ಸಹಾಯ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಎದುರು ಬೆತ್ತಲೆ ನಿಂತ ಉಳ್ಳಾಲ ಎಸ್ಡಿಪಿಐ ಮುಖಂಡ ಅರೆಸ್ಟ್!
![](https://tulunadunews.com/wp-content/uploads/2021/01/sdpi-siddq-arrest-960x600.jpg)
ಉಳ್ಳಾಲ: ಬಾಲಕಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಸ್‌ಡಿಪಿಐ ಮುಖಂಡನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಎಸ್ ಡಿಪಿಐ ಪಕ್ಷದ ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ಧಿಕ್ ಉಳ್ಳಾಲ್ (35) ಪ್ರಕರಣದ ಆರೋಪಿ.
ಕೊಣಾಜೆ ನಡುಪದವಿನ ಎಂಜಿನಿಯರಿಂಗ್ ಓದುತ್ತಿದ್ದ ಯುವತಿಯೊಬ್ಬಳನ್ನು ಕೇರಳದ ಯುವಕ 15ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗುತ್ತಾನೆ. ಬಳಿಕ ಯುವತಿ ಮತಾಂತರವಾಗಿದ್ದು, ತನ್ನ ಹೆಸರನ್ನು ಹಿಬಾ ಫಾತಿಮಾ ಎಂದು ಬದಲಿಸಿಕೊಳ್ಳುತ್ತಾಳೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಾಗಿದ್ದು, ಆ ಬಳಿಕ ಗಂಡ ನಾಪತ್ತೆಯಾಗುತ್ತಾನೆ.
ಫಾತಿಮಾ ಇಬ್ಬರು ಮಕ್ಕಳೊಂದಿಗೆ ಉಳ್ಳಾಲ ಒಂಬತ್ತು ಕೆರೆಯಲ್ಲಿ ವಾಸವಾಗಿದ್ದರು. ಈ ಸಮಯದಲ್ಲಿ ಸಂಘಟನೆಯ ಮುಖಂಡ ಸಿದ್ಧಿಕ್ ಉಳ್ಳಾಲ್ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಪರಿಚಿತನಾಗಿ, ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಇದೇ ಸಲುಗೆಯಿಂದ ಆಕೆಯ ಇಬ್ಬರ ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ. ಇದರಿಂದ ಎಚ್ಚೆತ್ತುಕೊಂಡ ಮಹಿಳೆ ಜ.16ರಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಲ್ಲದೆ ಸಹಾಯಮಾಡುವ ನೆಪದಲ್ಲಿ ಮನೆಗೆ ಬರುತ್ತಿದ್ದ ಎಸ್ ಡಿ ಪಿಐ ಮುಖಂಡ ಸಿದ್ದಿಕ್ ಮಹಿಳೆಯ ಎರಡು ಹೆಣ್ಣುಮಕ್ಕಳ ಮುಂದೆ ಬೆತ್ತಲಾಗಿ ನಿಲ್ಲುತ್ತಿದ್ದನಂತೆ , ಇದರಿಂದ ಎಚ್ಚೆತ್ತ ಮಹಿಳೆ ಪ್ರತಿಭಟಿಸಿ ದೂರು ಕೊಡುವುದಾಗಿ ಹೇಳಿದ್ದರು, ಕಳೆದ ಡಿಸೆಂಬರ್ ನಲ್ಲಿ ಈ ಬೆಳವಣಿಗೆ ನಡೆದಿದ್ದು ಎಸ್ ಡಿಪೀಐ ಮುಖಂಡರು ಸೇರಿ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ, ಇದರಿಂದ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದ ಮಹಿಳೆ ಇದೀಗ ಮತ್ತೆ ಸಿದ್ದಿಕಿನ ಕಾಮದಾಟ ಜಾಸ್ತಿಯಾಗುತ್ತಲೇ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಆರೋಪಿ ವಿರುದ್ಧ ಅತ್ಯಾಚಾರ, ಬೆದರಿಕೆ, ಪೋಕ್ಸೋ ಪ್ರಕರಣ ದಾಖಲಾಗಿದ್ದು ಆರೋಪಿ ಪರಾರಿಯಾಗಿದ್ದಾನೆ.
Leave A Reply