• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಣ ಹಂಚಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದ ನಾಂಪಲ್ಲಿ ವಿಶೇಷ ನ್ಯಾಯಾಲಯ!

Hanumantha Kamath Posted On August 3, 2021


  • Share On Facebook
  • Tweet It

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂತಹ ಒಂದು ತೀರ್ಪು ಈಗಲಾದರೂ ಬಂತಲ್ಲ ಎನ್ನುವ ಖುಷಿ ಪಡಬೇಕು. ಯಾಕೆಂದರೆ ಚುನಾವಣೆ ಎಂದರೆ ಹಣದ ಹೊಳೆ ಹರಿಸಿ ಗೆಲ್ಲುವುದು ಎನ್ನುವುದು ಸಾಬೀತಾದ ನಂತರ ಸ್ಪರ್ದೇಗೆ ಬಿದ್ದವರಂತೆ ಅಭ್ಯರ್ಥಿಗಳು ಹಣದ ಮಳೆಯನ್ನು ಹರಿಸುತ್ತಿದ್ದಾರೆ. ಈ ಮೂಲಕ ಏನಾಗುತ್ತಿದೆ? ಜನಸಾಮಾನ್ಯರು ಚುನಾವಣೆಗೆ ನಿಲ್ಲುವುದೇ ಅಸಾಧ್ಯವಾಗುತ್ತಿದೆ. ಅದನ್ನು ಪರಿಗಣಿಸಿದ ಆಗಿನ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಶೇಷನ್ ಅವರು ವಿಧಾನಸಭೆಗೆ ಮತ್ತು ಲೋಕಸಭೆಗೆ ಇಂತಿಷ್ಟೇ ಲಕ್ಷದೊಳಗೆ ಖರ್ಚು ಮಾಡಬೇಕು ಎಂದು ನಿಗದಿಪಡಿಸಿದರು. ಆದರೆ ಇವತ್ತಿಗೂ 70 ಲಕ್ಷದೊಳಗೆ ಲೋಕಸಭಾ ಚುನಾವಣೆಯ ಖರ್ಚನ್ನು ಮುಗಿಸಲು ಅಸಾಧ್ಯವಾಗಿದೆ. ಅದಕ್ಕೆ ಬೇಕಾಗುವ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದವನಿಗೆ ಗೊತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಚುನಾವಣಾ ಆಯೋಗದಿಂದ ಚುನಾವಣಾ ವೀಕ್ಷಕರು ಎಂದು ಬರುವವರು ಈ ಬಗ್ಗೆ ಗಮನ ಹರಿಸುತ್ತಾರೆಂದು ಅಂದುಕೊಂಡರೂ ಇವತ್ತಿಗೂ ನಿಗದಿಪಡಿಸಿದಕ್ಕಿಂತ ಅಭ್ಯರ್ಥಿ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಸಾಬೀತಾಗಿ ಕಾನೂನಿನ ಅಡಿಯಲ್ಲಿ ಜೈಲುವಾಸ ಅಥವಾ ಅಮಾನತುಗೊಂಡವರು ವಿರಳಾತೀ ವಿರಳ. ಆದರೆ ಆಂಧ್ರಪ್ರದೇಶದಿಂದ ಬೇರ್ಪಟ್ಟ ತೆಲಂಗಾಣದ ಮೆಹಬೂಬದಾದ್ ಎನ್ನುವ ಲೋಕಸಭಾ ಕ್ಷೇತ್ರದ ಮಲೇತ್ ಕವಿತಾ ಎನ್ನುವ ಸಂಸದೆ ವಿರುದ್ಧ 2019 ರಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಈಗ ತೀರ್ಪು ಬಂದಿದೆ.

ಆದದ್ದು ಏನೆಂದರೆ ಶೌಕತ್ ಆಲಿ ಎನ್ನುವ ವ್ಯಕ್ತಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ತಲಾ 500 ರೂಪಾಯಿಗಳನ್ನು ಹಂಚುತ್ತಾ ಹೋಗುತ್ತಿದ್ದ. ಅಲ್ಲಿಗೆ ಸಡನ್ನಾಗಿ ಫ್ಲೈಯಿಂಗ್ ಸ್ಕ್ಯಾಡ್ ನವರು ಬಂದಿದ್ದಾರೆ. ಜನರ ಮಧ್ಯದಲ್ಲಿ ಹೋಗಿ ನಿಂತಿದ್ದಾರೆ. ಇವನು ಬೆಪ್ಪನಂತೆ ಎಲ್ಲರಿಗೂ ಹಣ ಕೊಡುವಾಗ ಅವರಿಗೂ ಕೊಟ್ಟಿದ್ದಾನೆ. ಅಲ್ಲಿ ಮಾತಿನ ಚಕಮಕಿ ಆಗಿದೆ. ಇವನು ಸ್ಕ್ಯಾಡ್ ನವರು ಎಂದು ಗೊತ್ತಿಲ್ಲದೆ ಉಢಾಪೆಯಾಗಿ ಮಾತನಾಡಿದ್ದಾನೆ. ನಂತರ ಅವರು ತಮ್ಮ ನೈಜ ಮುಖವನ್ನು ಪ್ರದರ್ಶಿಸಿದ್ದಾರೆ. ಇವನನ್ನು ಸ್ಟೇಶನ್ನಿಗೆ ಕರೆದುಕೊಂಡು ಹೋಗಿ ಸರಿಯಾಗಿ ಬೆಂಡೆತ್ತಿದ್ದಾರೆ. ತಾನು ಹಣ ಹಂಚುತ್ತಿರುವುದು ತೆಲಂಗಾಣ ರಾಷ್ಟ್ರ ಸಮಿತಿಯ ಅಭ್ಯರ್ಥಿ ಕವಿತಾ ಪರ, ಅವರೇ ಹಣ ಕೊಟ್ಟು ಹಂಚಲು ಕಳುಹಿಸಿದ್ದಾರೆ ಎಂದು ಬಾಯಿಬಿಟ್ಟಿದ್ದಾನೆ. ಅದು ನ್ಯಾಯಾಲಯದಲ್ಲಿ ವಿಚಾರಣೆ ಆಗಿ ಈಗ ಸಂಸದೆಯೂ ಆಗಿರುವ ಕವಿತಾ ಹಾಗೂ ಹಣ ಹಂಚುತ್ತಿದ್ದ ಶೌಕತ್ ಆಲಿ ಇಬ್ಬರೂ ತಪ್ಪಿತಸ್ಥರೆಂದು ಸಾಬೀತಾಗಿದೆ. ಅವರಿಬ್ಬರಿಗೂ ಆರು ತಿಂಗಳ ಜೈಲು ವಾಸ ಹಾಗೂ ತಲಾ ಹತ್ತು ಸಾವಿರ ದಂಡವನ್ನು ವಿಧಿಸಲಾಗಿದೆ. ಸದ್ಯ ಇಬ್ಬರಿಗೂ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದ್ದರೂ ನಾಂಪಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ಈ ತೀರ್ಪು ಐತಿಹಾಸಿಕವಾಗಿದೆ.

ನಮ್ಮಲ್ಲಿ ಏನಾಗಿದೆ ಎಂದರೆ ಪಾಲಿಕೆ ಸದಸ್ಯರಿಂದ ಹಿಡಿದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿಸಿ ವಿಧಾನಸಭೆಯಿಂದ ಲೋಕಸಭೆಯ ತನಕ ಚುನಾವಣೆಯಲ್ಲಿ ಹಣ, ಹೆಂಡ, ಸೀರೆ, ಕುಕ್ಕರ್ ನಿಂದ ಏನೇನೋ ವಸ್ತುಗಳನ್ನು ಹಂಚುವುದು ಫ್ಯಾಶನ್ ಆಗಿಬಿಟ್ಟಿದೆ. ಇಂತವರು ಒಂದು ವೇಳೆ ಸಿಕ್ಕಿಬಿದ್ದರೂ ಯಾರದ್ದೋ ವಶೀಲಿಬಾಜಿ ಮಾಡಿ ಕಾನೂನಿನ ಅಡಿಯಿಂದ ತಪ್ಪಿಸಿಕೊಂಡುಬಿಡುತ್ತಾರೆ. ಹೀಗೆ ಹಣ, ಹೆಂಡ ಹಂಚಿ ಗೆದ್ದವರು ನಂತರ ಸುಮ್ಮನೆ ಕೂರುತ್ತಾರಾ? ತಾವು ಚುನಾವಣೆಯಲ್ಲಿ ಸುರಿದ ಕೋಟ್ಯಾಂತರ ರೂಪಾಯಿ ಹಣವನ್ನು ಹಿಂದಕ್ಕೆ ಪಡೆಯಲು ಇದೇ ಜನರ ರಕ್ತವನ್ನು ಹೀರಿಬಿಡುತ್ತಾರೆ. ಅದು ಗೊತ್ತಿಲ್ಲದೆ ಐನೂರು, ಒಂದು ಸಾವಿರ ರೂಪಾಯಿಗೆ ಜನ ತಮ್ಮನ್ನು ತಾವು ಮಾರಿಕೊಂಡುಬಿಡುತ್ತಾರೆ. ಈಗ ಒಬ್ಬರಿಗೆ ಶಿಕ್ಷೆ ಘೋಷಣೆ ಆಗಿರಬಹುದು. ಆರೋಪಿಗಳು ಮೇಲ್ಮನವಿ ಹೋಗಲುಬಹುದು. ಆದರೆ ಇಲ್ಲಿ ನ್ಯಾಯಾಲಯಗಳು ಏನು ಮಾಡಬೇಕು ಎಂದರೆ ಇಂತಹ ಪ್ರಕರಣದಲ್ಲಿ ಇಂತಿಷ್ಟೇ ಸಮಯದ ಒಳಗೆ ತೀರ್ಪು ಹೊರಗೆ ಬರಬೇಕು ಎನ್ನುವ ನಿಯಮಗಳನ್ನು ಜಾರಿಗೆ ತರಬೇಕು. ಯಾಕೆಂದರೆ ಈಗ ವಿಶೇಷ ನ್ಯಾಯಾಲಯದಿಂದ ಅದು ಮೇಲೆ ಮೇಲೆ ಹೋಗಿ ಕೊನೆಗೆ ತೀರ್ಪು ಬರುವಾಗ ಆ ಸಂಸದರ ಅವಧಿ ಮುಗಿದುಹೋಗಿರುತ್ತದೆ.

