• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಚಕ್ರವರ್ತಿ ಎಂದರೆ ಕಾಂಗ್ರೆಸ್, ಜಿಡಿಎಸ್ಸಿಗೆ ಅಷ್ಟು ಹೆದರಿಕೆಯಾ?

Hanumantha Kamath Posted On October 23, 2021


  • Share On Facebook
  • Tweet It

ಚಕ್ರವರ್ತಿ ಸೂಲಿಬೆಲೆ ಎಂದರೆ ಕಾಂಗ್ರೆಸ್, ಜಾತ್ಯಾತೀತ ಜನತಾದಳದ ಮುಖಂಡರು ರಾತ್ರಿಯಲ್ಲಿಯೂ ಬೆಚ್ಚಿಬೀಳುತ್ತಾರೆ. ಅದರಲ್ಲಿಯೂ ಚಕ್ರವರ್ತಿ ಭಾಷಣಕ್ಕೆ ನಿಂತರೆಂದರೆ ಅವರ ಭಾಷಣವನ್ನು ಕದ್ದು ಮುಚ್ಚಿ ವಿಡಿಯೋದಲ್ಲಿ ಕೇಳುವ ಚಟ ಅನೇಕ ಕಾಂಗ್ರೆಸ್, ಜೆಡಿಎಸ್ ಮುಖಂಡರಲ್ಲಿದೆ. ಯಾಕೆಂದರೆ ಚಕ್ರವರ್ತಿ ಏನು ಹೇಳುತ್ತಾರೆ ಎನ್ನುವ ಕುತೂಹಲ. ಹಾಗಂತ ಚಕ್ರವರ್ತಿ ರಾಜಕಾರಣಿ ಅಲ್ಲ. ಅವರು ಯಾವುದೇ ಚುನಾವಣೆಗೆ ನಿಂತವರಲ್ಲ. ಅವರು ಯಾವುದೇ ರಾಜಕೀಯ ಪಕ್ಷದ ಬ್ಯಾನರ್ ಕೆಳಗೆ ಭಾಷಣ ಮಾಡಿಲ್ಲ. ತಪ್ಪು ಮಾಡಿದರೆ ಎಲ್ಲ ಪಕ್ಷದವರ ಕಾಲು ಕೂಡ ಎಳೆಯುತ್ತಾರೆ. ಭಾರತೀಯ ಜನತಾ ಪಾರ್ಟಿಯ ಕೆಲವು ಯುವ ಸಂಸದರು ಒಮ್ಮೆ ದಾರಿ ತಪ್ಪಿದಾಗ ಮಾತಿನಿಂದಲೇ ಕಿವಿ ಹಿಂಡಿದ್ದರು. ಸದಾನಂದ ಗೌಡರವರಿಗೆ ಒಮ್ಮೆ ಮಾತಿನ ಛಾಟಿ ಬೀಸಿದ್ದ ಚಕ್ರವರ್ತಿ ವಿರುದ್ಧ ಗೌಡರೇ ಗುಟುರು ಹಾಕಿದ್ದರು. ನರೇಂದ್ರ ಮೋದಿಯ ಪಕ್ಕಾ ಅಭಿಮಾನಿಯಾಗಿರುವ ಸೂಲಿಬೆಲೆಯವರು ಮೋದಿ ಪರ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ನವರು ಅವರ ಹಿಂದೆನೆ ಬಿದ್ದಿರುತ್ತಾರೆ. ಸರಿಯಾಗಿ ನೋಡಿದರೆ ಚಕ್ರವರ್ತಿ ಸೂಲಿಬೆಲೆಯವರು ಮತ್ತು ಅವರ ತಂಡ ಮಾಡುವ ಜನಸೇವೆಯ ಒಂದು ಅಂಶವನ್ನು ಯಾವುದೇ ರಾಜಕಾರಣಿ ಮಾಡಿದರೆ ಆ ರಾಜಕಾರಣಿ ಕನಿಷ್ಟ ಮೂರ್ನಾಕು ಬಾರಿ ನಿರಂತರವಾಗಿ ಗೆಲ್ಲಲು ಕಷ್ಟವಾಗಲಿಕ್ಕಿಲ್ಲ. ಗ್ರಾಮಗಳ ಕಲ್ಯಾಣಿಯನ್ನು