• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಉತ್ತಮ ಗೋಮಾಂಸ ಹೇಳಿಕೆಯ ಜಾಡು ಹಿಡಿದು ಹೊರಟಾಗ…!!

Tulunadu News Posted On March 27, 2021


  • Share On Facebook
  • Tweet It

ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಗೋಹತ್ಯಾ ನಿಷೇಧದ ಬಗ್ಗೆ ಉಸಿರೆತ್ತದೆ ಮೌನವಾಗಿ ಗೋಹತ್ಯೆಗೆ ಭರಪೂರ ಅವಕಾಶ ಕೊಡುವ ರಾಜ್ಯ ಕೇರಳ. ಅಲ್ಲಿ ಚುನಾವಣೆ ಎಂದರೆ ಗೋ ವಿಷಯ ಚರ್ಚೆಗೆ ಬಂದೇ ಬರುತ್ತದೆ. ಈಗ ಚುನಾವಣೆ ಇರುವುದರಿಂದ ಒಂದು ಪೋಸ್ಟರ್ ಕೇರಳದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಶ್ರೀಪ್ರಕಾಶ್ ಎನ್ನುವ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ತಾನು ಗೆದ್ದರೆ ತಮ್ಮ ಕ್ಷೇತ್ರದ ನಾಗರಿಕರಿಗೆ ಉತ್ತಮ ದರ್ಜೆಯ ಗೋಮಾಂಸ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅದೇ ಈಗ ಆಶ್ಚರ್ಯವಾಗುತ್ತಿರುವುದು. ಯಾಕೆಂದರೆ ಹೇಳಿರುವುದು ಬಿಜೆಪಿ ಅಭ್ಯರ್ಥಿ. ಆ ಪೋಸ್ಟರ್ ಬೇರೆ ಪಕ್ಷದ್ದು ಆಗಿದ್ದರೆ ಅದರಲ್ಲಿ ವಿಶೇಷ ಏನೂ ಇರಲಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಹಾಗೆ ಹೇಳಿದರಲ್ಲ ಎಂದು ಇಡೀ ಪೋಸ್ಟರ್ ಅನ್ನು ಎರಡ್ಮೂರು ಸಲ ಮೇಲಿನಿಂದ ಕೆಳಗೆ ನೋಡಿದಾಗ ಗ್ಯಾರಂಟಿಯಾಗುತ್ತದೆ. ಬಿಜೆಪಿ ಕರ್ನಾಟಕದಲ್ಲಿ ಒಂದು ಸ್ಟ್ಯಾಂಡ್ ಕೇರಳದಲ್ಲಿ ಬೇರೆಯದ್ದೇ ಸ್ಟ್ಯಾಂಡ್ ತೆಗೆದುಕೊಂಡಿದೆ ಎಂದು ಯಾರಿಗಾದರೂ ಅನಿಸದೇ ಇರದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಚಿಕ್ಕಪುಟ್ಟ ನಾಯಕರಿಂದ ಹಿಡಿದು ರಾಜ್ಯಾಧ್ಯಕ್ಷರ ತನಕ ಪ್ರತಿಯೊಬ್ಬರು ಪಕ್ಕದ ಕೇರಳಕ್ಕೆ ಹೋಗಿ ಅಲ್ಲಿ ಪಕ್ಷದ ಪರವಾಗಿ ಮತಪ್ರಚಾರ ಮಾಡುತ್ತಲೇ ಇದ್ದಾರೆ. ಹಾಗಿರುವಾಗ ಅವರದ್ದೇ ಮೊಬೈಲಿಗೆ ಇಂತಹ ಒಂದು ಪೋಸ್ಟರ್ ಬಂದರೆ ಅವರಿಗೆ ಎಷ್ಟು ಬೇಸರವಾಗಬೇಡಾ. ಆದ್ದರಿಂದ ವಿರೋಧ ಪಕ್ಷಗಳು ಶ್ರೀಪ್ರಕಾಶ್ ಅವರ ಹೇಳಿಕೆಯನ್ನು ಹಿಡಿದೇ ಬಿಜೆಪಿ ಮತದಾರರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
 ಇದನ್ನೇ ಹಿಡಿದು ಬೇರೆ ಪಕ್ಷಗಳು ಬಿಜೆಪಿ ನಾಯಕರು ಎದುರಿಗೆ ಗೋವನ್ನು ಪ್ರೀತಿಸುವ ನಾಟಕ ಮಾಡಿ ಹಿಂದಿನಿಂದ ಗೋಮಾಂಸದ ಮಾರ್ಕೆಟಿಂಗ್ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ಅಪಪ್ರಚಾರದ ಹಿಂದೆ ಬೇರೆಯದ್ದೇ ಕಥೆ ಇದೆ. ಅಸಲಿಗೆ ಅದು ಶ್ರೀಪ್ರಕಾಶ್ ಅವರು ನಾಡಿದ್ದು ನಡೆಯಲಿರುವ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಕೊಟ್ಟ ಹೇಳಿಕೆ ಅಲ್ಲ. ಅದು ಭರ್ತಿ ನಾಲ್ಕು ವರ್ಷಗಳ ಹಿಂದಿನ ಅವರ ಭರವಸೆ. ಆಗ ಮಲ್ಲಪುರಂ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಕಾಂಗ್ರೆಸ್ಸಿನ ಹಿರಿಯ ಮುಖಂಡರೂ, ಮಾಜಿ ಕೇಂದ್ರ ಸಚಿವರೂ ಆಗಿದ್ದ ಇ-ಅಹ್ಮದ್ ನಿಧನರಾದ ನಿಮಿತ್ತ ಅಲ್ಲಿ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಶ್ರೀಪ್ರಕಾಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಮಲ್ಲಪುರಂ ಹೇಗೆ ಎಂದರೆ ಅದು 65% ಮುಸ್ಲಿಮ್ ಮತದಾರರು ಇರುವ ಪ್ರದೇಶ. 5% ಕ್ರಿಶ್ಚಿಯನ್ ಮತದಾರರು ಇರುವ ಮತಕ್ಷೇತ್ರ. ಆ ನಿಟ್ಟಿನಲ್ಲಿ ಅಲ್ಲಿ ಬಿಜೆಪಿ ಗೆಲ್ಲಬೇಕಾದರೆ ಮುಸ್ಲಿಮರ ಮತಗಳು ನಿರ್ಣಾಯಕ. ಇದನ್ನು ಅರಿತ ಬಿಜೆಪಿ ಅಭ್ಯರ್ಥಿ ಗೋಮಾಂಸದ ವಿಷಯವನ್ನು ಎತ್ತಿದ್ದಾರೆ. ಆವತ್ತು ಅವರಿಗೆ ಆ ಕ್ಷೇತ್ರದಲ್ಲಿ ಗೆಲ್ಲಲು ಉತ್ತಮ ಗೋಮಾಂಸ ಪೂರೈಸುವ ಭರವಸೆ ನೀಡಲೇಬೇಕಿತ್ತಾ, ಅದು ಅವರ ವೈಯಕ್ತಿಕ ನಿರ್ಧಾರ. ಆದರೆ ಆ ಭರವಸೆ ಅವರು ಕೊಟ್ಟಿದ್ದು ಮಾತ್ರ ನಿಜ. ಆವತ್ತಿನ ಹೇಳಿಕೆ ಇವತ್ತು ವೈರಲ್ ಆಗುತ್ತಿದೆ. ಅದು ಇವತ್ತಿನ ಹೇಳಿಕೆ ಇರಲಿ, ನಾಲ್ಕು ವರ್ಷ ಅಂದರೆ 2017 ರ ಎಪ್ರಿಲ್ ನಲ್ಲಿ ಲೋಕಸಭಾ ಉಪಚುನಾವಣೆಗೆ ಕೊಟ್ಟ ಹೇಳಿಕೆ ಅದೇನೆ ಇರಲಿ, ಬಿಜೆಪಿ ಅಭ್ಯರ್ಥಿಗಳು ಕೇವಲ ಗೆಲ್ಲುವುದಕ್ಕಾಗಿ ಇಂತಹ ಹೇಳಿಕೆಯನ್ನು ಕೊಡುವುದರಿಂದ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ. ಅದು ಈ ಚುನಾವಣೆಯ ಭರವಸೆ ಅಲ್ಲ ಎಂದು ಬಿಜೆಪಿ ಸಮರ್ಥಿಸಬಹುದು. ಆದರೆ ನಾಲ್ಕು ವರ್ಷಗಳ ಹಿಂದೆ ಬಿಜೆಪಿ ಅಭ್ಯರ್ಥಿ ಕೊಟ್ಟಿದ್ದ ಹೇಳಿಕೆ ಹೌದು ತಾನೆ? ಆದರೆ ಯಾವಾಗ ಬೇಕಾದರೂ ಕೊಟ್ಟಿರಲಿ, ಬಿಜೆಪಿ ಅಭ್ಯರ್ಥಿ ಹಾಗೆ ಹೇಳುವುದು ಸರಿಯಲ್ಲ. ಕೇರಳದಲ್ಲಿ ಯುಡಿಎಫ್ ಹಾಗೂ ಎಲ್ ಡಿಎಫ್ ಎರಡರ ಜೊತೆಗೂ ಹೋರಾಡಬೇಕಾದ ಬಿಜೆಪಿ ಕೇವಲ ತನ್ನ ಸಿದ್ಧಾಂತದಿಂದಲೇ ಗೆಲ್ಲಬೇಕೆ ವಿನ: ತನ್ನದಲ್ಲದ ಸಿದ್ಧಾಂತದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸುಖವಿಲ್ಲ. ಹಾಗಂತ ಗೋಮಾಂಸದ ವಿಷಯದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಸಿದ್ಧಾಂತವನ್ನು ಅಲ್ಲಿನ ನಾಗರಿಕರ ಮೇಲೆ ಹೇರಲು ಹೋಗಿಲ್ಲ. ಹಾಗಂತ ಬಿಜೆಪಿ ಸಿದ್ಧಾಂತದಿಂದ ದೂರ ಹೋಗಬಾರದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ವಿಷಯದಲ್ಲಿ ಗಲಾಟೆ ಆಗಿ ವಾರವೀಡಿ ಮಂಗಳೂರು ಬಂದ್ ಆದದ್ದನ್ನು ನಾವು ಅನುಭವಿಸಿದ್ದೇವೆ. ಅಮಾಯಕರ ಮೇಲೆ ಹಲ್ಲೆ, ಕೊಲೆಯತ್ನ ಮತ್ತು ಭಜರಂಗದಳದ ಮುಖಂಡರ ಹತ್ಯೆ ಕೂಡ ಇದೇ ವಿಷಯದಲ್ಲಿ ಆಗಿದೆ. ಆಗಿರುವಾಗ ನಮ್ಮದೇ ಪಕ್ಕದ ರಾಜ್ಯದಲ್ಲಿ ಇದೇ ವಿಷಯದಲ್ಲಿ ಯಾಕೆ ಬಿಜೆಪಿ ಸಾಫ್ಟ್ ಆಗಬೇಕು. ನಾನು ಹೇಳುವುದಾದರೆ ಹೀಗೆ ತಮ್ಮ ಗೆಲುವಿಗಾಗಿ ಪಕ್ಷದ ಸಿದ್ಧಾಂತವನ್ನು ಮೂಲೆಗೆ ಎಸೆಯುವವರಿಗೆ ತಕ್ಕ ಶಿಕ್ಷೆ ಆಗಬೇಕು. ಅವರಿಗೆ ಬಿಜೆಪಿಯವರೇ ಮತ ಹಾಕಬಾರದು.!!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search