುಂದುಕೊರತೆಗಳ ಬಗ್ಗೆ ಮಾತನಾಡುವ ಸಭೆ ಅಲ್ಲ. ಬಂದ ನಾಗರಿಕರು ಅದೇ ಕುಂದುಕೊರತೆಗಳನ್ನು ಮಾತನಾಡುತ್ತಾ ಹೋದರೆ ಏನು ಪ್ರಯೋಜನ?
ಆದರೆ ನಾನು ನಿಜವಾದ ಅರ್ಥದಲ್ಲಿ ಪಾಲಿಕೆ ಹೇಗೆ ಹಣ ಮಾಡಬಹುದು ಎನ್ನುವುದರ ಕುರಿತು ಮಾತನಾಡಿದೆ. ಆದರೆ ಇವತ್ತು ನಾನು ಹೇಳಿರುವ ಅಂಶಗಳನ್ನು ನಾನು ಈ ಹಿಂದೆ ಮೂರು ಬಾರಿ ಹೇಳಿದ್ದೆ. ಅದನ್ನು ಅನುಷ್ಟಾನಕ್ಕೆ ಈ ಹಿಂದೆಯೇ ತಂದಿದ್ದರೆ ಖಂಡಿತವಾಗಿಯೂ ಆದಾಯ ಹೆಚ್ಚಾಗುತ್ತಿತ್ತು. ಬೇಕಾದರೆ ನೋಡಿ, 1992 ರಲ್ಲಿ ಕಟ್ಟಡ ನಿರ್ಮಾಣ ಪರವಾನಿಗೆ ಶುಲ್ಕವನ್ನು ಕೊನೆಯ ಬಾರಿಗೆ ಪರಿಷ್ಕರಣೆ ಮಾಡಿದ್ದು. ಇವತ್ತಿಗೂ ಈ ಶುಲ್ಕದ ಲೆಕ್ಕಾಚಾರ ಇರುವುದು 20 ಪೈಸೆ ಮತ್ತು 50 ಪೈಸೆಯ ಹಾಗೆ. ಈ ನಾಣ್ಯಗಳನ್ನು ಇವತ್ತಿನ ತಲೆಮಾರು ಮರೆತು ತುಂಬಾ ಸಮಯ ಆಗಿದೆ. ಇನ್ನು ಗ್ರೀನರಿ ಶುಲ್ಕ ಎನ್ನುವ ಶುಲ್ಕ ಇದೆ. ಅದು ಸ್ಕ್ವಾರ್ ಮೀಟರ್ ಗೆ ಐವತ್ತು ಪೈಸೆ. ಇದೆಲ್ಲವನ್ನು ಪಾಲಿಕೆ ಕೈ ಹಾಕದೇ ಮೂರು ದಶಕಗಳ ಮೇಲಾಗಿದೆ. ಯಾಕೆಂದರೆ ಅದು ಬಿಲ್ಡರ್ ಗಳಿಗೆ ಸಂಬಂಧಪಟ್ಟ ವಿಷಯ. ಆದ್ದರಿಂದ ಬಿಲ್ಡರ್ ಗಳ ಆಪ್ತರಾಗಿರುವ ಪಾಲಿಕೆ ಸದಸ್ಯರು ಯಾವ ಸಂದರ್ಭದಲ್ಲಿಯೂ ಬಿಲ್ಡರ್ ಗಳಿಗೆ ಐವತ್ತು ಪೈಸೆ ಶುಲ್ಕ ಹೆಚ್ಚಿಸಲು ನೂರು ಸಲ ಯೋಚಿಸುತ್ತಾರೆ. ಅದೇ ಜನಸಾಮಾನ್ಯರಿಗಾದರೆ ಮನೆ ತೆರಿಗೆಯನ್ನು ಮನಸ್ಸಿಗೆ ಬಂದಂತೆ ಹೆಚ್ಚಿಸುತ್ತಾರೆ. ಮನೆ ತೆರಿಗೆ ಹೆಚ್ಚುವುದು ಕೂಡ 15%. ಇನ್ನು ನೀವು ಮನೆ ತೆರಿಗೆ ಸರಿಯಾದ ಸಮಯ ಕಟ್ಟದೆ ಇದ್ದರೆ ನಂತರದ ತಿಂಗಳಲ್ಲಿ ಅದಕ್ಕೆ ದಂಡ, ಬಡ್ಡಿ ಎಲ್ಲಾ ಸೇರಿಸಿ ಕಟ್ಟಬೇಕಾಗುತ್ತದೆ. ಕನಿಷ್ಟ 2% ದಂಡ ಹಾಕಲಾಗುತ್ತದೆ. ಅದೇ ಹೋರ್ಡಿಂಗ್ ಗುತ್ತಿಗೆದಾರರು, ಪಾಲಿಕೆಯ ಕಟ್ಟಡದಲ್ಲಿ ಬಾಡಿಗೆಗೆ ಇರುವವರು, ಮಾರ್ಕೆಟ್ ನಲ್ಲಿ ಅಂಗಡಿ ಇಟ್ಟವರು ಎಷ್ಟು ಬಾಕಿ ಇಟ್ಟರೂ ಅದನ್ನು ವರ್ಷಗಟ್ಟಲೆ ಕೇಳುವವರು ಇಲ್ಲ. ಇನ್ನು ಮಂಗಳೂರು ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ ನೋಂದಾವಣೆ ಆಗುವ ಪ್ರತಿ ದ್ವಿಚಕ್ರ ವಾಹನದಿಂದ 50 ಪೈಸೆ ಹಾಗೂ ಉಳಿದ ವಾಹನಗಳಿಂದ ಒಂದು ರೂಪಾಯಿ ಶುಲ್ಕ ಪಾಲಿಕೆಗೆ ಬರಬೇಕು. ಪಾಲಿಕೆ ಮನಸ್ಸು ಮಾಡಿದರೆ ಅದನ್ನು ಹೆಚ್ಚಳ ಮಾಡಲು ಒತ್ತಡ ಹಾಕಬಹುದು. ಇದರಿಂದ ಹಣ ಪಾಲಿಕೆಗೆ ಸಿಗುತ್ತದೆ. ಆದರೆ ಆಶ್ಚರ್ಯ ಎಂದರೆ ಹೀಗೆ ಒಂದು ಆದಾಯ ಸಿಗುತ್ತದೆ ಎಂದು ಸ್ವತ: ಪಾಲಿಕೆಯಲ್ಲಿ ಆಡಳಿತ ಮಾಡುವವರಿಗೆ ಗೊತ್ತಿಲ್ಲ. ಇನ್ನು ಇವರು ಹೆಚ್ಚಳ ಮಾಡಲು ಒತ್ತಡ ಮಾಡುವುದು ದೂರದ ಮಾತು. ಇನ್ನು ನಾನು ಈ ಹಿಂದೆನೂ ಹೇಳಿದ್ದಾಗಲೂ ಈ ಬಗ್ಗೆ ಪಾಲಿಕೆ ಆರ್ ಟಿಒದಿಂದ ಹಣ ತರುವ ಬಗ್ಗೆ ಯೋಚಿಸಲೇ ಇಲ್ಲ. ನಮ್ಮ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಒಂದು ಸಭೆ ಇದೆ, ಬಂದು ಮಾತನಾಡಿ ಎಂದರೂ ಬರುವುದಿಲ್ಲ. ನಾನು ಇವರಿಗೆ ಹೇಳಿದರೂ ಇವರಿಗೆ ಅನುಷ್ಟಾನ ತರಲು ಇನ್ನೆಷ್ಟು ವರ್ಷ ಬೇಕೋ. ಈಗ ಪಾಲಿಕೆಯಲ್ಲಿ ಯುವ ಕಾರ್ಪೋರೇಟರ್ ಗಳ ಪಡೆ ಬಂದು ಕುಳಿತಿದೆ ಎಂದು ಅಂದುಕೊಂಡಿದ್ದೆ. ಆದರೆ ಜಡ, ಆಲಸಿ, ನಿರ್ಲಕ್ಷ್ಯದ ಗುಂಪು ಆಯ್ಕೆ ಆಗಿದೆ ಎಂದು ಇವತ್ತು ಗ್ಯಾರಂಟಿಯಾಯಿತು!!
0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Hanumantha Kamath September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Hanumantha Kamath September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search