ಸ್ವಚ್ಚಪಡಿಸುವ ಕಾರ್ಯ, ರಸ್ತೆಬದಿಯನ್ನು ಸ್ವಚ್ಚಪಡಿಸುವ ಕಾರ್ಯ, ದೇವಸ್ಥಾನಗಳನ್ನು ಸ್ವಚ್ಚಪಡಿಸುವ ಕಾರ್ಯ, ನದಿ, ಕೆರೆಗಳನ್ನು ಸ್ವಚ್ಚಪಡಿಸುವ ಕಾರ್ಯ, ತೋಟದಲ್ಲಿ ಕೃಷಿ ಕಾರ್ಯ, ದೇವರ ಫೋಟೋಗಳನ್ನು ಎಲ್ಲೆಂದರಲ್ಲಿ ಬಿಸಾಡಿದ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ, ಅಂಕಣದ ಮೂಲಕ ಜಾಗೃತಿ, ಯೂಟ್ಯೂಬ್ ಮೂಲಕ ಜಾಗೃತಿ, ದೇವರ ಉಪಾಸನೆ ಸಹಿತ ಧಾರ್ಮಿಕ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಹೀಗೆ ನಿರಂತರವಾಗಿ ಯುವಕರನ್ನು ಸಂಘಟಿಸುವ ಕಾರ್ಯವನ್ನು ಚಕ್ರವರ್ತಿ ಮಾಡುತ್ತಲೇ ಬಂದಿದ್ದಾರೆ. ಅವರ ಭಾಷಣಗಳಿಗೆ ಜನರನ್ನು ವಾಹನಗಳಲ್ಲಿ ಕರೆತಂದು ಬಿರಿಯಾನಿ, ಡ್ರಿಂಕ್ಸ್ ಕೊಡಬೇಕಾದ ಅಗತ್ಯ ಇಲ್ಲ. ಐನೂರು ಕೊಟ್ಟು ಅವರ ಕಾರ್ಯಕ್ರಮಗಳಿಗೆ ಕವರೇಜು ಮಾಡಿಸುವ ಅಗತ್ಯ ಇಲ್ಲ. ಯಾವುದೇ ಟಿವಿ ಸಂದರ್ಶನಗಳಿಗೆ ತನ್ನನ್ನು ಕರೆಯಿರಿ ಎಂದು ಅವರು ನಿರೂಪಕರನ್ನು ದಂಬಾಲು ಬೀಳುವುದಿಲ್ಲ. ಆದರೂ ಅವರನ್ನು ಅಭಿಮಾನದಿಂದ ನೋಡುವ ಒಂದು ವರ್ಗವೇ ಇದೆ. ಅದರಲ್ಲಿ ಯಾವುದೇ ವಯಸ್ಸಿನ ಹಂಗಿಲ್ಲದ ಕಿರಿಯರಿಂದ ಹಿಡಿದು ವೃದ್ಧರ ತನಕ ಎಲ್ಲರೂ ಇದ್ದಾರೆ. ಚಕ್ರವರ್ತಿ ಮಾತನಾಡುತ್ತಾರೆ ಎಂದರೆ ಅಲ್ಲೊಂದು ಸಂಭ್ರಮ ಇರುತ್ತದೆ. ಇಂತಹ ವ್ಯಕ್ತಿ ನಮ್ಮ ಪಕ್ಷದಲ್ಲಿ ಇರಬೇಕಿತ್ತು ಎಂದು ಎಲ್ಲರೂ ಬಯಸುತ್ತಾರೆ. ಅವರು ಮನಸ್ಸು ಮಾಡಿದ್ದರೆ ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಬಹುದಿತ್ತು. ಆದರೆ ತಮ್ಮ ಜೀವನ ಇರುವುದು ಹಾಳಾದ ಚುನಾವಣಾ ರಾಜಕಾರಣದಲ್ಲಿ ಬೀಳುವುದಕ್ಕೆ ಅಲ್ಲ. ಈ ಸಮಾಜದ ಯುವಜನಾಂಗವನ್ನು ಸರಿದಾರಿಯತ್ತ ತೆಗೆದುಕೊಂಡು ಹೋಗುವುದಕ್ಕೆ ಎಂದು ನಂಬಿದವರು ಚಕ್ರವರ್ತಿ.