ಕೆಲವೊಮ್ಮೆ ಎರಡ್ಮೂರು ಟರ್ಮ್ ಕೂಡ ಮುಗಿದುಹೋಗಿರುತ್ತದೆ. ಯಾವ ಸಂಸದರಿಗೆ ತಮ್ಮ ಅಧಿಕಾರಾವಧಿಯಲ್ಲಿಯೇ ಶಿಕ್ಷೆ ಆಗುತ್ತೋ ಆಗ ಬೇರೆಯವರಿಗೂ ಇಂತಹ ತಪ್ಪನ್ನು ಮಾಡಲು ಹೆದರಿಕೆ ಉಂಟಾಗುತ್ತದೆ. ಹಣ ಹಂಚುವುದು ನಿಂತುಹೋಗುತ್ತದೆ. ಅದೆಲ್ಲ ಆಗಬೇಕಾದರೆ ಸೂಕ್ತವಾಗಿರುವ ನಿಯಮಗಳನ್ನು ಜಾರಿಗೆ ತಂದು ನ್ಯಾಯಾಯಗಳೇ ಕಾಲಮಿತಿಯೊಳಗೆ ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಒಂದಿಬ್ಬರು ಜನಪ್ರತಿನಿಧಿಗಳಾದವರು ಅಮಾನತುಗೊಂಡರೆ ಉಳಿದವರಿಗೂ ಬುದ್ಧಿ ಬಂದಿತು. ಯಾಕೆಂದರೆ ಹೀಗೆ ಹಣ ಹಂಚಿ ಗೆದ್ದವರು ಅಕ್ರಮವಾಗಿ ಗೆದ್ದಿರುತ್ತಾರೆ. ಅವರು ಜಯಗಳಿಸಿರಬಹುದು. ಆದರೆ ಅದು ಅನೈತಿಕವಾಗಿರುತ್ತದೆ. ಸರಿಯಾಗಿ ನೋಡಿದರೆ ಆರು ತಿಂಗಳ ಶಿಕ್ಷೆ ಏನೂ ಅಲ್ಲ. ಆದರೂ ಅಂತವರಿಗೆ ಮಾನ ಮರ್ಯಾದೆ ಇದ್ದರೆ ಅದು ಅಷ್ಟೇ ಸಾಕು. ಯಾವಾಗ ಈ ದೇಶದಲ್ಲಿ ಚುನಾವಣೆಗಳು ವೈಭವವನ್ನು ಪಡೆದುಕೊಂಡು ಹಲವರ ಪಾಲಿಗೆ ಹಣ ಮಾಡುವ ದಂಧೆಯಾಗಿ ಪರಿವರ್ತನೆಯಾಗುವುದು ನಿಲ್ಲುತ್ತದೆಯೋ ಆಗ ಇಲ್ಲಿ ಪ್ರಜಾಪ್ರಭುತ್ವ ನಿಜಕ್ಕೂ ಗೆದ್ದ ಹಾಗೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search