ಇಂತಹ ಸೂಲಿಬೆಲೆಯವರ ಬಗ್ಗೆ ಇತ್ತೀಚೆಗೆ ಅವರು ದುಬಾರಿ ಗಾಡಿಯನ್ನು ಪೂಜಿಸುವ ಫೋಟೋ ವೈರಲ್ ಆಗಿತ್ತು. ಆಯುಧ ಪೂಜೆಯ ದಿನ ವೈರಲ್ ಆದ ಆ ಫೋಟೋ ಇಟ್ಟುಕೊಂಡು ಕುಹಕಿಗಳು ಆಡಿದ್ದೇ ಆಡಿದ್ದು. ನಿಮ್ಮ ತಲೆಯನ್ನು ತಿರುಗಿಸಿ ತಾನು ಐಷಾರಾಮಿ ವಾಹನದಲ್ಲಿ ಓಡಾಡುವ ಸೂಲಿಬೆಲೆ ಎನ್ನುವ ಅರ್ಥ ಬರುವಂತಹ ವಾಕ್ಯಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ರೋಸ್ಟ್ ಕಾರ್ಡ್ ಎನ್ನುವ ಟ್ರೋಲ್ ಪೇಜ್ ನವರು ಹಾಕಿದ್ದರು. ಚಕ್ರವರ್ತಿಯವರ ಜೊತೆಯಲ್ಲಿ ಇರುವವರಿಗೆ, ಅವರ ಹಿತೈಷಿಗಳಿಗೆ ಆ ಫೋಟೋದ ಹಿಂದಿನ ಸುಳ್ಳು ಕಥೆ ಗೊತ್ತಿರುತ್ತದೆ. ಆದರೆ ಕೆಲವರು ದೂರದಲ್ಲಿ ನಿಂತು ಚಕ್ರವರ್ತಿಯವರನ್ನು ಕೇಳುವವರು ಹೌದು ಎಂದು ಅಂದುಕೊಳ್ಳಬಹುದು. ಆದರೆ ವಿಷಯ ಏನೆಂದರೆ ಆ ವಾಹನ ಚಕ್ರವರ್ತಿಯವರದ್ದಲ್ಲ. ಇನ್ನು ಒಂದು ವೇಳೆ ಚಕ್ರವರ್ತಿಯವರೇ ಭವಿಷ್ಯದಲ್ಲಿ ಅಂತಹ ವಾಹನವನ್ನು ಕೊಂಡರೂ ಅದಕ್ಕೆ ಕಾಂಗ್ರೆಸ್, ಜೆಡಿಎಸ್ ನವರು ಹೊಟ್ಟೆ ಉರಿದು ದೇಶವೇ ಮುಳುಗಿತು ಎಂದು ಬೊಬ್ಬೆ ಹೊಡೆಯುವ ಅವಶ್ಯಕತೆ ಇಲ್ಲ. ಏಕೆಂದರೆ ಚಕ್ರವರ್ತಿ ಸೂಲಿಬೆಲೆ ಯಾವುದೇ ಸರಕಾರಿ ಅಧಿಕಾರಿ ಅಲ್ಲ. ಅವರು ಶಾಸಕ, ಸಚಿವ, ಮುಖ್ಯಮಂತ್ರಿ ಅಲ್ಲ. ಅವರು ಜನರ ತೆರಿಗೆಯ ಹಣದಿಂದ ಏನೇನೋ ಸೌಕರ್ಯ ಬಳಸಿ ಮಜಾ ಉಡಾಯಿಸುತ್ತಿಲ್ಲ. ಅವರಿಗೆ ಈ ಭೂಮಿಯಲ್ಲಿ ಯಾರ ಪರವಾಗಿಯೂ ಮಾತನಾಡುವ ಅವಕಾಶವಿದೆ. ಹಾಗಂತ ಅವರು ಓಸಾಮಾ ಬಿನ್ ಲಾಡೆನ್ ಪರವಾಗಿ ಮಾತನಾಡುತ್ತಿಲ್ಲ. ಧರ್ಮಗಳನ್ನು ಹೀಯಾಳಿಸುತ್ತಿಲ್ಲ. ಅವರು ಮತಾಂತರ ಮಾಡುತ್ತಿಲ್ಲ. ಆದರೂ ಅವರನ್ನು ವಿರೋಧಿಸುವವರಿಗೆ ಏನಾದರೂ ಒಂದು ಕಾರಣ ಬೇಕು. ಒಂದು ವೇಳೆ ಚಕ್ರವರ್ತಿ ಹೇಳಿದ್ದ ವಿಷಯ ಸುಳ್ಳಾಗಿದ್ರೆ, ತಪ್ಪಾಗಿದ್ರೆ ಅದನ್ನು ದಾಖಲೆ ಸಹಿತ ಜನರ ಮುಂದೆ ಇಡಲು ಯಾರಿಗೂ ಸ್ವಾತಂತ್ರ್ಯ ಇದೆ. ಇನ್ನು ಮೋದಿಯವರ ಪರ ಮಾತನಾಡಲು ಯಾರೂ ಅಂಜಬೇಕಾದ ಅಗತ್ಯ ಇಲ್ಲ. ಮೋದಿಯವರ ಪರ ಚಕ್ರವರ್ತಿ ಮಾಡಿದ್ದು ಅಪರಾಧ ಅಲ್ಲ. ಅವರು ರಣತಂತ್ರ ಮಾಡಿ ಮೋದಿಯವರ ಬಗ್ಗೆ ಜನರಿಗೆ ಉತ್ತಮ ವರ್ಚಸ್ಸು ಮೂಡುವಂತೆ ಮಾಡಿ ಹೆಚ್ಚು ಸಂಸದರನ್ನು ಆಯ್ಕೆಯಾಗಲು ಸಹಕರಿಸಿದರು ಎಂದು ಕಾಂಗ್ರೆಸ್, ಜೆಡಿಎಸ್ ಅಂದುಕೊಂಡರೆ ಅದು ಚಕ್ರವರ್ತಿಯವರ ಹೆಗ್ಗಳಿಕೆ ಮತ್ತು ಗೆದ್ದ ಸಂಸದರ ದೌರ್ಬಲ್ಯವೇ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search